ಬಾಯಿ ಹುಣ್ಣು ಸಮಸ್ಯೆಗೆ 3 ಮನೆಮದ್ದುಗಳು..!

Bayi Hunnu / ಬಾಯಿ ಹುಣ್ಣಿನ ಸಮಸ್ಯೆ ಬಗ್ಗೆ ಮಾಹಿತಿಯನ್ನು ನೋಡೋಣ. ಬಾಯಿಯಲ್ಲಿ ಹುಣ್ಣುಗಳು ಏಕೆ ಆಗುತ್ತವೆ ಎಂದರೆ? ವಿಪರೀತವಾಗಿ ಉಷ್ಣ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಬಾಯಿ ಹುಣ್ಣು ಆಗುತ್ತವೆ. ಬಾಯಿ ಹುಣ್ಣು ಸಮಸ್ಯಗೆ ಹಲವಾರು ಪ್ರಯತ್ನಗಳು ಮಾಡಿ ಸೋತು ಹೋಗಿರುವವರಿಗೆ ಇಲ್ಲಿವೆ ಕೆಲವೊಂದಿಷ್ಟು ಮನೆಮದ್ದು ಹಾಗೂ ಯೋಗಾಸನಗಳು.

Bayi Hunnu / ಬಾಯಿ ಹುಣ್ಣಿನ ಸಮಸ್ಯೆಗೆ ಕಾರಣಗಳು

ಖಾರ, ಮಸಾಲೆ ಪದಾರ್ಥ, ಜಂಕ್ ಫುಡ್, ಫಾಸ್ಟ್ ಫುಡ್, ಮಲಬದ್ಧತೆಯಿಂದ ಅಜೀರ್ಣದಿಂದ ಪಿತ್ತವಿಕಾರಗಳು ಹೆಚ್ಚಿಗೆ ಆಗಿ ಬಾಯಿಯಲ್ಲಿ ಹುಣ್ಣುಗಳು ಆಗುತ್ತವೆ. ಇದಕ್ಕೆ ಅಲ್ಸರ್ ಕೂಡ ಎನ್ನುತ್ತಾರೆ. ಗುಟ್ಕಾ, ಬಿಡಿ, ತಂಬಾಕು, ಸಿಗರೇಟ್, ಮದ್ಯಪಾನ ಮಾಡುವುದರಿಂದ ತೀವ್ರ ಉಷ್ಣ ವಾಗಿ ಬಾಯಿಯಲ್ಲಿ ಅಲ್ಸರ್ ಗಡ್ಡೆಗಳು ಆಗಿ, Bayi Hunnu / ಹುಣ್ಣುಗಳಾಗಿ ಬಾಯಿಯಲ್ಲಿ ತುಂಬಾ ತೊಂದರೆ ಕೊಡುತ್ತವೆ.

ಅದು ಹೆಚ್ಚಿಗೆ ಆಯಿತು ಎಂದರೆ, ಕೆಲವು ಸಂದರ್ಭದಲ್ಲಿ ಕ್ಯಾನ್ಸರ್ ಕೂಡ ಆಗುತ್ತದೆ. ಮೊದಲು ನಾವು ಇಂತಹ ದುಶ್ಚಟಗಳನ್ನು ಬಿಟ್ಟು ಹೊಟ್ಟೆಯಲ್ಲಿ ಇರುವಂತಹ ಅಶುದ್ಧಿಯನ್ನು ಮೊದಲು ಸರಿಪಡಿಸಿಕೊಳ್ಳಬೇಕು.

ಮೊದಲಿಗೆ ಬಾಯಿ ಹುಣ್ಣು ಆಗಲು ಹಲವಾರು ಕಾರಣಗಳಿವೆ ಖಾರದ ಪದಾರ್ಥ ತಿಂದರೆ. ಹಾಗೂ ಮಸಾಲೆ ಪದಾರ್ಥಗಳು ಜಾಸ್ತಿ ಉಪಯೋಗಿಸಿದರೆ & ದೇಹದಲ್ಲಿ ಜಾಸ್ತಿ ಉಷ್ಣತೆ ಇದ್ದರೆ ಈ ಬಾಯಿ ಹುಣ್ಣು ಆಗುತ್ತದೆ. ಇನ್ನು ದೇಹದ ಉಷ್ಣತೆ ಹೊರಹಾಕುವ ಒಂದು ಅಂಶವೇ ಈ ಬಾಯಿ ಹುಣ್ಣು.

ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ಗಜಕರ್ಣ / ಕಜ್ಜಿ /ತುರಿಕೆಗೆ ಮನೆಮದ್ದು..!

Bayi Hunnu / ಬಾಯಿ ಹುಣ್ಣಿನ ಸಮಸ್ಯೆಗೆ ಮನೆಮದ್ದುಗಳು

ಹೊಟ್ಟೆ ಶುದ್ಧವಾಗಿಸಿಕೊಳ್ಳಲು ಬೆಳಿಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಬೆಟ್ಟದ ನೆಲ್ಲಿಕಾಯಿ ಜ್ಯೂಸನ್ನು ಕುಡಿಯಬೇಕು.
ಇದರಿಂದ ಪಿತ್ತ ಶಮನವಾಗುತ್ತದೆ. ಹೊಟ್ಟೆ ಶುದ್ದಿಯಾಗುತ್ತದೆ, ರಕ್ತ ಶುದ್ಧಿ ಆಗುತ್ತದೆ.

ಹಾಗೆಯೇ ಪಿತ್ತವಿಕಾರದಿಂದ ಬಂದಿರುವಂತಹ ಈ ಅಲ್ಸರ್ ಗಡ್ಡೆಗಳನ್ನು ನಿವಾರಣೆ ಮಾಡಿಕೊಳ್ಳಲು ಮಧ್ಯಾಹ್ನ ಒಂದು ಎಳೆ ನೀರನ್ನು ಕುಡಿಯಬೇಕು. ಇದರ ಜೊತೆಗೆ ಒಂದು ಲೇಪನ ಇದೆ, ಅದನ್ನು ಮಾಡಿಕೊಳ್ಳಬೇಕು.
ಶ್ರೀಗಂಧದ ಪೇಸ್ಟನ್ನು ತಯಾರಿಸಿಕೊಳ್ಳಬೇಕು.

ಆ ಶ್ರೀಗಂಧದ ಪೇಸ್ಟ್ ನಲ್ಲಿ ಒಂದು ಸಮ ಪ್ರಮಾಣದಲ್ಲಿ ಒಂದು ಚಮಚ ಕೊಬ್ಬರಿ ಎಣ್ಣೆ ಅರ್ಧದಿಂದ ಮುಕ್ಕಾಲು ಚಮಚದಷ್ಟು ಕೆಂಪು ಕಲ್ಲು ಸಕ್ಕರೆ ಒರಿಜಿನಲ್ ಕಲ್ಲು ಸಕ್ಕರೆ ಇದ್ದರೆ ತೆಗೆದುಕೊಳ್ಳಿ ಇಲ್ಲದಿದ್ದರೆ ಬೇಡ. ಏಕೆಂದರೆ ಸಕ್ಕರೆಯಲ್ಲೂ ಕೂಡ ಕೆಮಿಕಲ್ ಇರುತ್ತದೆ. ಒರಿಜಿನಲ್ ಕಲ್ಲು ಸಕ್ಕರೆ ಹಾಕದೆ ಇದ್ದರೆ, ಬಾಯಲ್ಲಿ ಆಗಿರುವಂತಹ ಹುಣ್ಣುಗಳು ಬೇಗ ವಾಸಿ ಆಗುವುದಿಲ್ಲ.

ಆದ್ದರಿಂದ ಒರಿಜಿನಲ್ ಕಲ್ಲು ಸಕ್ಕರೆ ಇದ್ದರೆ ಮಾತ್ರ ಬಳಕೆ ಮಾಡಬಾರದು ಇಲ್ಲದೆ ಇದ್ದರೆ ಬರಿ ಶ್ರೀಗಂಧದ ಪೇಸ್ಟ್ ಮತ್ತು ಕೊಬ್ಬರಿ ಎಣ್ಣೆ ಇವೆರಡನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣ ಮಾಡಿ, Bayi Hunnu / ಬಾಯಿಯಲ್ಲಿ ಎಲ್ಲಿ ಹುಣ್ಣುಗಳು ಆಗಿರುತ್ತವೆಯೋ, ಆ ಭಾಗಗಳಲ್ಲಿ ಈ ಲೇಪನವನ್ನು ಹಚ್ಚಬೇಕು.

