Bhangu Nivarane / ಕಪ್ಪುಕಲೆ / ಭಂಗು ಸುಲಭವಾಗಿ ಮಾಯ

ಹೈಪರ್ ಪಿಗ್ಮೆಂಟೇಶನ್‌ / Bhangu Nivarane ನಿವಾರಣೆಗೆ ಮನೆಮದ್ದುಗಳು

ನಮ್ಮ ಚರ್ಮದಲ್ಲಿ ಕೆಲವೊಮ್ಮೆ ಕೆಲವು ಭಾಗಗಳು ಕಪ್ಪಾಗುತ್ತವೆ. ವಿಶೇಷವಾಗಿ ಕುತ್ತಿಗೆ, ಮೊಣಕೈ ತುದಿಗಳು, ಕಾಲು ಮುಂತಾದ ಭಾಗಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಹೈಪರ್ ಪಿಗ್ಮೆಂಟೇಶನ್ ಎಂದು ಕರೆಯುತ್ತಾರೆ. ಈ ಸಮಸ್ಯೆಯನ್ನು ಸರಳವಾದ ಮನೆಮದ್ದುಗಳು, ಸರಿಯಾದ ಆಹಾರ ಪದ್ಧತಿ ಮತ್ತು ಸ್ವಲ್ಪ ಶ್ರದ್ಧೆಯಿಂದ ನಿಭಾಯಿಸಬಹುದು ಎಂದು ಡಾ. ವೆಂಕಟರಮಣ ಹೆಗಡೆ ತಿಳಿಸಿದ್ದಾರೆ.

Bhangu Nivarane
Bhangu Nivarane
  1. ಕ್ಲೆನ್ಸಿಂಗ್ (ಚರ್ಮ ಶುದ್ಧೀಕರಣ) / Face Cleansing

ಕಪ್ಪಾದ ಚರ್ಮವನ್ನು ಮೊದಲು ಚೆನ್ನಾಗಿ ಶುದ್ಧಗೊಳಿಸುವುದು ಮುಖ್ಯ. ಇದಕ್ಕಾಗಿ ಎರಡು ಸರಳ ಮನೆಮದ್ದುಗಳು:

ಆಲೂಗಡ್ಡೆ ರಸ: ಒಂದು ಆಲೂಗಡ್ಡೆಯನ್ನು ಮಿಕ್ಸಿಯಲ್ಲಿ ತಿರಿದು ಗಟ್ಟಿಯಾದ ರಸ ಮಾಡಿ. ಅದನ್ನು ಕಾಟನ್ ಬಾಲ್‌ನ ಸಹಾಯದಿಂದ ಕಪ್ಪಾದ ಭಾಗಕ್ಕೆ ಹಚ್ಚಿ ಮಸಾಜ್ ಮಾಡಿ. ದಿನವೂ 15 ದಿನಗಳ ಕಾಲ ಮಾಡಿದರೆ ಬಣ್ಣ ಬದಲಾವಣೆಯಾಗುತ್ತದೆ.

ಆಪಲ್ ಸಿಡರ್ ವಿನೆಗರ್: ಅರ್ಧ ಗ್ಲಾಸ್ ನೀರಿಗೆ ಒಂದು ಚಮಚ ವಿನೆಗರ್ ಹಾಕಿ ಮಿಕ್ಸ್ ಮಾಡಿ. ಕಾಟನ್ ಬಾಲ್‌ನಿಂದ ಚರ್ಮವನ್ನು ತೊಳೆಯಿರಿ. ವಾರದಲ್ಲಿ ಮೂರು–ನಾಲ್ಕು ಬಾರಿ ಮಾಡಿದರೆ ಭಂಗು / ಕಪ್ಪುಕಲೆ ಸಮಸ್ಯೆಗೆ { Bhangu Nivarane } ಉತ್ತಮ ಫಲಿತಾಂಶ ಸಿಗುತ್ತದೆ.

2. ಮಾಯಿಶ್ಚರೈಸಿಂಗ್ / Moisturizer

ಚರ್ಮಕ್ಕೆ ತೇವಾಂಶ ತುಂಬಿಸುವುದು ಹೈಪರ್ ಪಿಗ್ಮೆಂಟೇಶನ್ ಕಡಿಮೆ ಮಾಡಲು ಮುಖ್ಯ.

ಶುದ್ಧ ತೆಂಗಿನ ಎಣ್ಣೆ, ಆಲಿವ್ ಆಯಿಲ್, ತುಪ್ಪ ಅಥವಾ ಅಲೋವೆರಾ ಜೆಲ್ ಬಳಸಬಹುದು.

ಕ್ಲೆನ್ಸಿಂಗ್ ಮಾಡಿದ ತಕ್ಷಣ ಹಚ್ಚಿ ಬಿಟ್ಟುಬಿಡುವುದು ಒಳಿತು. ಇದರಿಂದ ಚರ್ಮ ಮೃದುವಾಗುತ್ತದೆ ಮತ್ತು ಹೊಳಪು ಬರುತ್ತದೆ.

3. ಸ್ಕ್ರಬ್ಬಿಂಗ್ / Scrubbing

ಡೆಡ್ ಸ್ಕಿನ್ ತೆಗೆದು ಹೊಸ ಚರ್ಮ ಹೊರಬರುವಂತೆ ಮಾಡಲು ವಾರಕ್ಕೆ ಒಂದು–ಎರಡು ಬಾರಿ ಸ್ಕ್ರಬ್ಬಿಂಗ್ ಮಾಡಬೇಕು.

ಅರ್ಧ ನಿಂಬೆಹಣ್ಣಿನ ಮೇಲೆ ಸಕ್ಕರೆ ಹಾಕಿ ಕಪ್ಪಾದ ಭಾಗಕ್ಕೆ ಹಚ್ಚಿ ಮಸಾಜ್ ಮಾಡಿ.

ಇದರಿಂದ ಭಂಗು ಕಪ್ಪುಕಲೆ ಹೋಗಲು ಸಹಕಾರಿ ಆಗುತ್ತದೆ. ಹೆಚ್ಚು ಒತ್ತಡ ಹಾಕಬಾರದು, ಹೀಗಾದರೆ ಗಾಯವಾಗಬಹುದು.

Bhangu Nivarane
Bhangu Nivarane
4. ಪ್ಯಾಕ್ / Face Pack

ಚರ್ಮವನ್ನು ಪೋಷಿಸಲು ಪ್ಯಾಕ್ ಬಹಳ ಉಪಯುಕ್ತ.

ಓಟ್ಸ್ ಪುಡಿ + ಬಾಳೆಹಣ್ಣು + ಜೇನುತುಪ್ಪ ಮಿಕ್ಸ್ ಮಾಡಿ ಮುಖಕ್ಕೆ ಪೇಸ್ಟ್ ಮಾಡಿ.

ಕಪ್ಪಾದ ಭಾಗಕ್ಕೆ ಹಚ್ಚಿ 20 ನಿಮಿಷ ಬಿಟ್ಟು, ಉಗುರುಬಿಸಿ ನೀರಿನಲ್ಲಿ ತೊಳೆಯಿರಿ.

ಭಂಗು ನಿವಾರಣೆಯಾಗಲು ಈ ಟಿಪ್ಸ್ ತುಂಬಾ ಸಹಾಯ ಮಾಡುತ್ತದೆ.

ಆಹಾರ ಪದ್ಧತಿ

ಚರ್ಮದ ಆರೋಗ್ಯ ಕೇವಲ ಹೊರಗಿನ ಚಿಕಿತ್ಸೆಗೇ ಅಲ್ಲ, ಒಳಗಿನ ಪೋಷಕಾಂಶಗಳ ಮೇಲೂ ಅವಲಂಬಿತವಾಗಿದೆ.

ಹಣ್ಣು, ತರಕಾರಿ, ನಟ್ಸ್‌ಗಳು ಹೆಚ್ಚು ಸೇವಿಸಬೇಕು.

ತುಪ್ಪ, ಬೆಣ್ಣೆ, ಮೊಸರು, ಮಜ್ಜಿಗೆ ಚರ್ಮ ಸ್ನೇಹಿ ಆಹಾರ.

ದಿನಕ್ಕೆ ಕನಿಷ್ಠ 3–4 ಲೀಟರ್ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ವಿಟಮಿನ್ C ರಿಚ್ ಆಹಾರ ( ನಿಂಬೆಹಣ್ಣು, ಮೋಸಂಬಿ, ಸೀಬೆ, ಪೆರಳೆ ) ತಿನ್ನಬೇಕು. ಬಿಸಿ ಮಾಡಿ ಸೇವಿಸಿದರೆ ಅದರಲ್ಲಿರುವ ವಿಟಮಿನ್ C ನಾಶವಾಗುತ್ತದೆ, ಆದ್ದರಿಂದ ಹಸಿಯಾಗಿ ಸೇವಿಸುವುದು ಒಳಿತು.

ನಾವು ನುರಿತ ವೈದ್ಯರ ಹಾಗೂ ಯೋಗ ಗುರುಗಳ ಜ್ಞಾನ ಹಂಚುವ ಕಾಯಕ ಮಾಡುತ್ತಿದ್ದೇವೆ. ನಾವು ಹೇಳುವ ಮನೆಮದ್ದು ಹಾಗೂ ಔಷಧಿಗಳು ನಿಮ್ಮ ಹತ್ತಿರದ ವೈದ್ಯರ ಸಲಹೆ & ಸೂಚನೆ ಪಡೆದು ತೆಗೆದುಕೊಳ್ಳಿ.


Discover more from AYURVEDA TIPS IN KANNADA

Subscribe to get the latest posts sent to your email.

Discover more from AYURVEDA TIPS IN KANNADA

Subscribe now to keep reading and get access to the full archive.

Continue reading