ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಮನೆಮದ್ದುಗಳು ಮತ್ತು ಆಹಾರ ಪದ್ಧತಿ
ಚರ್ಮವು ನಮ್ಮ ದೇಹದ ಅತ್ಯಂತ ಮಹತ್ವದ ಅಂಗಗಳಲ್ಲಿ ಒಂದಾಗಿದೆ. ಇದು ನಮ್ಮ ಆರೋಗ್ಯದ ಕನ್ನಡಿಯಾಗಿದ್ದು, ಇದರ ಕಾಂತಿ ಮತ್ತು ಆರೋಗ್ಯವು ನಮ್ಮ ಒಳಗಿನ ಪೋಷಣೆಯನ್ನು ಪ್ರತಿಬಿಂಬಿಸುತ್ತದೆ. Skin Care Tips in Kannada ಚರ್ಮವು ನಳನಳಿಸುತ್ತಾ, ಪಳಪಳಿಸುತ್ತಾ, ಹೊಳೆಯುವಂತೆ ಇರಬೇಕಾದರೆ ಅದಕ್ಕೆ ಸರಿಯಾದ ಪೋಷಕಾಂಶಗಳು ಮತ್ತು ಸರಿಯಾದ ಕಾಳಜಿ ಅಗತ್ಯವಿದೆ. ಈ ಲೇಖನದಲ್ಲಿ, ನಾವು ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳುವ ಸಹಜ ಮತ್ತು ಮನೆಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.
ಪಾಯಿಂಟ್ ಮೇಲೆ ಕ್ಲೀಕ್ ಮಾಡಿ ಓದಿ
ಚರ್ಮದ ಕಾಂತಿಗೆ ಅಗತ್ಯವಾದ ಪೋಷಕಾಂಶಗಳು Skin Care Tips in Kannada
ಚರ್ಮದ ಆರೋಗ್ಯ ಮತ್ತು ಕಾಂತಿಗೆ ಕೆಲವು ಪ್ರಮುಖ ಪೋಷಕಾಂಶಗಳು ಬಹಳ ಮುಖ್ಯವಾಗಿವೆ. ಅವುಗಳೆಂದರೆ:
- ವಿಟಮಿನ್ ಎ – ಚರ್ಮದ ಜೀವಕೋಶಗಳನ್ನು ರಿಪೇರಿ ಮಾಡುತ್ತದೆ.
- ವಿಟಮಿನ್ ಸಿ – ಕೊಲಾಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
- ವಿಟಮಿನ್ ಇ – ಆಂಟಿ-ಆಕ್ಸಿಡೆಂಟ್ ಆಗಿ ಕೆಲಸ ಮಾಡಿ ಚರ್ಮವನ್ನು ಹಾನಿಯಿಂದ ರಕ್ಷಿಸುತ್ತದೆ.
- ಜಿಂಕ್ – ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತದೆ.
- ಒಮೇಗಾ-3 ಫ್ಯಾಟಿ ಆಸಿಡ್ಗಳು – ಚರ್ಮದ ಒಣಗುವಿಕೆಯನ್ನು ತಡೆಗಟ್ಟುತ್ತದೆ.
- ವಿಟಮಿನ್ ಕೆ – ಚರ್ಮದ ಡಾರ್ಕ್ ಸರ್ಕಲ್ಗಳನ್ನು ಕಡಿಮೆ ಮಾಡುತ್ತದೆ.
ಈ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ದೇಹಕ್ಕೆ ಸಿಗಬೇಕಾದರೆ, ನಮ್ಮ ಆಹಾರ ಪದ್ಧತಿಯಲ್ಲಿ ಕೆಲವು ವಿಶೇಷ ಆಹಾರಗಳನ್ನು ಸೇರಿಸಿಕೊಳ್ಳಬೇಕು.
ಚರ್ಮದ ಕಾಂತಿಗೆ ಉತ್ತಮ ಆಹಾರಗಳು
1. ಡ್ರೈ ಫ್ರೂಟ್ಸ್ ಮತ್ತು ಬೀಜಗಳು
- ಬಾದಾಮಿ – ವಿಟಮಿನ್ ಇ ಮತ್ತು ಆಂಟಿ-ಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿದೆ.
- ಕರಿ ದ್ರಾಕ್ಷಿ – ರೆಸ್ವೆರಾಟ್ರಾಲ್ ಅಂಶವು ಚರ್ಮದ ಯುವತ್ವವನ್ನು ಕಾಪಾಡುತ್ತದೆ.
