ಆತ್ಮೀಯರೇ,
“ಮನಸ್ಸು ಗಟ್ಟಿಯಾಗಬೇಕು” ಅಂತ ನಾವು ಹೇಳಿಕೊಳ್ಳುವಾಗ, ನಿಜವಾಗಿ ನಾವು ಏನನ್ನು ಕೋರುತ್ತೇವೆ? ಸಾಮಾನ್ಯವಾಗಿ, ಇದರರ್ಥ ಮನಸ್ಸಿಗೆ ಒಳ್ಳೆಯ ವಿಚಾರಗಳನ್ನ ಕೊಡಬೇಕು, ಒಳ್ಳೆಯ ಆಲೋಚನೆಗಳನ್ನ ತುಂಬಬೇಕು ಎಂಬುದಾಗಿದೆ. ಆದರೆ, ( Mental health in kannada ) ಮಾನಸಿಕ ರೋಗಗಳು – ಟೆನ್ಶನ್, ಡಿಪ್ರೆಷನ್, ಮಾನಸಿಕ ಒತ್ತಡಗಳು, ಮತ್ತು ದೊಡ್ಡ ದೊಡ್ಡ ಆಲ್ಜೈಮರ್ ನಂತಹ ಸ್ಥಿತಿಗಳು – ಇಂದು ಅನೇಕರ ಜೀವನವನ್ನು ಬಳಲಿಸುತ್ತಿವೆ.
ಈ ಸಮಸ್ಯೆಗೆ ತುಂಬಾ ನಾವು ಔಷಧಿಗಳನ್ನು ತಿಂದು ತಿಂದು ಅಡ್ಡ ಪರಿಣಾಮಗಳನ್ನ ಅನುವಿಸುತ್ತಿದ್ದೇವೆ. ಇನ್ನೇನು ಮಾಡಬೇಕು? ಈ ಸಮಸ್ಯೆಯಿಂದ ಹೇಗೆ ಹೊರಗೆ ಬರಬೇಕು? ಈ ಪ್ರಶ್ನೆಗಳು ಅನೇಕರ ಮನಸ್ಸನ್ನುಾಳಲ್ಲಿದೆ.
ಪ್ರಾಚೀನ ಜ್ಞಾನವು ಹೇಳುವಂತೆ, “ಮನ ಏವ ಮನುಷ್ಯನಂ ಕಾರಣಂ ಬಂಧಮುಕ್ಷಯೋಹ” – ಬಂಧನಕ್ಕೂ ಮುಕ್ತಿಗೂ ಮನಸ್ಸೇ ಮೂಲ ಕಾರಣ. ಮನಸ್ಸಿನ ರೋಗಗಳಿಗೂ ಮನಸ್ಸೇ ಮೂಲ ಕಾರಣ. ಆದ್ದರಿಂದ, ಅದರ ನಿವಾರಣೆಯ ಮಾರ್ಗವೂ ಮನಸ್ಸಿನ ಮೂಲಕವೇ ಹಾದು ಹೋಗುತ್ತದೆ.

ಮನಸ್ಸು ಏನಾಗಬೇಕು? ಮನಸ್ಸೇ ಧರ್ಮ ಆಗಬೇಕು. ಮನಸ್ಸು ಪುರಾಣ, ಬೈಬಲ್, ಭಗವದ್ಗೀತೆ, ವಚನ, ದಾಸರ ಸಂತರ ಮಹಾತ್ಮರ ಪದ ಆಗಬೇಕು. ಮನಸ್ಸು ಸತ್ಯಶುದ್ಧವಾಗಿರತಕ್ಕಂತ ಆಚಾರ ಆಗಬೇಕು. ಅಂದಾಗ ಮಾತ್ರ ಮನೋರೋಗಗಳಿಗೆ ನಿವಾರಣೆಯ ಒಂದು ಶಕ್ತಿ ಬರತ್ತದೆ.
