ಅನ್ನಂ ಭವತಿ ಭೂತಾನಿ ಸೂತ್ರ ಸ್ಥಾನ 25ನೇ ಅಧ್ಯಯನದ ಪ್ರಕಾರ (ಅನ್ನಂ ಭವತಿ ಭೂತಾನಿ) ಅಂದರೆ, (ಅನ್ನಂ ಬ್ರಹ್ಮ) ಅನ್ನಕ್ಕೆ ಬ್ರಹ್ಮಾಂತ ಏಕೆ ಕರೆದರು? White Rice is Good or Bad / ಅನ್ನ ಎಂದರೆ ಅಕ್ಕಿಯಿಂದ ಮಾಡುವಂತಹ ಅನ್ನ ಅಷ್ಟೇ ಅಲ್ಲ. ನಾವು ಏನೆಲ್ಲಾ ಆಹಾರಗಳನ್ನು ಉಪಯೋಗ ಮಾಡುತ್ತೇವೆಯೋ, ಅವೆಲ್ಲವೂ ಕೂಡ ಅನ್ನ. ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿಯನ್ನು ನೋಡೋಣ.
White Rice is Good or Bad / ಅನ್ನಕ್ಕೆ ಬ್ರಹ್ಮ ಅಂತ ಏಕೆ ಕರೆದರು?
ಬ್ರಹ್ಮನ ಕೆಲಸ ಏನು ಎಂದರೆ? ಈ ಲೋಕವನ್ನು ಸೃಷ್ಟಿ ಮಾಡುವುದು, ಒಟ್ಟಾರೆ ಹೇಳಬೇಕು ಎಂದರೆ, ಸೃಷ್ಟಿಯನ್ನು ಮಾಡುವುದು ಬ್ರಹ್ಮನ ಕೆಲಸ. ವಿಷ್ಣುವಿನ ಕೆಲಸ ಏನು? ಪಾಲನೆ ಮಾಡುವ ಕೆಲಸ. ಸೃಷ್ಟಿಯಾಗಿರುವಂಥದ್ದು ಪಾಲನೆ ಮಾಡುವದು ವಿಷ್ಣುವಿನ ಕೆಲಸ. ಮಹೇಶ್ವರನ ಕೆಲಸ ಏನು? ನಾಶ ಮಾಡುವಂತಹ ಕೆಲಸ. ಹಳೆದು ಹೋಗಿ, ಹೊಸದು ಬರುವಂತಹ ಕೆಲಸ ಮಹೇಶ್ವರ ಮಾಡುತ್ತಾನೆ.
White Rice is Good or Bad / ಅನ್ನಕ್ಕೆ ಬ್ರಹ್ಮ ಅಂತ ಏಕೆ ಹೇಳಿದರು ಎಂದರೆ? ನಮ್ಮ ಆಹಾರ ನಮ್ಮ ಜೀವನವನ್ನು ಸೃಷ್ಟಿ ಮಾಡುತ್ತದೆ. ಪ್ರತಿನಿತ್ಯ ನಮ್ಮ ದೇಹದಲ್ಲಿ ಇರುವಂತಹ ಕೋಟ್ಯಾನುಕೋಟಿ ಸೇಲ್ಸ್ ಗಳು ಸತ್ತು ಹೋಗುತ್ತವೆ, ಮತ್ತೆ ಹುಟ್ಟುತ್ತವೆ. ಈ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. (ಅನ್ನಂ ಬ್ರಹ್ಮ) ಅಂದರೆ, ಯಾವುದು ಸತ್ತು ಹೋಗಿರುತ್ತದೆಯೋ, ಆ ಜಾಗಕ್ಕೆ ಇನ್ನೊಂದು ಸೃಷ್ಟಿ ಮಾಡುವಂತಹ ಕೆಲಸ ಈ ಅನ್ನಕ್ಕೆ ಇರುವುದರಿಂದ ಬ್ರಹ್ಮನ ಕೆಲಸ ಮತ್ತು White Rice is Good or Bad / ಅನ್ನದ ಕೆಲಸ ಎರಡು ಒಂದೇ ಇರುವುದರಿಂದ ಅನ್ನವನ್ನು ಬ್ರಹ್ಮನಿಗೆ ಹೋಲಿಸಲಾಗಿದೆ ಆದ್ದರಿಂದ ಇಬ್ಬರು ಸೃಷ್ಟಿಕರ್ತರು. ನಾವು ತಿಂದಿರುವಂತಹ ಆಹಾರ ನಾವು ತಿನ್ನಬೇಕು.
