ಪ್ರಾಣಾಯಾಮ ಮಾಡುವ ವಿಧಾನ..!

Pranayama in Kannada / ಪ್ರಾಣಾಯಾಮದ ಬಗ್ಗೆ ಹಲವಾರು ಜನ ಹಲವಾರು ತರಹ ಹೇಳುತ್ತಾರೆ. ಆದರೆ ಯಾವುದು ಸರಿ ಯಾವುದು ತಪ್ಪು ಹೇಗೆ ಮಾಡಬೇಕು ? ಪ್ರಾಣಾಯಾಮ ಮಾಡುವಾಗ ಮುಂಜಾಗ್ರತೆ ಕ್ರಮ ಏನು ವಹಿಸಬೇಕು. ಪ್ರಾಣಾಯಾಮ ಮಾಡುವಾಗ ಹೇಗೆ ಕುಳಿತುಕೊಳ್ಳಬೇಕು? ಪ್ರಾಣಾಯಾಮ ಹೇಗೆ ಮಾಡಬೇಕು ಎಂಬುದು ಇವತ್ತಿನ ಆರ್ಟಿಕಲ್ ನಲ್ಲಿ ನೋಡೋಣ.

Pranayama in Kannada / ಪ್ರಾಣಾಯಾಮ ಎಂದರೆ ಇದಕ್ಕೆ ಒಂದು Philosophy ಇದೆ. ಇದಕ್ಕೆ ಒಂದು ತತ್ವ ಜ್ಞಾನ ಇದೆ ಒಂದು ವಿಜ್ಞಾನ ಕೂಡ ಇದೆ. ಹಾಗೆ ಆ ವಿಜ್ಞಾನವನ್ನು ಮತ್ತು ತತ್ವ ಜ್ಞಾನವನ್ನು ಸರಿಯಾಗಿ, ಸಮರ್ಪಕವಾಗಿ ನಾವು ಆಚರಣೆ ಮಾಡುವುದರ ಮೂಲಕ ಈ ಪ್ರಾಣಾಯಾಮವನ್ನು ಮಾಡಿದರೆ ಮಾತ್ರ ಇದರ ಲಾಭ ನಮಗೆ ಸಿಗುತ್ತದೆ.

ಸರಿಯಾಗಿ ಮಾಡಿದರೆ ಪ್ರಾಣಾಯಾಮ. ಸರಿ ತಪ್ಪಿದರೆ ಪ್ರಾಣಕ್ಕೆ ಯಮ ಆಗುತ್ತದೆ. ಹಾಗಾದರೆ ನಾವು ಪ್ರಾಣಾಯಾಮದಲ್ಲಿ ಮೊದಲನೆಯ ಪಾಯಿಂಟ್ ಏನು ತಿಳಿದುಕೊಳ್ಳಬೇಕು ಎಂದರೆ? ಪ್ರಾಣಾಯಾಮ ಮಾಡುವ ಸಂದರ್ಭದಲ್ಲಿ ಹೊಟ್ಟೆ ಖಾಲಿ ಇರಬೇಕು. ಶರೀರ ಫ್ರೆಶ್ ಆಗಿ ಇರಬೇಕು. ಅದರ ಜೊತೆಗೆ ನಾವು ಕುಳಿತುಕೊಳ್ಳುವಂತಹ ವಿಧಾನ ಸರಿಯಾಗಿರಬೇಕು.

ಪ್ರಾಣಾಯಾಮವನ್ನು ಮಾಡುವಾಗ ನಾವು ಹೇಗೆ ಕುಳಿತುಕೊಳ್ಳಬೇಕು ? / Sitting Postures Pranayama in Kannada

ತಲೆ ಕುತ್ತಿಗೆ ಬೆನ್ನು ಹುರಿ ನೇರವಾಗಿ ಇರಬೇಕು. ತಲೆ ಕುತ್ತಿಗೆ ಬೆನ್ನು ಹುರಿ ನೇರವಾಗಿ ಇರಬೇಕಾದರೆ ನಾವು ಹೇಗೆ ಕುಳಿತುಕೊಳ್ಳಬೇಕು?ಪ್ರಾಣಾಯಾಮವನ್ನು ಮಾಡುವಾಗ ತುಂಬಾ ಜನರು ಹೇಗೆ ಕುಳಿತುಕೊಳ್ಳುತ್ತಾರೆ ಎಂದರೆ? ನೆಲದ ಮೇಲೆ ಕುಳಿತುಕೊಂಡಿರುತ್ತಾರೆ. ನೆಲದ ಮೇಲೆ ಕುಳಿತುಕೊಂಡಾಗ ನಮ್ಮ ಬೆನ್ನು ಹುರಿ ಬೆಂಡಾಗಿರುತ್ತದೆ. ಏನು ಹೇಳುತ್ತಾರೆ ಎಂದರೆ ?ಬೆನ್ನು ಹುರಿ ಯನ್ನು ನೇರ ಮಾಡಿ ಎನ್ನುತ್ತಾರೆ.