ನೀವು ಮೊದಲು ನಿಮ್ಮ ಮನಸ್ಸಿನ ರೋಗವನ್ನ ನಿವಾರಣೆ ಮಾಡಿಕೊಳ್ಳಲಿಕ್ಕೆ, ಮನಸ್ಸನ್ನ ಗಟ್ಟಿ ಮಾಡಿಕೊಳ್ಳತಕ್ಕಂತ ಒಂದು ವ್ಯವಸ್ಥೆಯನ್ನ ಮಾಡಿಕೊಳ್ಳಿ. “ನಾನು ಚೆನ್ನಾಗಿದ್ದೇನೆ” ಅಂತಕಂತದ್ದನ್ನ ಆತ್ಮಸಾಕ್ಷಿಯಿಂದ, ಮನಸ್ಸಾಕ್ಷಿಯಿಂದ ನೀವು ನಂಬಬೇಕಾಗುತ್ತದೆ.
ಈ ಆಂತರಿಕ ವಿಶ್ವಾಸದ ಜೊತೆಗೆ, ಯೋಗಾಸನಗಳ ಅಭ್ಯಾಸವನ್ನ ತಾವು ಮಾಡೋದ್ರಿಂದ ಎಲ್ಲಾ ಮನೋರೋಗಗಳ ಸಮಸ್ಯೆಗಳು ದೂರ ಆಗ್ತವೆ. ಮನಸ್ಸು ಚುರುಕಾಗುತ್ತೆ. ಡಿಪ್ರೆಷನ್, Anxiety ನಂತಹ ಸಮಸ್ಯೆಗಳು ಸಂಪೂರ್ಣವಾಗಿ ದೂರ ಆಗ್ತವೆ. ಖಿನ್ನತೆಯ (ಸೂಕ್ಷ್ಮ) ಸಮಸ್ಯೆಗಳಿಂದ ಬಹಳ ದೊಡ್ಡ ದೊಡ್ಡ ಸಮಸ್ಯೆಗಳು ಶರೀರದಲ್ಲಿ ಎದುರಾಗುತ್ತವೆ. ಹಾಗೆ ಅದರಿಂದ ಹೊರಗಡೆ ಬರಲಿಕ್ಕೆ ಯೋಗಾಸನಗಳ ಅಭ್ಯಾಸ ಅತ್ಯುತ್ತಮ ಮಾರ್ಗ.
ಪಾಯಿಂಟ್ ಮೇಲೆ ಕ್ಲೀಕ್ ಮಾಡಿ ಓದಿ
ಮಾನಸಿಕ ಶಾಂತಿಗಾಗಿ ಯೋಗಾಭ್ಯಾಸಗಳು ( Yoga Practices for Mental health in kannada )
ಮೊದಲನೇ ಅಭ್ಯಾಸ: ಪ್ರಾರಂಭ ಮತ್ತು ಶ್ವಾಸ
ಮೊದಲು ವಜ್ರಾಸನದಲ್ಲಿ ಕುಳಿತುಕೊಳ್ಳಿ. ನಿಧಾನವಾಗಿ ಉಸಿರಾಟವನ್ನು ಗಮನಿಸಿ. ಈ ಸರಳ ಕ್ರಿಯೆಯು ಮನಸ್ಸನ್ನು ವರ್ತಮಾನಕ್ಕೆ ತರುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಪ್ರಾರಂಭಿಸುತ್ತದೆ.

ಶಿರೋಶೋಧನ ಕ್ರಿಯಾ ಆಸನಗಳು (Head Purification Process)
ಮೆದುಳು ಪ್ರಸನ್ನಗೊಳಿಸತಕ್ಕಂತ ಒಂದು ಪ್ರಕ್ರಿಯೆಗೆ ಶಿರೋಶೋಧನ ಕ್ರಿಯಾ ಆಸನಗಳು ಎಂದು ಹೆಸರು. ಇದು ತಲೆಯ ವಿಕಾರಗಳನ್ನ ದೂರ ಮಾಡತಕ್ಕಂತ, ಕ್ರಿಯಾ ಪ್ರಕ್ರಿಯಾ ವ್ಯವಸ್ಥೆಯನ್ನ ಚುರುಕುಗೊಳಿಸತಕ್ಕಂತ ಆಸನಗಳ ಸಮೂಹ.
- ಹಸ್ತ ಚಲನೆ (Hand Movement): ತಲೆ ಮೇಲೆ ಬಲಗೈ ಹೀಗೆ ಇಟ್ಕೊಳ್ಳಿ. ಹೊಟ್ಟೆ ಮೇಲೆ ಎಡಗೈಯನ್ನ ಇಟ್ಕೊಳ್ಳಿ. ಮೇಲಿನ ಕೈ ಮೇಲ್ಮುಖವಾಗಿ, ಕೆಳಮುಖವಾಗಿ ಚಲಿಸಬೇಕು. ಕೆಳಗಿನ ಕೈ ಈ ರೀತಿಯಾಗಿ ಚಲನೆ ಆಗಬೇಕು. ಇದನ್ನು ತಿರುಗಿಸುವಂತೆ ಮಾಡಬಾರದು. ಈ ಚಲನೆಯಿಂದ ತಲೆಯ ನರನಾಡಿಗಳು ಮತ್ತು ಗ್ರಂಥಿಗಳಿಗೆ ಕ್ರಿಯಾಶಕ್ತಿಯನ್ನ ಒದಗಿಸುತ್ತದೆ.
- ಬೆರಳುಗಳ ವ್ಯಾಯಾಮ (Finger Exercise): ಕೈಯನ್ನ ಹೀಗೆ ಇಟ್ಕೊಳ್ಳಿ. ಹೆಬ್ಬೆರಳನ್ನ ಮಾತ್ರ ಇರ್ತದು, ಮಡಚದು.
- ತೋರು ಬೆರಳನ್ನ ಮಾತ್ರ ಹಡಿದು ಮಡಚೋದು, ಎತ್ತೋದು.
- ಮಧ್ಯದ ಬೆರಳನ್ನ ಮಾತ್ರ ಎತ್ತೋದು, ಮಡಚೋದು.
- ಉಂಗರ ಬೆರಳನ್ನ ಮಾತ್ರ ಎತ್ತೋದು, ಮಡಚೋದು.
- ಕಿರು ಬೆರಳನ್ನ ಎತ್ತೋದು, ಮಡಚೋದು.
ಪ್ರತಿಯೊಂದು ಬೆರಳನ್ನ ಮೇಲೆ ಎತ್ತಬೇಕಾದರೆ ಮನಸ್ಸಲ್ಲಿ ಅಥವಾ ಬಾಯಿಬಿಟ್ಟೆ “ಓಂ” ಅಂತ ಹೇಳ್ಬೇಕು. ಈ ಅಭ್ಯಾಸ ಮೆದುಳಿನ ನರಗಳ ಸಂಪರ್ಕವನ್ನು (ಸೈಕೋಸೋಮಾಟಿಕ್ ಕನೆಕ್ಷನ್) ವೃದ್ಧಿಸುತ್ತದೆ.

- ಕರ್ಣಒತ್ತಡ (Ear Pressure): ಈ ರೀತಿಯಾಗಿ ಕಿವಿಯನ್ನ ಗಟ್ಟಿಯಾಗಿ ಹಿಡ್ಕೋಬೇಕು. ಜೋರಾಗಿ ಒತ್ತಬೇಕು. ಕಿವಿಯ ಆಲೆಗಳ ತುದಿಗಳನ್ನ ಒತ್ತಬೇಕು. ಎಡಗೈಯಿಂದ ಬಲಕಿವಿ, ಬಲಗೈಯಿಂದ ಎಡಕಿವಿ ಹೀಗೆ ಹಿಡ್ಕೊಂಡು ಒತ್ತಬೇಕು. ಒತ್ತಿ ಮುಂದೆ ಬಾಗಬೇಕು ಮತ್ತು ನಂತರ ವಾಪಸ್ ಬನ್ನಿ. ಈ ಕ್ರಿಯೆ ಕಿವಿಯ ಸುತ್ತಲಿನ ಶಿರೋನರಗಳನ್ನು ಉತ್ತೇಜಿಸುತ್ತದೆ.
ಇವೆಲ್ಲವುಗಳು ನಮ್ಮ ತಲೆಯ ನರನಾಡಿಗಳಿಗೆ, ತಲೆಯ ಭಾಗದಲ್ಲಿ ಇರತಕ್ಕಂತ ಎಲ್ಲ ಗ್ರಂಥಿಗಳಿಗೆ ಕ್ರಿಯಾಶಕ್ತಿಯನ್ನ ಒದಗಿಸತಕ್ಕಂತ ಶಕ್ತಿಯನ್ನ ಹೊಂದಿರತಕ್ಕಂತದ್ದು. ಈ ಆಸನಗಳನ್ನ ಮಾಡೋದ್ರಿಂದ ಮೆದುಳು ಚುರುಕಾಗುತ್ತೆ, ಶರೀರವು ಕೂಡ ಚುರುಕಾಗುತ್ತೆ.
- ಓಂಕಾರ ಸಹಿತ ಚಪ್ಪಾಳೆ (Clapping with Omkar): ಚಪ್ಪಾಳೆಯನ್ನ ಹೊಡಿಬೇಕು. ಒಂದು, ಎರಡು, ಮೂರು, ನಾಲ್ಕು, ಐದು, ಆರು, ಏಳು, ಎಂಟು… ಹೀಗೆ ಮನಸ್ಸಿನಲ್ಲಿ “ಓಂ ಓಂ ಓಂ ಓಂ” ಅಂತ ಹೇಳ್ತಾ ಹೇಳ್ತಾ ಚಪ್ಪಾಳೆ ಹೊಡಿಬೇಕು.
ಓಂಕಾರ ಜಾತಿ ಧರ್ಮಕ್ಕೆ ಸೀಮಿತವಾಗಿರತಕ್ಕಂತದ್ದಲ್ಲ. ಇದು ಸೃಷ್ಟಿಯ ಶಬ್ದ, ಅನಹತ ನಾದ. ಸೂರ್ಯನ ಹತ್ತಿರ ನಾಸಾ ವಿಜ್ಞಾನಿಗಳು ತಮ್ಮ ವೈಜ್ಞಾನಿಕ ಉಪಕರಣಗಳನ್ನು ತೆಗೆದುಕೊಂಡು ಹೋದಾಗ, ಸೂರ್ಯನಿಂದ ಹೊರಹೊಮ್ತಕಂತ ಒಂದು ಶಬ್ದ “ಓಂ” ಅಂತ ಸಂಶೋಧನೆ ಮಾಡಿದ್ದಾರೆ. ಈ ಸೃಷ್ಟಿಯ ಶಕ್ತಿಗೆ, ಸ್ಥಿತಿಗೆ, ಲಯಕ್ಕೆ ಪ್ರಧಾನವಾಗಿರತಕ್ಕಂತ ನಾದ ಶಕ್ತಿಯೇ ಅದು (ಅಕಾರ, ಉಕಾರ, ಮಕಾರ).

