ದೇಹದ ಜೀವಕೋಶಗಳ ಶುದ್ಧೀಕರಣ: ಮೂರು ಪ್ರಮುಖ ಕಷಾಯಗಳ ರಹಸ್ಯ
ದೇಹದ ಪ್ರತಿಯೊಂದು Body Detox ಜೀವಕೋಶಗಳ ಶುದ್ಧೀಕರಣವೇ ನಿಜವಾದ ಆರೋಗ್ಯದ ರಹಸ್ಯ. ಯಾರಲ್ಲಿ ಜೀವಕೋಶಗಳು ಶುದ್ಧವಾಗಿರುತ್ತವೆಯೋ, ಅವರಿಗೆ ರೋಗಗಳು ಸಮೀಪಿಸುವುದಿಲ್ಲ. ಆದರೆ ಇಂದಿನ ಆಧುನಿಕ ಜೀವನಶೈಲಿಯಲ್ಲಿ ನಾವು ಅನಾರೋಗ್ಯ, ಔಷಧಿಗಳು, ಚುಚ್ಚುಮದ್ದುಗಳು ಮತ್ತು ಶಸ್ತ್ರಚಿಕಿತ್ಸೆಗಳ ಬಲೆಗೆ ಸಿಕ್ಕಿಬಿದ್ದಿದ್ದೇವೆ. ಈ ಸಮಸ್ಯೆಗಳಿಗೆ ಪರಿಹಾರವಾಗಿ, ನಮ್ಮ ಪೂರ್ವಜರು ಬಳಸುತ್ತಿದ್ದ ಮೂರು ವಿಶೇಷ ಕಷಾಯಗಳನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಿಕೊಳ್ಳಬಹುದು.
ಕೆಳಗಿನ ಪಾಯಿಂಟ್ ಮೇಲೆ ಕ್ಲೀಕ್ ಮಾಡಿ ಓದಿ

ಜೀವಕೋಶ ಶುದ್ಧೀಕರಣದ ಮಹತ್ವ
ನಮ್ಮ ದೇಹದ ಸೆಲ್ಯುಲರ್ ಲೆವೆಲ್ (ಜೀವಕೋಶ ಮಟ್ಟ) ವರೆಗೂ ಶುದ್ಧೀಕರಣ ಆಗಬೇಕಾದರೆ, ಈ ಕಷಾಯಗಳು ಅತ್ಯಂತ ಪರಿಣಾಮಕಾರಿ. ಇವುಗಳಲ್ಲಿ ಅಡಗಿರುವ ಆಂಟಿ-ಆಕ್ಸಿಡೆಂಟ್, ಆಂಟಿ-ಇನ್ಫ್ಲಮೇಟರಿ, ಆಂಟಿ-ಮೈಕ್ರೋಬಿಯಲ್ ಗುಣಗಳು ದೇಹದ ಟಾಕ್ಸಿನ್ಗಳನ್ನು (ವಿಷಗಳನ್ನು) ಹೊರಹಾಕುತ್ತವೆ. ಬೆಳಗ್ಗೆ ಚಹಾ-ಕಾಫಿ ಬದಲಾಗಿ ಈ ಕಷಾಯಗಳನ್ನು ಸೇವಿಸಿದರೆ, ಇಮ್ಯೂನಿಟಿ ಶಕ್ತಿ ಹೆಚ್ಚುತ್ತದೆ ಮತ್ತು 100 ವರ್ಷಗಳವರೆಗೂ ಆರೋಗ್ಯವಾಗಿ ಬದುಕಬಹುದು.
Body Detox ಮೊದಲನೇ ಕಷಾಯ: ವಿಧ ವಿಧ ಸಮಸ್ಯೆಗಳ ಶುದ್ಧೀಕರಣ
ಪದಾರ್ಥಗಳು:
- ಬಿಲ್ವಪತ್ರೆ
- ಗರಿಕೆ (ದೂರ್ವೆ)
- ತಂಗಡಿ ಹೂ
- ಅಮೃತಬಳ್ಳಿ
- ನೆಲನೆಲ್ಲಿ
- ಕರಿಬೇವಿನ ಎಲೆ
ತಯಾರಿ ವಿಧಾನ:
- ಎಲ್ಲಾ ಪದಾರ್ಥಗಳನ್ನು ನೆರಳಲ್ಲಿ ಒಣಗಿಸಿ ಪುಡಿ ಮಾಡಿ.
- ಪ್ರತಿಯೊಂದನ್ನೂ ಸಮಪ್ರಮಾಣದಲ್ಲಿ (50ಗ್ರಾಂ/100ಗ್ರಾಂ) ಮಿಶ್ರಣ ಮಾಡಿ.
- ಒಂದು ಚಮಚ ಪೌಡರ್ + 2 ಗ್ಲಾಸ್ ನೀರಲ್ಲಿ ಕುದಿಸಿ, ಅರ್ಧಗ್ಲಾಸ್ ಉಳಿದಾಗ ಶೋಧಿಸಿ.
Body Detox ಪ್ರಯೋಜನಗಳು:
- ಕರಿಬೇವಿನ ಎಲೆ ವಿಷಶುದ್ಧಿ ಮಾಡುತ್ತದೆ.
- ದೇಹದ ಎಲ್ಲಾ ವಿಷಾಂಶಗಳನ್ನು ಹೊರತರುತ್ತದೆ.
- ಶಕ್ತಿ ಮತ್ತು ಸತ್ವವೃದ್ಧಿ ಆಗುತ್ತದೆ.

ಎರಡನೇ ಕಷಾಯ: ಧಾತು ಶುದ್ಧೀಕರಣ
ಪದಾರ್ಥಗಳು:
- ನೆಗ್ಗಿಲ ಮುಳ್ಳು – 100ಗ್ರಾಂ
- ಧನಿಯ ಕಾಳು – 100ಗ್ರಾಂ
- ಓಂ ಕಾಳು – 100ಗ್ರಾಂ
- ಸೋಂಪು ಕಾಳು – 100ಗ್ರಾಂ
- ಅಶ್ವಗಂಧ ಚೂರ್ಣ – 100ಗ್ರಾಂ
- ಅಮೃತಬಳ್ಳಿ ಚೂರ್ಣ – 100ಗ್ರಾಂ
- ಒಣಗಿಸಿದ ಬೆಟ್ಟ ನೆಲ್ಲಿಕಾಯಿ ಪುಡಿ – 100ಗ್ರಾಂ
ತಯಾರಿ ವಿಧಾನ:
- ಎಲ್ಲಾ ಪದಾರ್ಥಗಳ ಪುಡಿಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ.
- 1 ಚಮಚ ಪೌಡರ್ + 1 ಗ್ಲಾಸ್ ನೀರಲ್ಲಿ ಕುದಿಸಿ, ಅರ್ಧಗ್ಲಾಸ್ ಆಗುವವರೆಗೆ ಇಳಿಸಿ.
Body Detox ಪ್ರಯೋಜನಗಳು:
- ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜೆ, ಶುಕ್ರ ಈ ಸಪ್ತಧಾತುಗಳ ಶುದ್ಧೀಕರಣ.
- ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ಗಳನ್ನು ಸಮತೋಲನಗೊಳಿಸುತ್ತದೆ.
- ತೂಕ ಹೆಚ್ಚಿರುವವರಿಗೆ ವೇಟ್ ಲಾಸ್, ಕಡಿಮೆ ತೂಕ ಇರುವವರಿಗೆ ಹೆಚ್ಚಿಸುತ್ತದೆ.
ಮೂರನೇ ಕಷಾಯ: ತ್ರಿದೋಷ ಶಮನ
ಪದಾರ್ಥಗಳು:
- ಕಾಳುಮೆಣಸು – 10ಗ್ರಾಂ
- ಜೇಷ್ಠ ಮಧು ಚೂರ್ಣ – 100ಗ್ರಾಂ
- ಅಶ್ವಗಂಧ ಚೂರ್ಣ – 100ಗ್ರಾಂ
- ಅಮೃತಬಳ್ಳಿ ಚೂರ್ಣ – 100ಗ್ರಾಂ
- ಬಿಲ್ವಪತ್ರೆ ಚೂರ್ಣ – 100ಗ್ರಾಂ
ತಯಾರಿ ವಿಧಾನ:
- ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಮಿಶ್ರಣ ಮಾಡಿ.
- 1 ಚಮಚ ಪೌಡರ್ + 2 ಗ್ಲಾಸ್ ನೀರಲ್ಲಿ ಕುದಿಸಿ, ಚತುರ್ಮಾಂಶ ಶೇಷ (1/4) ಆಗುವವರೆಗೆ ಇಳಿಸಿ.
ಪ್ರಯೋಜನಗಳು:
- ವಾತ-ಪಿತ್ತ-ಕಫ ದೋಷಗಳನ್ನು ನಿಯಂತ್ರಿಸುತ್ತದೆ.
- ಜೇಷ್ಠ ಮಧು ಪಿತ್ತಶಮನಕ್ಕೆ ಪ್ರಸಿದ್ಧ.
- ದೇಹದ ಉಷ್ಣತೆಯನ್ನು ಸಮತೂಕದಲ್ಲಿಡುತ್ತದೆ.

ಸೇವನೆಯ ವಿಧಾನ ಮತ್ತು ಎಚ್ಚರಿಕೆಗಳು
- ಪ್ರತಿ ಕಷಾಯವನ್ನು 10 ದಿವಸಗಳ ಕಾಲ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಬೇಕು.
- ಸಕ್ಕರೆ ಬದಲಿಗೆ ಶುದ್ಧ ಬೆಲ್ಲವನ್ನು ಬಳಸಬೇಕು (ಕೆಮಿಕಲ್ ಮುಕ್ತ).
- ಗರ್ಭಿಣಿಯರು ಮತ್ತು ಕಿಡ್ನಿ ರೋಗಿಗಳು ವೈದ್ಯರ ಸಲಹೆ ಪಡೆಯಬೇಕು.
- ಹೆಚ್ಚು ಉಷ್ಣವೀರ್ಯ ಅನುಭವಿಸಿದರೆ, ಬಾರ್ಲಿ ಗಂಜಿ ಅಥವಾ ಪೌಡರ್ ಪ್ರಮಾಣ ಕಡಿಮೆ ಮಾಡಬಹುದು.
ನಿಮ್ಮ ಸಂಸ್ಕೃತಿಯನ್ನು ಮರೆಯಬೇಡಿ
ನಮ್ಮದು ಕಷಾಯಗಳ ಸಂಸ್ಕೃತಿ. ಆದರೆ ನಾವು ಇದನ್ನು ಮರೆತಿದ್ದೇವೆ. ಅದರಿಂದಲೇ ಡಯಾಬಿಟಿಸ್, ಬಿಪಿ, ಕ್ಯಾನ್ಸರ್, ಹೃದಯರೋಗಗಳು ಹೆಚ್ಚಾಗುತ್ತಿವೆ. ಈ ಕಷಾಯಗಳು ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಉಪಯುಕ್ತ. ಯೋಗ, ಪ್ರಾಣಾಯಾಮ, ಧ್ಯಾನದ ಜೊತೆಗೆ ಈ ಕಷಾಯಗಳನ್ನು ನಿಯಮಿತವಾಗಿ ಸೇವಿಸಿ, ಆರೋಗ್ಯದ ಜೀವನವನ್ನು ನಡೆಸಿ.
ಸಲಹೆ: ನಾವು ನುರಿತ ವೈದ್ಯರ ಹಾಗೂ ಯೋಗ ಗುರುಗಳ ಜ್ಞಾನ ಹಂಚುವ ಕಾಯಕ ಮಾಡುತ್ತಿದ್ದೇವೆ. ನಾವು ಹೇಳುವ ಮನೆಮದ್ದು ಹಾಗೂ ಔಷಧಿಗಳು ನಿಮ್ಮ ಹತ್ತಿರದ ವೈದ್ಯರ ಸಲಹೆ & ಸೂಚನೆ ಪಡೆದು ತೆಗೆದುಕೊಳ್ಳಿ.
Discover more from AYURVEDA TIPS IN KANNADA
Subscribe to get the latest posts sent to your email.