ಸಂಪೂರ್ಣವಾಗಿ ನಮ್ಮ ಎದೆಯ ಭಾಗ ಮತ್ತು ಹೊಟ್ಟೆಯ ಭಾಗ ಸಂಪೂರ್ಣವಾಗಿ ಬಿಗಿಯಾಗುತ್ತದೆ. ಯಾವಾಗ ಎದೆಯ ಭಾಗ ಮತ್ತು ಹೊಟ್ಟೆಯ ಭಾಗ ಬಿಗಿಯಾಗುತ್ತದೆಯೋ, ಕೈಗಳ ಭಾಗ ಭುಜಗಳ ಭಾಗ ಎಲ್ಲವೂ ಬಿಗಿಯಾಗುತ್ತದೆಯೋ, ಆವಾಗ ನಮ್ಮ nervous system ನಲ್ಲಿ sensation ಕಡಿಮೆಯಾಗುತ್ತಾ ಹೋಗುತ್ತದೆ.

ಹಾಗಾಗಿ ನಾವು ಪ್ರಾಣಾಯಾಮ ಮಾಡಿದಾಗ ಅದರ ಸಂಪೂರ್ಣವಾದ ಪ್ರಯೋಜನ ನಮ್ಮ ಶರೀರಕ್ಕೆ ಮತ್ತು ಮನಸ್ಸಿಗೆ ಸಿಗುವುದಿಲ್ಲ. ಹಾಗಾದರೆ ನಾವು ಕುಳಿತುಕೊಳ್ಳುವಂತಹ ವಿಧಾನ ಹೇಗೆ ಕಲಿತುಕೊಳ್ಳಬೇಕು?

ಪ್ರಾಣಾಯಾಮ ಮಾಡುವಾಗ ಕುಳಿತುಕೊಳ್ಳುವ ವಿಧಾನ / How to Sit For Pranayama in Kannada

ನಾವು ಒಂದು ಇಟ್ಟಿಗೆಯ ಮೇಲೆ ನೇರವಾಗಿ ಕುಳಿತುಕೊಳ್ಳಬೇಕು. ಆಗ ನನ್ನ ಬೆನ್ನು ಹುರಿ ತಕ್ಷಣ ನೇರವಾಗುತ್ತದೆ. ಮೊಳಕಾಲನ್ನು ನಾವು ಸ್ವಲ್ಪ ಕೆಳಗೆ ತಳ್ಳಿದಾಗ ಸೊಂಟವನ್ನು ಮೇಲೆ ಎತ್ತಿದಾಗ ಅನಾಯಾಸವಾಗಿ ನಮ್ಮ ಬೆನ್ನು ಹುರಿ ನೇರವಾಗುತ್ತದೆ.

ಅದರ ಜೊತೆಗೆ ಬೆನ್ನು ಹುರಿ ಯಲ್ಲಿ ಒತ್ತಡಗಳು ಕಡಿಮೆಯಾಗುತ್ತವೆ. ಯಾವಾಗ ಬೆನ್ನು ಹುರಿಯಲ್ಲಿ ಒತ್ತಡಗಳು ಕಡಿಮೆಯಾಗುತ್ತವೆಯೋ, ಆಗ central nervous system activate ಆಗುತ್ತದೆ. ಯಾವಾಗ central nervous system activate ಆಗುತ್ತದೆಯೋ, ಆಗ ಮೆದುಳಿಗೆ ರಕ್ತ ಸಂಚಾರ ಸರಿಯಾಗಿ ಆಗುತ್ತದೆ.

ಯಾವಾಗ ಮೆದುಳಿಗೆ ರಕ್ತ ಸಂಚಾರ ಸರಿಯಾಗಿ ಆಗುತ್ತದೆಯೋ, ಆಗ ಮಾತ್ರ ನಮ್ಮ ಪ್ರಾಣಯಾಮದ ಸರಿಯಾದ ಪ್ರಯೋಜನ ನಮ್ಮ ಶರೀರಕ್ಕೆ ಸಿಗುತ್ತದೆ. ಆದ್ದರಿಂದ how to sit ಎನ್ನುವುದು ಬಹಳ ಮುಖ್ಯ ಯೋಗದಲ್ಲಿ.

How to sit ಎಂದರೆ? ಹೇಗೆ ಕುಳಿತುಕೊಳ್ಳಬೇಕು ಎಂದರೆ? ಈ ರೀತಿ brig ಅನ್ನು ಬಳಸಿಕೊಂಡು ಕುಳಿತುಕೊಳ್ಳಬೇಕು. ಅಥವಾ ನಿಮ್ಮ ಮನೆಯಲ್ಲಿ brig ಇಲ್ಲದಿದ್ದರೆ ನೀವು ಮಲಗುವಂತಹ ಹಾಸಿಗೆಯನ್ನು ಚೆನ್ನಾಗಿ ಮಡಚಿ ನೀವು ಕೆಳಗಡೆ ಪುಷ್ಟ ಭಾಗದಲ್ಲಿ ಇಟ್ಟುಕೊಂಡು ಕುಳಿತುಕೊಂಡರೆ, automatic ಆಗಿ ನಮ್ಮ ಶರೀರ ಸಂಪೂರ್ಣವಾಗಿ ನೇರವಾಗಿರುತ್ತದೆ.

ಹಾಗೆ ಕುಳಿತುಕೊಂಡರೆ ಶರೀರ ಬೆಂಡಾಗುತ್ತದೆ. Pranayama in Kannada / ಈ ವಿಚಾರವನ್ನು ಪ್ರಾಣಾಯಾಮ ಮಾಡುವವರು ಸರಿಯಾಗಿ ತಿಳಿದುಕೊಳ್ಳುವ ವಿಚಾರ. ಸರಿಯಾಗಿ ನೇರವಾಗಿ ಕುಳಿತುಕೊಳ್ಳದೆ ನಾವು ಪ್ರಾಣಾಯಾಮವನ್ನು ಮಾಡಿದಾಗ ಪ್ರಾಣ struck ಆಗುತ್ತದೆ. ಪ್ರಾಣ ಒಂದು ಕಡೆ ಬಂದಿಸಲ್ಪಡುತ್ತದೆ.

ಯಾವಾಗ ಪ್ರಾಣ ಒಂದು ಕಡೆ ಬಂದಿಸಲ್ಪಡುತ್ತದೆಯೋ, ಆಗ ನಮ್ಮ ಶರೀರದಲ್ಲಿ ಬಹಳ ತೊಂದರೆಗಳು ಉಂಟಾಗುತ್ತವೆ. ಶರೀರದ ಪಂಚಪ್ರಾಣಗಳ ವಿಕಾರ ಉಂಟಾಗುತ್ತವೆ. ಯಾವಾಗ ಪಂಚಪ್ರಾಣಗಳು ವಿಕಾರವಾಗುತ್ತವೆಯೋ, ಆಗ ಶರೀರದಲ್ಲಿ ಪ್ರಾಣಾಯಾಮ ಮಾಡಿದರೆ Negative Effects ಗಳು ಶುರುವಾಗುತ್ತವೆ. ಆದ್ದರಿಂದ ಸರಿಯಾಗಿ ಮಾಡಿದರೆ ಪ್ರಾಣಾಯಾಮ. ಸರಿ ತಪ್ಪಿದರೆ ಪ್ರಾಣಕ್ಕೆ ಯಮ ಎಂದು ಹೇಳುತ್ತಾರೆ.

ಹಾಗಾಗಿ Pranayama in Kannada / ಈ ಪ್ರಾಣಾಯಾಮವನ್ನು ಮಾಡುವ ಸಂದರ್ಭದಲ್ಲಿ ನೇರವಾಗಿ ಕುಳಿತುಕೊಳ್ಳುವುದನ್ನು ನಾವು ಮೊದಲು ಕಲಿತುಕೊಳ್ಳಬೇಕು. ಯಾವಾಗ ನಾವು ನೇರವಾಗಿ ಕುಳಿತುಕೊಳ್ಳುತ್ತೇವೆಯೋ, ಆಗ ನಮ್ಮ ಶರೀರದಲ್ಲಿ pyara sympathetic nervous system, sympathetic nervous system ಕ್ರಿಯಾಶೀಲವಾಗಿ ಮಾಡುತ್ತವೆ. ಮತ್ತು ಶರೀರದಲ್ಲಿ ವೇಗಸ್ ನಾಡಿ ಎಂದು ಇರುತ್ತದೆ.