ನೀವು ಚಪ್ಪಾಳೆ ಹೊಡಿತಾ ಓಂಕಾರದ ಅಭ್ಯಾಸವನ್ನ ಮಾಡೋದ್ರಿಂದ ತನು, ಮನ, ಭಾವದ ಶುದ್ಧಿಯಾಗಿ ನಿಮ್ಮ ಶರೀರದಲ್ಲಿ ಆ ಒಂದು ಎಲ್ಲ ಜಡತ್ವಗಳು ದೂರ ಆಗಿ ಮನಸ್ಸಿನ ಎಲ್ಲ ಚಂಚಲತೆಗಳು, ಜಂಜಾಟಗಳು ದೂರವಾಗಿ ಸಂಪೂರ್ಣವಾಗಿ ಮಾನಸಿಕ ರೋಗಗಳಿಗೆ ನಿಮಗೆ ಸಂಪೂರ್ಣವಾಗಿರತಕ್ಕಂತ ಪರಿಹಾರ ಸಿಗುತ್ತೆ.
ಭಜನೆಯ ಶಕ್ತಿ: ಇದಕ್ಕೆ ಭಜನೆ ಮಾಡಿಸೋದು. “ಓಂ ನಮಃ ಶಿವಾಯ”, “ಓ ಜೀಸಸ್”, “ಓ ರಾಮ”, “ಓ ಕೃಷ್ಣ”, “ಓ ಹನುಮಂತ” – ನಿಮಗೆ ಯಾವ ಹೆಸರು ಇಷ್ಟ ಬರುತ್ತದೋ ಆ ಹೆಸರನ್ನ ಕರ್ಕೊಂಡು ಭಜನೆ ಮಾಡಬಹುದು. ದೇವನೊಬ್ಬ, ನಾಮ ಹಲವು. ನಾವು ನೀರ ಅಂತೇವೆ, ಇನ್ನೊಬ್ಬರು ಪಾನಿ ಅಂತಾರೆ, ಇನ್ನೊಬ್ಬರು ವಾಟರ್ ಅಂತ ಹೇಳ್ತಾರೆ. ಆದರೆ ನೀರು ಒಂದೇ. ಹಾಗಾಗಿ ನಿಮ್ಮ ಇಷ್ಟದ ದೇವತೆಯ ನಾಮಸ್ಮರಣೆ ಮನಸ್ಸನ್ನು ಶಾಂತಗೊಳಿಸುತ್ತದೆ.
ಮಾನಸಿಕ ಸ್ಥೈರ್ಯಕ್ಕೆ ಮುದ್ರೆಗಳು ಮತ್ತು ಪ್ರಾಣಾಯಾಮ ( Mudras and Pranayama for Mental health in kannada )
ನೇರವಾಗಿ ಕುತ್ಕೊಬೇಕು. ತಲೆ, ಕುತ್ತಿಗೆ, ಬೆನ್ನೂರಿ ನೇರವಾಗಿರಬೇಕು.

- ಸಮಾನ ಮುದ್ರೆ: ಐದು ಬೆರಳಿನ ತುದಿಗಳನ್ನು ಸೇರಿಸೋದು. ಸಮಾನ ವಾಯು ಕ್ರಿಯಾಶೀಲವಾಗಲಿ.
- ಅಪಾನ ಮುದ್ರೆ: ಮಧ್ಯದ ಬೆರಳು, ಉಂಗುರು ಬೆರಳು, ಹೆಬ್ಬೆರಳನ್ನು ಸೇರಿಸೋದು. ಅಪಾನ ವಾಯು ಸ್ವಚ್ಛವಾಗಿ ನಮ್ಮ ಶರೀರದ ನೈರ್ಮಲ್ಯಗಳನ್ನೆಲ್ಲ ಹೊರಹಾಕುತ್ತೆ.
- ಪ್ರಾಣ ಮುದ್ರೆ: ಕಿರುಬೆರಳು, ಉಂಗುರು ಬೆರಳು, ಹೆಬ್ಬೆರಳನ್ನ ಸೇರಿಸೋದು.
- ಜ್ಞಾನ ಮುದ್ರೆ: ಹೆಬ್ಬೆರಳು ಮತ್ತು ತೋರುಬೆರಳಿನ ತುದಿಗಳನ್ನು ಸೇರಿಸಿ, ಉಳಿದ ಮೂರು ಬೆರಳುಗಳನ್ನು ನೇರವಾಗಿರಿಸಿಕೊಳ್ಳುವುದು.
