ಸೌಂದರ್ಯ ಚಿಕಿತ್ಸೆ Bellagagalu Mane Maddu / ಬೆಳ್ಳಗಾಗಲು ಯಾವ ಮನೆಮದ್ದು ಮಾಡಿಕೊಳಬೇಕು ? ನಮ್ಮ ಸೌಂದರ್ಯ ಹೇಗೆ ವೃದ್ಧಿಗೊಳಿಸಬೇಕು ಈ ವಿಷಯದ ಬಗ್ಗೆ ಮಾಹಿತಿಯನ್ನು ನೋಡೋಣ.
ನೀವು ಹಲವಾರು ವಿಡಿಯೋಗಳು ನೋಡಿರ್ತೀರಾ ಅನೇಕ ಮನೆಮದ್ದುಗಳು ಮಾಡಿರ್ತೀರಾ ಆದರೆ ನಾವು ಇವತ್ತು ಹೇಳಲು ಹೊರಟಿರುವ ಮನೆಮದ್ದು ಒಂದು ಸಲ ಮಾಡಿ ನೋಡಿ ಎಷ್ಟೊಂದು ಪರಿಣಾಮಕಾರಿ ಹಾಗು ಸುಲಭವಾಗಿ ಮಾಡುವ ಮನೆಮದ್ದು ಎಂದು ನಿಮಗೆ ತಿಳಿಯುತ್ತದೆ.
ಎಲ್ಲರಿಗೂ ಆಸೆ ಇರುತ್ತೆ Bellagagalu Mane Maddu / ಬೆಳ್ಳಗಾಗಬೇಕು ಸುಂದರವಾಗಿ ಕಾಣಬೇಕು ಅನ್ನುವ ಬಗ್ಗೆ ಆದರೆ ಸರಿಯಾದ ಸಮಯಕ್ಕೆ ಮನೆಮದ್ದು ಮಾಡಿಕೊಳ್ಳಲು ಆಗದೇ ಇರುವ ಕಾರಣ ಹಾಗು ಸಮಯ ಇದ್ದರು ಸ್ವಲ್ಪ ಮನೆಮದ್ದು ಮಾಡಿಕೊಳ್ಳಲು ಆಲಸಿತನ ಮಾಡುತ್ತೇವೆ. ಅಥವಾ ನಿಮಗೆ ಗೊತ್ತಿರುವ ಸ್ನೇಹಿತರು ಬಂದು ಬಳಗದವರು ನಿಮಗೆ ಹೇಳಿರುತ್ತಾರೆ.
ಅದು ಏನೆಂದರೆ ಆ ಮನೆಮದ್ದು ಮಾಡಿದೆ ನನಗೆ ಏನು ಪ್ರಯೋಜನ ಆಗಿಲ್ಲಾ. ನೀವ್ಯಾಕೆ ಸುಮ್ನೆ ಮಾಡಿ ಸಮಯ ಹಾಳು ಮಾಡಿಕೊಳ್ಳುತ್ತೀರಾ ಅಂತ. ಅವರ ಮಾತು ಕೇಳಿ ನೀವು ನಿರಾಸೆಯಿಂದ ಮನೆಮದ್ದು ಮಾಡಿಕೊಳ್ಳುವುದು ಬಿಟ್ಟಿರ್ತೀರಾ. ಆದರೆ ನಾವು ಹೇಳುವ ಮನೆಮದ್ದು ಮಾಡಿ ನೋಡಿ ರೀಜಲ್ಟ್ ನಿಮಗೆ ಗೊತ್ತಾಗುತ್ತೆ.
ತಲೆಯಿಂದ ಪಾದದವರೆಗೂ Bellagagalu Mane Maddu / ಬೆಳ್ಳಗೆ ಪಳ ಪಳ ಅಂತ ಹೊಳೆಯಬೇಕು, ಅಷ್ಟೊಂದು ಸುಂದರವಾಗಿ ನಾವು ಕಾಣಬೇಕು. ನಮ್ಮ ಚರ್ಮದ ವರ್ಣ ಆಕರ್ಷಕವಾಗಿ ಕಾಣಬೇಕು ಎಂದರೆ ನಾವು ಏನು ಮಾಡಬೇಕು?
Bellagagalu Mane Maddu / ಬೆಳ್ಳಗೆ ಆಗದೆ ಇರಲು ಕಾರಣಗಳು
ನಮ್ಮ ಚರ್ಮ ಸುಕ್ಕಾಗುವುದಕ್ಕೆ, ಮತ್ತು ಚರ್ಮದ ವರ್ಣ ಹಾಳಾಗುವುದಕ್ಕೆ ಕಾರಣ ಆಹಾರ ಪದ್ಧತಿ. ಶರೀರವನ್ನು ಸುಡುವಂತಹ ಆಹಾರವನ್ನು ನಾವು ಸೇವನೆ ಮಾಡುತ್ತೇವೆ. ಜಂಕ್ ಫುಡ್, ಫಾಸ್ಟ್ ಫುಡ್, ಬೇಕರಿ ಪದಾರ್ಥ, ಟೀ ಕಾಫಿ, ಬೀಡಿ, ಸಿಗರೇಟ್, ಗುಟ್ಕಾ, ತಂಬಾಕು, ಸರಾಯಿ, ಇವೆಲ್ಲ ದುಶ್ಚಟಗಳಿಂದ ಶರೀರದಲ್ಲಿ ಮೇಲಾನಿನ್ ಇನ್ ಬ್ಯಾಲೆನ್ಸ್ ಆಗಿ, ಶರೀರದಲ್ಲಿ ಪಿತ್ತ ವೃದ್ಧಿಯಾಗುತ್ತದೆ. ಅದರಿಂದ ಚರ್ಮದ ವರ್ಣ ಎಲ್ಲಾ ಸುಟ್ಟು ಸುಟ್ಟು ಕರಕಲಾಗುತ್ತದೆ. ಆದ್ದರಿಂದ ಇಂತಹ ದುಶ್ಚಟಗಳಿಂದ ದೂರವಿರಬೇಕು.
ಹೊಟ್ಟೆಯ ಶುದ್ಧೀಕರಣಕ್ಕಾಗಿ ಪ್ರತಿ ದಿನ ಬೆಳಿಗ್ಗೆ 6:00ಗೆ ಬೆಟ್ಟದ ನೆಲ್ಲಿಕಾಯಿ ಜ್ಯೂಸನ್ನು ಕುಡಿಯಬೇಕು. ನಾಲ್ಕರಿಂದ ಆರು ನೆನೆಸಿರುವ ಬಾದಾಮಿಯನ್ನು ಸಿಪ್ಪೆ ತೆಗೆದು ತಿನ್ನಬೇಕು.
ಬೆಳಗ್ಗೆ ಎದ್ದು ನೆನೆಸಿರುವ ಖರ್ಜೂರವನ್ನು ತಿನ್ನಬೇಕು. ದಿನನಿತ್ಯ ಸೊಪ್ಪು ತರಕಾರಿಗಳನ್ನು ಹೆಚ್ಚಾಗಿ ಬಳಕೆ ಮಾಡಬೇಕು. ಕ್ಯಾರೆಟ್, ಬೀಟ್ರೂಟ್, ಸೌತೆಕಾಯಿ, ಮೂಲಂಗಿ, ಬೂದುಗುಂಬಳಕಾಯಿ, ಇವುಗಳ ಜ್ಯೂಸನ್ನು ತಯಾರಿಸಿಕೊಂಡು ಕುಡಿಯಬೇಕು.
ಹರವೇ ಸೊಪ್ಪು, ದಂಟಿನ ಸೊಪ್ಪು, ಪಾಲಕ್ ಸೊಪ್ಪು, ಬಸಳೆ ಸೊಪ್ಪು, ನುಗ್ಗೆ ಸೊಪ್ಪು, ಈ ರೀತಿಯ ಸೊಪ್ಪುಗಳ ಜ್ಯೂಸ್ ಅನ್ನು ತಯಾರಿಸಿಕೊಂಡು ಕುಡಿಯುತ್ತಾ ಬಂದರೆ, ಶರೀರದಲ್ಲಿರುವಂತಹ ಕೆಟ್ಟ ಅಂಶಗಳು ಚರ್ಮದಲ್ಲಿರುವ ಕೆಟ್ಟ ಅಂಶಗಳು ಹೋಗುತ್ತವೆ.