ಆ ವೇಗಸ್ ನಾಡಿಯನ್ನು ನಾವು ಸಂಪೂರ್ಣವಾಗಿ ಕ್ರಿಯಾಶೀಲವಾಗಿ ಇಟ್ಟುಕೊಂಡರೆ ಮಾತ್ರ ಪ್ರಾಣಾಯಾಮ ಮಾಡಿದ್ದಕ್ಕೂ ಉಪಯೋಗವಾಗುತ್ತದೆ. ಆ ವೇಗಸ್ ನಾಡಿ ಕ್ರಿಯಶೀಲವಾಗಿ ಇರಬೇಕು, activate ಆಗಿ ಇರಬೇಕು ಎಂದರೆ? ನಮ್ಮ spile card ನೇರವಾಗಿ ಇರಬೇಕು. Spile card ನೇರವಾಗಿ ಇರಬೇಕು ಎಂದರೆ? ನಾವು ಕುಳಿತುಕೊಳ್ಳುವಾಗ ಕೆಳಗಡೆ brig ಅನ್ನು ಉಪಯೋಗ ಮಾಡಬೇಕಾಗುತ್ತದೆ.

Pranayama in Kannada / ಇದನ್ನು ಸರಿಯಾಗಿ ತಿಳಿದುಕೊಳ್ಳಬೇಕು. ತುಂಬಾ ಜನರು ಪ್ರಾಣಾಯಾಮವನ್ನು ಮಾಡುವಾಗ ಸರಿಯಾಗಿ ನೇರವಾಗಿ ಕುಳಿತುಕೊಳ್ಳದೆ ಪ್ರಾಣಾಯಾಮವನ್ನು ಮಾಡುತ್ತಾರೆ. ನೇರವಾಗಿ ಕುಳಿತುಕೊಳ್ಳದೆ ಕಪಾಲಭಾತಿ ಪ್ರಾಣಾಯಾಮವನ್ನು ಮಾಡುತ್ತಾರೆ. ನಾಡಿಶೋಧನ ಪ್ರಾಣಾಯಾಮ ಮಾಡುತ್ತಿರುತ್ತಾರೆ.

ಹೀಗೆ ಮಾಡುವುದರಿಂದ ಶರೀರಕ್ಕೆ ತುಂಬಾ ತೊಂದರೆ ಆಗುತ್ತದೆ. Pranayama in Kannada / ಪ್ರಾಣಾಯಾಮದಿಂದ ಎಷ್ಟು ಲಾಭ ಇದೆಯೋ, ಸರಿಯಾಗಿ ಮಾಡದೆ ಇದ್ದರೆ ಅಷ್ಟೇ ಹಾನಿ ಕೂಡ ಇದೆ. ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಯೋಗವನ್ನು ಸರಿಯಾಗಿ ಮಾಡದೆ ಹುಚ್ಚರಾಗಿರುವ ಜನರನ್ನು ನಾವು ನೋಡುತ್ತಿರುತ್ತೇವೆ.

ಆದ್ದರಿಂದ ಸರಿಯಾದ ಗುರುಗಳ ಮಾರ್ಗದರ್ಶನದಲ್ಲಿ ಸರಿಯಾದ ಕ್ರಮದಲ್ಲಿ ನೀವು ಯೋಗ ಪ್ರಾಣಾಯಾಮವನ್ನು ಮಾಡುತ್ತಾ ಹೋದರೆ ನಿಮ್ಮ ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ಬಲಿಷ್ಠವಾಗುತ್ತದೆ.

ಆದ್ದರಿಂದ ನಾವು ಮೊದಲನೆಯದಾಗಿ ಪ್ರಾಣಾಯಾಮವನ್ನು ಮಾಡಬೇಕು ಎಂದರೆ, ನಾವು ಯಾವ ರೀತಿ ಕುಳಿತುಕೊಳ್ಳಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಇದಕ್ಕೆ how to sit ಎಂದು ಹೇಳುತ್ತಾರೆ.

How to sit ಎಂದರೆ? ತಲೆ ಕುತ್ತಿಗೆ ಬೆನ್ನು ಹುರಿ ನೇರವಾಗಿ ಇರಬೇಕು. ಅದಕ್ಕಾಗಿ ನಾವು ಬ್ರಿಗ್ ಅಥವಾ ಹಾಸಿಗೆಯನ್ನು ಮಡಚಿಕೊಂಡು ನಮ್ಮ ಪುಷ್ಟ ಭಾಗದ ಕೆಳಗಡೆ ಇಟ್ಟುಕೊಂಡು ಕುಳಿತುಕೊಳ್ಳಬೇಕು.

ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850

ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.

ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು. 

Leave a Reply

Your email address will not be published. Required fields are marked *