ಈ ನಾಲ್ಕು ಮುದ್ರೆಗಳಲ್ಲಿ ಒಂದೊಂದರಲ್ಲೂ ಮಿನಿಮಂ ಮೂರು ನಿಮಿಷ ಅಭ್ಯಾಸ ಮಾಡಬೇಕು. ಹೆಚ್ಚು ಬೇಕಾದಷ್ಟು ಹೊತ್ತು ಮಾಡಬಹುದು.
ಪ್ರಾಣಾಯಾಮ (Breathing Exercises): Mental health in kannada
- ನಾಡಿ ಶೋಧನ ಪ್ರಾಣಾಯಾಮ: ಮಾನಸಿಕ ರೋಗಗಳ ನಿವಾರಣೆಗೆ ಇದು ಉತ್ತಮ.
- ಭ್ರಾಮರಿ ಪ್ರಾಣಾಯಾಮ: ಝೇಂಕಾರದೊಂದಿಗೆ ಮಾಡುವ ಈ ಪ್ರಾಣಾಯಾಮ ಮನಸ್ಸನ್ನು ಶಾಂತಗೊಳಿಸುತ್ತದೆ.
- ಉಜ್ಜಾಯಿ ಪ್ರಾಣಾಯಾಮ: ಗಂಟಲಿನಿಂದ ಶಬ್ದ ಬರುವಂತೆ ಮಾಡುವ ಈ ಉಸಿರಾಟದ ಅಭ್ಯಾಸ ಚಿತ್ತವನ್ನು ಸ್ಥಿರಪಡಿಸುತ್ತದೆ.
- ಕಪಾಲಭಾತಿ ಪ್ರಾಣಾಯಾಮ: ಮಿನಿಮಂ ಮೂರು ನಿಮಿಷ ಮಾಡಬೇಕು. ಸೂಚನೆ: ಬಿಪಿ, ಶುಗರ್, ಹಾರ್ಟ್ ಸಮಸ್ಯೆ, ಕಿಡ್ನಿ ಸಮಸ್ಯೆ ಇರುವವರು ನಿಧಾನವಾಗಿ ಮಾಡಬೇಕು. ಗರ್ಭಿಣಿ ಸ್ತ್ರೀಯರು ಮತ್ತೆ ಸ್ತನಪಾನ ಮಾಡಿಸ್ತಇರತಕ್ಕಂತ ಸ್ತ್ರೀಯರು ಈ ಒಂದು ಕಪಾಲಭಾತಿ ಮಾಡಬಾರದು. ವೈದ್ಯರ ಮತ್ತು ಯೋಗ ಗುರುಗಳ ಸಲಹೆ ಮೇರಿಗೆ ಮಾತ್ರ ಮಾಡಬೇಕು.

ಈ ಎಲ್ಲ ಅಭ್ಯಾಸಗಳನ್ನು ಜೀವನ ಪರ್ಯಂತ ಮಾಡಿದ್ರೆ ಏನು ಲಾಸ್ ಇಲ್ಲ. ಇದರಿಂದ ಬೇರೆ ಬೇರೆ ಲಾಭಗಳು ಸಿಗತಕ್ಕೆ ಹೊರತು, ನಷ್ಟವೇನೂ ಇಲ್ಲ.
ಮಾನಸಿಕ ಆರೋಗ್ಯಕ್ಕಾಗಿ ಆಯುರ್ವೇದಿಕ ಉಪಚಾರ ( Ayurvedic Remedies for Mental health in kannada )
ಮನೋರೋಗಗಳಿಗೆ ಕೆಲವೊಂದಿಷ್ಟು ಮನೆಮದ್ದುಗಳು:
- ಬೂದು ಕುಂಬಳಕಾಯಿ (Ash Gourd): ಬೆಸ್ಟ್ ಅಂತ ಹೇಳಿದ್ರೆ ಬೂದು ಕುಂಬಳಕಾಯಿ ಜ್ಯೂಸ್ನ್ನ ಕುಡಿತಾ ಬನ್ನಿ. ಮನೋರೋಗಗಳೆಲ್ಲ ನಿವಾರಣೆ ಆಗ್ತವೆ.
- ಕುಷ್ಮಾಂಡ ರಸಾಯನ: ಬೂದು ಕುಂಬಳಕಾಯಿ ತುರಿದು, ಒಲೆ ಮೇಲೆ ಪಾತ್ರೆಯಲ್ಲಿ ಹಾಕಿ ಬಿಸಿ ಮಾಡಿದ್ರೆ ನೀರಿನಂಶ ಎಲ್ಲ ಹೋಗಿ ಗಟ್ಟಿಯಾಗುತ್ತೆ. ಅದರಲ್ಲಿ ಬೆಲ್ಲದ ಪಾಕ, ಡ್ರೈ ಫ್ರೂಟ್ಸ್ ಗಳ ಪುಡಿ, ಗಸಗಸೆ, ಮತ್ತು ಏಲಕ್ಕಿ ಪುಡಿಯನ್ನ ಹಾಕಿದ್ರೆ ಅದು ರಾಸಾಯನ ಆಗುತ್ತೆ. ಇದನ್ನ ಬೆಳಗ್ಗೆ ಮತ್ತು ರಾತ್ರಿ ಒಂದೆರಡು ಚಮಚ ತಿಂದ್ರೆ ಮನೋರೋಗಗಳು ಮಂಗಮಾಯ.
- ಜ್ಯೂಸ್: ಜ್ಯೂಸ್ ಮಾಡ್ಕೊಂಡು ಕುಡಿಯಬಹುದು.
- ಪಾಯಸ: ತುರಿದ ಕುಂಬಳಕಾಯಿಯನ್ನು ಕುದಿಸಿ, ಬೆಲ್ಲ ಮತ್ತು ತುಪ್ಪ ಹಾಕಿ ಪಾಯಸ ಮಾಡಿ ತಿನ್ನಬಹುದು.
- ಬ್ರಾಹ್ಮಿ ಎಲೆ (Brahmi Leaves): ಬ್ರಾಹ್ಮಿ ಎಲೆಗಳನ್ನ ತಿನ್ನಬಹುದು. ನಾಲ್ಕೈದು ಎಲೆಗಳು. ಇನ್ನು ಹೆಚ್ಚು ತಿಂದ್ರೆ ಎಂಟರಿಂದ 10 ಎಲೆ ತಿನ್ನಬಹುದು.
- ಅಶ್ವಗಂಧ, ಬ್ರಾಹ್ಮಿ, ವಚ, ಶತಾವರಿ ಮಿಶ್ರಣ:
- 100 ಗ್ರಾಂ ಅಶ್ವಗಂಧ ಚೂರ್ಣ (ಒರಿಜಿನಲ್ ಆಗಿರತಕ್ಕದ್ದು)
- 100 ಗ್ರಾಂ ಬ್ರಾಹ್ಮಿ ಚೂರ್ಣ
- 100 ಗ್ರಾಂ ವಚ ಚೂರ್ಣ
- 100 ಗ್ರಾಂ ಶತಾವರಿ ಚೂರ್ಣ
- 100 ಗ್ರಾಂ ಜೇಷ್ಠಮಧು (ಮುಲತಿ) ಚೂರ್ಣ
ಇವೆಲ್ಲ ಚೂರ್ಣಗಳನ್ನ ಸೇರಿಸಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ, ತುಂಬಾ ತೆಳ್ಳಗೆ ಇರೋರು ಎಳ್ನೀರಿನಲ್ಲಿ, ಸ್ವಲ್ಪ ದಪ್ಪ ಇರದ್ರೆ ಸೋರೆಕಾಯಿ ಜ್ಯೂಸ್ನಲ್ಲಿ ಒಂದು ಚಮಚ ಈ ಪೌಡರ್ ನ್ನ ಸೇವನೆ ಮಾಡೋದ್ರಿಂದ ಸಂಪೂರ್ಣವಾಗಿ ಮನೋರೋಗಗಳು ದೂರ ಆಗ್ತದೆ, ಜಡತ್ವ ದೂರ ಆಗುತ್ತೆ.

ಅಭ್ಯಾಸದ ಕ್ರಮ (Sequence of Practice)
ಅಭ್ಯಾಸದ ಸರಿಯಾದ ಕ್ರಮ ಬಹಳ ಮುಖ್ಯ.
- ಮೊದಲು: ಶಿರ್ಷಾಸನ (Headstand). ಈ ಶಿರಷಾಸನವನ್ನ ಅಭ್ಯಾಸ ಮಾಡೋದರಿಂದ ಮೆದುಳಿನ ಭಾಗಕ್ಕೆ ರಕ್ತ ಸಂಚಾರ ಕ್ರಿಯಾಶೀಲವಾಗಿ, ಶಿರೋ ರೋಗಗಳ ಒಂದು ನಿವಾರಣೆ ಆಗುದರ ಮೂಲಕ ನಿಮ್ಮ ( Mental health in kannada ) ಮಾನಸಿಕ ರೋಗಗಳ ಸಮಸ್ಯೆಗಳು ಸಂಪೂರ್ಣವಾಗಿ ನಿವಾರಣೆ ಆಗ್ತವೆ.
- ನಂತರ: ಮೇಲೆ ವಿವರಿಸಿದ ಶಿರೋಶೋಧನ ಪ್ರಕ್ರಿಯೆಗಳನ್ನ (ಹಸ್ತಚಲನೆ, ಬೆರಳ್ ವ್ಯಾಯಾಮ, ಕರ್ಣಒತ್ತಡ, ಚಪ್ಪಾಳೆ) ಮಾಡಬೇಕು.
- ಕೊನೆಯಲ್ಲಿ: ಪ್ರಾಣಾಯಾಮ ಮಾಡಬೇಕು (ನಾಡಿಶೋಧನ, ಭ್ರಾಮರಿ, ಉಜ್ಜಾಯಿ).
ಮುಕ್ತಾಯದ ಚಿಂತನೆ
ಆತ್ಮೀಯರೇ, ಈ ಮಾಹಿತಿಯನ್ನ ಎಲ್ಲರಿಗೂ ಶೇರ್ ಮಾಡ್ಕೊಳ್ಳಿ. ಒಳ್ಳೆಯದನ್ನ ಉಳಿಸೋಣ, ಒಳ್ಳೆಯದನ್ನ ಬೆಳೆಸೋಣ, ಒಳ್ಳೆಯವರಾಗಿ ಬದುಕೋಣ. ಇರುವ ನಾಲ್ಕು ದಿವಸ ನಮ್ಮ ಜೀವನ ಎಲ್ಲರಿಗೂ ಉಪಯೋಗವಾಗುವ ರೀತಿಯಲ್ಲಿ ಇರಬೇಕು.
ಗುಣವಾಗದ ಕಠಿಣ ಕಾಯಿಲೆಗಳಿಗೆ ಯೋಗ ಮತ್ತು ಆಯುರ್ವೇದದಲ್ಲಿ ಪರಿಹಾರ ಇದೆ. ಕಂಡುಕೊಳ್ಳೋ ಪ್ರಾಮಾಣಿಕ ಪ್ರಯತ್ನ ಮಾಡಿದ್ರೆ ನೂರಾರು ವರ್ಷ ಆರೋಗ್ಯವಾಗಿ ಬದುಕಬಹುದು.
ಭಕ್ತಿಯ ಶರಣು, ಶರಣಾರ್ಥಿ.

ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850
ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.
ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು.
Discover more from
Subscribe to get the latest posts sent to your email.
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