ಹಾಲಿನಿಂದ ಕೆನೆ ತೆಗೆಯುವ ಸುಲಭ ವಿಧಾನ..! 

ಇಂದಿನ ಸಂಚಿಕೆಯಲ್ಲಿ ಹಾಲಿನ ಕೆನೆ ತೆಗೆಯುವ ಸುಲಭ ವಿಧಾನ / kene maduva vidhana ಈ ಕುರಿತು ಮಾಹಿತಿಯನ್ನು ನೋಡೋಣ. ( ಕ್ಷೀರ ) ಎಂದರೆ ಹಾಲು. ಇಂದಿನ ದಿನಮಾನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಹಾಲು ಹಾಗೆ, ಹಾಲು ಹೀಗೆ, ಹಾಲು ವಿಷ, ಅಂತ ಏನೇನೋ ಸುಳ್ಳು ಸುದ್ದಿಯನ್ನು ಹರಡುತ್ತಾರೆ.

ಆದರೆ ನಾವು ಹೇಳುತ್ತೇವೆ ಹಾಲು ಅಮೃತ. ಹಾಲಿನ ವಿನಹ ನಾವು ಆಯುರ್ವೇದ ಔಷಧಿಗಳನ್ನು ಹೇಗೆ ತಯಾರಿಸುವುದು? ಕಲ್ಪನೆ ಮಾಡಿಕೊಳ್ಳಲು ಕೂಡ ಅಸಾಧ್ಯ.

ಯುಗಯುಗಗಳಿಂದ ಕ್ಷೀರ ಅಮೃತ ಅದು ಶ್ರೇಷ್ಠಾದಿ ಶ್ರೇಷ್ಠವಾದಂತಹ ಆಹಾರವು ಹೌದು, ಔಷಧಿಯು ಹೌದು, ಎಂದು ಪುರಾಣ ಉಪನಿಷತ್ತುಗಳಲ್ಲಿಯೂ ಕೂಡ ಲಭ್ಯ.

ಹಾಲಿನ ಕೆನೆಯನ್ನು ಹೇಗೆ ಮಾಡುವುದು? ಹಾಲಿನ ಕೆನೆಯನ್ನು ಔಷಧಿ ರೂಪದಲ್ಲಿ ಯಾವ ಯಾವ ಕಾಯಿಲೆಗಳಿಗೆ ಬಳಕೆ ಮಾಡಬಹುದು?

ನಾವು ಮನೆಯಲ್ಲಿ ಹಾಲನ್ನು ತರುತ್ತೇವೆ. ಅದು ಹಸುವಿನ ಹಾಲು ಆಗಿರಬಹುದು, ಅಥವಾ ಕುರಿಯ ಹಾಲು ಆಗಿರಬಹುದು, ಎಮ್ಮೆಯ ಹಾಲು ಆಗಿರಬಹುದು, ಅಥವಾ ಒಂಟೆಯ ಹಾಲು ಆಗಿರಬಹುದು. ಯಾವುದೇ ಪ್ರಾಣಿಯ ಹಾಲು ಆಗಿರಬಹುದು.

ಹಾಲಿನ ಕೆನೆ ತೆಗೆಯುವ ವಿಧಾನ / Halina Kene Maduva Vidhana

ಹಾಲನ್ನು ಯಾವಾಗಲೂ ಮಂದಾಗ್ನಿಯಲ್ಲಿ ಕಾಯಿಸಬೇಕು.ಹಾಲು ಮಂದಾಗ್ನಿಯಲ್ಲಿ ಕಾದು ಕಾದು ಕುದಿ ಬರಬಾರದು.
ಹೆಚ್ಚು ಅಗ್ನಿಯಲ್ಲಿ ಕಾಯಿಸಿದರೆ ಹಾಲು ಕೊತ ಕೊತ ಅಂತ ಕುದಿಯುತ್ತದೆ. ಹೀಗೆ ಕುದಿ ಬಂದರೆ ಹಾಲಿನ ಕೆನೆ ನಿಮಗೆ ಸಿಗುವುದಿಲ್ಲ. ಅದರಲ್ಲಿಯೇ ಮಿಕ್ಸ್ ಆಗಿ ಹೋಗುತ್ತದೆ.

ಆದ್ದರಿಂದ ಹಾಲನ್ನು ಮಂದಾಗ್ನಿಯಲ್ಲಿಯೇ ಕುದಿಸಿಕೊಳ್ಳಬೇಕು. ಆಗ ಅದು ಉಕ್ಕು ಬರುತ್ತದೆ ಗ್ಯಾಸನ್ನು ಆಫ್ ಮಾಡಿ ಬಿಡಬೇಕು. ನಂತರ ತಕ್ಷಣವೇ ಹಾಲಿನ ಮೇಲೆ ಪ್ಲೇಟ್ ಅನ್ನು ಮುಚ್ಚಬಾರದು. ಅದನ್ನು ಹಾಗೆಯೇ ತೆರೆದಿಡಬೇಕು. ಅಥವಾ ಅದರ ಮೇಲೆ ತೆಳ್ಳನೆಯ ಕಾಟನ್ ಬಟ್ಟೆಯನ್ನು ಮುಚ್ಚಬೇಕು. ಅಥವಾ ಪಾತ್ರೆಯ ಮೇಲೆ ಜಾಲರಿ ತರಹ ಇಡಬೇಕು ಹಾಲಿನಲ್ಲಿ ಧೂಳು ಬೀಳಬಾರದು ಹುಳ ಪಟ್ಟಿ ಬೀಳಬಾರದು ಎಂದು.