ಅದು ನಮ್ಮನ್ನು ತಿನ್ನಬಾರದು. ಅಂದರೆ ಆಹಾರವನ್ನು ನಾವು ತಿನ್ನಬೇಕೆ ಹೊರತು, ಆಹಾರ ನಮ್ಮನ್ನು ತಿನ್ನಬಾರದು. ಆಹಾರ ನಮ್ಮನ್ನು ತಿನ್ನಬಾರದು ಎಂದರೇನು? ತಿಂದಿರುವಂತಹ ಆಹಾರ ನಮ್ಮ ದೇಹದಲ್ಲಿ ಹೋಗಿ ಅದು ಲೀನವಾಗಿ, ನಮಗೆ ಎನರ್ಜಿಯನ್ನು ಕೊಟ್ಟು, ನಮ್ಮ ಜೀವನವನ್ನು ಸರಿಪಡಿಸಬೇಕು. ಅದು ಪ್ರಕ್ರಿಯೆ.
ಇಂದಿನ ಕಾಲದಲ್ಲಿ ತಿನ್ನುತ್ತಿರುವ ಆಹಾರ, ಜಂಕ್ ಫುಡ್ಸ್, ಕೆಮಿಕಲ್ ಯುಕ್ತ ಆಹಾರ, ಅಲ್ಟ್ರಾಟೆಡ್ ಆಹಾರಗಳು,
ಅದನ್ನು ನಾವು ತಿನ್ನುತ್ತೇವೆ ಎಂಬ ಭ್ರಮೆಯಲ್ಲಿ ನಾವು ಇರುತ್ತೇವೆ. ಆದರೆ ಅದು ಒಳಗಡೆ ಹೋಗಿ ನಮ್ಮನ್ನು ತಿನ್ನುತ್ತದೆ. ಇದು ಬೇಕಾ? White Rice is Good or Bad / ಅನ್ನವನ್ನು ನೀವು ತಿನ್ನಬೇಕಾ? ಅಥವಾ ಅನ್ನವೇ ನಿಮ್ಮನ್ನು ತಿನ್ನಬೇಕಾ? ಅದು ನಿಮ್ಮ ನಿಮ್ಮ ನಿರ್ಧಾರ. ಈಗ ಬೇಸಿಗೆಯ ಕಾಲ ಗ್ರೀಷ್ಮ ಋತು. ಆಯುರ್ವೇದದಲ್ಲಿ ಅಥವಾ ನಮ್ಮ ಭಾರತೀಯ ಪರಂಪರೆಯಲ್ಲಿ ಋತುಗಳನ್ನು ವಿವರಣೆ ಮಾಡಿದ್ದಾರೆ.
ಋತುಗಳ ಅನುಸಾರವಾಗಿ ಆಹಾರವನ್ನು ಸೇವನೆ ಮಾಡುವುದು, ಎಕ್ಸ್ ಪ್ಲೇನ್ ಮಾಡಿದ್ದಾರೆ. ಈ ಬೇಸಿಗೆಯ ಕಾಲದಲ್ಲಿ ಐದು ಅಂಶಗಳನ್ನು, ಐದು ಆಹಾರಗಳನ್ನು, ಅಥವಾ ಐದು ಖಾದ್ಯ ಪದಾರ್ಥಗಳನ್ನು, ಅವುಗಳನ್ನು ತಿನ್ನಲೇಬೇಕು ಎಂದು ಹೇಳಿದ್ದಾರೆ. ಋತುಚರ್ಯ ಅಧ್ಯಾಯ, ದಿನಚರ್ಯ ಮತ್ತು ಋತುಚರ್ಯವನ್ನು ವಿವಿರಣೆ ಮಾಡುವಾಗ ಆಯಾ ಋತುಗಳಿಗೆ ಅನುಸಾರವಾಗಿ ನಮ್ಮ ದೇಹಕ್ಕೇ ಆ ತರಹದ ಆಹಾರಗಳು ಬೇಕಾಗುತ್ತವೆ. ಆ ತರಹದ ಆಹಾರಗಳು ಅಷ್ಟೇ ಅಲ್ಲದೆ, ಆಯಾ ಋತುಗಳಲ್ಲಿ ಆ ತರಹದ ಆಹಾರಗಳು ಬೇಕೇ ಬೇಕು. ಎಂದು 25ನೇ ಅಧ್ಯಾಯದಲ್ಲಿ ವಿವರಣೆ ಮಾಡಿದ್ದಾರೆ.
ಬೇಸಿಗೆಯಲ್ಲಿ ಸೇವನೆ ಮಾಡಬೇಕಾದ ಐದು ಪ್ರಮುಖ ಖಾದ್ಯ ಪದಾರ್ಥಗಳು ಯಾವುವು? *ಮೊದಲನೆಯದಾಗಿ : ಹಾಲು,
ಬೇಸಿಗೆಯ ಕಾಲದಲ್ಲಿ ನೀವು ಹಾಲನ್ನು ಕುಡಿಯಲೇಬೇಕು. ಏಕೆ ಹಾಲನ್ನು ಕುಡಿಯಲೇಬೇಕು? ಹಾಲು ಇದು ಶೀತ ವಿರ್ಯ ದ್ರವ್ಯ. ದೇಹಕ್ಕೆ ಶೀತವನ್ನು ಕೊಡುವುದರಿಂದ ಯಾವಾಗ ವಾತಾವರಣದಲ್ಲಿ ಬೇಸಿಗೆ ಕಾಲದಲ್ಲಿ ಪಿತ್ತ ಹೆಚ್ಚು ಆಗಿರುತ್ತದೆ. ಹೀಟ್ ಜಾಸ್ತಿ ಆಗಿರುತ್ತದೆ, ದೇಹದಲ್ಲಿ ಅಸಿಡಿಕ್ ಲೆವೆಲ್ ಜಾಸ್ತಿ ಆಗಿರುತ್ತದೆ, ಅದನ್ನು ಕಡಿಮೆ ಮಾಡಿಕೊಳ್ಳಬೇಕು ಎಂದರೆ ನೀವು ಹಾಲನ್ನು ಸೇವನೆ ಮಾಡಬೇಕು.
ಎರಡನೆಯದು, ತುಪ್ಪ.
ತುಪ್ಪ, ಬೇಸಿಗೆಯ ಕಾಲದಲ್ಲಿ ತುಪ್ಪವನ್ನು ಸೇವನೆ ಮಾಡಬೇಕು. ಮಳೆಗಾಲದಲ್ಲಿ ತಿನ್ನುತ್ತಿರೋ, ಅಥವಾ ಬಿಡುತ್ತೀರೋ, ಚಳಿಗಾಲದಲ್ಲಿ ತಿನ್ನುತ್ತಿರೋ, ಅಥವಾ ಬಿಡುತ್ತಿರೋ, ಅದು ನಿಮ್ಮ ಇಷ್ಟ. ಬೇಸಿಗೆಯ ಕಾಲದಲ್ಲಿ ತುಪ್ಪವನ್ನು ಸೇವನೆ ಮಾಡುವುದು ಅವಶ್ಯಕವಾಗಿದೆ. ಏಕೆಂದರೆ? ತುಪ್ಪ ಇದು ಶೀತ ವೀರ್ಯ ದ್ರವ್ಯ ಇರುವುದರಿಂದ ಇದು ಶರೀರಕ್ಕೆ ತಂಪನ್ನು ಒದಗಿಸುತ್ತದೆ. ವಾತಾವರಣದಲ್ಲಿ ಹಿಟ್ ಜಾಸ್ತಿ ಆಗಿರುತ್ತದೆ.
ಪಿತ್ತ ಜಾಸ್ತಿ ಆಗಿರುತ್ತದೆ, ಅಸಿಡಿಕ್ ಲೆವೆಲ್ ಜಾಸ್ತಿ ಆಗಿರುತ್ತದೆ, ಆವಾಗ ದೇಹವನ್ನು ತಂಪು ಮಾಡಬೇಕು. ಬೇಸಿಗೆಯ ಕಾಲದಲ್ಲಿ ಪಿತ್ತ ಮತ್ತು ವಾತಪ್ರಕೋಪ ಇರುವುದರಿಂದ ತುಪ್ಪ ಇದು ವಾತವನ್ನು ಹರಮಾಡುತ್ತದೆ. ಹೇಗೆ ಎಂದರೆ, ಯಾವಾಗ ದೇಹದಲ್ಲಿ ಆಗಿರಬಹುದು, ವಾತಾವರಣದಲ್ಲಿ ಆಗಿರಬಹುದು, ವಾತ ವೃದ್ಧಿಯಾಗಿರುತ್ತದೆ. ಒಣ ಒಣ ವಾತಾವರಣದಲ್ಲಿ ವಾತ ವೃಕ್ಷತೆಯನ್ನು ಉಂಟುಮಾಡುತ್ತದೆ.
ದೇಹದಲ್ಲಿ ವಾತ ಹೆಚ್ಚಿಗೆ ಆದರೆ, ದೇಹ ಒಣಗುತ್ತದೆ. ದೇಹಕ್ಕೆ ಸವಕಳಿ ಬರುತ್ತದೆ. ದೇಹದ ಮೇಲೆ ಸುಕ್ಕುಗಟ್ಟುತ್ತದೆ. ವೃಕ್ಷತೆಯ ವಿರುದ್ಧ ಪದ, ಸ್ನಿಗ್ಧ ತೆ. ಅವಾಗ ದೇಹದಲ್ಲಿ ವೃಕ್ಷತೆ ಹೆಚ್ಚು ಆಗಿರುತ್ತದೆಯೋ, ಆಗ ಸ್ನಿಗ್ಧ ವಾಗಿರುವಂತಹ ಆಹಾರ ತುಪ್ಪವನ್ನು ಉಪಯೋಗ ಮಾಡಿದರೆ, ದೇಹದಲ್ಲಿ ಇರುವಂತಹ ಪಿತ್ತ, ವಾತ, ಶಮನವಾಗುತ್ತದೆ. ದೇಹದಲ್ಲಿ ಸ್ನಿಗ್ಧತೆಯನ್ನು ಉಂಟುಮಾಡುತ್ತದೆ. ವೃಕ್ಷತೆಯ ವಿರುದ್ಧ ಪದ ಸ್ನಿಗ್ಧ ತೆ, ದೇಹಕ್ಕೆ ಸ್ನಿಗ್ಧ ತೆಯನ್ನು ಕೊಡುವುದರಿಂದ ದೇಹಕ್ಕೆ ವಾತದ ಪ್ರಕೋಪದಿಂದ ಆಗಿರುವಂತಹ ಹಲವಾರು ಕಾಯಿಲೆಗಳನ್ನು ಅಥವಾ ಮುಂದೆ ಬರುವಂತಹ ಕಾಯಿಲೆಗಳನ್ನು ತಡೆಗಟ್ಟುತ್ತದೆ.
ಮೂರನೆಯದು ಕಷಾಯ..!
