Ayurveda Tips in Kannada

Ayurveda Tips In Kannada

ಬಿಪಿ & ಶುಗರ್ಮನೆಮದ್ದು

ಬೀಟ್‌ ರೂಟ್‌ ಜ್ಯೂಸ್ ಪವಾಡ ನೋಡಿ..!

ಇಂದಿನ ಸಂಚಿಕೆಯಲ್ಲಿ, Beetroot / ಬೀಟ್ರೂಟ್ ಸೇವನೆ ಮಾಡುವುದರಿಂದ ಶರೀರಕ್ಕೆ ಯಾವ ಯಾವ ಲಾಭಗಳು ದೊರೆಯುತ್ತವೆ ಈ ವಿಷಯದ ಕುರಿತಾಗಿ ಮಾಹಿತಿಯನ್ನು ನೋಡೋಣ.

ಬಿಟ್ರೋಟ್ ಅದ್ಭುತವಾಗಿರುವಂತಹ ಪೋಷಕಾಂಶಗಳನ್ನು ಹೊಂದಿರುವಂತಹ ಆಗರ ಎಂದು ಹೇಳಬಹುದು. ಬೀಟ್ರೂಟ್ ನಲ್ಲಿ ಯಾವ ಯಾವ ಪೋಷಕಾಂಶಗಳು ಇವೆ? ಮತ್ತು ಇದನ್ನು ಹೇಗೆ ಸೇವನೆ ಮಾಡಬೇಕು? ನಮ್ಮ ಶರೀರಕ್ಕೆ ಬೀಟ್ರೂಟ್ ನಿಂದ ಯಾವ ಯಾವ ಪೋಷಕಾಂಶಗಳ ಲಾಭಗಳು ದೊರೆಯುತ್ತವೆ? ಎಂಬುದನ್ನು ನೋಡೋಣ.

Beetroot / ಬೀಟ್ರೂಟ್ ನಲ್ಲಿ ಯಾವ ಯಾವ ಪೋಷಕಾಂಶಗಳು ಇವೆ?:-

Beetroot / ಬೀಟ್ರೂಟ್ ನಲ್ಲಿ iron, potassium, magnesium, calcium, zinc, phosphorus, fibre, ಈ ರೀತಿಯಾಗಿ ಹಲವಾರು ಸೂಕ್ಷ್ಮ ಪೋಷಕಾಂಶಗಳನ್ನು ನಾವು ಕಾಣಬಹುದು. ಇಂತಹ ಪೋಷಕಾಂಶಗಳನ್ನು ಹೊಂದಿರುವಂತಹ ಬೀಟ್ರೂಟ್ ಆರೋಗ್ಯದಲ್ಲಿ ಅದ್ಭುತವಾಗಿರುವಂತಹ ಬದಲಾವಣೆಯನ್ನು ನೀಡುತ್ತದೆ.

ಈ ಬೀಟ್ರೂಟ್ ಅನ್ನು ನಾವು ಜ್ಯೂಸ್ ರೂಪದಲ್ಲಿ ಸೇವಿಸುವುದರಿಂದ ಹೆಚ್ಚು ಲಾಭ ದೊರೆಯುತ್ತದೆ. ಹಾಗೆ ಈ ಬೀಟ್ರೂಟ್ ನ ಪಲ್ಯ ಸೇವನೆ ಮಾಡುವುದು ತುಂಬಾ ಉತ್ತಮ.

ಬೀಟ್ರೂಟ್ ಅನ್ನು ಸಾಂಬಾರ್ ಪಲ್ಯ ಮಾಡಿಕೊಂಡು ಸೇವನೆ ಮಾಡಬಹುದು. ಜೊತೆಗೆ ಬೀಟ್ರೂಟ್ ಸ್ಪಿನ್ ಮಾಡಿಕೊಂಡು ಸೇವನೆ ಮಾಡಬಹುದು.

