ಹಾವು ಕಚ್ಚಿದ್ರೆ ಏನ್ಮಾಡ್ಬೇಕು ? ಏನ್ ಮಾಡ್ಬಾರ್ದು ? ಉಪಯುಕ್ತ ಮಾಹಿತಿ..!

ಇಂದಿನ ಸಂಚಿಕೆಯಲ್ಲಿ, ರೈತ ಜನರು ಹೊಲದಲ್ಲಿ ಕೆಲಸ ಮಾಡುತ್ತಾರೆ. ಹಾವುಗಳು ಹೊಲದಲ್ಲಿ ತುಂಬಾ ಇರುತ್ತವೆ. ಕೆಲಸ ಮಾಡುವಾಗ Snake Bite / ಹಾವುಗಳು ಕಚ್ಚಿದರೆ, ಹಾವು ಕಚ್ಚುತ್ತವೆ. ಎಂದು ಮನೆಯಲ್ಲಿ ಕುಳಿತುಕೊಳ್ಳುವುದಕ್ಕೆ ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ, ಈ ವಿಷಯದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

ನಾವು ಹೇಳುತ್ತಿರುವುದು ಪ್ರಥಮ ಚಿಕಿತ್ಸೆ. ಇದೆ ಚಿಕಿತ್ಸೆ ಅಲ್ಲ. ಪ್ರಥಮ ಚಿಕಿತ್ಸೆಯನ್ನು ಮಾಡಿಕೊಂಡು ನಂತರದ ಅವಧಿಯಲ್ಲಿ ವೈದ್ಯರಿಗೆ ಸಂಪರ್ಕಿಸುವುದು ಅತ್ಯವಶ್ಯಕವಾಗಿದೆ. ನಾವು ರಸ್ತೆಯಲ್ಲಿ ಹೋಗುವಾಗ ಹಾವು ಬಂದು ಕಚ್ಚುತ್ತದೆ.

ಹಾವು ಕಚ್ಚಿದೆ ಎಂದು ನಮಗೆ ನಿಖರವಾಗಿ ಹೇಗೆ ತಿಳಿಯುತ್ತದೆ? ಹಾವಿಗೆ ಎರಡು ವಿಷದ ಹಲ್ಲುಗಳು ಇರುತ್ತವೆ. ಹಾವು ಹೆಡೆಯನ್ನು ಅಗಲ ಮಾಡಿದರೆ ಅದು ಕಚ್ಚುವುದಕ್ಕೆ ಸಾಧ್ಯವಿಲ್ಲ. ಯಾವಾಗಲೂ ಹೆಡೆಯನ್ನು ಮುದುಡಿಕೊಂಡು ಕಚ್ಚುವುದಕ್ಕೆ ಸಾಧ್ಯವಾಗುತ್ತದೆ.

Snake Bite / ಹಾವು ಕುಕ್ಕಿದರೆ ವಿಷವನ್ನು ಬಿಡುವುದಿಲ್ಲ. ಕುಕ್ಕಿ ಟ್ವಿಸ್ಟ್ ಮಾಡಿದರೆ, ಆ ವಿಷದ ಗ್ರಂಥಿಗೆ ಸ್ಟಿ ಮಲೇಷನ್ ಆಗಿ, ವಿಷವನ್ನು ಹಲ್ಲಿನ ಹೋರಳಿಯ ಮುಖಾಂತರ ಹಲ್ಲಿನಲ್ಲಿ ಹೋಲ್ ಇರುತ್ತದೆ.

ಅದರ ಮುಖಾಂತರ ವಿಷಯವನ್ನು ದೇಹದಲ್ಲಿ ಸಿಂಪಡಿಸುತ್ತದೆ ಆದರೆ ಖಂಡಿತವಾಗಿಯೂ ವಿಷ ನಮ್ಮ ದೇಹದ ಒಳಗೆ ಹೋಗುವುದಿಲ್ಲ. ನಿಮಗೆ ಕಚ್ಚುವುದಕ್ಕಿಂತ ಮುಂಚೆ ಇನ್ನೊಂದು ಪ್ರಾಣಿಗೆ ಕಚ್ಚಿ ಬಂದಿತ್ತು ಎಂದರೆ, ಆ ವಿಷದ ತೀವ್ರತೆ ಅಷ್ಟೊಂದು ಇರುವುದಿಲ್ಲ. ಮೊದಲು ಕಚ್ಚಿರುವಂತಹ ಪ್ರಾಣಿಗೆ ವಿಷದ ತೀವ್ರತೆ ಹೆಚ್ಚು ಇರುತ್ತದೆ. ಎರಡನೇ ಸಲ ಕಡಿಮೆ ಇರುತ್ತದೆ.

Snake Bite / ಹಾವು ಒಂದು ಸಲ ವಿಷವನ್ನು ಹೊರಗೆ ಸೂಸಿತು ಎಂದರೆ, ಆ ಗ್ರಂಥಿಯಲ್ಲಿ ವಿಷ ಶೇಖರಣೆ ಆಗುವುದಕ್ಕೆ ಏಳು ದಿವಸಗಳು ಬೇಕು. ನಿಮಗೆ ಹಾವು ಕಚ್ಚಿದಾಗ ಅದರ ಹೆಡೆ ಅಗಲ ಇತ್ತು, ಅಥವಾ ಮುದುಡಿಕೊಂಡಿತ್ತು. ಟ್ವಿಸ್ಟ್ ಮಾಡಿದೆಯೋ, ಇಲ್ಲವೋ, ಅಂತ ಗಾಬರಿಯಲ್ಲಿ ನೀವು ಅದನ್ನು ಗಮನಿಸುವುದಕ್ಕೆ ಆಗುವುದಿಲ್ಲ. ನಿಮಗೆ ಇದರ ಬಗ್ಗೆ ಮಾಹಿತಿ ಇರಲಿ ಎಂದು ಹೇಳುತ್ತಿದ್ದೇವೆ ಅಷ್ಟೇ.

Snake Bite / ಏನೇ ಕಚ್ಚಿದರು ಕಚ್ಚಿದಾಗ ಎರಡು ಹಲ್ಲುಗಳು ಮೂಡಿರಬೇಕು. ಎರಡು ಹಲ್ಲುಗಳು ಮೂಡಿದರೆ ಮಾತ್ರ ಅದು Snake Bite / ನಾಗರಹಾವು ಕಚ್ಚಿದೆ ಎಂದು ಅರ್ಥ. ಬೇರೆ ಇತ್ತು. ಒಂದು ಹಲ್ಲು ಮೂಡಿತ್ತು, ಎರಡು ಹಲ್ಲು, ಅಥವಾ ಮೂರು ಹಲ್ಲು ಮೂಡಿತ್ತು ಎಂದರೆ, ಅದು ನಾಗರಹಾವು ಇರುವುದಿಲ್ಲ.

ನಾಗರ ಹಾವಿಗೆ ಎರಡು ವಿಷದ ಹಲ್ಲುಗಳು ಇರುತ್ತವೆ. ಇದನ್ನು ತಿಳಿದುಕೊಳ್ಳುವ ಉದ್ದೇಶಕ್ಕಾಗಿ ಮಾತ್ರ ನಾವು ಹೇಳಿದ್ದೇವೆ. ಇದೇ ಪ್ಯಾರಾಮೀಟರ್ ಅಲ್ಲ.

Snake Bite / ಏನೇ ಕಚ್ಚಿದರೂ ಕೂಡ ನೀವು ಪ್ರಥಮವಾಗಿ ಮಾಡಬೇಕಾದ ಕೆಲಸ ಏನು ಎಂದರೆ?

ಕಚ್ಚಿರುವಂತಹ ಜಾಗದಿಂದ ಒಂದು ಗೇಣು ಮೇಲ್ಭಾಗಕ್ಕೆ ಒಂದು ಟೇಪನ್ನು, ಅಥವಾ ಒಂದು ಬಟ್ಟೆಯನ್ನು ತಕ್ಷಣಕ್ಕೆ ಸಿಗುವಂತಹ ಯಾವುದಾದರೂ ಒಂದು ಬಟ್ಟೆಯಿಂದ ಕಟ್ಟಿ ಬಿಗಿಯಬೇಕು. ಆ ತರಹ ಮಾಡಿದರೆ, ವಿಷ ಬೇರೆ ಪ್ರಾಂತ್ಯಕ್ಕೆ, ಬೇರೆ ಜಾಗಕ್ಕೆ, ಪಸರಿಸುವುದಿಲ್ಲ. ಅದು ಹರಿದು ಹೋಗುವುದಿಲ್ಲ.

ಆ ಭಾಗದಿಂದ ಕೆಳಗಡೆ ಇರುತ್ತದೆ. ಇಷ್ಟು ಮಾಡಿದ ನಂತರ ಇಮ್ಮಿಡಿಯೇಟ್ ಆಗಿ, ಆ ಜಾಗವನ್ನು ನೀವು ಬ್ಲೇಡ್ ನಿಂದ ಅಥವಾ ತಕ್ಷಣಕ್ಕೆ ಸಿಗುವ ಯಾವುದಾದರೂ ವಸ್ತುವಿನಿಂದ ಆ ಭಾಗವನ್ನು ಕೊಯ್ದು ರಕ್ತವನ್ನು ಹರಿಯುವುದಕ್ಕೆ ಬಿಡಬೇಕು. ವಿಷಾ ಹೊರಗಡೆ ಹೋಗುತ್ತದೆ. ನಂತರ ನಂಜಿನ ಕೊಲ್ದು ಅಂತ ಸಿಗುತ್ತದೆ. ಗ್ರಂಥಿಗೆ ಅಂಗಡಿಯಲ್ಲಿ ಹೋಗಿ ತಂದಿಟ್ಟುಕೊಳ್ಳಬೇಕು.

ಎಲ್ಲಾ ರೈತರು, ಎಲ್ಲಾ ಜನರು ಈ ತರಹದ ಒಂದು ಫಾರಂ ಹೌಸ್, ಹೊಲಗದ್ದೆಗಳಲ್ಲಿ, ವಾಸ ಮಾಡುವಂತವರು ನಂಜಿನ ಕೊಳ್ಳನ್ನು ಇಟ್ಟುಕೊಂಡಿರಬೇಕು.

ಇವೆಲ್ಲಾ ಕೂಡ ಎಮರ್ಜೆನ್ಸಿ ಐಟಮ್ಸ್ ಗಳು. ಅದನ್ನು ತೈ ದು ಅಥವಾ ನಿಂಬೆರಸದಲ್ಲಿ ತೇದು, ಆ ಜಾಗಕ್ಕೆ ಹಚ್ಚಿಕೊಳ್ಳಬೇಕು.
ಹಚ್ಚಿದರೆ ಆ ವಿಷ ಸ್ಪ್ರೆಡ್ ಆಗೋದಕ್ಕೆ ಸಾಧ್ಯತೆ ಕಡಿಮೆ ಇರುತ್ತದೆ. ಇಷ್ಟು ಮಾಡಿಕೊಂಡು ಸುಮ್ಮನೆ ಇರುವುದು ಅಲ್ಲ. ಹತ್ತಿರದ ಯಾವುದೇ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಆಗ ಆಯುರ್ವೇದ ವೈದ್ಯರನ್ನು ಹುಡುಕಬಾರದು.

ಯಾವುದೇ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ಮಾಡಬೇಕು. ಅಲ್ಲಿ ಸ್ನೇಕ್ ವೇನಮ್ ಇರುತ್ತದೆ. ಆಂಟಿ ಟ್ಯೋ ಟ್ ಇರುತ್ತದೆ. ಆ ವೆನಮ್ ಅನ್ನು ಕೊಟ್ಟುಬಿಟ್ಟರೆ, ಆ ವಿಷದ ಒಂದು ಪ್ರಭಾವವನ್ನು ನಲ್ಲಿ ಫಾಯ್ ಮಾಡುತ್ತದೆ. ಆ ಇಂಜೆಕ್ಷನ್ ಅನ್ನು ವೈದ್ಯರ ನಿಗರಾಣಿಯಲ್ಲಿ ತೆಗೆದುಕೊಳ್ಳಬೇಕು. ಅವರು ಹೇಳಿರುವ ರೀತಿಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

Snake Bite / ಹಾವುಗಳು ಕಚ್ಚಿದರೆ ಏನು ಮಾಡಬೇಕು

ಚಿಕಿತ್ಸೆ ಎಲ್ಲಾ ಮುಗಿದ ಮೇಲೆ 21 ದಿವಸಗಳ ಕಾಲ ನೀವು ಯಾವುದೇ ಕಾರಣಕ್ಕೂ ನಂಜಾಗುವಂತಹ ಆಹಾರಗಳನ್ನು ಸೇವನೆ ಮಾಡಬಾರದು.