ಪಾನಕಗಳು. ಬೇಲದ ಹಣ್ಣಿನ ಪಾನಕ ಆಗಿರಬಹುದು, ಅಥವಾ ಕಲ್ಲು ಸಕ್ಕರೆ ನಿಂಬೆಹಣ್ಣಿನ ರಸವನ್ನು ಹಾಕಿ ಮಾಡಿರುವ ಪಾನಕ ಗಳನ್ನು ಹೆಚ್ಚು ಉಪಯೋಗ ಮಾಡಬೇಕು. ಪಾನಕ ಪಿತ್ತ ಗುಣವನ್ನು ಹೊಂದಿರುವುದರಿಂದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. ಆಗ ಉಷ್ಣತೆಯಿಂದ ಬರುವಂತಹ ಪಿತ್ತ ಪ್ರಕೋಪದಿಂದ ಬರುವಂತಹ ಕಾಯಿಲೆಗಳು ಕಣ್ಣು ಉರಿ, ಕಾಲು ಉರಿ, ಅಂಗೈ ಉರಿ, ಮೂತ್ರ ಉರಿ, ಮಲ ವಿಸರ್ಜನೆ ಮಾಡುವಾಗ ಉರಿ, ಹೊಟ್ಟೆಯಲ್ಲಿ ಉರಿ, ತರಹದ ಸಮಸ್ಯೆಗಳನ್ನು ತಡೆಗಟ್ಟುತ್ತದೆ.
White Rice is Good or Bad / ನಾಲ್ಕನೆಯದು ಶಾಲಿ ಅನ್ನ ಪ್ರಯೋಗ..!
ಶಾಲಿ ಅನ್ನ ಎಂದರೆ ? White Rice is Good or Bad / ಹಳೆಯ ಅಕ್ಕಿಯ ಅನ್ನವನ್ನು ಊಟ ಮಾಡಬೇಕು. ಬಹಳಷ್ಟು ವಿಡಿಯೋಗಳಲ್ಲಿ ನೀವು ನೋಡಿರುತ್ತೀರಾ. ಅನ್ನ ತಿನ್ನಬೇಡಿ. ಹಾಗಾಗುತ್ತದೆ, ಹೀಗಾಗುತ್ತದೆ, ಅದೆಲ್ಲ ಸುಳ್ಳು. ಅನ್ನವನ್ನು ಉಪಯೋಗ ಮಾಡಬೇಕು ಅದರಲ್ಲೂ ಹಳೆಯ ಅಕ್ಕಿಯಿಂದ ಮಾಡಿರುವಂತಹ White Rice is Good or Bad / ಅನ್ನವನ್ನು ಬೇಸಿಗೆಯ ಕಾಲದಲ್ಲಿ ಉಪಯೋಗ ಮಾಡಬೇಕು. ಅದು ದೇಹಕ್ಕೆ ತಂಪನ್ನು ಕೊಡುತ್ತದೆ.
White Rice is Good or Bad / ಅನ್ನವನ್ನು ಯಾರು ಸೇವನೆ ಮಾಡಬೇಕು? ಯಾರು ಸೇವನೆ ಮಾಡಬಾರದು?
ಡಯಾಬಿಟಿಸ್ ಇರುವಂತವರು, ಶುಗರ್ ಕಾಯಿಲೆ ಇರುವಂತಹವರು, ಅನ್ನವನ್ನು ಬೇಯಿಸುವಾಗ ಮೇಲೆ ಬಂದಿರುವಂತಹ ಗಂಜಿಯನ್ನು ತೆಗೆದು ಅನ್ನವನ್ನು ಉಪಯೋಗ ಮಾಡಬೇಕು. ಈ ರೀತಿಯಾಗಿ, ಅನ್ನವನ್ನು ವಿಧಿ ವಿಧಾನದಲ್ಲಿ ಅನ್ನವನ್ನು ತಯಾರಿಸಿಕೊಂಡು ಉಪಯೋಗ ಮಾಡಿದರೆ, ಶುಗರ್, ಡಯಾಬಿಟಿಸ್ ಹೆಚ್ಚಿಗೆ ಮಾಡುವುದಿಲ್ಲ.
ಐದನೆಯದು ಕಲ್ಲು ಸಕ್ಕರೆ..!
ಕಲ್ಲು ಸಕ್ಕರೆಯನ್ನು ಬೇಸಿಗೆಯ ಕಾಲದಲ್ಲಿ ಅತ್ಯಾವಶ್ಯಕವಾಗಿ ಉಪಯೋಗ ಮಾಡಬೇಕು. ಇದು ಶೀತ ವೀರ್ಯ ದ್ರವ್ಯ ಆಗಿರುವುದರಿಂದ ಸಕ್ಕರೆ ಬೇರೆ, ಕಲ್ಲು ಸಕ್ಕರೆಯೆ ಬೇರೆ. ಕಲ್ಲು ಸಕ್ಕರೆಯನ್ನು ನೀವು ಯಾವ ರೀತಿಯಾಗಿ ಕೂಡ ಬಳಕೆ ಮಾಡಬಹುದು. ಇದರಿಂದ ಶರ್ಬತ್ತಾದರೂ ಮಾಡಬಹುದು, ಆಹಾರದಲ್ಲಿ ಉಪಯೋಗ ಮಾಡಬಹುದು, ಅಥವಾ ಪಾನಕಗಳಲ್ಲಿ ಉಪಯೋಗ ಮಾಡಬಹುದು, ಅಥವಾ ಕಲ್ಲು ಸಕ್ಕರೆಯನ್ನು ತುಪ್ಪದ ಜೊತೆಗೆ ಮಿಕ್ಸ್ ಮಾಡಿ ಸೇವನೆ ಮಾಡಬಹುದು.
ಕಲ್ಲು ಸಕ್ಕರೆಯನ್ನು ತುಪ್ಪದ ಜೊತೆಗೆ ಮಿಕ್ಸ್ ಮಾಡಿ ತಿಂದರೆ, ಅದರ ರುಚಿ ತಿಂದವರಿಗೆ ಗೊತ್ತು. ಅಷ್ಟೊಂದು ಚೆನ್ನಾಗಿರುತ್ತದೆ. ಅದನ್ನು ಮಕ್ಕಳಿಗೂ ಕೊಡಬಹುದು, ವೃದ್ಧರಿಗೂ ಕೊಡಬಹುದು, ಯುವಕರಂತೂ ತಿನ್ನಲೇಬೇಕು.
ಏಕೆ ಯುವಕರು ತಿನ್ನಲೇಬೇಕು ಎಂದರೆ?
ಯುವಕರಲ್ಲಿ, ಯುವ ಅವಸ್ಥೆಯಲ್ಲಿ ಹೆಚ್ಚು ಪಿತ್ತ ಪ್ರಕೋಪ ಇರುತ್ತದೆ, ಹೀಟ್ ಜಾಸ್ತಿ ಇರುತ್ತದೆ, ಕೋಪ ಜಾಸ್ತಿ ಇರುತ್ತದೆ, ಅಹಂಕಾರ ಹೆಚ್ಚಿಗೆ ಇರುತ್ತದೆ, ಯುವ ಅವಸ್ಥೆಯಲ್ಲಿ ದೇಹವನ್ನು ಶಾಂತವಾಗಿ ಇಟ್ಟುಕೊಳ್ಳಬೇಕು ದೇಹವನ್ನು ಕೂಲ್ ಮಾಡಬೇಕು ಎಂದರೆ ಈ 5 ಅಂಶಗಳನ್ನು ಗಮನಿಸಿ ಈ ಐದು ಪದಾರ್ಥಗಳನ್ನು ನೀವು ನಿಮ್ಮ ಆಹಾರದಲ್ಲಿ, ಬೇಸಿಗೆ ಕಾಲದಲ್ಲಿ ಕಡ್ಡಾಯವಾಗಿ ಸೇವನೆ ಮಾಡಿದರೆ, ಬೇಸಿಗೆಯಲ್ಲಿ ಬರುವಂತಹ ಕಾಯಿಲೆಗಳಿಂದ ದೂರ ಉಳಿಯಬಹುದು.
ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850
ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.
ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು.