ಮಳೆಗಾಲದ ಹಬ್ಬ ಮತ್ತು ನಮ್ಮ ನೆನಪುಗಳು
ಒಂದು ಅದ್ಭುತವಾಗಿರತಕ್ಕಂತ, ಆರೋಗ್ಯದ ಲಾಭಗಳನ್ನ ಹೊಂದಿರತಕ್ಕಂತ, ರುಚಿಕಟ್ಟಾಗಿರತಕ್ಕಂತ ಹೆಲ್ದಿ ಸ್ನಾಕ್ಸ್ನ ಕುರಿತಾಗಿ ಮಾಹಿತಿ ಕೊಡ್ತಿದ್ದೇವೆ. ಅದರ ಹೆಸರು ಕೇಳಿದ್ರೆನೆ ಬಾಯಲ್ಲಿ ನೀರು ಬರ್ತದೆ! ಅದನ್ನ ಸೇವನೆ ಮಾಡೋದ್ರಿಂದ ಆರೋಗ್ಯಕ್ಕೂ ಕೂಡ ಅದ್ಭುತವಾಗಿರತಕ್ಕಂತ ಲಾಭಗಳು ಸಿಗ್ತವೆ. ಅದೇನು ಅಂದ್ರೆ – ಹುರಿಗಡಲೆ! ಹುರಿದಿರತಕ್ಕಂತ ಕಡಲೆಬೀಜ!
ನಮಗೆ ನೆನಪಾಗುತ್ತೆ, ಚಿಕ್ಕ ವಯಸ್ಸಿನಲ್ಲಿ ನಮ್ಮ ಅಜ್ಜಿ ಅಮ್ಮ ಇದನ್ನೆಲ್ಲ ನಮಗೆ ಕೊಡ್ತಾ ಇದ್ರು. ಮಳೆಗಾಲದಲ್ಲಂತೂ ( Hurigadale in kannada ) ಈ ಹುರಿಗಡ್ಲೆಯನ್ನ ತಿನ್ನೋದೇ ಒಂದು ಹಬ್ಬ, ಒಂದು ಹರುಷ, ಒಂದು ಸಂತೋಷ! ಆಗ ಏನೇ ಸ್ನಾಕ್ಸ್ ಇದ್ರೂ ಕೂಡ ಬಹಳ ಆರೋಗ್ಯಕರವಾಗಿದ್ದು.
ಇಂದಿನ ಜಂಕ್ ಫುಡ್ ಗಳಿಂದ ಭಯಾನಕ ಪರಿಣಾಮ
ಅದಕ್ಕೆ ವಿರುದ್ಧವಾಗಿ, ಈಗಿನ ಜಂಕ್ ಫುಡ್ ಗಳಿಂದ ಮಕ್ಕಳಿಗೆ ಎಂತೆಂತ ಮರಣಾಂತಿಕ ರೋಗ ಬರ್ತಾ ಇದೆ. ಅಂದ್ರೆ, ಸಣ್ಣ ಮಕ್ಕಳಿಗೆ ಕೂಡ ಬಿಪಿ (ಬ್ಲಡ್ ಪ್ರೆಷರ್), ಶುಗರ್ (ಡಯಾಬಿಟಿಸ್), ಕ್ಯಾನ್ಸರ್, ಕಿಡ್ನಿ ಪ್ರಾಬ್ಲಮ್, ಹಾರ್ಟ್ ಪ್ರಾಬ್ಲಮ್ – ಇವೆಲ್ಲ ಬರ್ತಾ ಇತ್ತು. ಆಗಿನ ಸ್ನಾಕ್ಸ್ ಹೆಂಗಿದ್ದು ಅಂದ್ರೆ? ಹುರಿಗಡ್ಲೆಯಲ್ಲಿ ಈ ರೋಗವನ್ನ ನಿವಾರಣೆ ಮಾಡತಕಂತ ಶಕ್ತಿ ಇದೆ! ಈಗಿನ ಸ್ನಾಕ್ಸ್ ಅಲ್ಲಿ ಇಂತ ಭಯಾನಕ ರೋಗಗಳನ್ನ ತರತಕಂತ ಕೆಟ್ಟ ವ್ಯವಸ್ಥೆ ಇದೆ.

