ಸೀತಾಫಲದ ಅದ್ಭುತ ಗುಣಗಳು: ಪ್ರಕೃತಿಯ ವರದಾನ
“ಆಹಾರವೇ ಆರೋಗ್ಯಕ್ಕೆ ಮೂಲ ಶಕ್ತಿ” ಎಂಬ ಸತ್ಯವನ್ನು ಎತ್ತಿ ಹಿಡಿಯುವ ಪ್ರಕೃತಿಯ ಅಮೂಲ್ಯ ಉಡುಗೊರೆಗಳಲ್ಲಿ ಸೀತಾಫಲವೂ ಒಂದು. ಇಂಗ್ಲಿಷಿನಲ್ಲಿ ‘ಕಸ್ಟರ್ಡ್ ಆಪಲ್’ { Sitaphal Uses in Kannada } ಎಂದು ಪ್ರಸಿದ್ಧವಾದ ಈ ಹಣ್ಣು, ಅದ್ಭುತ ಪೋಷಕ ಸತ್ವಗಳಿಂದ ಸಮೃದ್ಧವಾಗಿದೆ. ಇದರ ಗುಣಧರ್ಮಗಳು ಮತ್ತು ಆರೋಗ್ಯ ಲಾಭಗಳು ಅಪಾರ. ವಿಟಮಿನ್ ಸಿ, ವಿಟಮಿನ್ ಬಿ, ಕ್ಯಾಲ್ಸಿಯಂ, ಫೈಬರ್ ಮುಂತಾದ ಪೋಷಕಾಂಶಗಳಿಂದ ತುಂಬಿದ ಈ ಹಣ್ಣು ನಮ್ಮ ದೇಹದ ಒಟ್ಟಾರೆ ಆರೋಗ್ಯವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಪಾಯಿಂಟ್ ಮೇಲೆ ಕ್ಲೀಕ್ ಮಾಡಿ ಓದಿ..!

ಸೀತಾಫಲದ ಪೋಷಕಾಂಶಗಳ ಸಂಪತ್ತು { Sitaphal Uses in Kannada }
✅ ವಿಟಮಿನ್ C:
- ದೇಹದ ರೋಗ ನಿರೋಧಕ ಶಕ್ತಿ (immunity) ಹೆಚ್ಚಿಸುತ್ತದೆ.
- ಚರ್ಮದ ಕಾಂತಿ, ಗ್ಲೋ ಹಾಗೂ ಎಲಾಸ್ಟಿಸಿಟಿಗಾಗಿ ಬಹುಪಾಲು ಸಹಾಯ ಮಾಡುತ್ತದೆ.
- ನರವ್ಯೂಹದ (nervous system) ಚಟುವಟಿಕೆಯನ್ನು ಬಲಗೊಳಿಸುತ್ತದೆ.
✅ ವಿಟಮಿನ್ B6:
- ಮೆದುಳಿನ ನ್ಯೂರೋ ಟ್ರಾನ್ಸ್ಮಿಟರ್‌ಗಳ ಸರಿಯಾದ ಕೆಲಸಕ್ಕೆ ಸಹಾಯ.
- ಒತ್ತಡ ಕಡಿಮೆಮಾಡುವಲ್ಲಿ, ಶಾಂತಿಯುತ ಚಿಂತನೆಗೆ ಸಹಾಯಕ.
- ಮನಃಶಕ್ತಿ ಮತ್ತು ನೆನಪಿನ ಶಕ್ತಿಗೆ ಪೂರಕ.
✅ ಕ್ಯಾಲ್ಸಿಯಂ:
- ಮೂಳೆಗಳು, ಹಲ್ಲುಗಳು ಮತ್ತು ಹೃದಯ ಶಕ್ತಿ ಹೆಚ್ಚಿಸಲು ಸಹಾಯಕ.
- ಸ್ನಾಯುಗಳ ಚಲನೆ ಮತ್ತು ಚುರುಕುಪತನಕ್ಕೆ ಸಹಕಾರಿ.
✅ ಫೈಬರ್ ಮತ್ತು ಪ್ರೀಬೈಟಿಕ್ಸ್:
- ಆಹಾರದ ಜೀರ್ಣಕ್ರಿಯೆಯಲ್ಲಿ ಮುಖ್ಯ ಪಾತ್ರ.
- ಆಂತರಿಕ ಶುದ್ಧೀಕರಣ (detoxification) ನೆಯ ಪ್ರಕ್ರಿಯೆಯಲ್ಲಿ ತ್ವರಿತ ಪರಿಣಾಮ.
ರೋಗ ಪ್ರತಿರೋಧಕ ಶಕ್ತಿ ದೂರ ಮಾಡುವ ಸೀತಾಫಲ
ಸೀತಾಫಲದ ಪ್ರಮುಖ ವಿಶೇಷತೆ ಅದರಲ್ಲಿ ಅಡಗಿರುವ ವಿಟಮಿನ್ ಸಿ ಯ ಅಂಶ. ವಿಟಮಿನ್ ಸಿ ಇಮ್ಯೂನಿಟಿ ಅನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ರೋಗ ಪ್ರತಿರೋಧಕ ಶಕ್ತಿಯನ್ನು ಕ್ರಿಯಾಶೀಲಗೊಳಿಸುವುದು ಇದರ ಮುಖ್ಯ ಕಾರ್ಯ. ಚರ್ಮದ ಆರೋಗ್ಯವನ್ನು ಕಾಪಾಡಿ, ಚರ್ಮದ ಕಾಂತಿಯನ್ನು ಹೆಚ್ಚಿಸುವಲ್ಲಿ ವಿಟಮಿನ್ ಸಿ ಯ ಕೊಡುಗೆ ಅಮೂಲ್ಯ. ಇಡೀ ನರಮಂಡಲವನ್ನು ಕ್ರಿಯಾಶೀಲಗೊಳಿಸುವ ಶಕ್ತಿ ಇದಕ್ಕಿದೆ. ನಮ್ಮ ದೇಹದಲ್ಲಿ ವಿಟಮಿನ್ ಸಿ ಯತೇಚ್ಛವಾಗಿ ಸಿಗುವ ಒಂದು ಹಣ್ಣೆಂದರೆ ಈ ಸೀತಾಫಲ.
ಮೆದುಳಿನ ಶಕ್ತಿಯನ್ನು ವೃದ್ಧಿಸುವ ದಿವ್ಯ ಔಷದಿ ಸೀತಾಫಲ { Sitaphal Uses in Kannada }
ಸೀತಾಫಲದಲ್ಲಿ ವಿಟಮಿನ್ ಬಿ ಸಂಕುಲವೂ ಹೇರಳವಾಗಿದೆ. ವಿಟಮಿನ್ ಬಿ ನಮ್ಮ ಮೆದುಳಿನ ಶಕ್ತಿಯನ್ನು ಕ್ರಿಯಾಶೀಲಗೊಳಿಸುತ್ತದೆ. ಮೆದುಳು ಇಡೀ ಬ್ರಹ್ಮಾಂಡದ ಜ್ಞಾನವನ್ನು ಅಡಗಿಸಿಕೊಂಡಿರುವ ಒಂದು ದಿವ್ಯ ಶಕ್ತಿ. ವಿಜ್ಞಾನಿಗಳ ಪ್ರಕಾರ, ಮನುಷ್ಯ ತನ್ನ ಮೆದುಳಿನ ಕೇವಲ 5 ರಿಂದ 10% ಭಾಗವನ್ನು ಮಾತ್ರ ಉಪಯೋಗಿಸಲು ಸಾಧ್ಯವಾಗಿದೆ. ಮೆದುಳನ್ನು ಪೂರ್ಣವಾಗಿ ಉಪಯೋಗಿಸಿದರೆ ಮನುಷ್ಯ ಏನೆಲ್ಲಾ ತಿಳಿದುಕೊಳ್ಳಬಹುದು ಎಂಬುದರ ಬಗೆಗೆ ಚಿಂತಿಸಬೇಕಾಗಿದೆ.

ಮೆದುಳಿನಲ್ಲಿ ಪ್ರತಿಕ್ಷಣ ಲಕ್ಷಾಂತರ ಕಾರ್ಯಗಳು ನಡೆಯುತ್ತಿರುತ್ತವೆ. ಇಡೀ ಶರೀರದ ಎಲ್ಲಾ ಸ್ವೈಚ್ಛಿಕ ಮತ್ತು ಅನೈಚ್ಛಿಕ ವ್ಯವಸ್ಥೆಗಳನ್ನು ನಿಯಂತ್ರಿಸುವುದು, ಕಾರ್ಯಯೋಜನೆಯನ್ನು ರೂಪಿಸುವುದು ಮೆದುಳಿನ ಕಾರ್ಯ. ಕೈ ಹಾಕುವುದು, ಕಣ್ಣು ಮಿಟುಕಿಸುವುದು, ನಡೆಯುವುದು, ಆಹಾರವನ್ನು ಜೀರ್ಣಿಸಿಕೊಳ್ಳುವುದು, ಹೃದಯ ಮತ್ತು ಮೂತ್ರಪಿಂಡಗಳ ಕಾರ್ಯ – ಇವೆಲ್ಲವೂ ಮೆದುಳಿನ ಸಹಾಯದಿಂದ ನಡೆಯುತ್ತವೆ. ಮೆದುಳಿನಲ್ಲಿ ಅಸಮತೋಲನ ಉಂಟಾದರೆ ಶರೀರದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ಇದು ಸೈಕೋಸೊಮಾಟಿಕ್ ಸಮಸ್ಯೆಗೆ ಕಾರಣವಾಗಬಹುದು. ನಮ್ಮ ಮೆದುಳನ್ನು ಚುರುಕುಗೊಳಿಸುವ ದಿವ್ಯ ಶಕ್ತಿಯನ್ನು ಸೀತಾಫಲ ಹೊಂದಿದೆ.
ಕರುಳಿನ ಆರೋಗ್ಯ ರಕ್ಷಣೆ ಮಾಡುವ ಸೀತಾಫಲ ಹಣ್ಣು { Sitaphal Uses in Kannada }
ಸೀತಾಫಲದಲ್ಲಿ ಯತೇಚ್ಛವಾಗಿ ಫೈಬರ್ ಅಂಶವಿದೆ. ಪ್ರೀಬಯೋಟಿಕ್ ಅಂಶಗಳು ಇದರಲ್ಲಿವೆ. ಇದು ನಮ್ಮ ಕರುಳಿನ ಆರೋಗ್ಯವನ್ನು ಚನ್ನಾಗಿಡುತ್ತದೆ. ಕರುಳಿನ ಆರೋಗ್ಯವು ಮನುಷ್ಯನಿಗೆ ಬಹಳ ಮುಖ್ಯ. ಕರುಳಿನ ಆರೋಗ್ಯ ಚೆನ್ನಾಗಿದ್ದರೆ, ಜೀವನದಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳಿಂದ ಬಳಲುವ ಅಗತ್ಯವಿರುವುದಿಲ್ಲ. ‘ಗಟ್ ಹೆಲ್ತ್’ ಎಂದರೆ ಕರುಳಿನ ಆರೋಗ್ಯ. ಸೀತಾಫಲದಲ್ಲಿರುವ ಪ್ರಿಬಯೋಟಿಕ್ ಮತ್ತು ಫೈಬರ್ ನಮ್ಮ ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಕ್ರಿಯಾಶೀಲಗೊಳಿಸುತ್ತದೆ. ಅವು ಕ್ರಿಯಾಶೀಲವಾದಾಗ, ಕರುಳಿನ ಪೆರಿಸ್ಟಾಲ್ಟಿಕ್ ಚಲನೆ ಸರಾಗವಾಗುತ್ತದೆ.
ಇದರಿಂದ ಅಜೀರ್ಣ ಮತ್ತು ಮಲಬದ್ಧತೆಯ ಸಮಸ್ಯೆಗಳು ಬರುವುದಿಲ್ಲ. ಅಜೀರ್ಣ ಮತ್ತು ಮಲಬದ್ಧತೆಗೆ ಇದು ವರದಾನವೇ ಸರಿ. ಸೀತಾಫಲವು ನಮ್ಮ ಗಟ್ ಹೆಲ್ತ್ ಅನ್ನು ಇಂಪ್ರೂವ್ ಮಾಡುತ್ತದೆ. ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಮಾಡುವುದರ ಜೊತೆಗೆ ಒಳ್ಳೆಯ ಬ್ಯಾಕ್ಟೀರಿಯಾಗಳ ಪೋಷಣೆ ಮಾಡುತ್ತದೆ. ಸೀತಾಫಲವು ನಮ್ಮ ಕರುಳಿನಲ್ಲಿರುವ ಲೋಳೆ ಪದರವನ್ನು (Mucus Layer) ಸತ್ವಶಾಲಿಯಾಗಿ ಮಾಡುತ್ತದೆ ಮತ್ತು ಪುನರ್ಜೀವನ ನೀಡುತ್ತದೆ.
ಹೈಪರ್ ಆಸಿಡಿಟಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಈ ಲೋಳೆ ಪದರ ಸುಟ್ಟುಹೋಗಿರುತ್ತದೆ. ಅದು ಸುಟ್ಟುಹೋದಾಗ, ಅಲ್ಲಿ ವಿಷಪದಾರ್ಥಗಳು (Toxins) ಶೇಖರಣೆಯಾಗುತ್ತವೆ. ಇದು ಮುಂದೆ ಅಲ್ಸರೇಟಿವ್ ಕೊಲೈಟಿಸ್ ಆಗುವ ಸಾಧ್ಯತೆ ಇದೆ. ಇದು ಯಕೃತ್ತಿನ ಕಾರ್ಯಕ್ರಮವನ್ನು ಹಾಳುಮಾಡಿ ಫ್ಯಾಟಿ ಲಿವರ್, ಯಕೃತ್ತಿನ ಸಿರೋಸಿಸ್, ಮೂತ್ರಪಿಂಡದ ಕಲ್ಲು, ಪಿತ್ತಕೋಶದ ಕಲ್ಲು ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು.
ಕರುಳಿನಲ್ಲಿ ವಿಷಪದಾರ್ಥಗಳು ಹೆಚ್ಚಾದಾಗ, ಆ ವಿಷಕಾರಿ ಅಂಶ (ಆಮ) ರಕ್ತಕ್ಕೆ ಸೇರಿಕೊಳ್ಳುತ್ತದೆ. ಈ ರಕ್ತ ಹೃದಯದಲ್ಲಿ ಅಡಚಣೆ ಉಂಟುಮಾಡಿದರೆ ಹೃದಯ ಅಡಚಣೆ, ಮೂತ್ರಪಿಂಡದಲ್ಲಿ ಅಡಚಣೆ ಉಂಟುಮಾಡಿದರೆ ಮೂತ್ರಪಿಂಡದ ಕಲ್ಲು, ಯಕೃತ್ತಿನಲ್ಲಿ ಅಡಚಣೆ ಉಂಟುಮಾಡಿದರೆ ಫ್ಯಾಟಿ ಲಿವರ್ ಅಥವಾ ಯಕೃತ್ತಿನ ಸಿರೋಸಿಸ್, ಕರುಳಿನಲ್ಲಿ ಅಡಚಣೆ ಉಂಟುಮಾಡಿದರೆ ಅಲ್ಸರೇಟಿವ್ ಕೊಲೈಟಿಸ್, ಸಿರಗಳಲ್ಲಿ ಅಡಚಣೆ ಉಂಟುಮಾಡಿದರೆ ವೆರಿಕೋಸ್ ವೇನ್, ಮೆದುಳಿನಲ್ಲಿ ಅಡಚಣೆ ಉಂಟುಮಾಡಿದರೆ ಬ್ರೈನ್ ಹೆಮರೇಜ್ ಆಗುವ ಸಾಧ್ಯತೆ ಇದೆ.
ಈ ಆಮದ ಉತ್ಪತ್ತಿಯ ಮೂಲ ಕಾರಣ ನಮ್ಮ ಕರುಳಿನ ಸಮಸ್ಯೆ. ಈ ಕರುಳಿನ ಸಮಸ್ಯೆಗಳನ್ನು ಸರಿಪಡಿಸಿ ಕರುಳನ್ನು ಚುರುಕುಗೊಳಿಸುವ ಶಕ್ತಿ ಸೀತಾಫಲಕ್ಕಿದೆ. ಪರಿಪೂರ್ಣ ಆರೋಗ್ಯವನ್ನು ನೀಡುವ ಸೀತಾಫಲವನ್ನು ನಾವು ಕರುಳಿನ ಆರೋಗ್ಯದ ರಕ್ಷಕ ಎಂದು ಕರೆಯಬಹುದು.
ಮೂಳೆಗಳಿಗೆ ಹಾಗೂ ನರಮಂಡಲಕ್ಕೆ ಬಲ ಕೊಡುವ ಈ ಸೀತಾಫಲ ಹಣ್ಣು { Sitaphal Uses in Kannada }
ಸೀತಾಫಲದ ಸೇವನೆಯಿಂದ ಇದರಲ್ಲಿರುವ ಕ್ಯಾಲ್ಸಿಯಂ ನಮ್ಮ ಮೂಳೆಗಳನ್ನು ಬಲವಾಗಿ ಮಾಡುತ್ತದೆ. ಕ್ಯಾಲ್ಸಿಯಂ ನರಮಂಡಲಕ್ಕೆ ಶಕ್ತಿ ತುಂಬುತ್ತದೆ. ನಮ್ಮ ಸ್ನಾಯುಗಳ ಸಂಕೋಚನ ಮತ್ತು ಶಿಥಿಲೀಕರಣವನ್ನು ಕ್ರಿಯಾಶೀಲವಾಗಿರಿಸಲು ಕ್ಯಾಲ್ಸಿಯಂ ಅವಶ್ಯಕ. ನಮ್ಮ ಹೃದಯವು ಸಂಕೋಚನ ಮತ್ತು ಶಿಥಿಲೀಕರಣದ ಮೂಲಕ ಬಡಿಯುತ್ತಿರುತ್ತದೆ. ಸೀತಾಫಲ ತಿನ್ನುವುದರಿಂದ ಹೃದಯದ ಬಡಿತ ಚೆನ್ನಾಗಿರುತ್ತದೆ. ಆಯುರ್ವೇದದಲ್ಲಿ ಇದನ್ನು ‘ವೃದ್ಯ’ ಎಂದು ಕರೆಯಲಾಗಿದೆ. ವೃದ್ಯ ಎಂದರೆ ಹೃದಯಕ್ಕೆ ಶಕ್ತಿಯನ್ನು ತುಂಬುವ ಶಕ್ತಿ.

ಮನಸ್ಸಿನ ಶಾಂತಿಯ ಉತ್ಸವ
ಸೀತಾಫಲವು ನಮ್ಮ ಹೃದಯದ ಶಕ್ತಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಮನಸ್ಸನ್ನು ಪ್ರಸನ್ನಗೊಳಿಸುತ್ತದೆ. ಮನಸ್ಸಿನ ಒತ್ತಡಗಳು ನಮ್ಮ ದೇಹದ ಮೇಲೆ ಅಗಾಧ ಪ್ರಭಾವ ಬೀರುತ್ತವೆ. ಮಾನಸಿಕ ಒತ್ತಡದಿಂದ ಮಧುಮೇಹ, ರಕ್ತದೊತ್ತಡ, ಹೃದಯ ಸಮಸ್ಯೆಗಳು, ಮೂತ್ರಪಿಂಡದ ಸಮಸ್ಯೆಗಳು ಮತ್ತು ಶ್ವಾಸಕೋಶದ ವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ. ಕೋಪ, ಒತ್ತಡದಿಂದ ನಮ್ಮ ಶರೀರದಲ್ಲಿರುವ ಅನೈಚ್ಛಿಕ ಕಾರ್ಯಗಳು ಹಾಳಾಗುತ್ತವೆ. ಸಿಟ್ಟು ಮತ್ತು ಕೋಪವನ್ನು ಕಡಿಮೆ ಮಾಡಿ ಮನಸ್ಸನ್ನು ಪ್ರಸನ್ನಗೊಳಿಸುವ ಶಕ್ತಿ ಸೀತಾಫಲದಲ್ಲಿದೆ. ಸೀತಾಫಲವನ್ನು ತಿಂದರೆ ನಮ್ಮ ಮನಸ್ಸು ಪ್ರಸನ್ನವಾಗುತ್ತದೆ. ಕರುಳು ಚೆನ್ನಾಗಿದ್ದರೆ, ಜೀರ್ಣಕ್ರಿಯೆಯ ವ್ಯವಸ್ಥೆ ಚೆನ್ನಾಗಿದ್ದರೆ, ನಮ್ಮ ಮನಸ್ಸು ಸ್ವಾಭಾವಿಕವಾಗಿ ಪ್ರಸನ್ನವಾಗಿರುತ್ತದೆ. ಕರುಳಿಗೆ ಒಳ್ಳೆಯದು, ಮನಸ್ಸಿಗೆ ಒಳ್ಳೆಯದು, ಹೃದಯಕ್ಕೆ ಒಳ್ಳೆಯದು.
ಸೀತಾಫಲದ ಆಯುರ್ವೇದೀಯ ಗುಣಧರ್ಮ { Sitaphal Uses in Kannada }
ಸೀತಾಫಲವು ಶೀತವೀರ್ಯ ಮತ್ತು ಸ್ನಿಗ್ಧ ಗುಣಧರ್ಮವನ್ನು ಹೊಂದಿದೆ. ಇದು ಮಧುರ ರಸ ಮತ್ತು ಮಧುರ ವಿಪಾಕವನ್ನು ಹೊಂದಿರುವುದರಿಂದ, ಪಿತ್ತ ಮತ್ತು ವಾತ ಪ್ರಕೃತಿಯವರು ಇದನ್ನು ತಿನ್ನಬಹುದು. ಪಿತ್ತ ಪ್ರಕೃತಿಯವರಿಗೆ ಇದರ ಮಧುರ ವೀರ್ಯ ಮತ್ತು ಮಧುರ ವಿಪಾಕ ಗುಣಧರ್ಮವು ಉಪಯುಕ್ತ. ವಾತ ಪ್ರಕೃತಿಯವರಿಗೆ ಇದರ ಸ್ನಿಗ್ಧ ಗುಣಧರ್ಮವು ಉಪಯುಕ್ತ. ಕಫ ಪ್ರಕೃತಿಯವರು ಇದನ್ನು ಸೇವನೆ ಮಾಡುವುದು ಉಚಿತವಲ್ಲ. ಆದರೆ, ಬೇಸಿಗೆ ಕಾಲದಲ್ಲಿ ಮಧ್ಯಾಹ್ನದ ಸಮಯದಲ್ಲಿ ಹಿತಮಿತವಾಗಿ ಸೇವನೆ ಮಾಡಬಹುದು. ಕಫ ಪ್ರಕೋಪ ಹೆಚ್ಚಾಗಿದ್ದರೆ ಸೇವನೆ ಮಾಡಬಾರದು.
ಸೀತಾಫಲವು ಶೀತವೀರ್ಯ ಗುಣಧರ್ಮವನ್ನು ಹೊಂದಿರುವುದರಿಂದ, ಕೈ ಉರಿ, ಕಾಲು ಉರಿ, ಕಣ್ಣು ಉರಿ, ಮೂತ್ರದ ಉರಿ, ತಲೆ ಕೂದಲು ಹೊಟ್ಟು, ನೆರೆಕೂದಲು ಸಮಸ್ಯೆ ಮುಂತಾದ ಪಿತ್ತ ವಿಕಾರದಿಂದ ಉಂಟಾಗುವ ಸಮಸ್ಯೆಗಳಿಂದ ಪಾರಾಗಲು ಉಪಯುಕ್ತ. ವಾತಜನ್ಯವಾಗಿ ಬರುವ ಮೂಳೆ ಮತ್ತು ಮಜ್ಜೆಯ ನೋವುಗಳನ್ನು ಕಡಿಮೆ ಮಾಡಲು ಸಹಾಯಕಾರಿ.
ಸೇವನೆಯ ವಿಧಾನ ಮತ್ತು ಮುನ್ನೆಚ್ಚರಿಕೆಗಳು
ಒಬ್ಬ ವಯಸ್ಕನು ದಿನಕ್ಕೆ ಒಂದು ಸೀತಾಫಲವನ್ನು ತಿನ್ನಬಹುದು. ಹೆಚ್ಚಿನ ಪ್ರಮಾಣದಲ್ಲಿ ಎರಡು ಹಣ್ಣುಗಳವರೆಗೆ ತಿನ್ನಬಹುದು. ಮಕ್ಕಳಿಗೆ ಅರ್ಧ ಹಣ್ಣು ಕೊಡಬಹುದು. ಮಕ್ಕಳಲ್ಲಿ ಕಫದ ಅಲರ್ಜಿ ಇದ್ದರೆ ಕೊಡಬಾರದು.
ಸೀತಾಫಲದ ಬೀಜವೂ ಉಪಯೋಗಕಾರಿಯಾಗಿದೆ. ಆದರೆ, ಗರ್ಭಿಣಿ ಸ್ತ್ರೀಯರು ಇದರ ಬೀಜ ಹೊಟ್ಟೆಯೊಳಗೆ ಹೋಗುವಂತೆ ನೋಡಿಕೊಳ್ಳಬೇಕು. ಬೀಜ ಹೊಟ್ಟೆಯೊಳಗೆ ಹೋದರೆ ಗರ್ಭಪಾತದ ಅಪಾಯ ಇರುತ್ತದೆ. ಬೀಜದ ಪುಡಿಯನ್ನು ತಲೆಗೆ ಹಚ್ಚಿ ಒಂದು ಅಥವಾ ಎರಡು ಗಂಟೆಯ ನಂತರ ತಲೆ ತೊಳೆಯಬಹುದು. ಆದರೆ, ಈ ಬೀಜ ವಿಷಕಾರಿಯಾಗಿರುವುದರಿಂದ, ಅದರ ಅಂಶಗಳು ಕಣ್ಣಿಗೆ ಹೋಗದಂತೆ ಜಾಗರೂಕರಾಗಿರಬೇಕು. ಕಣ್ಣಿಗೆ ತೊಂದರೆಯಾಗುವ ಸಾಧ್ಯತೆ ಇದೆ. ತಲೆಯನ್ನು ಕೆಳಗೆ ಮಾಡಿ ನೀರು ಹಾಕಿ ತೊಳೆಯಬೇಕು.
ಮುಕ್ತಾಯ / { Sitaphal Uses in Kannada }
ಸೀತಾಫಲವು ಪ್ರಕೃತಿಯ ಅಮೂಲ್ಯ ವರದಾನ. ಇದರ ನಿಯಮಿತ ಸೇವನೆಯಿಂದ ರೋಗ ಪ್ರತಿರೋಧಕ ಶಕ್ತಿ, ಮೆದುಳಿನ ಶಕ್ತಿ, ಕರುಳಿನ ಆರೋಗ್ಯ, ಹೃದಯ ಆರೋಗ್ಯ ಮತ್ತು ಮಾನಸಿಕ ಶಾಂತಿ ಸಿಗುವುದು ಖಚಿತ. ಆಹಾರವೇ ಮೊದಲ ಔಷಧಿ ಎಂಬ ನಂಬಿಕೆಯನ್ನು ಜೀವನದಲ್ಲಿ ಅಳವಡಿಸಿಕೊಂಡು, ಸೀತಾಫಲದಂತಹ ಪ್ರಕೃತಿ ಉತ್ಪನ್ನಗಳನ್ನು ಆರೋಗ್ಯಕರ ಜೀವನಕ್ಕಾಗಿ ಬಳಸಿಕೊಳ್ಳಬೇಕು.
ನಮ್ಮ ಪೂರ್ವಜರು ಶತಮಾನಗಳ ಕಾಲ ಆರೋಗ್ಯವಾಗಿ ಬದುಕಿದ್ದರು. ಅವರು ತಿಂದ ಹಣ್ಣುಗಳು, ತರಕಾರಿಗಳು, ಯೋಗ ಮತ್ತು ಪ್ರಾಣಾಯಾಮವೇ ಅವರ ಆರೋಗ್ಯ ರಹಸ್ಯ. ಆಧುನಿಕ ಜೀವನಶೈಲಿಯಲ್ಲಿ ನಾವು ಎಷ್ಟೋ ಔಷಧಿಗಳಿಗೆ, ಆಸ್ಪತ್ರೆಗಳಿಗೆ ಅವಲಂಬಿತರಾಗುತ್ತಿದ್ದೇವೆ. ಇದರಿಂದ ನಮ್ಮ ಆರೋಗ್ಯ ಹದಗೆಡುತ್ತಿದೆ. ನಮ್ಮ ಪುರಾತನರು ಬದುಕಿದ ಮಾರ್ಗದಲ್ಲಿ ನಾವು ಬದುಕಿದರೆ ಮಾತ್ರ ಸುಸ್ಥಿರ ಮತ್ತು ಆರೋಗ್ಯಕರ ಜೀವನ ಸಾಧ್ಯ. ಹಣ್ಣು, ತರಕಾರಿ, ಯೋಗ, ಪ್ರಾಣಾಯಾಮವನ್ನು ಜೀವನದಲ್ಲಿ ಅಳವಡಿಸಿಕೊಂಡು, ನೂರು ವರ್ಷಗಳ ಕಾಲ ಆರೋಗ್ಯವಾಗಿ ಬದುಕೋಣ.
✅ ಸಾರಾಂಶ..!
ಭಾಗ | ಲಾಭಗಳು |
---|---|
ಮೆದುಳು | ಶಕ್ತಿಶಾಲಿ ಚಿಂತನಶಕ್ತಿ, ನೆನಪಿನ ಶಕ್ತಿ |
ಜೀರ್ಣಕ್ರಿಯೆ | ಮಲಬದ್ಧತೆ ನಿವಾರಣೆ, ಫೈಬರ್ |
ಲಿವರ್ | ಡಿಟಾಕ್ಸ್, ಪಿತ್ತದ ನಿಯಂತ್ರಣ |
ಹೃದಯ | ಬಡಿತ ನಿಯಂತ್ರಣ, ಶಕ್ತಿವರ್ಧನೆ |
ಚರ್ಮ | ಕಾಂತಿ, ಗ್ಲೋ, ಬಿಸಿನಿಲದ ರಕ್ಷಣೆ |
ಮನಸ್ಸು | ಶಾಂತಿ, ಕೋಪ ನಾಶ, ನೆಮ್ಮದಿ |
ಯೋಗ/ಧ್ಯಾನ | ದೇಹ-ಮನಸ್ಸಿನ ಸನ್ನದ್ಧತೆ |
ಸೂಚನೆ: ಈ ವಿಷಯಗಳಲ್ಲಿ ಹೆಚ್ಚಿನ ಮಾಹಿತಿಗಾಗಿ ನಮ್ಮ YouTube ಚಾನೆಲ್ (ಆಯುರ್ವೇದ ಟಿಪ್ಸ್ ಇನ್ ಕನ್ನಡ) Subscribe ಮಾಡಿ.
ಸಲಹೆ: ನಾವು ನುರಿತ ವೈದ್ಯರ ಹಾಗೂ ಯೋಗ ಗುರುಗಳ ಜ್ಞಾನ ಹಂಚುವ ಕಾಯಕ ಮಾಡುತ್ತಿದ್ದೇವೆ. ನಾವು ಹೇಳುವ ಮನೆಮದ್ದು ಹಾಗೂ ಔಷಧಿಗಳು ನಿಮ್ಮ ಹತ್ತಿರದ ವೈದ್ಯರ ಸಲಹೆ & ಸೂಚನೆ ಪಡೆದು ತೆಗೆದುಕೊಳ್ಳಿ.
ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ➤➤➤➤➤➤➤➤➤➤➤➤➤➤➤ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9980277973, 7337618850
Discover more from
Subscribe to get the latest posts sent to your email.
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