- ವಾಲ್ನಟ್ ಮತ್ತು ಪಿಸ್ತಾ – ಒಮೇಗಾ-3 ಮತ್ತು ಜಿಂಕ್ ಇದ್ದು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ.
- ಅಂಜೀರ ಮತ್ತು ಖರ್ಜೂರ – ನೈಸರ್ಗಿಕ ಸಿಹಿಯಾಗಿದ್ದು, ಚರ್ಮಕ್ಕೆ ಹೊಳಪು ನೀಡುತ್ತದೆ.

2. ಹಣ್ಣುಗಳು
- ಸ್ಟ್ರಾಬೆರಿ ಮತ್ತು ಬ್ಲೂಬೆರಿ – ಆಂಟಿ-ಆಕ್ಸಿಡೆಂಟ್ಗಳಿಂದ ತುಂಬಿದೆ.
- ಕಿತ್ತಳೆ ಮತ್ತು ಮೋಸಂಬಿ – ವಿಟಮಿನ್ ಸಿ ಯಿಂದ ಕೂಡಿದೆ.
- ಪಪ್ಪಾಯ ಮತ್ತು ದಾಳಿಂಬೆ – ಚರ್ಮದ ನಯವನ್ನು ಹೆಚ್ಚಿಸುತ್ತದೆ.
- ಬಾಳೆಹಣ್ಣು ಮತ್ತು ಮಾವಿನಹಣ್ಣು – ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. Skin Care Tips in Kannada
3. ತರಕಾರಿಗಳು
- ಕ್ಯಾರೆಟ್ ಮತ್ತು ಬೀಟ್ರೂಟ್ – ಬೀಟಾ-ಕೆರೋಟಿನ್ ಅಂಶವು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
- ಸೋರೆಕಾಯಿ ಮತ್ತು ಬೆಂಡೆಕಾಯಿ – ಚರ್ಮದ ಟಾಕ್ಸಿನ್ಗಳನ್ನು ತೆಗೆದುಹಾಕುತ್ತದೆ.
- ಬುದುಕುಂಬಳಕಾಯಿ – ಚರ್ಮದ ಒಣಗುವಿಕೆಯನ್ನು ತಡೆಗಟ್ಟುತ್ತದೆ.
4. ಸೊಪ್ಪುಗಳು
- ಮೆಂತ್ಯ ಸೊಪ್ಪು – ಪಿತ್ತಶಾಮಕ ಗುಣಗಳನ್ನು ಹೊಂದಿದೆ.
- ಪಾಲಕ್ ಸೊಪ್ಪು – ರಕ್ತವನ್ನು ಶುದ್ಧೀಕರಿಸುತ್ತದೆ.
- ಚಿಲಕರೆ ಸೊಪ್ಪು – ಚರ್ಮದ ಕಲೆಗಳನ್ನು ಕಡಿಮೆ ಮಾಡುತ್ತದೆ.
5. ಬೆಟ್ಟದ ನೆಲ್ಲಿಕಾಯಿ ರಸ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿ ರಸವನ್ನು ಕುಡಿಯುವುದರಿಂದ ರಕ್ತ ಶುದ್ಧೀಕರಣವಾಗುತ್ತದೆ, ಚರ್ಮದ ಕಾಂತಿ ಹೆಚ್ಚಾಗುತ್ತದೆ. Skin Care Tips in Kannada
ಚರ್ಮದ ಕಾಂತಿಗೆ ಮನೆಮದ್ದುಗಳು / Skin Care Tips in Kannada
1. ಎಳೆನೀರು (ತೆಂಗಿನಕಾಯಿ ನೀರು)
ತೆಂಗಿನಕಾಯಿಯ ತಿಳಿನೀರಿನಿಂದ ಮುಖವನ್ನು ತೊಳೆಯುವುದರಿಂದ ಚರ್ಮವು ಬಂಗಾರದಂತೆ ಹೊಳೆಯುತ್ತದೆ. ಇದು ಚರ್ಮದ ಟೋನ್ ಅನ್ನು ಸುಧಾರಿಸುತ್ತದೆ.
2. ಗಂಧದ ಲೇಪನ
ಶ್ರೀಗಂಧವನ್ನು ನುಣ್ಣಗೆ ತೇಯ್ದು, ಹಾಲು ಅಥವಾ ಎಳೆನೀರಿನೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 20-30 ನಿಮಿಷಗಳ ನಂತರ ತೊಳೆಯಬೇಕು.
3. ಅಲೋವೆರಾ ಮತ್ತು ಮುಲ್ತಾನಿ ಮಿಟ್ಟಿ
ಅಲೋವೆರಾ ಜೆಲ್ ಮತ್ತು ಮುಲ್ತಾನಿ ಮಿಟ್ಟಿಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಬೇಕು. ಇದು ಚರ್ಮವನ್ನು ಮೃದುವಾಗಿಸುತ್ತದೆ ಮತ್ತು ಹೊಳಪನ್ನು ನೀಡುತ್ತದೆ.
4. ಕೊಬ್ಬರಿ ಎಣ್ಣೆ ಮತ್ತು ರಕ್ತಚಂದನ
ಕೋಲ್ಡ್ ಪ್ರೆಸ್ಡ್ ಕೊಬ್ಬರಿ ಎಣ್ಣೆಯಲ್ಲಿ ರಕ್ತಚಂದನ ಪುಡಿಯನ್ನು ಕಲಿಸಿ, ದೇಹಕ್ಕೆ ಹಚ್ಚಿ 1 ಗಂಟೆ ನಂತರ ಸ್ನಾನ ಮಾಡಬೇಕು.

5. ಹುತ್ತದ ಮಣ್ಣು
ಹುತ್ತದ ಮಣ್ಣನ್ನು ನುಣ್ಣಗೆ ಪುಡಿ ಮಾಡಿ, ಎಳೆನೀರು ಅಥವಾ ಹಾಲಿನೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಬೇಕು.
6. ಅಮೃತಬಳ್ಳಿ ಮತ್ತು ತುಳಸಿ ಎಲೆಗಳ ಲೇಪನ
ಈ ಎರಡು ಎಲೆಗಳನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಚರ್ಮವು ಹೊಳೆಯುತ್ತದೆ.
ಚರ್ಮದ ಆರೋಗ್ಯಕ್ಕೆ ಸ್ನಾನದ ಸಲಹೆಗಳು Skin Care Tips in Kannada
- ಕೆಮಿಕಲ್ ಸೋಪ್ ಬದಲಿಗೆ ಕಡಲೆಹಿಟ್ಟು, ಮೆಂತ್ಯ ಪುಡಿ, ಅಂಟುವಾಳಕಾಯಿ ಪುಡಿ ಬಳಸಿ.
- ಸ್ನಾನದ ನೀರಿಗೆ ಎಳೆನೀರು ಸೇರಿಸಬಹುದು.
ತೀರ್ಮಾನ
ಚರ್ಮದ ಕಾಂತಿಯನ್ನು ಹೆಚ್ಚಿಸಲು ನಮ್ಮ ಆಹಾರ ಪದ್ಧತಿ ಮತ್ತು ಸರಿಯಾದ ಸ್ಕಿನ್ಕೇರ್ ಅತ್ಯಂತ ಮುಖ್ಯ. ನೈಸರ್ಗಿಕವಾದ ಮನೆಮದ್ದುಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾದ ಆಹಾರವು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಯೋಗ ಮತ್ತು ಆರೋಗ್ಯಕರ ಜೀವನಶೈಲಿಯೊಂದಿಗೆ ಚರ್ಮದ ಕಾಂತಿಯನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳಬಹುದು.
ಈ ಮಾಹಿತಿಯು ಉಪಯುಕ್ತವಾಗಿದ್ದರೆ, ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ ಮತ್ತು ನಮ್ಮ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ!
ಸಲಹೆ: ನಾವು ನುರಿತ ವೈದ್ಯರ ಹಾಗೂ ಯೋಗ ಗುರುಗಳ ಜ್ಞಾನ ಹಂಚುವ ಕಾಯಕ ಮಾಡುತ್ತಿದ್ದೇವೆ. ನಾವು ಹೇಳುವ ಮನೆಮದ್ದು ಹಾಗೂ ಔಷಧಿಗಳು ನಿಮ್ಮ ಹತ್ತಿರದ ವೈದ್ಯರ ಸಲಹೆ & ಸೂಚನೆ ಪಡೆದು ತೆಗೆದುಕೊಳ್ಳಿ.
ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ➤➤➤➤➤➤➤➤➤➤➤➤➤➤➤ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9980277973, 7337618850
Discover more from AYURVEDA TIPS IN KANNADA
Subscribe to get the latest posts sent to your email.