ಪಾಯಿಂಟ್ ಮೇಲೆ ಕ್ಲೀಕ್ ಮಾಡಿ ಓದಿ
ಹುರಿಗಡಲೆಯಲ್ಲಿ ಯಾವ ಪೋಷಕಾಂಶಗಳಿವೆ? ( Hurigadale in kannada )
- ಫೈಬರ್ನ ಅಂಶ ಹೆಚ್ಚಾಗಿ ನಾವು ಕಡಲೆಯಲ್ಲಿ ಕಾಣಬಹುದು! ಹುರಿದರು ಕೂಡ ಫೈಬರ್ ಉಳಿತದೆ. ಇದರಲ್ಲಿ ಅಷ್ಟು ಅದ್ಭುತವಾಗಿರತಕಂತ ಆಹಾರ ಇದು! ಆದರೆ ಗಮನಿಸಬೇಕಾದ ಅತಿ ಮುಖ್ಯ ಅಂಶ: ಇದನ್ನ ಸಿಪ್ಪೆ ತೆಗೆದು ತಿನ್ನೋದ್ರಿಂದ ಏನು ಲಾಭ ಇಲ್ಲ! ಕಡಲೆಯನ್ನ ಹುರಿದು ಅದನ್ನ ಸಿಪ್ಪೆ ತೆಗಿಬಾರದು! ಹಾಗೆ ತಿನ್ನೋದ್ರಿಂದ ಲಾಭ ಇದೆ ಹೊರತು, ಸಿಪ್ಪೆ ತೆಗೆದರೆ ಲಾಭ ಅರ್ಧಕ್ಕರ್ಧ ಕಡಿಮೆ ಆಗ್ತದೆ!
- ಹುರಿಗಡಲೆ ಸೇವನೆ ಮಾಡೋದ್ರಿಂದ ಇದರಲ್ಲಿ ಇನ್ನೂ ಏನೇನೆಲ್ಲ ಪೋಷಕಾಂಶಗಳು ಸಿಗ್ತವೆ?
- ಪ್ರೋಟೀನ್ ಅಂಶ ಅತ್ಯಧಿಕವಾಗಿ ಸಿಗ್ತದೆ.
- ಕಾರ್ಬೋಹೈಡ್ರೇಟ್ ಅಂಶ ಸಿಗುತ್ತದೆ (ಹೌದು, ಹೆಲ್ದಿ ಕಾರ್ಬೋಹೈಡ್ರೇಟ್ ಅಂಶ!).
- ಫೈಬರ್ನ ಅಂಶ (ಮತ್ತೊಮ್ಮೆ ಒತ್ತಿ ಹೇಳಬೇಕಾದದ್ದು).
- ಕ್ಯಾಲ್ಸಿಯಂ ಅಂಶ.
- ಐರನ್ ಅಂಶ (ಇದು ಬಹಳ ಮುಖ್ಯ!).
- ಪೊಟ್ಯಾಶಿಯಂ.
- ಜಿಂಕ್ (ಸತು).
- ರೈಬೋಫ್ಲೋವಿನ್ (ವಿಟಮಿನ್ B2).
- ಮತ್ತು ಅತ್ಯಂತ ಮುಖ್ಯವಾಗಿ, ಮೈಕ್ರೋ ನ್ಯೂಟ್ರಿಯೆಂಟ್ಸ್ ಗಳು ಮೈಕ್ರೋ ನ್ಯೂಟ್ರಿಯೆಂಟ್ಸ್ ಗಳು ಇದರಲ್ಲಿ ಅತ್ಯಧಿಕವಾಗಿ ನಮಗೆ ಸಿಗ್ತವೆ!
ಹೀಗೆಲ್ಲ ಇಷ್ಟೆಲ್ಲ ಪೋಷಕಾಂಶಗಳು ಇರೋದ್ರಿಂದ ಇದು ಯಾವ ಯಾವ ರೋಗಗಳನ್ನ ತಡೆಗಟ್ಟುತ್ತೆ? ಯಾವಯಾವ ರೋಗಗಳನ್ನ ನಮ್ಮ ಶರೀರದಿಂದ ಇದು ಹೊರಹಾಕುತ್ತೆ?
ಹುರಿಗಡಲೆಯ ಅದ್ಭುತ ಆರೋಗ್ಯ ಲಾಭಗಳು: ( Hurigadale in kannada )
- ವೇಟ್ ಲಾಸ್ (ತೂಕ ಕಳೆತ): ಇದು ನಮ್ಮ ವೇಟ್ ಲಾಸ್ ಮಾಡತಕಂತ ಒಳ್ಳೆಯ ಔಷಧಿ! ಆಹಾರದಲ್ಲಿ ಬೆಳಗ್ಗೆ ಒಂದು 50 ರಿಂದ 60 ಗ್ರಾಂ ನಷ್ಟು ಹುರಿಗಡ್ಲೆಯನ್ನ ಸೇವನೆ ಮಾಡೋದ್ರಿಂದ ವೇಟ್ ಲಾಸ್ ಆಗುತ್ತೆ!
- ಬಿಪಿ (ಬ್ಲಡ್ ಪ್ರೆಷರ್) ಕಂಟ್ರೋಲ್: ಹಾಗೇನೇ ಇದರಿಂದ ನಮ್ಮಲ್ಲಿ ಬಿಪಿ ಸಂಪೂರ್ಣವಾಗಿ ಕಂಟ್ರೋಲ್ಗೆ ಬರ್ತದೆ! ಬ್ಲಡ್ ಪ್ರೆಷರ್ ಅಧಿಕ ರಕ್ತದ ಒತ್ತಡ ಅದ್ಭುತವಾಗಿ ಇದರಿಂದ ಕಡಿಮೆ ಆಗುತ್ತೆ! ಈ ಕಡಲೆಯನ್ನ ಬೆಲ್ಲದ ಜೊತೆಗೆ ಸೇವನೆ ಮಾಡೋದ್ರಿಂದ ಬಿಪಿನು ಕೂಡ ಕಡಿಮೆ ಆಗುತ್ತೆ!
- ಐರನ್ನ ಕೊರತೆ & ರಕ್ತಹೀನತೆ ದೂರ: ಐರನ್ನ ಕೊರತೆ ರಕ್ತಹೀನತೆಯ ಕೊರತೆ ದೂರ ಆಗುತ್ತೆ! ಇದರಿಂದ ಅತ್ಯಧಿಕ ಮಾತ್ರೆಯಲ್ಲಿ ಐರನ್ ಸಿಗುತ್ತದೆ.
- ಶಕ್ತಿ ವೃದ್ಧಿ & ಆಯಾಸ ದೂರ: ಎಲೆಕ್ಟ್ರೋಲೈಟ್ಸ್ ಗಳು ಕ್ರಿಯಾಶೀಲವಾಗೋದ್ರಿಂದ ಶರೀರದ ಸುಸ್ತು ನಿಶಕ್ತಿ ಸಂಪೂರ್ಣವಾಗಿರತಕ್ಕಂತ! ಆ ಒಂದು ಆಯಾಸ ದೂರ ಆಗುತ್ತೆ! ಕ್ರಿಯಾಶೀಲವಾಗಿ ನಾವು ಪುಟ್ಟಿದೆ ಹೇಳಬಹುದು! ಬೆಳಗ್ಗೆ ನಮ್ಮ ಜೀವನವನ್ನ ಉತ್ಸಾಹಬರಿತವಾಗಿ ಜೀವಿಸಬಹುದು ಸಾಯಂಕಾಲದವರೆಗೂ! ಹಾಗಾಗಿ ಜೀವನದಲ್ಲಿ ಉತ್ಸಾಹ ಮತ್ತೆ ಹುರುಪು ಶಕ್ತಿ ಇದ್ದರೆನೆ ಜೀವನ! (ನಿರುತ್ಸಾಹದ ಜೀವನವೆಂದರೆ ಸಾವಿನಂತೆ!). ಈ ಚೈತನ್ಯ ಬೇಕಲ್ಲ!
- ಜೀರ್ಣಾಂಗ ವ್ಯವಸ್ಥೆ ಸುಧಾರಣೆ: ಹುರಿಗಡ್ಲೆ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆ ಕ್ರಿಯಾಶೀಲವಾಗುತ್ತೆ! ಡೈಜೆಸ್ಟಿವ್ ಸಿಸ್ಟಂ ಕ್ರಿಯಾಶೀಲವಾಗಿ ಗ್ಯಾಸ್ಟ್ರಿಕ್ ಆಸಿಡಿಟಿ, ಮಲಬದ್ಧತೆಯಿಂದ ನಮ್ಮ ಶರೀರ ರಕ್ಷಣೆಯನ್ನ ಪಡೆಯುತ್ತದೆ! ಇಟ್ ಇಸ್ ವೆರಿ ಈಸಿ ಟು ಡೈಜೆಸ್ಟ್! ಜೀರ್ಣ ಮಾಡಿಕೊಳ್ಳಿಕ್ಕೆ ಬಹಳ ಇದು ಈಸಿಯಾಗಿ! ಯಾಕೆಂದ್ರೆ ಹುರಿದಿರ್ತೇವಲ್ಲ! ಬಹಳ ಬೇಗ ಜೀರ್ಣ ಆಗುತ್ತೆ!