Snake Bite / ಹಾವು ಕಚ್ಚಿದಾಗ ನಂಜು ಆಗುವಂತಹ ಆಹಾರಗಳು ಸೇವಿಸಬಾರದು

ಗಿಣ್ಣ, ಗೆಣಸು, ಆಲೂಗಡ್ಡೆ, ಬದನೆಕಾಯಿ, ಹಸಿಮೆಣಸಿನಕಾಯಿ, ಕಾಫಿ, ಟೀ, ಮಾಂಸಾಹಾರಿ ಆಗಿರುವವರು, ಮೀನುಗಳನ್ನು ಸೇವನೆ ಮಾಡಬಾರದು. ಹಾವು ಕಚ್ಚಿದ ಮೇಲೆ ಈ ತರಹದ ಆಹಾರಗಳನ್ನು ಸೇವನೆ ಮಾಡಬಾರದು. ಈ ತರಹದ ಚಿಕಿತ್ಸೆಯನ್ನು ಮಾಡಿಕೊಳ್ಳಬೇಕು. ವೈದ್ಯರಿಗೂ ಮಾಡುವುದಕ್ಕೆ ಬಿಡಬೇಕು. ಹೀಗೆ ಮಾಡಿಕೊಂಡರೆ ಖಂಡಿತವಾಗಿಯೂ ವಿಷದ ಪ್ರಭಾವವನ್ನು ಕಡಿಮೆ ಮಾಡುವುದಕ್ಕೆ, ನಲ್ಲಿ ಫೈವ್ ಮಾಡೋದಕ್ಕೆ ಸಾಧ್ಯ ಇರುತ್ತದೆ. ಇದು ಪ್ರಥಮ ಚಿಕಿತ್ಸೆ.

ಹಳೆಯ ಕಾಲದಲ್ಲಿ ಕೆಲವೊಂದು ದೇವಾಲಯಗಳಲ್ಲಿ ವಿಷ ಪರಿಹಾರವನ್ನು ಮಾಡುವುದಕ್ಕೆ ಅಂತ ಕೆಲವೊಂದು ಸ್ಟೋನ್ ಗಳು ಇದ್ದವು. ಕಲ್ಲುಗಳು ಇದ್ದವು. ಆ ಕಲ್ಲುಗಳಿಗೆ ಎಂತಹ ಶಕ್ತಿ ಇರುತ್ತದೆ ಎಂದರೆ, ಹಾವು ಕಡಿದಿರುವಂತಹ ವಿಷದಿಂದ, ಅಥವಾ ಯಾವುದೇ ವಿಷ ಜಂತು ಕಡಿದಿರುವ ವಿಷವನ್ನು ನಲ್ಲಿ ಫೈ ಮಾಡುವಂತಹ ಶಕ್ತಿ ಇರುತ್ತದೆ. ಇವತ್ತಿಗೂ ಕೂಡ ಹೊಯ್ಸಳ ಸಾಮ್ರಾಜ್ಯದ ಕಾಲದಲ್ಲಿ ಜಕಣಾಚಾರ್ಯ ಸೃಷ್ಟಿ ಮಾಡಿರುವಂತಹ ಒಂದು ದೇವಸ್ಥಾನ ಇಂದಿಗೂ ಲಭ್ಯ.

ಅದು ಎಲ್ಲಿ? ಹಿರೇಕೆರಿಯ ತಾಲೂಕು, ಬಾಳೆಂಬೀಡುವಿನ ಗ್ರಾಮದಲ್ಲಿ ವಿಷ ಪರಿಹಾರೇಶ್ವರ ದೇವಸ್ಥಾನ ಇದೆ. ಜಕಣಾಚಾರ್ಯ ನಿರ್ಮಾಣ ಮಾಡಿರುವಂತಹ ದೇವಸ್ಥಾನದಲ್ಲಿ ಎಲ್ಲಿಯೂ ವಾಸಿ ಆಗದಂತಹ ಹಾವು ಕಡಿತಕ್ಕೆ ಚಿಕಿತ್ಸೆಯನ್ನು ಸ್ವಯಂ ಭಗವಂತ ವೈದ್ಯನಾಗಿ ಅಲ್ಲಿ ಚಿಕಿತ್ಸೆಯನ್ನು ಕೊಡುತ್ತಾನೆ.

ನಿಮಗೆ ನಂಬುವುದಕ್ಕೆ ಸಾಧ್ಯವಿಲ್ಲ ಅಂದರೆ, ಒಮ್ಮೆ ಅಲ್ಲಿ ಹೋಗಿ ಭೇಟಿ ನೀಡಿ, ಅಲ್ಲಿ ಆಗುವಂತಹ ಪವಾಡಗಳನ್ನು ವೀಕ್ಷಣೆ ಮಾಡಬಹುದು. ಅಲ್ಲಿ ಹಾವು ಕಡಿದಿರುವಂತಹವರನ್ನು ತಂದು ಬಿಟ್ಟು, ಇಂತಿಷ್ಟು ದಿವಸ ಅಂತ ಅವರೇ ಮಡಿಯಿಂದ ಆಹಾರವನ್ನು ತಯಾರಿಸಿಕೊಂಡು ಊಟ ಮಾಡಬೇಕು.

ಅಲ್ಲಿ ಲಿಂಗವನ್ನು ತೊಳೆದಿರುವಂತಹ ತೀರ್ಥವನ್ನು ಪ್ರೋಕ್ಷಣೆ ಮಾಡಿ, ಆ ತೀರ್ಥವನ್ನು ಬೆಳಗ್ಗೆ ಸಾಯಂಕಾಲ ಒಂದು ಲೋಟ ಸೇವನೆ ಮಾಡುವುದಕ್ಕೆ ಕೊಡುತ್ತಾರೆ. ತೀರ್ಥವನ್ನು ಕುಡಿದ ಮೇಲೆ ವಾಸಿ ಮಾಡಿಕೊಂಡಿರುವಂತಹ ಹಲವಾರು ರೋಗಿಗಳ ಉದಾಹರಣೆಗಳು ಇವತ್ತಿಗೂ ಕಾಣಿಸಿಕೊಳ್ಳುತ್ತವೆ.

Snake Bite / ಹಾವು ಕಚ್ಚಿದಾಗ ಚಿಕಿತ್ಸೆಯಲ್ಲಿ ಮೂರು ವಿಧಾನಗಳಿವೆ

ಸತ್ವಾವ್ ಜಯ ಚಿಕಿತ್ಸೆ,ಯುಕ್ತಿ ವ್ಯಾಪಾಶಯ ಚಿಕಿತ್ಸೆ, ದೈವಿದತ್ತ ಚಿಕಿತ್ಸೆ, ಯುಕ್ತಿ ವ್ಯಾಪಾಶಯ ಚಿಕಿತ್ಸೆ ಎಂದರೆ? ಯುಕ್ತಿಯನ್ನು ಬಳಕೆ ಮಾಡಿ ಯಾವ ಔಷಧಿಯನ್ನು ಕೊಡಬೇಕು, ಯಾವುದನ್ನು ಕಡಿಮೆ ಕೊಡಬೇಕು, ಯಾವುದನ್ನು ಹೆಚ್ಚು ಕೊಡಬೇಕು, ಹೀಗೆ ಯುಕ್ತಿಯನ್ನು ಬಳಕೆ ಮಾಡಬೇಕು. ಇವತ್ತಿನ ದಿನಮಾನಗಳಲ್ಲಿ ಪ್ರಪಂಚದಾದ್ಯಂತ ಎಲ್ಲಾ ವೈದ್ಯಕೀಯ ಶಾಸ್ತ್ರಗಳಲ್ಲಿ ಇಷ್ಟೇ ಮಾಡುವುದು.

ವೈದ್ಯರು ಯುಕ್ತಿಯನ್ನು ಉಪಯೋಗಿಸಿ, ಮೆಡಿಸನ್ಗಳು ಕೊಡುತ್ತಾರೆ. ಅದನ್ನು ಹೊರತುಪಡಿಸಿ ಆಯುರ್ವೇದದಲ್ಲಿ ಲಭ್ಯ. ದೈವ ವ್ಯಾಪಾಷೆಯ ಚಿಕಿತ್ಸೆ. ಸತ್ವಾವ್ ಜಯ ಚಿಕಿತ್ಸೆ ಇದು ಕೂಡ ಆಯುರ್ವೇದದಲ್ಲಿ ಲಭ್ಯ. ಮೆಡಿಸನ್ ಕೊಡುವುದು ಅಷ್ಟೇ ಅಲ್ಲ, ಮನುಷ್ಯನ ಸತ್ವವನ್ನು ಸ್ಟ್ರೆಂತ್ ಅನ್ನು, ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು, ನಾವು ಮಾರಲ್ ಸಪೋರ್ಟ್ ಕೊಟ್ಟು, ಶಕ್ತಿಯನ್ನು ಹೆಚ್ಚಿಗೆ ಮಾಡುವುದಕ್ಕೆ ಸಾಧ್ಯ. ಹಾವು ಕಡಿದಾಗ ಸಾಯುತ್ತೀಯಾ ನೀನು ಎಂದರೆ, ಅವನು ಸತ್ತೆ ಬಿಡುತ್ತಾನೆ. ಏನು ಆಗುವುದಿಲ್ಲ ಎಂದು ಧೈರ್ಯ ತುಂಬಿದರೆ, ಅವನು ನಾಲ್ಕು ದಿವಸ ಬದುಕುತ್ತಾನೆ.

