Ayurveda Tips in Kannada

Ayurveda Tips In Kannada

ಯೋಗ & ವರ್ಕೌಟ್ಮನೆಮದ್ದು

ತಲೆಹೊಟ್ಟು / ಕೂದಲು ಉದುರುವಿಕೆ ಗೆ ಮನೆಮದ್ದು

ಇಂದಿನ ಸಂಚಿಕೆಯಲ್ಲಿ, Tale Hottu / ತಲೆಯಲ್ಲಿ ಹೊಟ್ಟು ಆಗುವುದು, ಮತ್ತು ತಲೆ ಕೂದಲು ಉದುರುವುದು, ಮತ್ತು ಕೂದಲು ಕಟ್ ಆಗುವುದು, ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ನೋಡೋಣ.

Tale Hottu / ತಲೆಯಲ್ಲಿ ಹೊಟ್ಟು ಕಾರಣಗಳು ?

ಈ ಎಲ್ಲಾ ಸಮಸ್ಯೆಗಳಿಗೆ ಕಾರಣವೇ ಮಲಬದ್ಧತೆ ಮತ್ತು ಅಜೀರ್ಣ. ಹೊಟ್ಟೆಯಲ್ಲಿ ಮಲ ಸಂಗ್ರಹಣೆಯಾದರೆ ಮೆದುಳಿಗೆ ರಕ್ತ ಸಂಚಾರ ಆಗಬೇಕಾದರೆ, ಕೂದಲಿಗೆ ಬೇಕಾಗಿರುವಂತಹ ಪೋಷಕ ತತ್ವಗಳು ಕೂದಲುಗಳಿಗೆ ತಲುಪಲು ಆ ಪೋಷಕಾಂಶಗಳ ಜೊತೆಗೆ ರಕ್ತ ಸಂಚಾರದ ಜೊತೆಗೆ ಹೊಟ್ಟೆಯಲ್ಲಿ ಸಂಗ್ರಹಣೆಯಾಗಿರುವಂತಹ ಮಲ ಅದು ಕೂಡ ತಲೆಗೆ ಹೋಗುತ್ತದೆ.

Tale Hottu / ತಲೆಯಲ್ಲಿ ಹೊಟ್ಟು ಲಕ್ಷಣಗಳು:-

ಹೊಟ್ಟೆಯಲ್ಲಿರುವಂತಹ ಹೊಲಸು ತಲೆಗೆ ಹೋಯಿತು ಎಂದರೆ, ತಲೆ ಹೊಲಸು ಆಗಿ ಅದೇ ಹೊಟ್ಟಾಗುವುದು, ತಲೆಕೂದಲು ಉದುರುವುದು, ಈ ಸಮಸ್ಯೆಗಳು ಆಗುತ್ತವೆ. ಇದು ತುಂಬಾ ಜನರಿಗೆ ಗುರುತು ಇರುವುದಿಲ್ಲ.

ಆದ್ದರಿಂದ ಅವರು ತಲೆ ಕೂದಲು ಉದುರುತ್ತಿದ್ದರೆ ಹಲವಾರು ಶಾಂಪೂಗಳನ್ನು ಬಳಸುವುದು, ಯಾವುದೋ ಇಂಜೆಕ್ಷನ್ ಗಳನ್ನು ಮಾಡಿಸಿಕೊಳ್ಳುವುದು, ಹೀಗೆ ಮಾಡುವುದರಿಂದ ಪ್ರಯೋಜನವಾಗುವುದಿಲ್ಲ.

ತಲೆ ಕೂದಲು ಉದುರುವುದು, ತಲೆ ಕೂದಲು ಕಟ್ಟಾಗುವ ಸಮಸ್ಯೆ Tale Hottu / ತಲೆ ಹೊಟ್ಟಾಗುವ ಸಮಸ್ಯೆಗಳು ನಿಲ್ಲಬೇಕು ಎಂದರೆ, ಮೊದಲು ಹೊಟ್ಟೆ ಸ್ವಚ್ಚವಾಗಿರಬೇಕು.ಹೊಟ್ಟೆ ಸ್ವಚ್ಚವಾಗಿರದೆ ಇದ್ದರೆ ಈ ಎಲ್ಲಾ ಸಮಸ್ಯೆಗಳು ಸರಿಯಾಗಲು ಸಾಧ್ಯವೇ ಇಲ್ಲ.

Tale Hottu / ಹೊಟ್ಟೆ ಶುದ್ಧೀಕರಣ ಹೇಗೆ ಮಾಡಿಕೊಳ್ಳುವುದು ?

