ಇಂದಿನ ಸಂಚಿಕೆಯಲ್ಲಿ, Mulavyadi / ಮೂಲವ್ಯಾಧಿ ಸಮಸ್ಯೆಯನ್ನು ಹೇಗೆ ನಿವಾರಣೆ ಮಾಡಿಕೊಳ್ಳಬಹುದು? ಈ ಕುರಿತಾಗಿ ಇರುವಂತಹ ಮಾಹಿತಿಗಳನ್ನು ನೋಡೋಣ.
Mulavyadi / ಮೂಲವ್ಯಾಧಿಯಲ್ಲಿ ಹಲವಾರು ಪ್ರಕಾರಗಳಿವೆ. Piles, fistula , Fissure , Bhagandar, ಹೀಗೆ ಹಲವಾರು ರೀತಿಯ
ಮೂಲವ್ಯಾಧಿ ಸಮಸ್ಯೆಗಳು ಬರುತ್ತವೆ. fistula ಈ ಸಮಸ್ಯೆ ನಿವಾರಣೆ ಆಗುವುದು ಸ್ವಲ್ಪ ಕಷ್ಟ. Fissure Piles Bhagandar ಈ ಸಮಸ್ಯೆಗಳು ಬೇಗ ನಿವಾರಣೆಯಾಗುತ್ತವೆ. ಏಕೆಂದರೆ? fistula ದಲ್ಲಿ infection ಒಳಗೆ ಹೋಗಿರುತ್ತದೆ.
ಆಳವಾಗಿ ಗುದದ್ವಾರದ ಒಳಗಡೆ ಒಂದು ತರಹ ಹುತ್ತ ಬೆಳೆದಿರುವ ಹಾಗೆ ಬೆಳೆದುಕೊಂಡಿರುತ್ತದೆ. ಒಳಗಡೆ infection ಹೆಚ್ಚು ಇರುತ್ತದೆ. ಆದರೂ ಕೂಡ ಅದಕ್ಕೆ ಕ್ಷಾರ ಚಿಕಿತ್ಸೆ ಅಂತ ಮಾಡುತ್ತಾರೆ. ಆಯುರ್ವೇದದಲ್ಲಿ ಕ್ಷಾರವನ್ನು ಒಂದು ಬತ್ತಿಗೆ ಹಚ್ಚಿ infection ಆಗಿರುವ ಜಾಗದಲ್ಲಿ ಸೇರಿಸಿ ಆ infection ತೆಗೆಯುವಂತಹ ಚಿಕಿತ್ಸೆ ಮಾಡುತ್ತಾರೆ.
Piles, Fisher ಈ ತರಹದ ಸಮಸ್ಯೆಗಳು ಇದ್ದರೆ, ಕೆಲವು ಸಂದರ್ಭದಲ್ಲಿ fistula ಕೂಡ ಗುಣವಾಗುತ್ತದೆ. ಮೊದಲನೆಯದಾಗಿ ಇಂತಹ ಎಲ್ಲ ಸಮಸ್ಯೆಗಳು ಬರುವುದಕ್ಕೆ ಕಾರಣಗಳು ಯಾವುವು? ಎಂಬುದನ್ನು ನಾವು ತಿಳಿದುಕೊಳ್ಳಬೇಕು.
Mulavyadi / ಮೂಲವ್ಯಾಧಿ ಸಮಸ್ಯೆಗೆ ಕಾರಣಗಳು ?
ಅಜೀರ್ಣದಿಂದಾಗಿ ಮಲಬದ್ಧತೆಯ ಸಮಸ್ಯೆಯಿಂದಾಗಿ, ಹಾಗೂ ಆಹಾರ ಶೈಲಿಯಲ್ಲಿ ಆಗುವಂತಹ ತಪ್ಪುಗಳಿಂದಾಗಿ, ತಡವಾಗಿ ಮಲಗುವುದರಿಂದಾಗಿ, ಜೀವನ ಶೈಲಿಯಲ್ಲಿ ಆಗುವ ಅಸಮತೋಲನದಿಂದಾಗಿ, ಈ ಸಮಸ್ಯೆ ನಮಗೆ ಬರುತ್ತದೆ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ಗಜಕರ್ಣ / ಕಜ್ಜಿ /ತುರಿಕೆಗೆ ಮನೆಮದ್ದು..!
Mulavyadi / ಮೂಲವ್ಯಾಧಿ ಸಮಸ್ಯೆಗೆ ಪರಿಹಾರಗಳು..!
ಮೊದಲು ನಮ್ಮ ಅಜೀರ್ಣದ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬೇಕು. ಮಲಬದ್ಧತೆಯ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬೇಕು. ಆ ನಂತರ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವಂತಹ ಅದನ್ನು ಶಮನಮಾಡುವಂತಹ ಪ್ರಯತ್ನವನ್ನು ನಾವು ಮಾಡಬೇಕು.
ಮೊದಲು ಕಾರಣಗಳನ್ನು ಸರಿಪಡಿಸಿಕೊಳ್ಳದಿದ್ದರೆ ನಾವು ಯಾವುದೇ ಕಾಯಿಲೆಗಳನ್ನು ಶಮನ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಮಲಬದ್ಧತೆ ಮತ್ತು ಅಜೀರ್ಣದ ಸಮಸ್ಯೆ ನಿವಾರಣೆ ಆಗಬೇಕು ಎಂದರೆ, ನಾವು ಆಹಾರ ಕ್ರಮದಲ್ಲಿ ತಪ್ಪಾಗಿರುವಂತಹ ಆಹಾರ ಕ್ರಮವನ್ನು ಮಾಡುತ್ತೇವೆ.
ಆಹಾರದಲ್ಲಿ fibre ಇರುವುದಿಲ್ಲ. ಹೆಚ್ಚು ಖಾರ ಮಸಾಲೆ ಪದಾರ್ಥ, ಕರಿದ ಪದಾರ್ಥ ತಿನ್ನುತ್ತಿರುತ್ತೇವೆ. ಬಿಡಿ, ಸಿಗರೇಟ್, ಮಧ್ಯಪಾನ, ಧೂಮಪಾನ, ಇಂತಹ ದುಶ್ಚಟಗಳಿಗೆ ನಾವು ಬಲಿಯಾಗಿರುತ್ತೇವೆ. ಇವೆಲ್ಲವನ್ನು ಬಿಡಬೇಕು. ಈ ಒಂದು ಉಷ್ಣದಿಂದಾಗಿ Mulavyadi / piles ಇನ್ನು ಹೆಚ್ಚಿಗೆ ಆಗುತ್ತದೆ.
ಜೊತೆಗೆ ಆಹಾರದ ಸಮಯ ನಿಗದಿಯಾಗಿರಬೇಕು. ಬೆಳಿಗ್ಗೆ 7 ರಿಂದ 8 ಹೆಚ್ಚು ಅಂದರೆ 9 ಮಧ್ಯಾಹ್ನ ಒಂದರಿಂದ ಎರಡು ಸಾಯಂಕಾಲ 6 ರಿಂದ 6:30 ಒಳಗಡೆ ಪ್ರಸಾದ ಆಗಬೇಕು. ಆಗ ಮಾತ್ರ ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿ ಇರುತ್ತದೆ.
ತಿಂದಿರುವ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಇಂತಹ ಸಮಸ್ಯೆಗಳು ಬರುವುದಿಲ್ಲ. ಜೊತೆಗೆ ಸಮರ್ಪಕವಾಗಿ ನೀರನ್ನು ಕುಡಿಯಬೇಕು. ಬಹಳ ಜನ ಹೆಚ್ಚಾಗಿ ನೀರು ಕುಡಿಯುವುದಿಲ್ಲ. ನೆನಪು ಮಾಡಿಕೊಂಡು ನೆನಪು ಮಾಡಿಕೊಂಡು ನೀರನ್ನು ಕುಡಿಯಬೇಕು. ಅತಿಯಾಗಿ ನೀರು ಕುಡಿಯುವುದು ಅಲ್ಲ. ಅತಿಯಾಗಿ ನೀರು ಕುಡಿದರೆ ಮೃತ್ಯು ಬೇಗ ಬರುತ್ತದೆ ಎಂದು ಆಯುರ್ವೇದ ಹೇಳುತ್ತದೆ.
ಆದ್ದರಿಂದ ಅತಿಯಾಗಿ ನೀರು ಕುಡಿಯಬಾರದು. ಅಗತ್ಯಕ್ಕೆ ತಕ್ಕ ಹಾಗೆ ನೀರು ಕುಡಿಯಬೇಕು. ಇದನ್ನು ನಾವು ಯಾರಿಗೆ ಹೇಳುತ್ತಿದ್ದೇವೆ ಎಂದರೆ? ಬಹಳಷ್ಟು ಜನರು ನೀರು ಕುಡಿಯುವುದೇ ಇಲ್ಲ. ಅಂಥವರಿಗೆ ಮಲ ಅಂಟು ಅಂಟು ಆಗಿ ಮಲವಿಸರ್ಜನೆ ಆಗುತ್ತದೆ. ಗಟ್ಟಿಯಾಗಿ ಮಲವಿಸರ್ಜನೆ ಆಗುತ್ತದೆ.
ಅದಕ್ಕೆ ಕಾರಣ ಏನು ಎಂದರೆ? ನೀರು ಸರಿಯಾಗಿ ಕುಡಿಯದೇ ಇರುವುದು. ನೀರು ಸರಿಯಾಗಿ ಕುಡಿದರೆ ಈ ತರಹದ ಮಲವಿಕಾರಗಳು ಉಂಟಾಗುವುದಿಲ್ಲ. ಆಗ piles fistula , Fissure , Bhagandar, ಇಂತಹ ಸಮಸ್ಯೆಗಳು ಬರುವುದೇ ಇಲ್ಲ. ಆದ್ದರಿಂದ ಸರಿಯಾಗಿ ನೀರನ್ನು ಕುಡಿಯಬೇಕು. ಆಹಾರದಲ್ಲಿ ಹೆಚ್ಚು ಸ್ನಿಗ್ಧತೆ ಉಳ್ಳ ಪದಾರ್ಥವನ್ನು ಸೇವನೆ ಮಾಡಬೇಕು.
Fibre ಅಂಶ ಇರುವಂತಹ ಆಹಾರವನ್ನು ಸೇವನೆ ಮಾಡಬೇಕು. ಹೆಚ್ಚು ಸೊಪ್ಪು ತರಕಾರಿ ಹಣ್ಣುಗಳನ್ನು ಸೇವನೆ ಮಾಡಬೇಕು. ಅದರಲ್ಲಿ ನಮ್ಮ ಶರೀರಕ್ಕೆ ಬೇಕಾಗುವಂತಹ ಎಲ್ಲಾ ಪೋಷಕ ತತ್ವಗಳು ಹೆಚ್ಚು ಇರುತ್ತವೆ. ಇದರಿಂದ ನಮ್ಮ ಕರುಳು ಶುದ್ಧವಾಗಿರುತ್ತದೆ. ಕರುಳು ಶುದ್ಧವಾಗಿ ಇದ್ದರೆ, piles ಬರುವುದಿಲ್ಲ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ನಮ್ಮ ಆಹಾರ ಪದ್ಧತಿ ಮತ್ತು ನಮ್ಮ ಜೀವನ ಶೈಲಿ ಹೀಗಿರಬೇಕು
ಜೊತೆಗೆ ಆಹಾರದಲ್ಲಿ ಹೆಚ್ಚು ತುಪ್ಪವನ್ನು ಸೇವನೆ ಮಾಡಬೇಕು. ನಾಟಿ ಹಸುವಿನ ತುಪ್ಪ, ಅಥವಾ ಕುರಿಯ ತುಪ್ಪ, ಎಮ್ಮೆಯ ತುಪ್ಪ ಸೇವನೆ ಮಾಡಬಹುದು. ಜಲಸಿ ಹಸುವಿನ ತುಪ್ಪ ಸೇವನೆ ಮಾಡಬಾರದು. ಏಕೆಂದರೆ? ಅದು ಶರೀರಕ್ಕೆ ಅಷ್ಟೊಂದು ಒಳ್ಳೆಯದು ಅಲ್ಲ.
ಹೀಗೆ ನೀವು ಪ್ರತಿದಿನ ಒಂದು ಚಮಚ ತುಪ್ಪ ಸೇವನೆ ಮಾಡುವುದರಿಂದ ಕರುಳಿನಲ್ಲಿ ಸ್ನಿಗ್ಧತೆ ಇರುತ್ತದೆ. ಮಲ ವಿಸರ್ಜನೆ ಸರಾಗವಾಗಿ ಆಗುತ್ತದೆ. ಮಲ ವಿಸರ್ಜನೆ ಸರಾಗವಾಗಿ ಆಗದೆ ಇದ್ದಾಗ ಅಲ್ಲಿ infection ಗಳು ಉಂಟಾಗುತ್ತವೆ. ಮಲ ದ್ವಾರದಲ್ಲಿ ಇರುವಂತಹ blood vessel ಗಳಲ್ಲಿ ಊತ ಉಂಟಾಗುತ್ತದೆ.
Blood vessel ಗಳಲ್ಲಿ ಊತ ಉಂಟಾದಾಗ ಅದಕ್ಕೆ piles Fissure ಎಂದು ಕರೆಯುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ನೀವು ಕರುಳುಗಳಿಗೆ ಸ್ನಿಗ್ಧತೆ ಯನ್ನು ಕಡಿಮೆ ಮಾಡಬಾರದು. ಆದ್ದರಿಂದ ಸರಿಯಾಗಿ ತುಪ್ಪವನ್ನು ಸೇವನೆ ಮಾಡಬೇಕು.
ತುಪ್ಪದಲ್ಲಿ cholesterol ಇರುತ್ತದೆ ಎಂದು ಸುಳ್ಳು ಹೇಳುತ್ತಾರೆ. ನೀವು ನಂಬಬಾರದು. ತುಪ್ಪ ತಿನ್ನುವುದರಿಂದ cholesterol ಬರುವುದಿಲ್ಲ. ಬೇಕರಿ ಪದಾರ್ಥ, ರಿಫೈಂಡ್ ಪದಾರ್ಥ, ಮೈದಾ, ಸಕ್ಕರೆ, refined oil ಸೇವನೆ ಮಾಡುವುದರಿಂದ ಕೊಬ್ಬು cholesterol ಬರುತ್ತದೆ. ಹೊರತು ತುಪ್ಪ ತಿನ್ನುವುದರಿಂದ ಬರುವುದಿಲ್ಲ.
ತುಪ್ಪದಲ್ಲಿ ಹಲವಾರು ಪೋಷಕಾಂಶಗಳು ಇರುತ್ತವೆ. ಅದ್ಭುತವಾಗಿರುವಂತಹ ಸ್ನಿಗ್ಧ ಅಂಶ, ಮೇಧಾಂಶ, ನಾವು ಕಾಣಬಹುದು. ಅದಕ್ಕೆ ಆಯುರ್ವೇದದಲ್ಲಿ ತುಪ್ಪವನ್ನು ಮೇಧ್ಯ ರಸಾಯನ ಎಂದು ಕರೆಯುತ್ತಾರೆ. ಆದ್ದರಿಂದ ತುಪ್ಪವನ್ನು ಸೇವನೆ ಮಾಡಬೇಕು.
ಈಗಾಗಲೇ ಈ ಮೂಲವ್ಯಾಧಿ / Mulavyadi ಸಮಸ್ಯೆ ಬಂದಾಗಿದೆ ಎಂದರೆ ಇದನ್ನು ಸಂಪೂರ್ಣವಾಗಿ ಹೇಗೆ ನಿವಾರಣೆ ಮಾಡಿಕೊಳ್ಳಬೇಕು? ಎಂಬುದನ್ನು ನೋಡೋಣ.
ಮುಟ್ಟಿದರೆ ಮುನಿ ಸೊಪ್ಪನ್ನು ಚೆನ್ನಾಗಿ ಅರೆದು ಚಟ್ನಿ ತಯಾರಿಸಿಕೊಳ್ಳಿ. ಒಂದು ಚಮಚದಷ್ಟು ಮುಟ್ಟಿದರೆ ಮುನಿ ಸೊಪ್ಪಿನ ಚಟ್ನಿ. ಅರ್ಧ ಚಮಚದಷ್ಟು ಎಕ್ಕದ ಎಲೆಯ ಚಟ್ನಿ, ಅರ್ಧ ಚಮಚದಷ್ಟು ನುಗ್ಗೆ ಸೊಪ್ಪಿನ ಚಟ್ನಿ, ಹೀಗೆ ಮೂರು ಚಟ್ನಿಗಳನ್ನು ತಯಾರಿಸಿಕೊಂಡು ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಬೇಕು.
ಮಿಶ್ರಣ ಮಾಡಿಕೊಂಡಿರುವಂತಹ ಚಟ್ನಿಯನ್ನು ರಾತ್ರಿ ಮಲಗುವ ಮುಂಚೆ ಗುದದ್ವಾರಕ್ಕೆ ಲೇಪಿಸಿಕೊಂಡು ಒಂದು ಲಂಗೋಟಿಯನ್ನು ಹಾಕಿಕೊಂಡು ಮಲಗಿಕೊಳ್ಳಬೇಕು. ಇದರಿಂದ ಸಂಪೂರ್ಣವಾಗಿ ಅಲ್ಲಿ ಆಗಿರುವಂತಹ itching ಆಗಿರಬಹುದು, piles ನ ತೀವ್ರತೆ ಆಗಿರಬಹುದು, ಅದರ ಬೆಳವಣಿಗೆ ಆಗಿರಬಹುದು, ಸಂಪೂರ್ಣವಾಗಿ ಕರಗುತ್ತಾ ಹೋಗುತ್ತದೆ.
ಒಂದು ಹಿಡಿ ಮುಟ್ಟಿದರೆ ಮುನಿ ಸೊಪ್ಪನ್ನು ತೆಗೆದುಕೊಳ್ಳಿ. ಚೆನ್ನಾಗಿ ಜಜ್ಜಿ ಚಟ್ನಿಯನ್ನು ತಯಾರಿಸಿಕೊಂಡು ಒಂದು ಬಟ್ಟೆಯಲ್ಲಿ ಹಾಕಿಕೊಂಡು ಅದರ ರಸವನ್ನು ತೆಗೆಯಬೇಕು. ಅದರ ರಸ ಎಷ್ಟು ಎಂದರೆ? ಸರಿ ಸುಮಾರು 50 ರಿಂದ 60 ಎಂಎಲ್ ನಷ್ಟು. ಆ ರಸವನ್ನು ಒಂದು ಗ್ಲಾಸ್ ಮಜ್ಜಿಗೆ ಜೊತೆಗೆ ಸೇರಿಸಿ ಬೆಳಿಗ್ಗೆ ಐದರಿಂದ ಆರು ಗಂಟೆಯ ಒಳಗಡೆ ಸೇವನೆ ಮಾಡಬೇಕು.
ಈ ರೀತಿ ನೀವು 21 ದಿವಸ ಮಾಡಿದರೆ, Mulavyadi / piles ಸಂಪೂರ್ಣವಾಗಿ ಗುಣವಾಗುತ್ತದೆ. ಇದರಿಂದ ನೂರಕ್ಕೆ ತೊಂಬತ್ತೈದು ಜನರಿಗೆ. ಗುಣವಾಗುತ್ತದೆ. ಉಳಿದ 5% ಜನರಿಗೆ ಗುಣವಾಗುವುದಿಲ್ಲ. ಅವರಲ್ಲಿ ದೋಷಗಳ ತೀವ್ರತೆ ಹೆಚ್ಚಾಗಿರುತ್ತದೆ. ಅಂಥವರು ಏನು ಮಾಡಬೇಕು ಎಂದರೆ? ಅಂತಹ ಸಮಸ್ಯೆಗಳಿಗೆ ಆಯುರ್ವೇದ ಔಷಧಗಳು ಇವೆ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ಹೈ ಬಿಪಿ ಲೋ ಬಿಪಿ ಪರಿಣಾಮಕಾರಿ ಮನೆಮದ್ದು..!
ಮಲಬದ್ಧತೆ ನಿವಾರಣೆ ಮಾಡಿಕೊಳ್ಳುವುದಕ್ಕೆ, ಮತ್ತು piles ನ ತೀವ್ರತೆಯನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ, ಮೂಲಾಧಾರ ವಟಿ ಎಂದು ತಯಾರಿಸಿದ್ದೇವೆ. ಅಂತಹ ಆಯುರ್ವೇದಿಕ ಔಷಧಿಗಳನ್ನು ಸೇವನೆ ಮಾಡುವುದರಿಂದ Mulavyadi / piles ನ ತೀವ್ರತೆ ಕಡಿಮೆಯಾಗುತ್ತದೆ. Piles ಆಪರೇಷನ್ ಇಲ್ಲದೆ ನಿವಾರಣೆಯಾಗುತ್ತದೆ.
ಹೀಗೆ ನೀವು ಮನೆಯಲ್ಲಿಯೇ ಚಿಕಿತ್ಸೆಗಳನ್ನು ಮಾಡಿಕೊಳ್ಳುವುದರಿಂದ Mulavyadi / piles pistulla pizar ಇಂತಹ ಸಮಸ್ಯೆಗಳನ್ನು ನೀವು ಸರಿಪಡಿಸಿಕೊಳ್ಳಬಹುದು. ನಿಮ್ಮ ಆರೋಗ್ಯದ ಕಾಳಜಿಯನ್ನು ಸರಿಯಾಗಿ ನೀವು ಹೊಂದಿದರೆ, ಆರೋಗ್ಯದ ಜ್ಞಾನವನ್ನು ನೀವು ಹೊಂದಿದರೆ, ಆರೋಗ್ಯವಂತರಾಗಿ ಇರಬಹುದೇ, ಹೊರತು ಔಷಧಿಗಳಿಂದ ಆರೋಗ್ಯವಂತರಾಗಿ ಇರುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ನೀವು ಸರಿಯಾಗಿ ಆರೋಗ್ಯದ ಜ್ಞಾನವನ್ನು ತಿಳಿದುಕೊಂಡಿರಬೇಕು.
ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850
ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.
ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು.