ಇಂದಿನ ಸಂಚಿಕೆಯಲ್ಲಿ, Karulu Shuddhi / ಕರುಳಿಗೆ ಅಂಟಿದ ಮಲ ಸ್ವಚ್ಛ ಮಾಡುವ ವಿಧಾನ ಮತ್ತು ಮಲಬದ್ಧತೆಯನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಒಂದು ಅದ್ಭುತವಾದ ಜ್ಯೂಸ್ ಈ ಕುರಿತಾಗಿ ಮಾಹಿತಿಗಳನ್ನು ನೋಡೋಣ.
Karulu Shuddhi / ಕಾರಣಗಳು?
ಮಲಬದ್ಧತೆಯ ಸಮಸ್ಯೆ ಬರುವುದಕ್ಕೆ ಪ್ರಧಾನವಾದ ಕಾರಣ ಯಾವುದು ಎಂದರೆ? ಅಜೀರ್ಣ, ನಿದ್ರಾಹೀನತೆ, ಹೆಚ್ಚಾಗಿ ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ಸ್ ಗಳನ್ನು ಸೇವನೆ ಮಾಡುವುದು, ಅಕಾಲಿಕ ಆಹಾರವನ್ನು ಸೇವನೆ ಮಾಡುವುದು, ತಡವಾಗಿ ಮಲಗುವುದು, ತಡವಾಗಿ ಎಳುವ ಅಭ್ಯಾಸದಿಂದ, ವಾತ ವಿಕಾರ ಇದು ಬಹಳ ಪ್ರಮುಖವಾಗಿ ಮಲ ತ್ಯಾಗ ಮಾಡುವಂತಹ ಒಂದು ಅಪಾನ ವಾಯುವಿನ ನಿಶಕ್ತಿಯಿಂದ ವಾತವಿಕಾರದಲ್ಲಿ ಪ್ರಾಣ ವಾಯುವಿನ ವಿಕಾರ, ಅಪಾನ ವಾಯುವಿಕಾರ, ಉದಾನ ವಾಯುವಿಕಾರ, ವ್ಯಾನ ವಾಯುವಿಕಾರ, ಹೀಗೆ ಪಂಚಪ್ರಾಣಗಳು.
ಪ್ರಾಣ, ಅಪಾನ, ಉದಾನ, ವ್ಯಾನ, ಸಮಾನ, ಈ ಐದು ವಾಯುಗಳಲ್ಲಿ ವಿಕಾರಗಳು ಉಂಟಾದರೆ, ಒಂದೊಂದು ವಾಯುವಿಗೂ ಸಂಬಂಧ ಪಟ್ಟಿರುವಂತಹ ಕಾಯಿಲೆಗಳು ಶರೀರದಲ್ಲಿ ಬರುತ್ತವೆ. ಹಾಗೆ ಯಾವಾಗ ವಾತವಿಕಾರದಲ್ಲಿ ಅಪಾನವಾಯು in balance ಆಗುತ್ತದೆಯೋ, ಆ ಸಂದರ್ಭದಲ್ಲಿ ಶರೀರದ ಕೋಷ್ಟ ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳುತ್ತಾ ಹೋಗುತ್ತದೆ.
ಇದನ್ನು ಓದಿ — ಜಗತ್ತಿನ ಸರ್ವಶ್ರೇಷ್ಠ ಪ್ರಾಣಾಯಾಮ
ಕೋಷ್ಟದ ಆರೋಗ್ಯ ಸಂಪೂರ್ಣವಾಗಿ ನಿಸತ್ವಗೊಂಡಾಗ ಶರೀರದಲ್ಲಿ ಸರಿಯಾದ ರೀತಿಯಲ್ಲಿ ಮಲದ ಚಲನೆಯಾಗದೆ ಮಲ ಕರುಳಿನಲ್ಲಿಯೇ ಸಂಗ್ರಹಣೆಗೊಂಡಾಗ, ಅದರಿಂದ ಮಲಬದ್ಧತೆ ಎನ್ನುವಂತಹ ಒಂದು ಭಯಾನಕ ಸಮಸ್ಯೆ ಸಂಭವಿಸುತ್ತದೆ.
ಮಲಬದ್ಧತೆ ಇದು ಭಯಾನಕ ಸಮಸ್ಯೆ ಇದೆ. ಎಂದು ಹೇಳಿದಾಗ ಮಲಬದ್ಧತೆ ಭಯಾನಕ ಸಮಸ್ಯೆನಾ? ಎಂದು ತುಂಬಾ ಜನರಲ್ಲಿ ಪ್ರಶ್ನೆ ಉದ್ಭವವಾಗಬಹುದು.
ಹೌದು ಖಂಡಿತವಾಗಿಯೂ Karulu Shuddhi / ಮಲಬದ್ಧತೆ ಸಮಸ್ಯೆ ಭಯಾನಕ ಸಮಸ್ಯೆ. ಏಕೆಂದರೆ? ಸಣ್ಣಪುಟ್ಟ ನೆಗಡಿ ಶೀತ ಕೆಮ್ಮು ಜ್ವರದಿಂದ ಹಿಡಿದು ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳ ಉಗಮಕ್ಕೆ ಆ ಕಾಯಿಲೆಗಳ ಉತ್ಪತ್ತಿಗೆ ಮೂಲ ಕಾರಣವೇ ಮಲಬದ್ಧತೆ. ಮಲ ಬದ್ಧತೆಯಿಂದ ತ್ರಿದೋಷಗಳು ವಿಕಾರವಾಗುತ್ತವೆ. ವಾತ ಪಿತ್ತ ಕಫ, ಈ ತ್ರಿದೋಷಗಳು ವಿಕಾರ ಆಯ್ತು ಎಂದರೆ, ತೀರದಲ್ಲಿ ಸುಮಾರು 400 ರಿಂದ 500ಕ್ಕೂ ಹೆಚ್ಚು, ಸಾವಿರಕ್ಕೂ ಹೆಚ್ಚು ಕಾಯಿಲೆಗಳು ಉತ್ಪತ್ತಿಯಾಗುತ್ತವೆ.
ಇತ್ತೀಚಿನ ದಿನಮಾನಗಳಲ್ಲಿ ಈ ಕಾಯಿಲೆ ಉತ್ಪತ್ತಿ ಆಗುವ ಕಾರಣವೇ ನಮಗೆ ಸರಿಯಾಗಿ ಗುರುತು ಆಗುತ್ತಿಲ್ಲ. ಈ ಕಾಯಿಲೆ ಹೇಗೆ ಬಂತು, ಎಂದು ವಿಜ್ಞಾನ ಲೋಕದಲ್ಲಿ ಸಂಶೋಧನೆಯೆ ಮಾಡಿಲ್ಲ. ಇದು ಹೊಸ ಕಾಯಿಲೆ ಅಂತ ಕೆಲವು autoimmune disease ಗಳಿಗೆ ವೈದ್ಯರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
Karulu Shuddhi / ಹೇಗೆ ಬರುತ್ತದೆ ಈ ಕಾಯಿಲೆ?
ಈ ಕಾಯಿಲೆಗೆ ಮೂಲ ಕಾರಣವೇನು? ಎಂದು ಗುರುತು ಆಗುತ್ತಿಲ್ಲ. ಯಾವ lab ನಲ್ಲಿಯೂ, ಯಾವ microscope ನಲ್ಲಿಯೂ ಕೂಡ, ಯಾವ x-ray scanning ನಲ್ಲಿಯೂ ಕೂಡ, ಇದರ ಮೂಲ ಸರಿಯಾಗಿ ಪತ್ತೆ ಹತ್ತುತ್ತಿಲ್ಲವಲ್ಲ, ಈ ಕಾಯಿಲೆ ಏನು ಎಂದು ಅರ್ಥವಾಗುತ್ತಿಲ್ಲ? ಹೊಸ ಹೊಸ ಕಾಯಿಲೆಗಳು ಏನು ಉತ್ಪತ್ತಿ ಆಗುತ್ತಿವೆ ಎಲ್ಲಾ, ಅಂತಹ ಕಾಯಿಲೆಗಳಿಗೂ ಕೂಡ ಮೂಲ ಕಾರಣ ಮಲಬದ್ಧತೆ.
Arthritis, thyroid, BP, sugar, cancer, ಗರ್ಭಕೋಶದ ಸಮಸ್ಯೆ ಹೀಗೆ ಸಮಸ್ಯೆ ಕೂಡ ನೀವು ಅನುಭವಿಸುತ್ತಿದ್ದರೆ,
ಹೊಸ ಹೊಸ ಕಾಯಿಲೆಗಳು ಹುಟ್ಟಿಕೊಳ್ಳುತ್ತಿವೆ ಎಂದರೆ, ಇಂತಹ ಕಾಯಿಲೆಗಳಿಗೆ ಪ್ರಧಾನವಾದ ಕಾರಣ ಎಂದರೆ Karulu Shuddhi / ಮಲಬದ್ಧತೆ.
ಶರೀರದಲ್ಲಿ ತ್ರಿದೋಷಗಳು ವಿಕಾರ ಆಯ್ತು ಎಂದರೆ, ನೀವು ಸುಖವಾಗಿ ಆರೋಗ್ಯದಿಂದ ಇರಲು ಸಾಧ್ಯವಿಲ್ಲ. ಅಂತಹ ಮಲಬದ್ಧತೆಯನ್ನು ನಿವಾರಣೆ ಮಾಡುವಂತಹ the best powerful juice ಅನ್ನು ನಾವು ನಿಮಗೆ ಹೇಳಿಕೊಡುತ್ತೇವೆ. ಅದು ಯಾವುದು ಎಂದರೆ? ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್.
ಇದನ್ನು ಓದಿ — ಜಗತ್ತಿನ No – 1 ಚಿಕಿತ್ಸೆ ಮೂಗಿಗೆ 2 ಹನಿ ತುಪ್ಪ
*Karulu Shuddhi / ಮಲಬದ್ಧತೆಯನ್ನು ನಿವಾರಣೆ ಮಾಡಿ ಕೊಳ್ಳಲು ಬೆಟ್ಟದ ನೆಲ್ಲಿಕಾಯಿ ಜ್ಯೂಸ್..!
ವಾತ ಪ್ರಕೃತಿಯವರು ಇರಬಹುದು, ಪಿತ್ತ ಪ್ರಕೃತಿಯವರು ಇರಬಹುದು, ಕಫ ಪ್ರಕೃತಿಯವರು ಇರಬಹುದು, ಮೂರು ಪ್ರಕೃತಿಗೂ ಹೊಂದಿಕೊಂಡು ಮೂರು ಪ್ರಕೃತಿಯನ್ನು ಅಸಮತನ ಗೊಳಿಸದೆ, ಮೂರು ಪ್ರಕೃತಿಯ ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಕೋಸ್ಟ ಶುದ್ದೀಕರಣ ಮಾಡುವಂತಹ ಒಂದು ಅದ್ಭುತವಾದ ಪ್ರಕೃತಿಯ ವರದಾನ ಅಂತ ಹೇಳಬಹುದು. ಇದೇ ಬೆಟ್ಟದ ನೆಲ್ಲಿಕಾಯಿ ಜ್ಯೂಸ್.
*ಬೆಟ್ಟದ ನೆಲ್ಲಿಕಾಯಿ ಜ್ಯೂಸನ್ನು ಎಷ್ಟು ದಿವಸ ಸೇವನೆ ಮಾಡಬಹುದು?:-
ಈ ಜ್ಯೂಸನ್ನು ಸತತವಾಗಿ ಮೂರು ತಿಂಗಳವರೆಗೂ ಸೇವನೆ ಮಾಡಬಹುದು.
ಯಾರು ಸೇವನೆ ಮಾಡಬಾರದು?
ಗರ್ಭಿಣಿ ಸ್ತ್ರೀಯರು ಇದನ್ನು ಸೇವನೆ ಮಾಡಬಾರದು. ಕೆಲವು ಸಮಯದಲ್ಲಿ ಮಾತ್ರ ಗರ್ಭಿಣಿಯರು ವೈದ್ಯರ ಸಲಹೆಯ ಮೇರೆಗೆ ಅದನ್ನು ನಿಗದಿತ ಪ್ರಮಾಣದಲ್ಲಿ ಸೇವನೆ ಮಾಡಬಹುದು. ಕಿಡ್ನಿ ಸಮಸ್ಯೆ ಇರುವವರು ವೈದ್ಯರ ಸಲಹೆ ಅನುಸಾರವಾಗಿ ನಿಗದಿತ ಪ್ರಮಾಣದಲ್ಲಿ ಸೇವನೆ ಮಾಡಬೇಕಾಗುತ್ತದೆ. ಸ್ಥನಪಾನ ಮಾಡಿಸುವಂತಹ ಸ್ತ್ರೀಯರು ಕೂಡ ವೈದ್ಯರ ಸಲಹೆಗನುಸಾರವಾಗಿ ಸೇವನೆ ಮಾಡಬಹುದು.
ಉಳಿದ ಎಲ್ಲಾ ವರ್ಗದವರು ಕೂಡ ಈ ಬೆಟ್ಟದ ನೆಲ್ಲಿಕಾಯಿ ಜ್ಯೂಸನ್ನು ಸೇವನೆ ಮಾಡಬಹುದು. ಎರಡು ವರ್ಷದ ಮಕ್ಕಳಿಂದ ಹಿಡಿದು ನೂರು ವರ್ಷದ ವೃದ್ಧರವರೆಗೂ ಕೂಡ ಬೆಟ್ಟದ ನೆಲ್ಲಿಕಾಯಿ ಜ್ಯೂಸನ್ನು ಸೇವನೆ ಮಾಡಬಹುದು. ಮಕ್ಕಳಿದ್ದರೆ ಸ್ವಲ್ಪ ಪ್ರಮಾಣದಲ್ಲಿ, ದೊಡ್ಡವರಿದ್ದರೆ ಒಂದು ಗ್ಲಾಸ್ ಸೇವನೆ ಮಾಡಬಹುದು.
ಬೆಟ್ಟದ ನೆಲ್ಲಿಕಾಯಿ ಜ್ಯೂಸನ್ನು ತಯಾರಿಸುವ ವಿಧಾನ
ನಾಲ್ಕು ನೆಲ್ಲಿಕಾಯಿಯನ್ನು ಬೀಜ ತೆಗೆದು ಹೆಚ್ಚಿ ಮಿಕ್ಸಿಯಲ್ಲಿ ಹಾಕಬೇಕು. ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಮಿಕ್ಸಿಗೆ ಹಾಕಿದಾಗ ಅದು ಕೊಬ್ಬರಿ ಚಟ್ನಿ ತರಹ ಪೇಸ್ಟ್ ತಯಾರಾಗುತ್ತದೆ. ಆಗ ಅದನ್ನು ಒಂದು ಬಟ್ಟೆಯಲ್ಲಿ ಹಾಕಿ ಚೆನ್ನಾಗಿ ಹಿಂಡಬೇಕು. ಆವಾಗ ಅದರಿಂದ ರಸ ಹೊರಗಡೆ ಬರುತ್ತದೆ.
ನೆಲ್ಲಿಕಾಯಿಯ ಚರಟೆ ಮಾತ್ರ ಸಂಪೂರ್ಣವಾಗಿ ಬೇರ್ಪಡುತ್ತದೆ. ರಸ ಮಾತ್ರ ಹೊರಗಡೆ ಬರುತ್ತದೆ. ಆಗ ಅದರಲ್ಲಿ ಅರ್ಧ ಚಮಚ ಅಥವಾ ಕಾಲು ಚಮಚ ಸೈಂದವ ಲವಣವನ್ನು ಬೆರೆಸಿ, ಅರ್ಧ ಗ್ಲಾಸ್ ನೆಲ್ಲಿಕಾಯಿ ಜ್ಯೂಸು ಇದ್ದರೆ, ಅದರಲ್ಲಿ ಇನ್ನು ಅರ್ಧ ಗ್ಲಾಸ್ ನೀರನ್ನು ಹಾಕಿ, ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಿಮ್ಮ ಹೊಟ್ಟೆಯ ಇಂಚಿಂಚು ಭಾಗವೂ ಕೂಡ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ.
ಸಂಪೂರ್ಣವಾಗಿ ಹೊಟ್ಟೆಯಲ್ಲಿ ಇರುವಂತಹ ಮಲ ಸ್ವಚ್ಛವಾಗುತ್ತದೆ. ಯಾವುದೇ ಭೇದಿಗೆ ಔಷಧಿ ತೆಗೆದುಕೊಂಡರು, ಯಾವುದೇ ಭೇದಿಗೂ ವಿರೆಚನ ತೆಗೆದುಕೊಂಡರು, ಉಪಯೋಗ ಆಗುವುದಿಲ್ಲ. ಅಂಥವರು ಕೂಡ ಈ ಬೆಟ್ಟದ ನೆಲ್ಲಿಕಾಯಿ ಜ್ಯೂಸನ್ನು ಸೇವನೆ ಮಾಡಬಹುದು.
ಯಾರಿಗೆ ವಿಪರೀತವಾಗಿ ಮಲಬದ್ಧತೆ ಸಮಸ್ಯೆ ಇರುತ್ತದೆ, ಅವರು ಕೂಡ ಈ ಜ್ಯೂಸನ್ನು ಸೇವನೆ ಮಾಡಬಹುದು. ಕ್ರೂರಕೋಷ್ಟ ಅಂದರೆ, ಕಠಿಣವಾದ ಮಲಬದ್ಧತೆ ಸಮಸ್ಯೆ ಇದ್ದರೂ ಕೂಡ ಈ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಸೇವನೆ ಮಾಡುವುದರ ಮೂಲಕ ಮಲಬದ್ಧತೆಯ Karulu Shuddhi / ಸಮಸ್ಯೆಯಿಂದ ಮುಕ್ತರಾಗಬಹುದು.
ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.
ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು. ಹೇಳದೆ ಕೇಳದೆ ಮಾಡಿದ್ದಲ್ಲಿ ಅನಾಹುತ ಆದರೆ ನಾವು ಜವಾಬ್ದಾರರಲ್ಲಾ.