ಚರ್ಮದ ಒಳಗೆ ಇರುವಂತಹ ಸಾತ್ವಿಕ ಶಕ್ತಿ ಅದರಲ್ಲಿರುವ ಪೋಷಕಾಂಶಗಳು ಎಲ್ಲಾ ಬ್ಯಾಲೆನ್ಸ್ ಆಗುತ್ತವೆ. ಚರ್ಮಕ್ಕೆ ಆಂತರಿಕ ಶಕ್ತಿ ಬರುತ್ತದೆ.
Bellagagalu Mane Maddu / ಚರ್ಮದ ಕಾಂತಿಗೆ ಲೇಪನ
100 ಗ್ರಾಂ ಅಗಸೆ ಬೀಜವನ್ನು ತೆಗೆದುಕೊಂಡು ಅದನ್ನು ಪುಡಿ ಮಾಡಿ, ಅದನ್ನು ಒಂದು ಕೆಜಿಯ ಕುಚ್ಚಲಕ್ಕಿ ಹಿಟ್ಟಿನಲ್ಲಿ ಬೆರೆಸಬೇಕು. ಅಗಸೆ ಬೀಜದ ಪುಡಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಯುತ್ತಿರುವ ಹಾಲಿನಲ್ಲಿ ಮಿಕ್ಸ್ ಮಾಡಿಕೊಂಡು ಇಟ್ಟುಕೊಂಡಿರುವ ಹಿಟ್ಟನ್ನು ಕಾಲು ಲೀಟರ್ ಹಾಲಿನಲ್ಲಿ ಹಾಕಬೇಕು.
ಆಮೇಲೆ ಚೆನ್ನಾಗಿ ಮಿಕ್ಸ್ ಮಾಡಿ, ಆಗ ಅದು ಪೇಸ್ಟ್ ತರಹ ಆಗುತ್ತದೆ. ಅದನ್ನು ಹಾಲಿನಲ್ಲಿ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಅದನ್ನು ಮೈಗೆಲ್ಲಾ ಲೇಪನ ಮಾಡಿಕೊಳ್ಳಬೇಕು.
ಲೇಪನ ಮಾಡಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿದರೆ, ಚರ್ಮದ ಒಳಗೆ ಇರುವಂತಹ ಕೊಳೆ ಅಂಶ ಎಲ್ಲಾ ಹೊರಗೆ ಬಂದಿರುತ್ತದೆ. ನಮ್ಮ ನರನಾಡಿಗಳಲ್ಲಿ ಶಕ್ತಿ ತುಂಬುವುದರ ಜೊತೆಗೆ ನಮ್ಮ ಚರ್ಮದ ರಂದ್ರಗಳಲ್ಲಿ ಅಡಗಿರುವಂತಹ ಎಲ್ಲಾ ಕೊಳೆಯನ್ನು ತೆಗೆದು Bellagagalu Mane Maddu / ಚರ್ಮ ಪಳಪಳ ಅಂತ ಹೊಳೆಯುವಂತೆ ಮಾಡುತ್ತದೆ.
ಈ ಚಿಕಿತ್ಸೆ ಒಂದು ರೂಪಾಯಿ ಕೂಡ ಕರ್ಚು ಇಲ್ಲದೆ ಉಚಿತವಾಗಿ ಸಿಗುತ್ತದೆ. ನೀವು ಎಷ್ಟೇ ಮುಖಕ್ಕೆ ಡೆಂಟಿಂಗ್ ಪೇಂಟಿಂಗ್ ಮಾಡಿದರು ಕೂಡ, ಸಿಗದೇ ಇರುವ ಮುಖದ ಸೌಂದರ್ಯ ಈ ಚಿಕಿತ್ಸೆಯಿಂದ ಸಿಗುತ್ತದೆ.
