ಇಂದಿನ ಸಂಚಿಕೆಯಲ್ಲಿ, Gajakarna / ಗಜಕರ್ಣ ಸಮಸ್ಯೆಗೆ ಹಲವಾರು ಮನೆಮದ್ದು ಮಾಡಿ ಸೋತು ಹೋಗಿರುವವರಿಗೆ ಇಲ್ಲಿವೆ ಕೆಲವೊಂದಿಷ್ಟು ಮನೆಮದ್ದುಗಳು ಹಾಗೂ ಯಾಕಾಗಿ ಈ ಗಜಕರ್ಣ ಕಜ್ಜಿ ತುರಿಕೆ ಸಮಸ್ಯೆ ಬರುತ್ತದೆ ಎನ್ನುವದನ್ನೂ ಕೂಡ ತಿಳಿಯೋಣ
Gajakarna / ಗಜಕರ್ಣ ಎಂದರೆ ಏನು ?
ಇದು ಒಂದು ಚರ್ಮದ ರೋಗ. ಇದರಿಂದ ವಿಪರೀತವಾಗಿ ತುರಿಕೆ ಉಂಟಾಗುತ್ತದೆ. ಇದು ಚರ್ಮದ ಮೇಲ್ಪದರಿನ ಭಾಗವನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ. ಇದು ಸ್ಪ್ರೆಡ್ ಆಗುವಂತಹ ಕಾಯಿಲೆ. ಇದರಿಂದ ವಿಪರೀತ ಕೆರೆತ, ನವೆ, ಉಂಟಾಗುತ್ತದೆ.
ಚರ್ಮದಲ್ಲಿ ಗಾಯಗಳು ಹೆಚ್ಚಿಗೆ ಆಗುತ್ತವೆ. ಮೂಲವಾಗಿ ಯಾವ ಭಾಗದಲ್ಲಿ ಗಾಳಿ ಆಡುವುದಿಲ್ಲವೋ, ಅಂದರೆ ಗುಪ್ತಾಂಗಗಳ ಭಾಗದಲ್ಲಿ ಹೆಚ್ಚು ಆಗುತ್ತದೆ. ಕಂಕಳ ಭಾಗದಲ್ಲಿ ಕೂಡ ಆಗುತ್ತದೆ. ಯಾವ ಭಾಗದಲ್ಲಿ ಬೆವರು ಹೆಚ್ಚಿಗೆ ಸಂಗ್ರಹಣೆಯಾಗುತ್ತದೆಯೋ ಆ ಭಾಗಗಳಲ್ಲಿ ಗಜಕರ್ಣ ಆಗುತ್ತದೆ. ಅಂದರೆ ಶ್ವೆದಮಲದ ವಿಕಾರದಿಂದ ಬರುವಂತಹ ಒಂದು ರೋಗ.
Gajakarna / ಸಮಸ್ಯೆ ಆಗಲು ಮೂಲ ಏನು ಕಾರಣಗಳು ?
ಶ್ವೇದಮಲ ವಿಕಾರ ಆಗುವುದಕ್ಕೆ ಮಲಬದ್ಧತೆ, ಅಜೀರ್ಣ, ಅಗ್ನಿ ಮಾಂದ್ಯತೆ, ವಿರುದ್ಧ ಆಹಾರಗಳ ಸೇವನೆ, ನೀರು ಸರಿಯಾಗಿ ಕುಡಿಯದೆ ಇರುವುದು, ಸ್ವಚ್ಛತೆಯ ಕೊರತೆಯಿಂದಾಗಿ, ಈ ಎಲ್ಲಾ ಕಾರಣಗಳಿಂದ ಗಜಕರಣದ ಸಮಸ್ಯೆಗಳು ಬರುತ್ತವೆ. ಈಗಾಗಲೇ ನಿಮ್ಮಿಂದ ತಪ್ಪಾಗಿ ಗಜಕರ್ಣದ ಸಮಸ್ಯೆ ಬಂದಾಗಿದೆ ಎಂದರೆ ಏನು ಮಾಡಬೇಕು?
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ಶಾಶ್ವತವಾಗಿ ಬೆಳ್ಳಗಾಗಬೇಕು ಎನ್ನುವವರಿಗೆ ಮಾತ್ರ
Gajakarna / ಸಮಸ್ಯೆ ಆದ ನಂತರ ಏನು ಮನೆಮದ್ದು ಮಾಡಬೇಕು..!
ಅಳಲೇಕಾಯಿ ತೆಗೆದುಕೊಳ್ಳಿ. ತ್ರಿಫಲ ಚೂರ್ಣದಲ್ಲಿ ಅಳಲೇಕಾಯಿ ತಾರೆಕಾಯಿ ಅಂತ ಬರುತ್ತವೆ. ಅಳಲೇಕಾಯಿ, ತಾರೆಕಾಯಿ, ನೆಲ್ಲಿಕಾಯಿ, ಇವುಗಳಲ್ಲಿ ಅಳಲೇಕಾಯಿಯನ್ನು ತೆಗೆದುಕೊಳ್ಳಿ. ಅಳಲೇಕಾಯಿಯನ್ನು ನಿಂಬೆ ಹಣ್ಣಿನ ರಸದಲ್ಲಿ ಸಾಣೆ ಕಲ್ಲಿನಲ್ಲಿ ಚೆನ್ನಾಗಿ ನುಣ್ಣಗೆ ತೆಯ್ದು ಅದರಿಂದ ಬರುವಂತಹ ಪೇಸ್ಟನ್ನು ನಿಮಗೆ ಯಾವ ಭಾಗದಲ್ಲಿ ಗಜಕರ್ಣ ಆಗಿರುತ್ತದೆಯೋ, ಆ ಭಾಗದಲ್ಲಿ ರಾತ್ರಿ ಹಚ್ಚಿಕೊಳ್ಳಬೇಕು.
ಬೆಳಿಗ್ಗೆ ಎದ್ದು ಅಂಟ್ವಾಳ ಕಾಯಿಯ ನೊರೆಯಿಂದ, ಅಥವಾ ಸೀಗೆಕಾಯಿಯ ನೊರೆಯಿಂದ, ಕಡ್ಲೆ ಹಿಟ್ಟಿನಿಂದ, ಅಥವಾ ಹಾಗೆ ಬರಿ ನೀರನ್ನು ಹಾಕಿಕೊಂಡು ತೊಳೆದುಕೊಳ್ಳಬೇಕು. ಸೋಪಿನಿಂದ ಮಾತ್ರ ತೊಳೆದುಕೊಳ್ಳಬಾರದು. ಹೀಗೆ ಮಾಡುತ್ತಾ ಹೋದರೆ ಕೆಲವೇ ದಿವಸಗಳಲ್ಲಿ Gajakarna / ಗಜಕರಣದ ಸಮಸ್ಯೆ ನಿವಾರಣೆ ಆಗುತ್ತದೆ.
ಕೆಲವೊಬ್ಬರಿಗೆ 10 ರಿಂದ 15 ದಿವಸಗಳಲ್ಲಿ ಕಡಿಮೆಯಾಗುತ್ತದೆ. ಇದಕ್ಕೆ ವಾಸಿಯಾಗದೇ ಇದ್ದರೆ ಒಳಗಡೆ ತುಂಬಾ ಇನ್ಫೆಕ್ಷನ್ ಗಳು ಸ್ಪ್ರೆಡ್ ಆಗಿರುತ್ತವೆ. ಇದರಿಂದ ನೂರಕ್ಕೆ 98 ಪರ್ಸೆಂಟ್ ಜನರಿಗೆ ಗುಣವಾಗುತ್ತದೆ.
ಇನ್ನು ಎರಡು ಪರ್ಸೆಂಟ್ ಜನರಲ್ಲಿ ಬೇರೆ ಬೇರೆ ಚರ್ಮರೋಗಗಳ ಸಮಸ್ಯೆಗಳು ಇರುವುದರಿಂದ ಪಂಚಕರ್ಮ ವಿರೇಚನ ಚಿಕಿತ್ಸೆ ಆಯುರ್ವೇದದಲ್ಲಿ ಕೆಲವು ಲೇಪನಗಳು ಬರುತ್ತವೆ. ಚರ್ಮರೋಗ ನಿವಾರಕ ತೈಲ ಎಂದು ತಯಾರಿಸಿದ್ದೇವೆ. ಅವೆಲ್ಲ ಚರ್ಮದ ಸಮಸ್ಯೆಗಳಿಗೂ ಆ ತೈಲವನ್ನು ಹಚ್ಚಿಕೊಂಡರೆ, ಸಮಸ್ಯೆ ಬೇಗ ನಿವಾರಣೆ ಆಗುತ್ತದೆ. ಆಯುರ್ವೇದ ಔಷಧಿಗಳು ಮತ್ತು ಪಂಚಕರ್ಮ ಚಿಕಿತ್ಸೆಗಳಿಂದ ಇಂತಹ ಉಲ್ಬಣಗೊಂಡಿರುವಂತಹ ವ್ಯಾಧಿಗಳು ನಿವಾರಣೆ ಆಗುತ್ತವೆ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ಶಾಶ್ವತವಾಗಿ ಬೆಳ್ಳಗಾಗಬೇಕು ಎನ್ನುವವರಿಗೆ ಮಾತ್ರ
98 ಪರ್ಸೆಂಟ್ ಜನರಲ್ಲಿ ಈ ಸಮಸ್ಯೆ ನಿವಾರಣೆ ಆಗೇ ಆಗುತ್ತದೆ. ಮಿಕ್ಕಿದವರು ಈ ಪಂಚ ಕರ್ಮಗಳ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಇದರಲ್ಲಿ ಹೊಟ್ಟೆ ಶುದ್ಧೀಕರಣ ಆಗುವುದು ಬಹಳ ಮುಖ್ಯ. ಅದಕ್ಕಾಗಿ ಪ್ರತಿದಿನ ಬೆಳಿಗ್ಗೆ 30 ಎಂಎಲ್ ಗೋಮೂತ್ರವನ್ನು ಕುಡಿಯಬೇಕು. ಅಥವಾ ಎರಡು ಚಮಚ ಹರಳೆಣ್ಣೆಯನ್ನು ಸೇವನೆ ಮಾಡಬೇಕು. ಹೀಗೆ ಮಾಡುವುದರಿಂದ ಹೊಟ್ಟೆ ಶುದ್ಧೀಕರಣವಾಗುತ್ತದೆ.
Gajakarna / ಸಮಸ್ಯೆ ಗೆ ಹೊಟ್ಟೆ ಶುದ್ದಿ ಹೇಗೆ ಮಾಡಬೇಕು ? ಮನೆಮದ್ದು
ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧವಾಗಿ ಇಟ್ಟುಕೊಳ್ಳುವುದಕ್ಕೆ ಸಮಪ್ರಮಾಣದಲ್ಲಿ ಶುಂಠಿ ಮತ್ತು ಬೆಲ್ಲವನ್ನು ಮಿಶ್ರಣ ಮಾಡಿ ಕಡಲೆಕಾಳಿನ ಗಾತ್ರದಷ್ಟು ಉಂಡೆ ಮಾಡಿ ಇಟ್ಟುಕೊಳ್ಳಬೇಕು. ಆ ಉಂಡೆಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಾಲ್ಕರಿಂದ ಆರು ಉಂಡೆಗಳನ್ನು ಸೇವನೆ ಮಾಡಬೇಕು. ಆಮೇಲೆ ಪ್ರಸಾದ ಮಾಡಿದರೆ ಜೀರ್ಣ ಶಕ್ತಿ ಚೆನ್ನಾಗಿರುತ್ತದೆ.
ಜೀರಿಗೆ ಮತ್ತು ಓಂ ಕಾಳನ್ನು ಸಮ ಪ್ರಮಾಣದಲ್ಲಿ ಅರ್ಧ ಅರ್ಧ ಚಮಚ ಅಗದು ಅಗದು ತಿಂದು, ಅರ್ಧ ಗಂಟೆಯ ನಂತರ ಪ್ರಸಾದ ಮಾಡುವುದರಿಂದ ಕೂಡ ರಕ್ತ ಶುದ್ದಿ ಮತ್ತು ಜೀರ್ಣಶಕ್ತಿಯ ಶಕ್ತಿ ವೃದ್ಧಿಯಾಗುತ್ತದೆ. ಮಲಬದ್ಧತೆ ಕೂಡ ನಿವಾರಣೆ ಆಗುತ್ತದೆ. ಇದು ರಕ್ತಶುದ್ಧಿ ಮತ್ತು ಹೊಟ್ಟೆ ಶುದ್ದಿಗೆ ಈ ಪದ್ಧತಿ.
ಲೇಪನ ಮಾಡಿಕೊಳ್ಳುವುದಕ್ಕೆ ಅಳಲೇಕಾಯಿ ಮತ್ತು ನಿಂಬೆಹಣ್ಣಿನ ರಸ. ಗಜಕರ್ಣದ ಸಮಸ್ಯೆಗೆ ಈ ರೀತಿಯಾಗಿರುವಂತಹ ಪರಿಹಾರಗಳು, ಲೇಪನಗಳು, ಹೊಟ್ಟೆ ಶುದ್ದಿ ಕರಣ, ಮಾಡಿಕೊಂಡು ಗಜಕರ್ಣದ ಸಮಸ್ಯೆಯಿಂದ ಪಾರಾಗಬಹುದು.
ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850
ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.
ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು.