Gallbladder Stones / ಪಿತ್ತಕೋಶದ ಕಲ್ಲು ಆಗಲು ಕಾರಣಗಳಾವವು?
ಪಿತ್ತಕೋಶದಲ್ಲಿ ಕಲ್ಲು ಆಗುವುದಕ್ಕೆ ಮುಖ್ಯವಾಗಿರುವಂತಹ ಕಾರಣ ಪಿತ್ತ. ನೀವು ಇದಕ್ಕೆ stone ಎಂದು ಹೇಳುತ್ತೀರಿ. ಅದು Gallbladder Stones ಅಲ್ಲ. ಪಿತ್ತ ಉಂಡೆ ಕಟ್ಟಿರುವಂತಹ ಒಂದು ಗಂಟು. stone ಎಂದರೆ ಮನೆ ಕಟ್ಟುವುದಕ್ಕೆ ಕಲ್ಲುಗಳನ್ನೂ ಬಳಸುತ್ತಾರಲ್ಲ, ಆ ಕಲ್ಲು ಅಲ್ಲ. ಅದನ್ನು ಹೊರಗಡೆ ತೆಗೆದಾಗ ಒಡೆದು ನೋಡಿದರೆ ಅದು ಮರಳು ಮರಳಾಗಿರುತ್ತದೆ. ಮರಳಿನ ಉಂಡೆ ಕಟ್ಟಿರುವ ತರಹ ಇರುತ್ತದೆ.
ಅದರಿಂದ ದೇಹದಲ್ಲಿ ಪಿತಾಂಶ ಹೆಚ್ಚಿಗೆಯಾಗಿ BH value in balance ಆಗಿ ಆಮ್ಲೀಯತೆಯಿಂದ ಆ ಆಮ್ಲ ದ್ರವ ಹಳಸಿ, ಕೊಳೆತು, ಗಟ್ಟಿಯಾಗಿ ಉಂಡೆ ಆಗಿರುವುದಕ್ಕೇ stone ಎಂದು ಹೇಳುತ್ತಾರೆ.
ಪಿತ್ತ ಹಳಸುವುದಕ್ಕೆ, ಗಂಟಾಗುವುದಕ್ಕೆ, ಕೊಳೆಯುವುದಕ್ಕೆ, ಕಾರಣವೇನು ಎಂದರೆ? ಅಜೀರ್ಣ ಮಲಬದ್ಧತೆ. ಆ ಅಜೀರ್ಣ ಮಲಬದ್ಧತೆಗೆ ಕಾರಣವೇನು? ತಪ್ಪು ತಪ್ಪಾಗಿರುವಂತಹ ಆಹಾರವನ್ನು ಸೇವನೆ ಮಾಡುವುದು, ಮಾಂಸ, ಸರಾಯಿ, ಬಿಡಿ, ಸಿಗರೇಟ್, ಗುಟ್ಕಾ, ತಂಬಾಕು, ಖಾರದ ಪದಾರ್ಥ, ಹೆಚ್ಚು ಮಸಾಲೆಯುಕ್ತ ಪದಾರ್ಥ, ಚಹಾ ಕಾಫಿ, ಬೇಕರಿ ಪದಾರ್ಥ ಮತ್ತು ಜಂಕ್ ಫುಡ್ ಗಳನ್ನು ಸೇವನೆ ಮಾಡುವುದು.
ತಡವಾಗಿ ಮಲಗುವುದು, ತಡವಾಗಿ ಎದ್ದೇಳುವುದು, ಜೀವನ ಕ್ರಮ ಹದಗೆಟ್ಟು ಹೋದಾಗ ಪಿತ್ತ ವೃದ್ಧಿಯಾಗುತ್ತದೆ. ಆ ಪಿತ್ತ ವೃದ್ಧಿಯಾಗ ಪಿತ್ತ ಕೆಡುತ್ತದೆ. ಕೆಟ್ಟು ಉಂಡೆಯಾಗುತ್ತದೆ. ಅದಕ್ಕೆ Gallbladder Stones , kidney stone’ ಎನ್ನುತ್ತಾರೆ. liver stone ಎನ್ನುತ್ತಾರೆ. ಹೀಗೆ ಶರೀರದಲ್ಲಿ ಎಲ್ಲಾ ಕಡೆಗೂ ಗಂಟುಗಳು ಕಟ್ಟಿಕೊಳ್ಳುವುದರಿಂದ ಆ ಒಂದು ಗಂಟು ಕಟ್ಟಿರುವ ವ್ಯವಸ್ಥೆಗೆ Gallbladder Stones ಅಥವಾ siste ಎಂದು ಹೇಳುತ್ತಾರೆ.
ಹೀಗೆ ಇನ್ನೂ ಹಲವಾರು ಹೆಸರುಗಳನ್ನು ಹೇಳುತ್ತಾರೆ. ಅದಕ್ಕೆ ಬೇರೆ ಬೇರೆ ಚಿಕಿತ್ಸೆಗಳನ್ನು ಮಾಡಿ ನಿಮಗೆ confuse ಮಾಡಿ, ಕೊನೆಗೆ gallbladder ತೆಗೆಯುತ್ತಾರೆ. ಆದ್ದರಿಂದ ಆ ಒಂದು ಚಿಕಿತ್ಸೆಗಳಿಂದ ನೀವು confuse ಆಗದೆ, ಅದಕ್ಕೆ ಒಂದೇ ಕಾರಣ ಪಿತ್ತ. ಪಿತ್ತ ಶಮನವಾಗಬೇಕು ಎಂದರೆ, ಅದಕ್ಕೆ ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿರಬೇಕು. ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿ ಆದರೆ ಮಲಬದ್ಧತೆ ನಿವಾರಣೆ ಆಗುತ್ತದೆ.
ಮಲಬದ್ಧತೆ ನಿವಾರಣೆ ಆದರೆ, ಶರೀರ neutral ಆಗುತ್ತದೆ. ಆಗ ಇಂತಹ ಸಮಸ್ಯೆಗಳು ಬರುವುದೇ ಇಲ್ಲ. ಆದ್ದರಿಂದ ಸಾತ್ವಿಕ ಆಹಾರ, ತರಕಾರಿ, ಹಣ್ಣು ಸೊಪ್ಪುಗಳನ್ನು, ಹೆಚ್ಚಾಗಿ ಸೇವನೆ ಮಾಡಬೇಕು. ಆಹಾರವನ್ನು ಯಾವತ್ತು acidic ಮಾಡಿಕೊಂಡು ಕರದು, ಹುರಿದು, Fray ಮಾಡಿಕೊಂಡು ಅದರಲ್ಲಿ ಇರುವಂತಹ ಸಾತ್ವಿಕ ಶಕ್ತಿಯನ್ನು ಕಳೆದು ತಿನ್ನಬಾರದು. ಕಡಲೆ ಬೀಜವನ್ನು ನೆನೆಸಿ ತಿನ್ನುವುದರಿಂದ ಪಿತ್ತ ಶಮನವಾಗುತ್ತದೆ.
ಹುರಿದು ತಿಂದರೆ ಪಿತ್ತ ವೃದ್ಧಿಯಾಗುತ್ತದೆ. ಯಾವುದೇ ಆಹಾರವನ್ನು ಕರೆದುಕೊಂಡು ಹುರಿದುಕೊಂಡು ತಿನ್ನಬಾರದು. ಒಂದು ಸಲ ಕರೆದಿರುವಂತಹ ಎಣ್ಣೆಯಲ್ಲಿ ಮತ್ತೆ ಪದೇ ಪದೇ ಕರಿದುಕೊಂಡು ತಿನ್ನುವುದರಿಂದ ಬಹಳ ಅಪಾಯಕಾರಿ ಆಗುತ್ತದೆ. ಇಂತಹ ಎಲ್ಲ ಸಮಸ್ಯೆಗಳಿಗೆ ಇದೇ ಪ್ರಧಾನವಾದ ಕಾರಣ. ತಡವಾಗಿ ಮಲಗುವುದು, ತಡವಾಗಿ ಎದ್ದೇಳುವುದು ಇಂತಹ ಎಲ್ಲ ಕೆಟ್ಟ ಜೀವನ ಪದ್ಧತಿಯಿಂದ ನಾವು ಹೊರಗಡೆ ಬರಬೇಕು.
gallbladder ತೆಗೆಯುವುದರಿಂದ ಜೀವನ ನರಕವಾಗುತ್ತದೆ. ಆದ್ದರಿಂದ ನಾವು ನಮ್ಮ ಜೀವನ ಪದ್ಧತಿ ಚೆನ್ನಾಗಿ ಇಟ್ಟುಕೊಳ್ಳುವುದನ್ನು ಮೊದಲು ಕಲಿಯಬೇಕು. ಆಗ ಮಾತ್ರ ನಮಗೆ ಯಾವುದೇ ಆರೋಗ್ಯದ ಸಮಸ್ಯೆಗಳು ನಮ್ಮ ಹತ್ತಿರ ಕೂಡ ಸುಳಿಯುವುದಕ್ಕೆ ಸಾಧ್ಯವಿಲ್ಲ.
Gallbladder Stones / ಪಿತ್ತಕೋಶದ ಕಲ್ಲು ಸಮಸ್ಯೆಗೆ ಮನೆಮದ್ದು
ಇದಕ್ಕೆ ಬಸಳೆ ಸೊಪ್ಪು ಎಂದು ಕರೆಯುತ್ತಾರೆ. ಇದಕ್ಕೆ ಕಾಡು ಬಸಳೆ ಎಂದು ಕರೆಯುತ್ತಾರೆ. ನಾಲ್ಕು ಕಾಡು ಬಸಳೆಯ ಎಲೆಗಳನ್ನು ಬೆಳಿಗ್ಗೆ ಮತ್ತು ಸಾಯಂಕಾಲ ಖಾಲಿ ಹೊಟ್ಟೆಯಲ್ಲಿ ಚೆನ್ನಾಗಿ ಅಗದು ಅಗದು ಸೇವನೆ ಮಾಡಬೇಕು.
*ಇಂಗಳಾರದ ಕಾಯಿಯಿಂದ ಮನೆ ಮದ್ದು:-
ಈ ಇಂಗಳಾರದ ಕಾಯಿ ನೋಡಲು ಬಿಲ್ವಪತ್ರೆಯ ಕಾಯಿಯ ತರ ಇರುತ್ತದೆ. ಅದರ ಒಳಗೆ ಮೃದುವಾಗಿರುವಂತಹ ಪೇಸ್ಟ್ ಇರುತ್ತದೆ. ಈ ಇಂಗಳಾರದ ಕಾಯಿಯ ಮೇಲಿನ ಸಿಪ್ಪೆಯನ್ನು ತೆಗೆದು ಅದರ ಪೇಸ್ಟ್ ನಿಂದ ಕಡಲೆಕಾಳಿನ ಗಾತ್ರದಷ್ಟು ಉಂಡೆಗಳನ್ನು ಮಾಡಿಕೊಳ್ಳಬೇಕು.
ಮೂರರಿಂದ ನಾಲ್ಕು ಉಂಡೆಗಳನ್ನು ಸೇವನೆ ಮಾಡಬೇಕು. ಜೊತೆಗೆ ಒಂದು ಗ್ಲಾಸ್ ಎಳೆ ನೀರಿನಲ್ಲಿ ಮುಟ್ಟಿದರೆ ಮುನಿ ಸೊಪ್ಪು. ಆ ಸೊಪ್ಪನ್ನು ಜಜ್ಜಿ ಅದರಿಂದ ತೆಗೆದಿರುವಂತಹ ರಸ ಎರಡರಿಂದ ಮೂರು ಚಮಚ ಎಳೆ ನೀರಿನಲ್ಲಿ ಸೇರಿಸಿಕೊಳ್ಳಬೇಕು.
ಈ ರೀತಿಯಾಗಿರುವಂತಹ ಈ ಮೂರು ಮನೆಮದ್ದುಗಳನ್ನು ಮಾಡಿಕೊಳ್ಳಬೇಕು. ಮೊದಲು ಎಲೆಯನ್ನು ತಿನ್ನಬೇಕು. ನಂತರ ಇಂಗಳಾರದ ಕಾಯಿ ಉಂಡೆಯನ್ನು ನುಂಗಬೇಕು.
ಕೊನೆಗೆ ಎಳೆನೀರು ಮತ್ತು ಮುಟ್ಟಿದರೆ ಮುನಿ ಸೊಪ್ಪಿನ ರಸವನ್ನು ಕುಡಿಯಬೇಕು. ಇವಿಷ್ಟು ಮಾಡಿದರೆ, ನಿಮ್ಮ Gallbladder Stones ಸಂಪೂರ್ಣವಾಗಿ ಕರಗುತ್ತಾ ಬರುತ್ತದೆ.
ನೂರಕ್ಕೆ ಒಂಬತ್ತರಷ್ಟು ಜನರಿಗೆ ಆಪರೇಷನ್ ಮಾಡಿಸಿಕೊಳ್ಳುವ ಅವಶ್ಯಕತೆ ಬರುವುದಿಲ್ಲ. ಯಾವ ಔಷಧಿಗಳು ತೆಗೆದುಕೊಳ್ಳುವ ಅವಶ್ಯಕತೆ ಬರುವುದಿಲ್ಲ. ಅದು ಮನೆಯಲ್ಲಿಯೇ ಕರಗುತ್ತದೆ. ಇದು ಕೇವಲ 21 ದಿವಸದಲ್ಲಿ ಕಡಿಮೆಯಾಗುತ್ತದೆ. ಕೆಲವರಿಗೆ ಒಂದು ವಾರದಲ್ಲಿ ಕರಗುತ್ತದೆ. ಕೆಲವರಿಗೆ 15 ದಿವಸದಲ್ಲಿ ಕರಗುತ್ತದೆ. ಕೆಲವೊಬ್ಬರಿಗೆ 21 ದಿವಸದಲ್ಲಿ ಕರಗೆ ಕರುಗುತ್ತದೆ.
21 ದಿನ ಈ ಪ್ರಯತ್ನವನ್ನು ಮಾಡಿ ನೋಡಬೇಕು. ಕರಗದೆ ಇದ್ದಾಗ, ಈ ಸಮಸ್ಯೆಗೆ ನಾವು ಹಲವಾರು ಕಷಾಯಗಳನ್ನು ತಯಾರಿಸಿದ್ದೇವೆ. ಶಿಲಾಭಗ್ನ ಕಷಾಯ, ತ್ರಿದೋಷ ನಿವಾರಕ ವಟಿ, ಶಿಲಾಭಗ್ನ ವಟಿ, ಇವುಗಳನ್ನು ತೆಗೆದುಕೊಂಡರೆ ನಿಮ್ಮ Gallbladder Stones ಮಂಜಿನಂತೆ ಕರಗುತ್ತದೆ.
ಅದನ್ನು ಬಿಟ್ಟು ನೀವು Gallbladder ಅನ್ನು ತೆಗೆಸಿದರೆ ಏನಾಗುತ್ತದೆ? ಕಾರಿನಲ್ಲಿ ರೆಗುಲೇಟರ್ ಅಂತ ಇರುತ್ತದೆ. ಆ ಕಾರಿನ engine ಗೆ ಉಷ್ಣ ಆಗದೇ ಇರುವ ರೀತಿಯಲ್ಲಿ ರಕ್ಷಣೆ ಮಾಡುತ್ತದೆ. ಅದೇ ರೀತಿ ನಮ್ಮ ಹೊಟ್ಟೆ ಅನ್ನುವಂತಹ engine ಗೆ regulator ಇದ್ದರೆ ಅದು Gallbladder ಅದನ್ನು ತೆಗೆದು ಬಿಡುತ್ತಾರೆ.
ತುಂಬಾ ಜನ ಡಾಕ್ಟರ್ ಗಳು Gallbladder use ಇಲ್ಲ ಎಂದು ಅದನ್ನು ತೆಗೆಯಲು ಹೇಳುತ್ತಾರೆ. ಅದು use ಇಲ್ಲದಿದ್ದರೆ ದೇವರು ಅದನ್ನ ಯಾಕೆ ನಮಗೆ ಕೊಟ್ಟಿರುತ್ತಾನೆ? ಗರ್ಭಕೋಶ ತೆಗೆಯುತ್ತಾರೆ, Gallbladder ತೆಗೆಯುತ್ತಾರೆ.
ಯಾವುದಾದರೂ ಸಮಸ್ಯೆಗೆ ಒಳಗಾಗಿರುವಂತಹ ಅಂಗಗಳನ್ನು ತೆಗೆಯುವುದೇ ಕೆಲವೊಬ್ಬರ ಕೆಲಸ ಆಗಿರುತ್ತದೆ. ಅದನ್ನು ತೆಗೆಯದೆ ಅದನ್ನು ರಕ್ಷಣೆ ಮಾಡಿ, ಆ stone ಅನ್ನು ಕರಗಿಸಿಕೊಳ್ಳಬೇಕು.
ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850
ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.
ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು.