ಬಟಾಣಿಯಲ್ಲಿ ಏನೆಲ್ಲಾ ಇವೆ ಗೊತ್ತಾ? Green Peas

ನೆನೆಸಿದ Green Peas / ಬಟಾಣಿಯಿಂದ ಶರೀರಕ್ಕೆ ಆಗುವ ಲಾಭಗಳು. ಅವುಗಳನ್ನು ಕುದಿಸಿ ಸೇವನೆ ಮಾಡುವುದರಿಂದ ಯಾವ ಯಾವ ಲಾಭಗಳು ಆಗುತ್ತವೆ? ಈ ಬಟಾಣಿಯನ್ನು ಯಾರು ನೆನೆಸಿ ಸೇವನೆ ಮಾಡಬೇಕು? ಯಾರು ಕುದಿಸಿ ಸೇವನೆ ಮಾಡಬೇಕು? ಈ ಕುರಿತಾಗಿ ಮಾಹಿತಿಯನ್ನು ನೋಡೋಣ.

ಬಟಾಣಿಯಲ್ಲಿ ಹೆಚ್ಚು ಪ್ರೋಟೀನ್ ಯುಕ್ತ ಅಂಶವಿರುತ್ತದೆ. ವಿಟಮಿನ್ ಕೆ ಅಂಶ, ವಿಟಮಿನ್ ಎ ಅಂಶ, ವಿಟಮಿನ್ ಸಿ ಅಂಶ, ಕ್ಯಾಲ್ಸಿಯಂ ಅಂಶ, ಫೈಬರ್ ಅಂಶ, ಪೊಟ್ಯಾಶಿಯಂ, ಮ್ಯಾಗ್ನಿಸಿಯಂ, ರೈಬೋ ಕ್ಲೋವಿನ್ ಎನ್ನುವಂತಹ ಅಂಶ ಸಿಗುತ್ತವೆ. ಹಾಗೂ ಹೆಚ್ಚು ಮೈಕ್ರೋ ನ್ಯೂಟ್ರಿಯೇಶನ್ ಗಳು ಹೊಂದಿರುವಂತಹ ಶಕ್ತಿ ಹೊಂದಿರುತ್ತದೆ.

ಜಿಂಕ್ ಕೂಡ ಇದರಲ್ಲಿ ಇದೆ. ಐರನ್ ಅಂಶ ಕೂಡ ಇದರಲ್ಲಿ ಕಾಣಬಹುದು. ಹೀಗೆ ಬಟಾಣಿಯಲ್ಲಿ ಇಷ್ಟೊಂದು ಪೋಷಕಾಂಶಗಳು ಇವೆ.
ಉತ್ತರ ಭಾರತದಲ್ಲಿ ಇದನ್ನು ಹೆಚ್ಚು ಬಳಕೆ ಮಾಡುತ್ತಾರೆ. ನಮ್ಮ ದಕ್ಷಿಣ ಭಾರತದಲ್ಲಿಯೂ ಕೂಡ ಇದರ ಪಲ್ಯವನ್ನು ಸೇವನೆ ಮಾಡುವುದು ನಾವು ಕಾಣಬಹುದು.

Green Peas / ಬಟಾಣಿ ಸೇವನೆಯಿಂದಾಗುವ ಆರೋಗ್ಯದ ಲಾಭಗಳು

ಬಟಾಣಿ ಸೇವನೆಯಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ತುಂಬಾ ಚೆನ್ನಾಗಿ ಕ್ರಿಯಾಶೀಲಗೊಳ್ಳುತ್ತದೆ. ಡೈಜೆಸ್ಟಿವ್ ಸಿಸ್ಟಮ್ ಅನ್ನು ಅತ್ಯಂತ ಚೆನ್ನಾಗಿ ಕ್ರಿಯಾಶೀಲಗೊಳಿಸುವಂತಹ ಶಕ್ತಿ ಬಟಾಣಿಯಲ್ಲಿದೆ. ಬಟಾಣಿಯನ್ನು ಸೇವನೆ ಮಾಡುವುದರಿಂದ ಎಲುಬುಗಳಲ್ಲಿ ಸ್ಟ್ರೆಂತ್ ಹೆಚ್ಚಿಗೆ ಆಗುತ್ತದೆ. ಎಲುಬುಗಳ ಶಕ್ತಿ ವೃದ್ಧಿಯಾಗುತ್ತದೆ.

ಹಾಗೆ ನಮ್ಮ ಶಿರೋ ಭಾಗದ ಅಂಗಾಂಗಗಳಿಗೆ ಬೇಕಾಗಿರುವಂತಹ ಎಲ್ಲಾ ಪೋಷಕಾಂಶಗಳು ಇದರಲ್ಲಿ ಇರುವುದರಿಂದ ನಮ್ಮ ಕಣ್ಣಿನ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ. ಬಟಾಣಿ ಸೇವನೆಯಿಂದ ತಲೆ ಕೂದಲು ಉದುರುವ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು.

ಹಾಗೂ ಇದು ಫೈಬರ್ ಅಂಶ ಹೊಂದಿರುವುದರಿಂದ ಅತಿರಿಕ್ತವಾಗಿ ವಿಟಮಿನ್ಸ್ ಪ್ರೋಟೀನ್ ಗಳನ್ನು ಹೊಂದಿರುವುದರಿಂದ ಇದರ ಸೇವನೆಯಿಂದ ನಮ್ಮ ಮಾಂಸಖಂಡಗಳಲ್ಲಿ ಶಕ್ತಿ ಹೆಚ್ಚಿಗೆ ಆಗುತ್ತದೆ. ಮಾಂಸಖಂಡಗಳು ಬಲಿಷ್ಠ ಆಗುತ್ತವೆ. ನಿಮ್ಮ ಮಾಂಸ ಖಂಡಗಳು ಗಟ್ಟಿಮುಟ್ಟಾಗಿ ಇರಬೇಕು ಎಂದರೆ ಈ ಬಟಾಣಿ ಸೇವನೆಯನ್ನು ಮಾಡಬೇಕು.

ಹಾಗೂ ಇದರಲ್ಲಿ ಇರುವಂತಹ ಪ್ರೋಟೀನ್ ಅಂಶ ನಮ್ಮ ನರನಾಡಿಗಳಿಗೆ ಶಕ್ತಿಯನ್ನು ತುಂಬುತ್ತದೆ. ಪ್ರೋಟೀನ್ ಶರೀರಕ್ಕೆ ಶಕ್ತಿಯನ್ನು ತುಂಬುವಂತಹ ಅತ್ಯದ್ಭುತ ಆಗಿರುವಂತಹ ಪೋಷಕಾಂಶ. ಆದ್ದರಿಂದ ಶರೀರದಲ್ಲಿ ಸುಸ್ತು, ನಿಶಕ್ತಿ, ಆಯಾಸ, ಇವೆಲ್ಲ ಹೆಚ್ಚಿಗೆ ಆದಾಗ ಬಟಾಣಿಯನ್ನು ಸೇವನೆ ಮಾಡುವುದರಿಂದ ಸುಸ್ತು, ನಿಶಕ್ತಿ, ಆಯಾಸ, ಹೊರಟು ಹೋಗುತ್ತದೆ.

Green Peas / ಬಟಾಣಿ ಸೇವನೆ ಮಾಡುವುದರಿಂದ ಚರ್ಮದ ಕಾಂತಿ ತುಂಬಾ ಚೆನ್ನಾಗಿರುತ್ತದೆ. ನಿಮ್ಮ ಚರ್ಮ ಫಳಫಳ ಹೊಳೆಯಬೇಕು, ಚರ್ಮದಲ್ಲಿ ಕಾಂತಿ ವೃದ್ಧಿ ಆಗಬೇಕು, ಚರ್ಮ ಕೆಂಪಗೆ ಬೆಳ್ಳಗೆ ಆಗಬೇಕು, ಎಂದರೆ ಈ ಬಟಾಣಿ ಸೇವನೆಯನ್ನು ಮಾಡಬೇಕು.

ಬಟಾಣಿಯನ್ನು ಕುದಿಸಿ ಅದರ ಪೇಸ್ಟ್ ತಯಾರಿಸಿ ಅದನ್ನು ಅಪ್ಲೈ ಮಾಡಿ, ಅರ್ಧ ಮುಕ್ಕಾಲು ಗಂಟೆ ಬಿಟ್ಟು ಸ್ನಾನ ಮಾಡಿದರೆ ಚರ್ಮದಲ್ಲಿ ಇರುವಂತಹ ಡೆಡ್ ಟಿಶ್ಯೂ ಗಳು ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ. ಮುಖಕ್ಕೂ ಹಚ್ಚಿಕೊಳ್ಳಬಹುದು. ಅಥವಾ ಶರೀರದ ಯಾವ ಭಾಗದಲ್ಲಿಯೂ ಕೂಡ ಹಚ್ಚಿಕೊಳ್ಳಬಹುದು. ಇದು ನ್ಯಾಚುರಲ್ ಬ್ಯೂಟಿ ಟ್ರೀಟ್ಮೆಂಟ್ ಎಂದು ಹೇಳಬಹುದು.

Green Peas / ಬಟಾಣಿ ಸೇವನೆ ಮಾಡುವುದರಿಂದ ಮಕ್ಕಳ ಬುದ್ಧಿ ಶಕ್ತಿ ಹೆಚ್ಚಿಗೆ ಆಗುತ್ತದೆ. ಜ್ಞಾಪಕ ಶಕ್ತಿ ಹೆಚ್ಚಿಗೆ ಆಗುತ್ತದೆ. ಮಕ್ಕಳ ಶಾರೀರಿಕ ಬೆಳವಣಿಗೆ ವೃದ್ಧಿಯಾಗುತ್ತದೆ. ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರಿಗೂ ಕೂಡ ಮೆದುಳಿನ ವಿಕಾಸ್ ಶಕ್ತಿ ಸಲುವಾಗಿ ಎಲ್ಲರೂ ಬಟಾಣಿಯನ್ನು ಸೇವನೆ ಮಾಡಬಹುದು. ಬಟಾಣಿಯನ್ನು ಸೇವನೆ ಮಾಡುವುದರಿಂದ ಹೃದಯಕ್ಕೆ ಶಕ್ತಿಯನ್ನು ತುಂಬುತ್ತದೆ.

ಕೆಲವು ಜನರ ಹೃದಯ ವೀಕ್ ಆಗಿರುತ್ತದೆ. ಹೃದಯದ ವಿಕ್ನೆಸ್ ನಿಂದ ಹಲವಾರು ಸಮಸ್ಯೆಗಳು ಬರುತ್ತವೆ. ಅದರಿಂದ ಕೊಲೆಸ್ಟ್ರಾಲ್ ಕೂಡ ವೃದ್ಧಿಯಾಗುತ್ತದೆ. ಕಾರ್ಡಿಯಾಕ್ ಅರೆಸ್ಟ್ ಆಗುತ್ತದೆ. ಹೃದಯದ ಸಮಸ್ಯೆಯಿಂದ ನಮಗೆ ಸೆಕಿಕ್ ಕಾರ್ಡಿಯಾಕ್ ಅರೆಸ್ಟ್ ಆಗುತ್ತದೆ. ಬ್ಲಿಡಿ ಕಾರ್ಡಿಯಾಕ್ ಅರೆಸ್ಟ್ ಆಗುವಂತಹ ಹಲವಾರು ಸಮಸ್ಯೆಗಳು ವೃದ್ಧಿಯಾಗುತ್ತವೆ.

ಆದ್ದರಿಂದ ಹೃದಯದ ವೀಕ್ನೆಸ್ ಹೃದಯ ನಾಳಗಳ ಬ್ಲಾಕೇಜನ್ನು ಸರಿಪಡಿಸುವಂತಹ ಶಕ್ತಿ ಈ ಒಂದು ಬಟಾಣಿಯಲ್ಲಿದೆ. ನಿಯಮಿತವಾಗಿ ಔಷಧಿಗಳ ಜೊತೆಗೆ ಈ ಬಟಾಣಿಯನ್ನು ಸೇವನೆ ಮಾಡುವುದರಿಂದ ಸೊಪ್ಪು ತರಕಾರಿಗಳನ್ನು ಸೇವನೆ ಮಾಡುವುದರಿಂದ ಹೃದಯದ ಶಕ್ತಿ ವೃದ್ಧಿಯಾಗುತ್ತದೆ. Green Peas / ಬಟಾಣಿ ಸೇವನೆಯಿಂದ ನಮ್ಮ ಶರೀರದ ಹಾರ್ಮೋನ್ಸ್ ಗಳ ವ್ಯವಸ್ಥೆಯನ್ನು ಕ್ರಿಯಾಶೀಲವಾಗಿ ಇಡುತ್ತದೆ. ಹಾರ್ಮೋನ್ ಇನ್ ಬ್ಯಾಲೆನ್ಸ್ ಅನ್ನು ತಡೆಗಟ್ಟುತ್ತದೆ.

ಶರೀರದಲ್ಲಿ ಹಾರ್ಮೋನ್ ಇನ್ ಬ್ಯಾಲೆನ್ಸ್ ನಿಂದ ಬರುವಂತಹ ಹಲವಾರು ರೋಗಗಳನ್ನು ಸಂಪೂರ್ಣವಾಗಿ ನಿಯಂತ್ರಣ ಗೊಳಿಸುತ್ತದೆ. ನೀವು ಇದನ್ನು ಪ್ರಿವೆನ್ಷನ್ ಆಗಿ ತೆಗೆದುಕೊಂಡರೆ ಆ ಸಮಸ್ಯೆಗಳು ಬರದಂತೆ ತಡೆಯಬಹುದು.

ಥೈರಾಯ್ಡ್ ಹಾರ್ಮೋನ್ ಆಗಿರಬಹುದು, ಇನ್ಸುಲಿನ್ ಹಾರ್ಮೋನ್ ಆಗಿರಬಹುದು, ಫೀನ್ ಲ್ ಗ್ರಂಥಿಯಲ್ಲಿ ಎಂಡೋಕ್ರೈಮ್ ಹಾರ್ಮೋನ್ ಗಳು ತುಂಬಾ ಇರುತ್ತವೆ. ಆಕ್ಸಿಟೋಸಿನ್, ಮೇಲಾಟೋನಿನ್, ಕೋಕೊಮಿನ್ ಹಾರ್ಮೋನ್, ಇವೆಲ್ಲ ಹಾರ್ಮೋನ್ಸ್ ಗಳು ನಮ್ಮ ಮೆದುಳಿನಲ್ಲಿ ಸಕ್ರಿಯೇಶನ್ ಆಗುತ್ತಿರುತ್ತವೆ.

ಫಿನೆಲ್ ಗ್ರಂಥಿಯಲ್ಲಿ ಮೇಲಾಟಿನ್ ಹಾರ್ಮೋನ್ ಸರಿಯಾಗಿ ಸಕ್ರಿಯೇಶನ್ ಆಗಬೇಕು ಎಂದರೆ, ಇಂತಹ ಒಳ್ಳೆಯ ಧಾನ್ಯಗಳನ್ನು ಸೇವನೆ ಮಾಡುವುದು ತುಂಬಾ ಸೂಕ್ತ.

ಆದ್ದರಿಂದ ಹರ್ಮೋನ್ ಗಳ ಇನ್ ಬ್ಯಾಲೆನ್ಸ್ ನಿಂದ ಯಾವ ಯಾವ ಸಮಸ್ಯೆಗಳು ಬರುತ್ತವೆ ಎಂದು ಸರಿಯಾಗಿ ತಿಳಿದುಕೊಂಡು ನಿಯಮಿತವಾಗಿ ಇಂತಹ ಆಹಾರಗಳನ್ನು ಸೇವನೆ ಮಾಡುತ್ತಾ ಆಯುರ್ವೇದ ಔಷಧಿಗಳನ್ನು ತೆಗೆದುಕೊಂಡರೆ,
ಹಾರ್ಮೋನ್ ಇನ್ ಬ್ಯಾಲೆನ್ಸ್ ನಿಂದ ನಾವು ಮುಕ್ತರಾಗಬಹುದು.

ಹಾಗೆ ಈ Green Peas / ಬಟಾಣಿ ಬೋನ್ಸ್ ಗಳಿಗೆ ಸ್ಟ್ರೇನ್ತನ್ನು ಒದಗಿಸುತ್ತದೆ. ಕಾರ್ಟಿಲೇಜನ್ನು ಇಂಪ್ರೂವ್ಮೆಂಟ್ ಮಾಡುತ್ತದೆ. ಇವುಗಳ ಜೊತೆಗೆ ನಮ್ಮಲ್ಲಿ ಕ್ಯಾನ್ಸರ್ ಕಾರಕ ಉತ್ಪತ್ತಿ ಆಗುತ್ತವೆಯೋ, ಆ ಕ್ಯಾನ್ಸರ್ ಕಾರಕ ಜೀವಕೋಶಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಕ್ಯಾನ್ಸರ್ ಬರದಂತೆ ನಮ್ಮ ಶರೀರಕ್ಕೆ ರಕ್ಷಣೆ ಕೊಡುವಂತಹ ಶಕ್ತಿ ಬಟಾಣಿಯಲ್ಲಿದೆ.

ಹಾಗೂ ಇದು ಆಂಟಿ ಎಂಪ್ಲಮೆಂಟರಿ ಆಗಿ ಕೆಲಸ ಮಾಡುತ್ತದೆ. ಕೈಕಾಲುಗಳಲ್ಲಿ ಊತ ಇದ್ದರೆ ಅದನ್ನು ಕರಗಿಸುತ್ತದೆ.
ಕಾಲುಗಳಲ್ಲಿ ಊತದ ಸಮಸ್ಯೆ ಇದ್ದಾಗ ವಾತ ಹೆಚ್ಚಿಗೆ ಆದಾಗ ಇದನ್ನು ಕುದಿಸಿ ಸೇವನೆ ಮಾಡಬಹುದು.

Green Peas / ಬಟಾಣಿಯನ್ನು ಸೇವನೆ ಮಾಡುವುದರಿಂದ ನರ ದೌರ್ಬಲ್ಯತೆ ಕಡಿಮೆಯಾಗುತ್ತದೆ. ಲೈಂಗಿಕ ಸಮಸ್ಯೆ ಇದ್ದವರು ಇದನ್ನು ಸೇವನೆ ಮಾಡುವುದರ ಜೊತೆಗೆ ಆಯುರ್ವೇದಿಕ ಔಷಧಿಗಳನ್ನು ತೆಗೆದುಕೊಂಡರೆ ಲೈಂಗಿಕ ಸಮಸ್ಯೆಗಳು ಕೂಡ ದೂರ ಮಾಡುತ್ತದೆ.

ರಕ್ತ ಶುದ್ದಿ ರಕ್ತ ವೃದ್ಧಿಯಾಗುತ್ತದೆ. ಬಟಾಣಿಯನ್ನು ಸೇವನೆ ಮಾಡುವುದರಿಂದ ಶರೀರದ ರೋಗ ಪ್ರತಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಇಮ್ಯೂನಿಟಿ ಪವರ್ ಹೆಚ್ಚಿಗೆ ಆಗುತ್ತದೆ. ಇದಕ್ಕೆ ನ್ಯಾಚುರಲ್ ಇಮ್ಮ್ಯೂನಿಟಿ ಬೂಸ್ಟರ್ ಎಂದು ಕರೆಯಬಹುದು.

ಇದರಲ್ಲಿ ಇರುವಂತಹ ಪೋಷಕಾಂಶಗಳು ಫೈಬರ್ ನ ಅಂಶ ನಮ್ಮ ಪ್ರತಿರಕ್ಷಕ ವ್ಯವಸ್ಥೆಯನ್ನು ಸ್ಟ್ರಾಂಗ್ ಮಾಡುತ್ತದೆ. ಹಲವಾರು ಡಿಸೀಸ್ ಗಳು ನಮ್ಮ ಶರೀರಕ್ಕೆ ಬರದಂತೆ ಇದು ನೋಡಿಕೊಳ್ಳುತ್ತದೆ. ಇದು ಶರೀರದ ಇಮ್ಯೂನಿಟಿ ವ್ಯವಸ್ಥೆಯನ್ನು ಚುರುಕುಗೊಳಿಸುವುದಲ್ಲದೆ ಅದನ್ನು ಕ್ರಿಯಾಶೀಲಗೊಳಿಸಿ ಬುದ್ಧಿವಂತಿಕೆಯನ್ನು ಇಂಕ್ಲಿಜನ್ನು ಹೆಚ್ಚಿಸುತ್ತದೆ.

ಇಮ್ಯೂನಿಟಿ ಪವರ್ ಗೆ ಬರಿ ಪವರ್ ಅಷ್ಟೇ ಅಲ್ಲ. ಇಂತಲಿಜಸ್ ಪವರ್ ಬೇಕಾಗುತ್ತದೆ. ಆದರೆ ಅದಕ್ಕೆ ಹುಚ್ಚು ಹಿಡಿದರೆ, ಆಟೋ ಇಮ್ಯೂನ್ ಡಿಸೀಸ್ಗಳು ಬರುತ್ತವೆ. ಅರ್ಥರೈಟಿಸ್, ಸೋರಿಯಾಸಿಸ್, ಎಲ್ಲ ಸಮಸ್ಯೆಗಳು ಬರುವುದಕ್ಕೆ ಇಮ್ಯೂನಿಟಿ ವ್ಯವಸ್ಥೆಯಲ್ಲಿ ಆಗಿರುವಂತಹ ಅವಘಡಗಳು ಕಾರಣ.

ಈ ಬಟಾಣಿ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ. ಇಷ್ಟೆಲ್ಲಾ ಪೋಷಕಗಳನ್ನು ನಮ್ಮ ಶರೀರಕ್ಕೆ ಪೂರಕವಾಗಿರುವಂತಹ ಲಾಭಗಳನ್ನು ಕೊಡುವಂತಹ ಈ ಬಟಾಣಿಯನ್ನು ಪುಟಾಣಿ ಮಕ್ಕಳಿಂದ ವೃದ್ಧರವರೆಗೂ ಸೇವನೆ ಮಾಡಬಹುದು.

Green Peas / ಬಟಾಣಿಯನ್ನು ಯಾರು ಸೇವನೆ ಮಾಡಬಾರದು?

ಕಿಡ್ನಿ ಫೇಲಾಗಿರುವವರು ಕೆಲವು ಸಂದರ್ಭಗಳಲ್ಲಿ ಈ ಬಟಾಣಿಯನ್ನು ಸೇವನೆ ಮಾಡಬಾರದು. ಹೆಚ್ಚು ಪ್ರೋಟೀನ್ ಯುಕ್ತ ಆಹಾರವನ್ನು ಸೇವನೆ ಮಾಡುವುದರಿಂದ ಶರೀರದಲ್ಲಿ ಕ್ರಿಯೇಟಿನ್ ಹೆಚ್ಚಿಗೆ ಆಗುತ್ತದೆ. ಆದ್ದರಿಂದ ಕಿಡ್ನಿ ಸಮಸ್ಯೆ ಇರುವವರು ಇದನ್ನು ಸೇವನೆ ಮಾಡಬಾರದು ಮಿಕ್ಕಿದವರೆಲ್ಲರೂ ಇದನ್ನು ಸೇವನೆ ಮಾಡಬಹುದು..

Green Peas / ಬಟಾಣಿಯನ್ನು ಹೇಗೆ ಸೇವನೆ ಮಾಡಬಹುದು?

ಯಾರಿಗೆ ವಿಪರೀತವಾಗಿ ಗ್ಯಾಸ್ಟ್ರಿಕ್ ಅಸಿಡಿಟಿ ಸಮಸ್ಯೆ ಇರುತ್ತದೆಯೋ, ಅವರು ನೆನೆಸಿರುವ ಬಟಾಣಿಯನ್ನು ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಅಸಿಡಿಟಿ ವೃದ್ಧಿಯಾಗುವುದರಿಂದ ಅವರು ಬಟಾಣಿಯನ್ನು ಚೆನ್ನಾಗಿ ಕುದಿಸಿ ಸೇವನೆ ಮಾಡಬಹುದು.

ಕುಕ್ಕರಿನಲ್ಲಿ ಕುದಿಸುವುದರಿಂದ ಪೋಷಕಾಂಶಗಳು ಸಾಯುತ್ತವೆ. ಆದ್ದರಿಂದ ಪಾತ್ರೆಗಳಲ್ಲಿ ಕುದಿಸಿಕೊಂಡು ಸೇವನೆ ಮಾಡಬಹುದು. ವಾತ ಹೊಟ್ಟೆ ಉಬ್ಬರ ಬರದೆ ಇದ್ದರೆ, ಇದನ್ನು ರಾತ್ರಿ ನೆನೆ ಇಟ್ಟು ಬೆಳಗ್ಗೆ ಬೆಲ್ಲದ ಜೊತೆಗೆ ತಿಂದರೆ (ಸೋನೆಪೆ ಸುಹಾಗ್) ಎನ್ನುತ್ತಾರಲ್ಲ! ಹಾಗೆ ಒಂದರಿಂದ ನೂರು ಪಟ್ಟು ಲಾಭ ಸಿಗುತ್ತವೆ.

ಹೊಟ್ಟೆ ಉಬ್ಬರ ಬರುತ್ತಿದೆ ಎನ್ನುವವರು ಇದನ್ನು ಚೆನ್ನಾಗಿ ಕುದಿಸಿಕೊಂಡು ಸೇವನೆ ಮಾಡಬಹುದು. ಹೀಗೆ ಈ ಬಟಾಣಿ ಸೇವನೆಯಿಂದ ನೀವು ಅತ್ಯಧಿಕವಾಗಿ ಲಾಭಗಳನ್ನು ಪಡೆದುಕೊಳ್ಳಬಹುದು.

ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850

ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.

ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು.

Leave a Reply

Your email address will not be published. Required fields are marked *