ಒಂದು ತಿಂಗಳಗಳ ಕಾಲ ನಿರಂತರವಾಗಿ ಹಣ್ಣು ತರಕಾರಿ ಸೊಪ್ಪುಗಳನ್ನೇ ಸೇವನೆ ಮಾಡಬೇಕು. ಎಳೆ ನೀರನ್ನು ಕುಡಿಯಬಹುದು. ಬೇಯಿಸದೇ ಇರುವಂತಹ ಆಹಾರವನ್ನು ಸೇವನೆ ಮಾಡಬೇಕು. ಆಗ ಹೊಟ್ಟೆ ಸ್ವಚ್ಚವಾಗುತ್ತದೆ. ಕೆಲವೊಬ್ಬರಿಗೆ ಹಣ್ಣು, ತರಕಾರಿ, ಸೊಪ್ಪುಗಳನ್ನು ಹಸಿದಾಗಿ ತಿಂದರೆ, ಹೊಟ್ಟೆ ತುಂಬಿದ ಹಾಗೆ ಆಗುವುದಿಲ್ಲ.

ಅಂಥವರು ಏನು ಮಾಡಬೇಕು ಎಂದರೆ, ಹಣ್ಣು ತರಕಾರಿಗಳನ್ನು ಚೆನ್ನಾಗಿ ಬೇಯಿಸಿಕೊಂಡು ಅದು ಬೆಯುವ ಸಮಯದಲ್ಲಿ ಅದರಲ್ಲಿ ಸಾಸಿವೆ, ಜೀರಿಗೆ, ಕರಿಬೇವು, ಕೊತ್ತಂಬರಿ, ಕಾಳು ಮೆಣಸು, ಹಸಿಶುಂಠಿ, ಅರಿಶಿನ, ಉಪ್ಪು ಸ್ವಲ್ಪ ನಾಟಿ ಹಸುವಿನ ತುಪ್ಪ ಹಾಕಿ ಕುದಿಸಿಕೊಳ್ಳಬೇಕು. ಈ ತರಹ ಎಲ್ಲಾ ಸಾಮಗ್ರಿಗಳನ್ನು ಹಾಕಿಕೊಂಡು ಚೆನ್ನಾಗಿ ಕುದಿಸಿ ಪಲ್ಯ ಮಾಡಿಕೊಂಡು ಸೇವನೆ ಮಾಡಬಹುದು.

Tale Hottu / ತಲೆಯಲ್ಲಿ ಹೊಟ್ಟಿಗೆ & ಕೂದಲುಗಳಿಗೆ ಪೋಷಕ ತತ್ವಗಳನ್ನು ಒದಗಿಸುವ ತರಕಾರಿಗಳು ಯಾವುವು ?

ಕ್ಯಾರೆಟ್ ಬೀಟ್ರೂಟ್, ಸೌತೆಕಾಯಿ, ಬೂದುಗುಂಬಳಕಾಯಿ, ಟೊಮೆಟೊ,ಬೀನ್ಸ್ ,ಬೆಂಡೆಕಾಯಿ,
ಇವೆಲ್ಲ ಕೂದಲುಗಳಿಗೆ ಬೇಕಾಗಿರುವಂತಹ ಹೆಚ್ಚು ಪೋಷಕ ತತ್ವಗಳನ್ನು ಹೊಂದಿರುವಂತಹ ತರಕಾರಿಗಳು.

ಮೆಂತ್ಯ ಸೊಪ್ಪು, ಪಾಲಕ್ ಸೊಪ್ಪು, ಪುದಿನ ಸೊಪ್ಪು, ಸಬ್ಬಸ್ಗಿ ಸೊಪ್ಪು, ದಂಟಿನ ಸೊಪ್ಪು ಬಸಳೆ ಸೊಪ್ಪು, ಹರವೇ ಸೊಪ್ಪು, ಇವೆಲ್ಲ ಸೊಪ್ಪುಗಳಲ್ಲಿ ಕೂದಲುಗಳಿಗೆ ಬೇಕಾಗಿರುವಂತಹ ಪೋಷಕತತ್ವಗಳು ಇರುತ್ತವೆ.

ಜೀರ್ಣಾಂಗ ವ್ಯವಸ್ಥೆಗೆ ಬೇಕಾಗಿರುವಂತಹ ಸತ್ವಗಳು ಇರುತ್ತವೆ, ರಕ್ತಶುದ್ಧಿ ಮಾಡುವಂತಹ ಪೋಷಕಾಂಶಗಳು ಇರುತ್ತವೆ. ಅದಕ್ಕಾಗಿ ಇಂತಹ ಸೊಪ್ಪು ತರಕಾರಿಗಳನ್ನು ಬೇಯಿಸಿಕೊಂಡು ಸೇವನೆ ಮಾಡಬೇಕು.

ಕಾಳುಗಳಲ್ಲಿ:- ಹುರುಳೇಕಾಳು, ಹೆಸರು ಕಾಳು, ಉದ್ದಿನ ಕಾಳು, ತಲೆ ಕೂದಲುಗಳಿಗೆ ಬಹಳ ಒಳ್ಳೆಯದು. ಇವೆಲ್ಲ ಕಾಳುಗಳು ತಲೆಕೂದಲಿನ ಸಮಸ್ಯೆಗಳನ್ನು ನಿವಾರಣೆ ಮಾಡುವುದಕ್ಕೆ ತುಂಬಾ ಒಳ್ಳೆಯ ಫಲಿತಾಂಶವನ್ನು ಕೊಡುತ್ತವೆ. ಆದರೆ ಇವೆಲ್ಲವನ್ನೂ ಮುಖ್ಯವಾಗಿ ಚೆನ್ನಾಗಿ ಕುದಿಸಿಕೊಳ್ಳಬೇಕು.

ತಲೆ ಹೊಟ್ಟಿಗೆ & ತಲೆ ಕೂದಲಿನ ಸಮಸ್ಯೆಗೆ ಮನೆಮದ್ದುಗಳು

ನಿಂಬೆ ಹಣ್ಣಿನ ರಸ ಮತ್ತು ಕೊಬ್ಬರಿ ಎಣ್ಣೆ ಇವೆರಡನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ತಲೆಗೆ ಹಚ್ಚಿಕೊಂಡು
ಬೆಳಗ್ಗಿನ ಹೂಬೀಸಿಲಿಗೆ ನಿಂತುಕೊಳ್ಳಬೇಕು. ಆಮೇಲೆ ಅಂಟ್ವಾಳದ ಕಾಯಿ ಅಥವಾ ಶೀಗೆಕಾಯಿಯಿಂದ ತಲೆಯನ್ನು ತೊಳೆದುಕೊಳ್ಳಬೇಕು.

ಈ ರೀತಿಯಾಗಿ ಮಾಡಿದರೆ, ಒಂದು ವಾರದಲ್ಲಿಯೇ ತಲೆ ಹೊಟ್ಟು ಹೋಗುತ್ತದೆ, ತಲೆ ಕೂದಲು ಉದುರುವ ಸಮಸ್ಯೆ ನಿಲ್ಲುತ್ತದೆ, ತಲೆ ಕೂದಲು ಕಟ್ಟಾಗುವುದು ನಿಲ್ಲುತ್ತದೆ.

Tale Hottu 3 Super Mane Maddu

ಈ ಲೇಪನವನ್ನು ಮಾಡಬೇಕು, ಇದು ಉಪಯೋಗವಾಗಬೇಕು ಎಂದರೆ, ಹೊಟ್ಟೆ ಶುದ್ದಿ ಇರಬೇಕು. ಅದಕ್ಕಾಗಿ ನೀವು ಈ ಕೂದಲುಗಳಿಗೆ ಬೇಕಾಗಿರುವಂತಹ ಪೋಷಕಾಂಶಗಳನ್ನು ಕೂದಲುಗಳಿಗೆ ಬೇಕಾಗಿರುವಂತಹ ಒಳ್ಳೆ ರಕ್ತ ಸಂಚಾರವನ್ನು ಒದಗಿಸುವ
ಮತ್ತೊಂದು ಮನೆ ಮದ್ದನ್ನು ಮಾಡಿಕೊಳ್ಳಬೇಕು.

ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿ ಜ್ಯೂಸನ್ನು ಸೇವನೆ ಮಾಡಬೇಕು. ಚೆನ್ನಾಗಿ ಕೂದಲು ಬರುತ್ತವೆ. ನಿಂಬೆಹಣ್ಣಿನ ರಸ ಮತ್ತು ಕೊಬ್ಬರಿ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡು, ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಸೇವನೆ ಮಾಡಬೇಕು. ಇಷ್ಟು ಮಾಡಿದರೆ ಸಾಕು, ತಲೆ ಕೂದಲಿನ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ.

ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850

ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.

ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು. 

Leave a Reply

Your email address will not be published. Required fields are marked *