*Beetroot / ಬೀಟ್ರೂಟ್ ಅನ್ನು ಪಲ್ಯದ ರೂಪದಲ್ಲಿ, ಜ್ಯೂಸ್ ರೂಪದಲ್ಲಿ, ಸಾಂಬಾರ್ ರೂಪದಲ್ಲಿ ಸ್ಪಿನ್ ಮಾಡಿಕೊಂಡು ಸೇವನೆ ಮಾಡುವುದರಿಂದ ಯಾವ ಯಾವ ಲಾಭಗಳು ದೊರೆಯುತ್ತವೆ?:-

ಬೀಟ್ರೂಟ್ ಸೇವನೆಯಿಂದ ಲೋ ಬಿಪಿ ಸಂಪೂರ್ಣವಾಗಿ ನಿವಾರಣೆ ಆಗುತ್ತದೆ. ಅಜೀರ್ಣ, ಮಲಬದ್ಧತೆ, ಹಾಗೂ ರಕ್ತ ಹೀನತೆಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಜೊತೆಗೆ ಮಾಂಸಖಂಡಗಳ ಶಕ್ತಿ ವೃದ್ಧಿಯಾಗುತ್ತದೆ. ಚರ್ಮದ ಕಾಂತಿ ಮತ್ತು ಚರ್ಮದ ಆರೋಗ್ಯ ತುಂಬಾ ಗಟ್ಟಿಯಾಗಿ ಕ್ರಿಯಾಶೀಲವಾಗುತ್ತದೆ. ಬೀಟ್ರೂಟ್ ಸೇವನೆಯಿಂದ ಬುದ್ಧಿಶಕ್ತಿ ತುಂಬಾ ಚುರುಕಾಗುತ್ತದೆ.

ಏಕೆಂದರೆ? ಇದರಲ್ಲಿರುವ ಐರನ್ ಆಗಿರಬಹುದು, ಜಿಂಕ್ ಆಗಿರಬಹುದು, ಇದರಲ್ಲಿ ಇರುವಂತಹ ಪೊಟ್ಯಾಶಿಯಮ್ ಆಗಿರಬಹುದು, ಇವೆಲ್ಲ ಕೋಶಗಳ ಶಕ್ತಿಯನ್ನು ವೃದ್ಧಿ ಮಾಡುವುದರ ಜೊತೆಗೆ ಪೊಟ್ಯಾಶಿಯಂ ಏನು ಮಾಡುತ್ತದೆ ಎಂದರೆ? ಸೇಲ್ಸ್ ಒಳಗಡೆ flute content ಅನ್ನು ಬ್ಯಾಲೆನ್ಸ್ ಆಗಿ ಇಡುತ್ತದೆ. ಐರನ್ ನಿಂದ ರಕ್ತ ಹೀನತೆಯ ಸಮಸ್ಯೆ ಬರದೆ, ಶರೀರ ಕ್ರಿಯಾಶೀಲವಾಗಿರುತ್ತದೆ.

Beetroot / ಬೀಟ್ರೂಟ್ ಅನ್ನು ಪ್ರತಿದಿನ ಸೇವನೆ ಮಾಡುವುದರಿಂದ ಶರೀರದಲ್ಲಿರುವಂತಹ ಮಾಂಸಖಂಡಗಳ ಬಲ ವೃದ್ಧಿಯಾಗುತ್ತದೆ. ಈ ಬಿಟ್ರೋಟ್ ಮಳೆಗಾಲದಲ್ಲಿ ಹೆಚ್ಚು ಸಿಗುತ್ತದೆ.

ಇದನ್ನು ಸೀಜನ್ ನಲ್ಲಿ ಸೇವನೆ ಮಾಡುವುದರಿಂದ ನಿಮಗೆ ಹೆಚ್ಚು ಲಾಭಗಳು ದೊರೆಯುತ್ತವೆ. ಹಾಗೆಯೇ ಬೀಟ್ರೂಟ್ ಸೇವನೆ ಮಾಡುವುದರಿಂದ ನಿಮ್ಮ ಮೆದುಳು ತುಂಬಾ ಚುರುಕಾಗುತ್ತದೆ.

ಇದರಲ್ಲಿರುವಂತಹ ವಿಟಮಿನ್ ಸಿ ಆಗಿರಬಹುದು, ಫೈಬರ್ ಆಗಿರಬಹುದು, ಇವೆಲ್ಲ ಮೆದುಳಿನ ಜೀವಕೋಶಗಳಿಗೆ ಅದ್ಭುತವಾಗಿರುವಂತಹ ಶಕ್ತಿಯನ್ನು ತುಂಬುತ್ತವೆ.

Nitric fibre, potassium, magnesium, zinc, ಹಾಗೂ ಪೋಷಕಾಂಶಗಳಲ್ಲಿ vitamin b6, vitamin b9, vitamin b2, vitamin b1, vitamin b3, vitamin b6, ಇಷ್ಟೆಲ್ಲಾ ಅಂಶಗಳು ಇದರಲ್ಲಿ ಇರುವುದರಿಂದ ಇವೆಲ್ಲವಿಟಮಿನ್ಸ್ ಗಳು ಮೆದುಳಿಗೆ ಅದ್ಭುತವಾಗಿರುವಂತಹ ಶಕ್ತಿ ಸಾಮರ್ಥ್ಯವನ್ನು ತುಂಬುತ್ತವೆ.

Beetroot / ಬೀಟ್ರೂಟ್ ಸೇವನೆಯಿಂದ ಮೆದುಳಿನ ಚೈತನ್ಯ ಶಕ್ತಿ ವೃದ್ಧಿಯಾಗಿ, Alzheimer, ಅನ್ನುವಂತಹ ಭಯಾನಕ brain cells degeneration disease ಗಳು ನಮ್ಮ ಜೀವನದಲ್ಲಿ ಬರುವುದಿಲ್ಲ. ಹಾಗೆ ಬೀಟ್ರೂಟ್ ಸೇವನೆ ಮಾಡುವುದರಿಂದ ಚರ್ಮ ರೋಗಗಳನ್ನು ಸಂಪೂರ್ಣವಾಗಿ ತಡೆಗಟ್ಟುತ್ತದೆ.

ಮಧುರವಾದ ರಸವನ್ನು ಹೊಂದಿರುವಂತಹ ಈ ಬೀಟ್ರೂಟ್ ಸೇವನೆ ಮಾಡುವುದರಿಂದ ಶರೀರದಲ್ಲಿ ಪಿತ್ತಜ ವ್ಯಾಧಿಗಳು ದೂರವಾಗುತ್ತವೆ. ವಾತವಿಕಾರಗಳು ದೂರವಾಗುತ್ತವೆ. ಬೀಟ್ರೂಟ್ ಸೇವನೆ ಮಾಡುವುದರಿಂದ ಮಕ್ಕಳ ಬೆಳವಣಿಗೆ ಚೆನ್ನಾಗಿರುತ್ತದೆ.

ಶರೀರದ ಬೆಳವಣಿಗೆ ಮತ್ತು ವಿಕಾಸ ವೃದ್ಧಿಯಾಗುತ್ತದೆ. ಬೀಟ್ರೂಟ್ ಸೇವನೆಯಿಂದ ನಮ್ಮ ಲಿವರ್ ಸ್ವಚ್ಛವಾಗಿರುತ್ತದೆ. Liver detox ಆಗುತ್ತದೆ. ಶರೀರದ kidney, liver, pancreas, gallbladder, ಮತ್ತು ಕರುಳುಗಳು ಇವೆಲ್ಲವುಗಳನ್ನು ಸ್ವಚ್ಛ ಮಾಡುವಂತಹ ಶಕ್ತಿ ಈ ಬೀಟ್ರೂಟನಲ್ಲಿದೆ.

Beetroot / ಬೀಟ್ರೂಟ್ ಅನ್ನು ಜ್ಯೂಸ್ ರೂಪದಲ್ಲಿ ಪಲ್ಯ ಸಾಂಬಾರ್ ರೂಪದಲ್ಲಿ ಸೇವನೆ ಮಾಡಬಹುದು ಆದರೆ ಹೆಚ್ಚು ಲಾಭ ಸಿಗಬೇಕು ಎಂದರೆ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬಿಟ್ರೂಟ್ ಜ್ಯೂಸ್ ಅನ್ನು ಕುಡಿಯುವುದು ಬಹಳ ಒಳ್ಳೆಯದು.

ಹಾಗೆ ಬೀಟ್ರೂಟ್ ಜ್ಯೂಸನ್ನು ಕುಡಿಯುವುದರಿಂದ ನಿಮ್ಮ ಕೊಬ್ಬು ಕರಗುತ್ತದೆ. ಡಯಾಬಿಟಿಸ್ ನಿವಾರಣೆಯಾಗುತ್ತದೆ, cholesterol, triglisted ಕಡಿಮೆಯಾಗುತ್ತದೆ. ಹಾಗೂ ಹೃದಯದ ಕಾಯಿಲೆಗಳನ್ನು ಇದು ತಡೆಗಟ್ಟುತ್ತದೆ.

ಹೃದಯದ ಕಾಯಿಲೆಗಳಿಗೆ ಇದು ಸಂಪೂರ್ಣವಾಗಿ ನಿವಾರಣಾ ಶಕ್ತಿಯಾಗಿ ಕೆಲಸ ಮಾಡುತ್ತದೆ. ಬೀಟ್ರೂಟ್ ಸೇವನೆಯಿಂದ ರಕ್ತನಾಳಗಳಲ್ಲಿ ಕಟ್ಟಿಕೊಂಡಿರುವಂತಹ blockage ಕರಗುತ್ತದೆ.

Triglisted balance ಆಗುತ್ತದೆ. ನಮ್ಮ ಶರೀರಕ್ಕೆ ಬೇಕಾಗುವಂತಹ good cholesterol ಕ್ರಿಯಾಶೀಲವಾಗುತ್ತದೆ. ಇದು ಸಂಪೂರ್ಣವಾಗಿ ನಮ್ಮ fat metabolism ಅನ್ನು ಕ್ರಿಯಾಶೀಲಗೊಳಿಸುವಂತಹ ಒಂದು ಶಕ್ತಿಯಾಗಿ ಕೆಲಸ ಮಾಡುತ್ತದೆ. ಇದರ ಸೇವನೆಯಿಂದ ಶುಗರ್ ಕೂಡ ಬಹಳ ಬೇಗ normal ಆಗುತ್ತದೆ.

ಕೆಲವು ಜನರು ಹೇಳುತ್ತಾರೆ, ಡಯಾಬಿಟಿಸ್ ಇರುವವರು Beetroot / ಬೀಟ್ರೂಟನ್ನು ಸೇವನೆ ಮಾಡಬಾರದು ಎಂದು. ಆದರೆ ಅದು ತಪ್ಪು. ನೀವು ಆರಾಮವಾಗಿ ಬೀಟ್ರೂಟ್ ಅನ್ನು ಸೇವನೆ ಮಾಡಬಹುದು. ಹಣ್ಣು ತರಕಾರಿಗಳಲ್ಲಿ ಇರುವಂತಹ ಸಿಹಿ ಪೆಟ್ರೋ ಸಿಹಿ. ಸುಕ್ರೋಸ್ ಸಿಹಿಯನ್ನು ತಿನ್ನುವುದರಿಂದ ನಿಮಗೆ ಶುಗರ್, ಬಿಪಿ, ಕೊಲೆಸ್ಟ್ರಾಲ್ ಹೆಚ್ಚಿಗೆ ಆಗುತ್ತದೆ. ಸುಕ್ರೋಸ್ ಎಲ್ಲಿರುತ್ತದೆ ಎಂದರೆ? ಅದು ಸಕ್ಕರೆಯಲ್ಲಿ ಇರುತ್ತದೆ.

ನೀವು ಫಾಸ್ಟ್ ಫುಡ್, ಜಂಕ್ ಫುಡ್, ಮೈದಾ ಹಿಟ್ಟಿನ ಪದಾರ್ಥ, Refind oil, ಸೇವನೆ ಮಾಡುವುದರಿಂದ ಶುಕ್ರೋಸ್ ಬರುತ್ತದೆ. ಆದರೆ ತರಕಾರಿ ಹಣ್ಣುಗಳಲ್ಲಿ ಸುಕ್ರೋಸ್ ನ ಅಂಶ ನಿಮ್ಮ ಶರೀರಕ್ಕೆ ಬರುವುದಿಲ್ಲ. ಇದರಿಂದ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿನಿತ್ಯ ಈ ಬಿಟ್ ರೂಟ್ ಅನ್ನು ನೀವು ಆಹಾರದಲ್ಲಿ ಸೇವನೆ ಮಾಡಬಹುದು.

ವಾರದಲ್ಲಿ ಎರಡರಿಂದ ಮೂರು ಸಲ ಬೀಟ್ರೂಟ್ ಅನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯ ಆರೋಗ್ಯಕರವಾದ ಶಕ್ತಿಯನ್ನು ಒದಗಿಸುತ್ತದೆ. ಬೀಟ್ರೂಟ್ ಜ್ಯೂಸನ್ನು ನೀವು ಮೂರು ತಿಂಗಳವರೆಗೂ ಸೇವನೆ ಮಾಡಬಹುದು.

ಮೂರು ತಿಂಗಳವರೆಗೂ ಬೀಟ್ರೂಟ್ ಜ್ಯೂಸ್ ಅನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಎಸಿಡಿಟಿ, ಮಲಬದ್ಧತೆ, ರಕ್ತ ಹೀನತೆಯ ಸಮಸ್ಯೆ, ನರಗಳ ದೌರ್ಬಲ್ಯತೆ, ಮಾಂಸ ಖಂಡಗಳದೌರ್ಬಲ್ಯತೆ, ಈ ರೀತಿಯಾಗಿರುವಂತಹ ಎಲ್ಲಾ ಸಮಸ್ಯೆಗಳು ಈ Beetroot / ಬೀಟ್ರೂಟ್ ಸೇವನೆಯಿಂದ ನಿವಾರಣೆಯಾಗುತ್ತವೆ.

ಈ ಬಿಟ್ರೋಟ್ ಅದ್ಭುತವಾಗಿರುವಂತಹ ಶೀತ ವಿರ್ಯ ಗುಣ ಧರ್ಮವನ್ನು ಹೊಂದಿರುವ ಆಹಾರವಾಗಿರುವುದರಿಂದ ವಾತ ವಿಕಾರಗಳು, ಪಿತ್ತವಿಕಾರಗಳು ದೂರವಾಗಿ ಶರೀರದಲ್ಲಿ ಸುಮಾರು ನೂರಾರು ಕಾಯಿಲೆಗಳು ನಮ್ಮ ಶರೀರಕ್ಕೆ ಬರದಂತೆ ರಕ್ಷಣೆಯನ್ನು ಒದಗಿಸುತ್ತದೆ.

ಆದ್ದರಿಂದ ನಾವು ನಿಯಮಿತವಾಗಿ ಬಿಟ್ರೂಟ್ ಸೇವನೆಯನ್ನು ಮಾಡುವುದರಿಂದ ನಮ್ಮ ಶರೀರದಲ್ಲಿ ಎಲ್ಲಾ ಪೋಷಕಾಂಶಗಳು ದೊರೆಯುತ್ತವೆ.

ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850

ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.

ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು. 

Leave a Reply

Your email address will not be published. Required fields are marked *