ಇದಕ್ಕೆ ಸತ್ವಾವಜಯ ಚಿಕಿತ್ಸೆ ಅನ್ನುತ್ತಾರೆ. ದೈವವ್ಯಾಪಶಯ ಚಿಕಿತ್ಸೆ, ಯಾವಾಗ ಯುಕ್ತಿ ವ್ಯಾಪಾಶಯ ಚಿಕಿತ್ಸೆ ಕೆಲಸ ಮಾಡುವುದಿಲ್ಲವೋ, ಯಾವಾಗ ಸತ್ವಾವಜಯ ಚಿಕಿತ್ಸೆ ಕೆಲಸ ಮಾಡಲಿಲ್ಲ ಎಂದರೆ, ಆಗ ಬೇಕಾಗುತ್ತದೆ, ದೈವ ವ್ಯಾಪಾಶಯ ಚಿಕಿತ್ಸೆ. ಈ ದೇವಸ್ಥಾನಗಳಲ್ಲಿ, ಮಠಗಳಲ್ಲಿ, ಮಂದಿರಗಳಲ್ಲಿ, ( ಕರಬ ಸಜ್ಜಯ್ಯ) ಇವೆಲ್ಲ ಕೂಡ ಆಸ್ಪತ್ರೆಗಳೇ. ಕರಬಸಜ್ಜಯ್ಯನ ದೇವಸ್ಥಾನ ಮಾನಸಿಕ ಚಿಕಿತ್ಸೆಯನ್ನು ಮಾಡುವುದಕ್ಕೆ ಇರುವುದು.

ಈ ತರಹದ ಒಂದು Snake Bite / ವಿಷ ಪರಿಹಾರೆ ಶ್ವರ ದೇವಸ್ಥಾನ ದೇಹಕ್ಕೆ ಚಿಕಿತ್ಸೆಯನ್ನು ಮಾಡುವುದಕ್ಕೆ ಇರುವುದು.
ಇದಕ್ಕೆ ದೈವ ವ್ಯಾಪಾಶಯ ಚಿಕಿತ್ಸೆ ಎನ್ನುತ್ತಾರೆ. ದೈವಿ ದತ್ತವಾಗಿ ಇದು ಮೂರು ವಿಧವಾದ ಚಿಕಿತ್ಸೆಗಳಲ್ಲಿ ಒಂದು ವಿಧವಾದ ಚಿಕಿತ್ಸೆ. ಆದ್ದರಿಂದ ಅಂತಹ ಸಂದರ್ಭ ಬಂದರೆ ನಿಮಗೆ ನೀವೇ ವೈದ್ಯರು ಆಗಬಾರದು. ವೈದ್ಯರನ್ನು ಸಂಪರ್ಕಿಸಿ ಅವರು ಕೊಡುವಂತಹ ಮೆಡಿಸನ್ಗಳು ತೆಗೆದುಕೊಂಡು ವಿಷ ಪರಿಹಾರವನ್ನು ಮಾಡಿಕೊಳ್ಳಬೇಕು.

ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850

ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.

ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು. 

One thought on “ಹಾವು ಕಚ್ಚಿದ್ರೆ ಏನ್ಮಾಡ್ಬೇಕು ? ಏನ್ ಮಾಡ್ಬಾರ್ದು ? ಉಪಯುಕ್ತ ಮಾಹಿತಿ..!

  1. ಹಾವು ಕಚ್ಚಿದ ಜಾಗದ ಮೇಲೇ ಕೊಯ್ಯಬಾರದು..ಸ್ವಲ್ಪ ದೂರದಲ್ಲಿ ಕೊಯ್ಯಬೇಕು..ಇದರಿಂದ ವೈದ್ಯರಿಗೆ ಹಾವಿನ ಕಡಿತದ ಆಳ ತಿಳಿಯುತ್ತದೆ

Leave a Reply

Your email address will not be published. Required fields are marked *