ಲೇಪನ ಮಾಡಿಕೊಂಡು ಬಾಯಿ ಮುಚ್ಚದೆ ಹಾಗೆ ಉಸಿರಾಡುತ್ತಿರಬೇಕು. ಹೀಗೆ ಮೂರ್ನಾಲ್ಕು ಸಲ ಬಾಯಿ ಮುಚ್ಚದೆ ಉಸಿರಾಡುತ್ತಿರಬೇಕು. ಆಮೇಲೆ ನಿಧಾನವಾಗಿ ಹಲ್ಲನ್ನು ಕಚ್ಚಿ ಉಸಿರನ್ನು ತೆಗೆದುಕೊಳ್ಳಬೇಕು. ಮತ್ತೆ ಆ ಉಸಿರನ್ನು ಮೂಗಿನಿಂದ ಹೊರಗೆ ಬಿಡಬೇಕು. ಹೀಗೆ ಮಾಡುವುದರಿಂದ ಬಾಯಿಯಲ್ಲಿ ಹಚ್ಚಿಕೊಂಡಿರುವಂತಹ ಲೇಪನ ಬಾಯಲ್ಲಿಯೇ ಲೇಪನವಾಗುತ್ತದೆ.

ಇಲ್ಲವಾದರೆ ಬಾಯಿಯಲ್ಲಿ ಹೆಚ್ಚು ಸಲೈವಾ ಬಂದು ಆ ಲೇಪನ ಬಾಯಿಯ ಒಳಗಡೆ ಹೋಗುತ್ತದೆ. ಆದ್ದರಿಂದ ಈ ಲೇಪನವನ್ನು Bayi Hunnu / ಬಾಯಿಯ ಹುಣ್ಣುಗಳಿಗೆ ಹಚ್ಚಿಕೊಂಡು ಈ ಈ ಪ್ರಾಣಾಯಾಮವನ್ನು ಮಾಡಬೇಕು. ಹೀಗೆ ಮಾಡುವುದಕ್ಕೆ ಸದಂತ ಪ್ರಾಣಾಯಾಮ ಎನ್ನುತ್ತಾರೆ.

ಈ ಪ್ರಾಣಾಯಾಮವನ್ನು ಬೆಳಿಗ್ಗೆ 10 ನಿಮಿಷ ಮತ್ತು ಸಂಜೆ 10 ನಿಮಿಷ ಈ ಲೇಪನವನ್ನು ಹಚ್ಚಿಕೊಂಡು ಮಾಡುವುದರಿಂದ ಖಂಡಿತವಾಗಿಯೂ ಎರಡು ಅಥವಾ ಮೂರು ದಿವಸಗಳಲ್ಲಿ ನಿಮ್ಮ ಬಾಯಿಯ ಹುಣ್ಣು ಸಂಪೂರ್ಣವಾಗಿ ಶಮನವಾಗುತ್ತವೆ.

ಈ ಸದಂತ ಪ್ರಾಣಾಯಾಮವನ್ನು ಮಾಡುವುದರಿಂದ ನಿಮ್ಮ ಬಾಯಿಯಲ್ಲಿರುವಂತಹ ಎಲ್ಲಾ ಪಿತ್ತಜ ವಿಕಾರಗಳು ದೂರವಾಗುತ್ತವೆ. ಅಲ್ಲಿ ಇರುವಂತಹ ಉರಿ ಉತಗಳು ಕಡಿಮೆಯಾಗಿ, ತಕ್ಷಣ ನೋವು ಶಮನವಾಗುತ್ತದೆ. ಗಾಯಗಳು ಕೂಡ ಕಡಿಮೆಯಾಗುತ್ತವೆ.

ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850

https://youtu.be/Y9_FioWtH34

ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.

ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು. 


Discover more from AYURVEDA TIPS IN KANNADA

Subscribe to get the latest posts sent to your email.

Discover more from AYURVEDA TIPS IN KANNADA

Subscribe now to keep reading and get access to the full archive.

Continue reading