- ಮೆದುಳಿನ ಶಕ್ತಿ & ಮಾನಸಿಕ ಆರೋಗ್ಯ: ಇದು ಬಹಳ ಮುಖ್ಯವಾಗಿ ನಮ್ಮ ಮೆದುಳನ್ನ ಚುರುಕುಗೊಳಿಸತಕಂತ ಆಹಾರ ಇದು! ಐಕ್ಯು (IQ), ವಿಕ್ಯು (VQ), ಎಸ್ಕ್ಯು (SQ) ಲೆವೆಲ್ ಅನ್ನ ಕ್ರಿಯಾಶೀಲಗೊಳಿಸಿ! ಮಕ್ಕಳನ್ನ ಬಹಳ ಚೆನ್ನಾಗಿ ಕ್ರಿಯಾಶೀಲವಾಗಿ ಏಕಾಗ್ರ ಶಕ್ತಿಯಿಂದ ಜ್ಞಾಪಕ ಶಕ್ತಿಯಿಂದ ಮಾಡುತ್ತದೆ. ಮೆದುಳಿನ ಎಲ್ಲ ವಿಕಾರಗಳಿಂದ ಸಂರಕ್ಷಣೆ ಮಾಡುತ್ತೆ! ಜ್ಞಾಪಕ ಶಕ್ತಿಯನ್ನ, ಏಕಾಗ್ರತೆ ಶಕ್ತಿಯನ್ನ ವೃದ್ಧಿ ಮಾಡಿ ಮೆದುಳಿನ ವಿಕಾರಗಳನ್ನ ದೂರ ಮಾಡತಕ್ಕಂತ ಅದ್ಭುತ ಆಹಾರ! ಹುರಿಗಡಲೆಯ ಸೇವನೆ ಮಾಡೋದ್ರಿಂದ ನರನಾಡಿಗಳಲ್ಲಿ ಸ್ಟ್ರೆಂತ್ ಹೆಚ್ಚಿಗೆ ಆಗುತ್ತೆ! ನರದೌರ್ಬಲ್ಯತೆ ಕಡಿಮೆ ಆಗುತ್ತೆ! ಮಾನಸಿಕ ವಿಕಾರಗಳು ದೂರ ಆಗ್ತವೆ! ಯಾಕಂದ್ರೆ ಮನುಷ್ಯನಿಗೆ ಜಾಸ್ತಿ ಡಿಪ್ರೆಶನ್ಗೆ ಒಳಗಾದಾಗ ಉತ್ಸಾಹ ಹುರುಪು ತುಂಬುತಕಂತ ಕೆಲಸವನ್ನದು ಹುರಿಗಡ್ಲೆ ಮಾಡುತ್ತೆ! ಮನಸ್ಸು ಮೃದುವಾಗಿ ಹದವಾಗುತ್ತೆ! ತಿನ್ನಕ್ಕೆ ರುಚಿ ಇರುತ್ತದೆ ಮನಸ್ಸಿಗೆ ಉಲ್ಲಾಸಕರವಾಗಿರತಕಂತ ವಾತಾವರಣವನ್ನ ಇದು ಸೃಷ್ಟಿ ಮಾಡುತ್ತೆ! ಉನ್ಮಾದದಿಂದ ಉಲ್ಲಾಸದ ಕಡೆಗೆ ಬರಬೇಕು ಅಂದ್ರೆ ಕಡಲೆ ತಿನ್ನೋದು! ಮೈಂಡ್ ಫ್ರೆಶ್ ಆಗಿರುತ್ತದೆ! ಯಾರ ಮೈಂಡ್ ಫ್ರೆಶ್ ಆಗಿರುತ್ತದೆ ಅವರ ಶರೀರ ಫ್ರೆಶ್ ಆಗಿರುತ್ತದೆ! ಯಾರ ಶರೀರ ಫ್ರೆಶ್ ಆಗಿರುತ್ತದೆ ಅವರ ಲೈಫ್ ಫ್ರೆಶ್ ಆಗಿರತ್ತದೆ! (ಸ್ನಾನ, ಮುಖ ತೊಳೆದಾಗ ಫ್ರೆಶ್ನೆಸ್ ಬರುವಂತೆ!). ಕಡಲೆ ಇಟ್ ಇಸ್ ಹೆಲ್ದಿ ಸ್ನಾಕ್ಸ್ ಅಂಡ್ ಫ್ರೆಶ್ನೆಸ್ ನ್ನ ಒದಗಿಸತಕಂತ!
- ಹೃದಯ ಆರೋಗ್ಯ: ಹುರಿಗಡಲೆ ಬೀಜವನ್ನ ಸೇವನೆ ಮಾಡುವದರಿಂದ ಹೃದಯದ ರಕ್ತನಾಳಗಳಲ್ಲಿ ಆಗಿರತಕ್ಕಂತ ಬ್ಲಾಕೇಜಸ್ಗಳು ಕಡಿಮೆ ಆಗ್ತಾ ಬರ್ತವೆ! ಹೃದಯಕ್ಕೆ ಶಕ್ತಿ ವೃದ್ಧಿಯಾಗುತ್ತೆ! ಹೃದಯದ ಪಂಪಿಂಗ್ ವ್ಯವಸ್ಥೆಯಲ್ಲಿ ನಿಷ್ಕ್ರಿಯತೆ ಉಂಟಾದಾಗ, ಹೃದಯ ವೀಕ್ ಆದಾಗ ಕಡಲೆ ಸೇವನೆ ಮಾಡಿ ನಿಯಮಿತವಾಗಿ ಆಯುರ್ವೇದಿಕ್ ಔಷಧಿಗಳನ್ನ ಕೂಡ ತೆಗೆದುಕೊಂಡರೆ ಹೃದಯದ ನಿಶಕ್ತಿ ದೂರ ಆಗುತ್ತೆ! ಸಿಪ್ಪೆಯಲ್ಲಿ… ಕೊಲೆಸ್ಟ್ರಾಲ್ ಟ್ರೈಗ್ಲಿಸರೈಡ್ನ್ನ ಕರಗಿಸತಕಂತ ಸತ್ವ ಅದರಲ್ಲಿ ಇರತ್ತದೆ! ಹಾರ್ಟ್ ಬ್ಲಾಕೇಜ್ ಆಗಿರುತ್ತದಲ್ಲ, ಆ ಬ್ಲಾಕೇಜ್ನ್ನ ನಿವಾರಣೆ ಮಾಡತಕಂತ ಶಕ್ತಿ ಕಡಲೆಯಲ್ಲಿ ಇರತ್ತದೆ!
- ಕೊಲೆಸ್ಟ್ರಾಲ್ & ಕೊಬ್ಬು ನಿಯಂತ್ರಣ: ಹುರಿಗಡಲೆ ಸೇವನೆ ಮಾಡೋದರಿಂದ ಶರೀರದಲ್ಲಿ ಆಗಿರತಕ್ಕಂತ ಆ ಒಂದು ಕೆಟ್ಟ ಕೊಬ್ಬಿನ ಅಂಶ… ಲಿಪಿಡ್ ಪ್ರೊಫೈಲ್, ಲಿವರ್ ಪ್ರೊಫೈಲ್ ಸರಿಯಾಗುತ್ತೆ! ಎಚ್ಡಿಎಲ್, ಎಲ್ಡಿಎಲ್, ವಿಎಲ್ಡಿಎಲ್… ಅವೆಲ್ಲ ಬ್ಯಾಲೆನ್ಸ್ ಆಗ್ತವೆ! ಕೊಲೆಸ್ಟ್ರಾಲ್, ಕೊಬ್ಬು, ಟ್ರೈಗ್ಲಿಸರೈಡ್ ಇವೆಲ್ಲವೂ ಕೂಡ ಬ್ಯಾಲೆನ್ಸ್ ಮಾಡ್ತಕ್ಕಂತ ಶಕ್ತಿ ಕಡಲೆಗಿದೆ!
- ಊತ ಕಡಿಮೆ (ಆಂಟಿ-ಇನ್ಫ್ಲಮೇಟರಿ): ಇದು ಆಂಟಿ ಇನ್ಫ್ಲಮೇಟರಿ ಗುಣವನ್ನು ಹೊಂದಿರೋದ್ರಿಂದ ಶರೀರದಲ್ಲಿ ಏನಾದರೂ ಊತ ಸಂಭವಿಸಿದರೆ ಅದನ್ನು ಕೂಡ ಸರಿಪಡಿಸುತ್ತೆ!
- ಎಲುಬು & ಸ್ನಾಯುಗಳ ಬಲ: ಕಡಲೆ ಸೇವನೆಯಿಂದಾಗಿ ನಮ್ಮ ಎಲುಬುಗಳು ಸ್ಟ್ರಾಂಗ್ ಆಗುತ್ತವೆ! ಬೋನ್ ಅಂಡ್ ಬೋನ್ ಮ್ಯಾರೋ ಕ್ರಿಯಾಶೀಲವಾಗುತ್ತೆ! ಹಾಗೆ ಕಡಲೆ ಸೇವನೆ ಮಾಡೋದರಿಂದಾಗಿ ಮಾಂಸ ಖಂಡಗಳ ಶಕ್ತಿ ವೃದ್ಧಿಯಾಗುತ್ತೆ! ಬಲಿಷ್ಠ ಆಗ್ತವೆ ಮಾಂಸ ಖಂಡಗಳು! (ಉಕ್ಕಿನಂತ, ಕಬ್ಬಿಣದಂತ ಮಾಂಸ ಖಂಡಗಳು ಬೇಕಂದ್ರೆ ಕಡಲೆ ತಿನ್ನದ!).
- ರೋಗ ಪ್ರತಿರೋಧಕ ಶಕ್ತಿ (ಇಮ್ಯೂನಿಟಿ): ಕಡಲೆ ಸೇವನೆಯಿಂದಾಗಿ ಶರೀರದ ರೋಗ ಪ್ರತಿರೋಧಕ ಶಕ್ತಿ ಕ್ರಿಯಾಶೀಲವಾಗುತ್ತೆ! ಇಮ್ಯೂನಿಟಿ ಪವರ್ ಸೇವನೆ ಮಾಡೋದ್ರಿಂದ ಇದು ವೃದ್ಧಿಯಾಗುತ್ತೆ! ಮಕ್ಕಳಲ್ಲಿ… ಪ್ರತಿರಕ್ಷಕ ವ್ಯವಸ್ಥೆ ಸ್ಟ್ರಾಂಗ್ ಆಗೋದ್ರಿಂದ ಅವರಿಗೆ ಪದೇ ಪದೇ ಈ ಕೆಮ್ಮು ಕಪ ಇಂತದಲ್ಲ ಎಲ್ಲ ಬರೋದು ನಿಲ್ಲುತ್ತೆ!
- ಚರ್ಮದ ಕಾಂತಿ: ಕಡಲೆ ಸೇವನೆ ಮಾಡುದ ರಿಂದಾಗಿ ಶರೀರದ ಚರ್ಮದ ಕಾಂತಿ ವೃದ್ಧಿಯಾಗುತ್ತೆ! ಶರೀರದಲ್ಲಿ ಚರ್ಮದ ಒಂದು ಸುಕ್ಕು, ಚರ್ಮದಲ್ಲಿ ಇರತಕ್ಕಂತ ಒಂದು ಆಯಿಲಿ ಸ್ಕಿನ್ನಿನ ಸಮಸ್ಯೆ ಇವೆಲ್ಲವುಗಳು ಕೂಡ ದೂರ ಆಗ್ತವೆ! ಚರ್ಮದ ಕಾಂತಿಗೂ ಕೂಡ ಶಕ್ತಿಯನ್ನ ಕೊಡುತ್ತದೆ. ಚರ್ಮದ ವ್ಯವಸ್ಥೆಯಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅದಕ್ಕೂ ಕೂಡ ನಿವಾರಣ ಒಂದು ಚಿಕಿತ್ಸೆಯಾಗಿ ಇದು ಕೆಲಸ ಮಾಡುತ್ತೆ!
ಹುರಿಗಡಲೆ ಸೇವನೆ: ಹೇಗೆ? ಎಷ್ಟು? ಯಾರಿಗೆ?
- ಎಷ್ಟು? ಬೆಳಗ್ಗೆ ಅದನ್ನ ಒಂದು 50ರಿಂದ 60 ಗ್ರಾಂ ನಷ್ಟು ಸೇವನೆ ಮಾಡಬಹುದು! 50ರಿಂದ 60 ಗ್ರಾಂ ಸೂಕ್ತ! ಜಾಸ್ತಿ ಸೇವನೆ ಮಾಡೋದ್ರಿಂದ, ಅತಿಯಾದ ಒಂದು ಸೇವನೆಯಿಂದ ಅಮೃತನು ಕೂಡ ವಿಷ ಆಗುತ್ತೆ!
- ಯಾರು ಸೇವನೆ ಮಾಡಬಾರದು? ಕಿಡ್ನಿ ಸಮಸ್ಯೆ ಇರೋರು ಸೇವನೆ ಮಾಡಬಾರದು! ಯಾಕೆಂದ್ರೆ ಇದರಲ್ಲಿ ಅತ್ಯಧಿಕವಾಗಿರತಕ್ಕಂತ ಪ್ರೋಟೀನ್ ಇರೋದ್ರಿಂದ! ಪ್ರೋಟೀನ್ ಹೆಚ್ಚಾಗಿರತಕ್ಕಂತ ಆಹಾರವನ್ನ ಕಿಡ್ನಿ ಸಮಸ್ಯೆ ಇರೋರು ಸೇವನೆ ಮಾಡೋದ್ರಿಂದ ಕ್ರಿಯಾಟಿನ್ ಜಾಸ್ತಿ ಆಗುತ್ತೆ!
- ಯಾರು ತಿನ್ನಬಹುದು? ಕಿಡ್ನಿ ಸಮಸ್ಯೆ ಇರುವರನ್ನ ಹೊರತುಪಡಿಸಿ ಬೇರೆ ಯಾರು ಬೇಕಾದರೂ ಹುರಿಗಡಲೆಯನ್ನ ಸೇವನೆ ಮಾಡಬಹುದು! ಮಕ್ಕಳ ಪುಟಾಣಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ! (ನಮ್ಮ ಉತ್ತರ ಕರ್ನಾಟಕದಲ್ಲಿ ಪುಟಾಣಿ ಮಕ್ಕಳಿಗೆ ಇದನ್ನ ಕೊಡ್ತಾರೆ!). ವೃದ್ದರವರೆಗೂ ಇದನ್ನ ಸೇವನೆ ಮಾಡಬಹುದು! ಆದರೆ ಮತ್ತೊಮ್ಮೆ: ಸಿಪ್ಪೆ ತೆಗಿಬಾರದು! ಸಿಪ್ಪೆ ತೆಗೆದೆ ನೀವು ಸೇವನೆ ಮಾಡೋದು ಬಹಳ ಒಳ್ಳೆಯದು!
ಹುರಿಗಡಲೆ ಸೇವನೆಯ ವಿಧಾನಗಳು:
- ಬೆಳಗ್ಗೆ ಬೆಲ್ಲದ ಜೊತೆಗೆ ಸೇವನೆ ಮಾಡಬಹುದು.
- ಊಟದ ಜೊತೆಗೆ ಹಾಗೆ ಸೇವನೆ ಮಾಡಬಹುದು.
- ಅಡುಗೆಯಲ್ಲಿ ಹಾಕಬಹುದು: ಚಿತ್ರನ ಮಾಡ್ತೀರಾ? ಪಲಾವ್ ಮಾಡ್ತೀರಾ? ಬೆಳಗ್ಗೆ ಉಪ್ಪಿಟ್ಟು ಮಾಡ್ತೀರಾ? ಅವಲಕ್ಕಿ ಮಾಡ್ತೀರಾ? ಅದರ ಜೊತೆಗೆ ಇದನ್ನ ಸೇವನೆ ಮಾಡಬಹುದು!
- ಸಿಂಪಲ್ ಆಗಿ ತಿನ್ನಲಿಕ್ಕೂ ಕೂಡ ಒಳ್ಳೆ ಸ್ವಾದವನ್ನ ಹೊಂದಿರತಕಂತ!

ಮುಕ್ತಾಯ ಮಾತುಗಳು:
ಆತ್ಮೀಯರೇ, ಇಷ್ಟೆಲ್ಲ ಪೋಷಕಾಂಶಗಳ ಆಗರವಾಗಿರತಕ್ಕಂತ, ಆರೋಗ್ಯದ ಲಾಭಗಳನ್ನು ಹೊಂದಿರತಕ್ಕಂತ ಕಡಲೆಯನ್ನ ತಾವು ಯಾಕೆ ಸೇವನೆ ಮಾಡಬಾರದು? ತಾವೆಲ್ಲರೂ ಸೇವನೆ ಮಾಡ್ತಾ ಆರೋಗ್ಯವಂತ ಜೀವನವನ್ನ ನಡೆಸಿ!
ನಮ್ಮ ಮಕ್ಕಳನ್ನು ಆಯುರ್ವೇದಮಯವಾಗಿ ಸಾಕಬೇಕು! ಆಯುರ್ವೇದ ವೃತ್ತಿಚರ್ಯ, ದಿನಚರ್ಯ, ಆಹಾರಚರ್ಯ ಅನುಸರಿಸಬೇಕು. ಕನಗುಣವಾಗಿ ಏನೇನೋ ಸ್ನಾಕ್ಸ್, ಚಾಕ್ಲೇಟ್, ಬ್ರೆಡ್, ಬಿಸ್ಕೆಟ್ ಕೊಟ್ಟು ಮಕ್ಕಳ ಆರೋಗ್ಯಕ್ಕೆ ನಾವೇ ಒಂದು ಮೋಸ ಮಾಡ್ತಾ ಇದೆ! ಮಕ್ಕಳ ಜೀವನವನ್ನ ನಾವೇ ಸರ್ವನಾಶ ಮಾಡ್ತಾ ಇದ್ದೇವೆ! ಅಂತದನ್ನ ಬಿಟ್ಟು ಇಂತದನ್ನ (ಹುರಿಗಡಲೆ) ಕೊಟ್ಟಾಗ ಮಕ್ಕಳಲ್ಲಿ ಅದ್ಭುತವಾಗಿರತಕಂತ ಆರೋಗ್ಯದ ಶಕ್ತಿ ವೃದ್ಧಿಯಾಗುತ್ತೆ!
ಈ ಮಾಹಿತಿ ಇಷ್ಟ ಆದ್ರೆ ತಮ್ಮ ಬಂಧು ಮಿತ್ರೊಂದಿಗೆ ಶೇರ್ ಮಾಡ್ಕೊಳ್ಳಿ! ಜೊತೆಗೆ Facebook ನಲ್ಲಿ ಪೇಜ್ ಇದೆ “ಆಯುರ್ವೇದ ಟಿಪ್ಸ್ ಇನ್ ಕನ್ನಡ” ಅಂತ, ಅಲ್ಲೂ ತಾವು ನಮ್ಮನ್ನ ಫಾಲೋ ಮಾಡಬಹುದು!
ಗುಣಭಾಗದ ಕಠಿಣ ಕಾಯಿಲೆಗಳಿಗೆ ಯೋಗ ಆಯುರ್ವೇದದಲ್ಲಿ ಪರಿಹಾರ ಇದೆ! ಕಂಡುಕೊಳ್ಳುವ ಪ್ರಯತ್ನವನ್ನ ಮಾಡಿದ್ರೆ ನೂರಾರು ವರ್ಷ ಆರೋಗ್ಯವಾಗಿ ಬದುಕಬಹುದು!
ತಮ್ಮೆಲ್ಲರಿಗೂ ಭಕ್ತಿಯ ಶರಣು, ಶರಣಾರ್ಥಿ!
ಓಂ ಶ್ರೀ ಗುರು ಬಸವಲಿಂಗ ನಮಃ! ಓಂ ನಮಃ ಶಿವಾಯ!
ಸಲಹೆ: ನಾವು ನುರಿತ ವೈದ್ಯರ ಹಾಗೂ ಯೋಗ ಗುರುಗಳ ಜ್ಞಾನ ಹಂಚುವ ಕಾಯಕ ಮಾಡುತ್ತಿದ್ದೇವೆ. ನಾವು ಹೇಳುವ ಮನೆಮದ್ದು ಹಾಗೂ ಔಷಧಿಗಳು ನಿಮ್ಮ ಹತ್ತಿರದ ವೈದ್ಯರ ಸಲಹೆ & ಸೂಚನೆ ಪಡೆದು ತೆಗೆದುಕೊಳ್ಳಿ.
ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ➤➤➤➤➤➤➤➤➤➤➤➤➤➤➤ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9980277973, 7337618850
Discover more from
Subscribe to get the latest posts sent to your email.
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