ಕೆಲವೊಬ್ಬರಿಗೆ ಕೈ ಬೆಳ್ಳಗೆ ಇದ್ದು ಮುಖ ಕಪ್ಪಾಗಿರುತ್ತದೆ. ಕೆಲವೊಬ್ಬರಿಗೆ ಮುಖ ಕಪ್ಪಗೆ ಇದ್ದು ಕೈಗಳು ಬೆಳ್ಳಗೆ ಇರುತ್ತವೆ. ಶರೀರದಲ್ಲಿ ಪ್ರತಿಯೊಂದು ಭಾಗವು ಕೂಡ ಅಷ್ಟೇ ಬೆಳ್ಳಗೆ, ಅಷ್ಟೇ ಕೆಂಪಗೆ, ನಳನಳಿಸುವಂತಹ ಚರ್ಮ ನಿಮ್ಮದಾಗಬೇಕು ಎಂದರೆ,
ಈ ಮನೆ ಮದ್ದನ್ನು ಮಾಡಿಕೊಂಡು ನೋಡಿರಿ. ಆಮೇಲೆ ನಿಮಗೆ ಗೊತ್ತಾಗುತ್ತದೆ ಇದರ ಫಲಿತಾಂಶ ಏನು ಅಂತ.
ಇದಕ್ಕೂ ಮಿಗಿಲಾಗಿರುವಂತಹ ಇನ್ನೂ ಹಲವಾರು Bellagagalu Mane Maddu / ಸೌಂದರ್ಯ ಚಿಕಿತ್ಸೆಗಳು ಆಯುರ್ವೇದದಲ್ಲಿ ಬರುತ್ತವೆ.
ಶೃಷ್ಟಿಕ ಶಾಲಿ ಪಿಂಡ ಶ್ವೇದ ಆಗಿರಬಹುದು, ಸೀರದಾರ ಆಗಿರಬಹುದು, ಶರೀರದ ತುಂಬೆಲ್ಲ ಹಾಲಿನಿಂದ ದಾರವನ್ನು ಹಾಕುತ್ತಾರೆ. ಷಷ್ಟಿಕ ಶಾಲಿಪಿಂಡ ಶ್ವೇದ ಈ ಚಿಕಿತ್ಸೆಯಿಂದ ಬೇಗ ಚರ್ಮದ ಶಕ್ತಿಯನ್ನು ಕ್ರಿಯಾಶೀಲಗೊಳಿಸುತ್ತದೆ.
ಆಯುರ್ವೇದದಲ್ಲಿ ಹಲವಾರು ತೈಲಗಳು ಬರುತ್ತವೆ. ಅವುಗಳನ್ನೆಲ್ಲ ಬಳಸಿಕೊಂಡು ಆಯುರ್ವೇದದಲ್ಲಿ ವಿಶೇಷವಾಗಿ ಸೌಂದರ್ಯದ ಚಿಕಿತ್ಸೆಯನ್ನು ಮಾಡಲಾಗುತ್ತದೆ.
ಮೊದಲು ಈ ಅಗಸೆ ಬೀಜದ ಮತ್ತು ಕುಚ್ಚಲಕ್ಕಿಯ ಹಿಟ್ಟಿನಿಂದ ತಯಾರಿಸಿಕೊಂಡಿರುವಂತಹ ಪೇಸ್ಟ್ ನಿಂದ ನಿಮ್ಮ ಮುಖದ Bellagagalu Mane Maddu / ಸೌಂದರ್ಯ ಚಿಕಿತ್ಸೆ ಪಡೆದುಕೊಳ್ಳಬಹುದು. ಇವುಗಳನ್ನು ಮಾಡಿಕೊಳ್ಳಲು ನಿಮಗೆ ಸಮಯವಿಲ್ಲದೆ ಇದ್ದಾಗ ಆಯುರ್ವೇದಿಕ್ ಕೇಂದ್ರಗಳಲ್ಲಿ ಸೌಂದರ್ಯ ಚಿಕಿತ್ಸೆಗಳನ್ನು ತೆಗೆದುಕೊಳ್ಳಬಹುದು.
ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850
ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.
ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು. ಹೇಳದೆ ಕೇಳದೆ ಮಾಡಿದ್ದಲ್ಲಿ ಅನಾಹುತ ಆದರೆ ನಾವು ಜವಾಬ್ದಾರರಲ್ಲಾ.