ಹಾಲು ತನ್ನಷ್ಟಕ್ಕೆ ತಾನೇ ನಿಧಾನವಾಗಿ ತಂಪಾಗುತ್ತ ಬರಬೇಕು. ರೋಮ್ ಟೆಂಪರೇಚರ್ ಕ್ಕೆ ಬಂದ ಮೇಲೆ ಅದರ ಮೇಲೆ ಒಂದು ಲೇಯರ್ ಫಾರ್ಮೇಶನ್ ಆಗುತ್ತದೆ. ಅದೇ ಕೆನೆ / Halina Kene Maduva Vidhana.

ಹಾಲಿನ ಕೆನೆ ಖಂಡಿತವಾಗಿಯೂ ಯಾವುದೇ ಬ್ಯೂಟಿ ಕ್ರೀಮ್ ಗಿಂತಲೂ ಕಡಿಮೆ ಇಲ್ಲ. ಈ ಹಾಲಿನ ಕೆನೆಯನ್ನು ಮುಖಕ್ಕೆ ಹಚ್ಚಬಹುದು. ತುಟಿಗಳಿಗೆ ಹಚ್ಚಬಹುದು, ಒಡೆದಿರುವಂತಹ ಹಿಮ್ಮಡಿ ಗಳಿಗೆ ಹಚ್ಚಬಹುದು, ಮೈಗೆಲ್ಲ ಹಚ್ಚಬಹುದು. ಹಾಲಿನ ಕೆನೆಯಂತಹ ಚರ್ಮವನ್ನು ನೀವು ಬಯಸಿದರೆ, ನಿಮ್ಮ ಚರ್ಮಕ್ಕೆ ಹಾಲಿನ ಕೆನೆಯನ್ನೇ ಬಳಕೆ ಮಾಡಬೇಕು.

Halina Kene Maduva Vidhana / ಈ ಹಾಲಿನ ಕೆನೆಯನ್ನು ಮಕ್ಕಳಿಗೂ ಕೂಡ ಹಚ್ಚಿ ಸ್ನಾನ ಮಾಡಿಸಬಹುದು. ಹಿರಿಯರು ಹಚ್ಚಿಕೊಂಡು ಸ್ನಾನ ಮಾಡಿಕೊಳ್ಳಬಹುದು. ಈ ಹಾಲಿನ ಕೆನೆಯನ್ನು ತಲೆಯ ಹೊಟ್ಟಿನ ನಿವಾರಣೆಗೂ ಕೂಡ ಉಪಯೋಗಿಸಿಕೊಳ್ಳಬಹುದು.

ತಲೆ ಹೊಟ್ಟಿನ ಸಮಸ್ಯೆ ಇದ್ದವರು ಈ ಹಾಲಿನ ಕೆನೆಯನ್ನು ತಲೆಗೆಲ್ಲ ಹಚ್ಚಿಕೊಂಡು ನಂತರ ತಲೆ ಸ್ನಾನವನ್ನು ಮಾಡಬೇಕು. ಆಗ ಹೊಟ್ಟು ನಿವಾರಣೆ ಆಗುತ್ತದೆ.

ಒಟ್ಟಾರೆ ಹೇಳಬೇಕು ಎಂದರೆ ಹಾಲಿನ ಕೆನೆ / Halina Kene Maduva Vidhana ( ದಿ ಬೆಸ್ಟ್ ನ್ಯಾಚುರಲ್ ಕ್ಲೆನ್ಸಿಂಗ್ ಮಾಯಿಶ್ಚರೈಸರ್ ) ಅಂದರೆ ಈ ಹಾಲಿನ ಕೆನೆ.

ಇದನ್ನು ಮಾಡಿಕೊಳ್ಳುವುದಕ್ಕೆ ನಿಮಗೆ ಆಗದೇ ಇದ್ದರೆ, ಹತ್ತಿರದ ಆಯುರ್ವೇದಿಕ್ ವೈದ್ಯರನ್ನು ಭೇಟಿ ಮಾಡಿ, ಅವರ ಹತ್ತಿರ ಹಾಲಿನಿಂದ ತಯಾರಿಸಿರುವಂತಹ ಅನೇಕ ಕ್ರೀಮ್ ಲೇಪನಗಳು ಸಿಗುತ್ತವೆ.

ಅವುಗಳನ್ನು ಪಡೆದುಕೊಂಡು ನಿಮ್ಮ ಚರ್ಮಕ್ಕೆ ಹಚ್ಚಿಕೊಂಡು ಹಾಲಿನ ಕೆನೆಯಂತಹ ಚರ್ಮ ನಿಮ್ಮದಾಗಿಸಿಕೊಳ್ಳಿ.

ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.

ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು. 


Discover more from AYURVEDA TIPS IN KANNADA

Subscribe to get the latest posts sent to your email.

Discover more from AYURVEDA TIPS IN KANNADA

Subscribe now to keep reading and get access to the full archive.

Continue reading