10x ವೇಗದಲ್ಲಿ ಕೂದಲಿನ Growth / ಉದ್ದ, ದಟ್ಟ, ಶೈನಿಂಗ್

ಕೂದಲು ನಮ್ಮ ದೇಹದ ಪ್ರಮುಖ ಭಾಗವಾಗಿದೆ, ಮತ್ತು ತಲೆಯ ರಕ್ಷಣೆಯಲ್ಲಿ ಇದು ಮಹತ್ವಪೂರ್ಣ ಪಾತ್ರ ವಹಿಸುತ್ತದೆ. Hair Loss Kannada / ಕೂದಲು ತಲೆಯನ್ನು ಬಿಸಿಲು, ಧೂಳು ಮತ್ತು ಇತರ ಹಾನಿಕಾರಕ ಪರಿಸರ ಅಂಶಗಳಿಂದ ರಕ್ಷಿಸುತ್ತದೆ. ಇದಲ್ಲದೆ, ಕೂದಲು ನಮ್ಮ ಸೌಂದರ್ಯ ಮತ್ತು ವ್ಯಕ್ತಿತ್ವದ ಪ್ರತೀಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಆದರೆ, ಕೂದಲಿನ ಸರಿಯಾದ ಆರೈಕೆ ಇಲ್ಲದಿದ್ದರೆ, ಅದು ಸಮಸ್ಯೆಗಳಿಗೆ ಕಾರಣವಾಗಬಹುದು. ಕೂದಲು ಒಣಗುವುದು, ಒಡೆಯುವುದು ಅಥವಾ ಉದುರುವಂತಹ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸುತ್ತವೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಪರಿಣಾಮಕಾರಿ ಮನೆಮದ್ದುಗಳನ್ನು ಇಲ್ಲಿ ನೋಡೋಣ.

ಕೂದಲಿನ ಆರೈಕೆಗೆ ಮನೆಯಲ್ಲಿ ತಯಾರಿಸಬಹುದಾದ ಎಣ್ಣೆ ಬಳಸುವುದು ಬಹಳ ಪುರಾತನ ಪದ್ಧತಿ. ಆದರೆ, ಇಂದಿನ ಮಾರ್ಕೆಟ್ನಲ್ಲಿ ದೊರಕುವ ಎಣ್ಣೆಗಳಲ್ಲಿ ಹಲವಾರು ರಾಸಾಯನಿಕಗಳು ಸೇರಿರುತ್ತವೆ, ಇದು ಕೂದಲಿಗೆ ಹಾನಿಕಾರಕವಾಗಬಹುದು. ಆದ್ದರಿಂದ, ಮನೆಯಲ್ಲೇ ನೈಸರ್ಗಿಕವಾಗಿ ತಯಾರಿಸಿದ ಎಣ್ಣೆ ಬಳಸುವುದು ಉತ್ತಮ. ಇದರಿಂದ ಕೂದಲು ದಪ್ಪವಾಗುತ್ತದೆ, ಹೊಳಪು ಬರುತ್ತದೆ, ಮತ್ತು ಬುಡ ಗಟ್ಟಿಯಾಗುತ್ತದೆ.

Hair Loss Kannada / ಮನೆಯಲ್ಲಿ ಪರಿಣಾಮಕಾರಿ ಎಣ್ಣೆ ತಯಾರಿಸಲು ಈ ವಿಧಾನವನ್ನು ಅನುಸರಿಸಿ:

ಸಾಮಗ್ರಿಗಳು : 1 ಕೆಜಿ ಕೊಬ್ಬರಿ ಎಣ್ಣೆ Coconut Oil ( ಕೋಲ್ಡ್ ಪ್ರೆಸ್ ಆಯಿಲ್ )

  • 100 ಗ್ರಾಂ ಕರಿಬೇವಿನ ಎಲೆ / Curry Leaves
  • 100 ಗ್ರಾಂ ದಾಸವಾಳದ ಎಲೆ / Hibiscus Leaves
  • 100 ಗ್ರಾಂ ದಾಸವಾಳದ ಹೂವು / Hibiscus Flower
  • 100 ಗ್ರಾಂ ನೆನೆಸಿದ ಮೆಂತ್ಯ / Methi
  • 100 ಗ್ರಾಂ ಈರುಳ್ಳಿ / Onion
  • 100 ಗ್ರಾಂ ಅಲೋವೆರಾ / ಲೋಳೆಸರದ ರಸ / Aloe Vera

ಮನೆಯಲ್ಲಿಯೇ ಅದ್ಬುತ ಹಾಗೂ ಪರಿಣಾಮಕಾರಿ ಎಣ್ಣೆ ತಯಾರಿ ಮಾಡುವ ವಿಧಾನ / Hair Loss Kannada

  • ಮೊದಲು ಕರಿಬೇವಿನ ಎಲೆ, ದಾಸವಾಳದ ಎಲೆ, ದಾಸವಾಳದ ಹೂವು, ನೆನೆಸಿದ ಮೆಂತ್ಯ, ಈರುಳ್ಳಿ, ಮತ್ತು ಅಲೋವೆರಾವನ್ನು ನುಣ್ಣಗೆ ರುಬ್ಬಿ ಪೇಸ್ಟ್ ಮಾಡಿ.
  • ನೀವು ಮಾಡಿದ ಪೇಸ್ಟ್ ಗೆ 4 ಲೀಟರ್ ನೀರಿನಲ್ಲಿ ಹಾಕಿ ಕುದಿಸಿ. ಆ ನೀರು ಕುದ್ದು ಕುದ್ದು 1 ಲೀಟರ್ ಬರಬೇಕು. ಅಲ್ಲಿಯವರೆಗೆ ಕುದಿಸಿ.
  • ನಂತರ ಈ ಕಷಾಯವನ್ನು ಸೋಸಿ, ಅರ್ಧ ಕೆಜಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಮತ್ತೆ ಕುದಿಸಿ. ನೀರಿನ ಅಂಶ ಹೋಗಿ ಔಷಧಿಯ ಸತ್ವ ಎಣ್ಣೆಯಲ್ಲಿ ಸೇರಿಕೊಳ್ಳುವವರೆಗೆ ಕುದಿಸಿ.
  • ಈ ಎಣ್ಣೆಯನ್ನು ತಲೆಗೆ ಹಚ್ಚಿ, ನ್ಯಾಚುರಲ್ ಆಗಿ ಕೂದಲಿನ ಆರೈಕೆ ಮಾಡಿಕೊಳ್ಳಬಹುದು. ಹಾಗೂ ಉದ್ದ ದಪ್ಪ ದಟ್ಟ ಆಗುತ್ತವೆ.

ಅಲೋಪೇಶಿಯಾ (ಕೂದಲು ಉದುರುವ ಸಮಸ್ಯೆ) ಗೆ ಪರಿಹಾರ / Hair Loss Kannada

ಕೆಲವರಿಗೆ ಅಲೋಪೇಶಿಯಾ ಸಮಸ್ಯೆ ಇದೆ, ಅಂದರೆ ಕೂದಲು ಉದುರಿ ತಲೆ ಬೋಳಾಗುತ್ತದೆ. ಇದನ್ನು ನಿವಾರಿಸಲು ಮನೆಯಲ್ಲಿ ತಯಾರಿಸಬಹುದಾದ ಒಂದು ವಿಭಿನ್ನ ಎಣ್ಣೆ ಮಾಡುವ ಮನೆಮದ್ದು ನೋಡಿ.

ಸಾಮಗ್ರಿಗಳು:

100 ಗ್ರಾಂ ಗುಲಗಂಜಿ ಬೀಜ

100 ಗ್ರಾಂ ಜಟಾಮಾಸಿ ಪುಡಿ

100 ಗ್ರಾಂ ಬ್ರಾಹ್ಮಿ ಚೂರ್ಣ

100 ಗ್ರಾಂ ಬೃಂಗರಾಜ್ ಚೂರು

100 ಗ್ರಾಂ ಬೆಟ್ಟದ ನೆಲ್ಲಿಕಾಯಿ ಪೇಸ್ಟ್

Hair Loss Kannada

ಮನೆಯಲ್ಲಿಯೇ ಎಣ್ಣೆ ತಯಾರು ಮಾಡುವ ಸುಲಭ ದಾರಿ

  • ಗುಲಗಂಜಿ ಬೀಜವನ್ನು ಹುರಿದು ನುಣ್ಣಗೆ ಪುಡಿ ಮಾಡಿ.
  • ಜಟಾಮಾಸಿ, ಬ್ರಾಹ್ಮಿ, ಬೃಂಗರಾಜ್ ಚೂರ್ಣ, ಮತ್ತು ಬೆಟ್ಟದ ನೆಲ್ಲಿಕಾಯಿ ಪೇಸ್ಟ್ ಕೂಡ ಸೇರಿಸಿ.
  • ಈ ಮಿಶ್ರಣವನ್ನು 4 ಲೀಟರ್ ನೀರಿನಲ್ಲಿ ಕುದಿಸಿ, ಮಿಶ್ರಣ ಕುದ್ದು ಕುದ್ದು 1 ಲೀಟರ್ ಬರಬೇಕು.
  • ನಂತರ ಸೋಸಿ, ಅರ್ಧ ಲೀಟರ್ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯಲ್ಲಿ ಹಾಕಿ ಕುದಿಸಿ.

ಈ ಎಣ್ಣೆಯನ್ನು ತಲೆಗೆ ಹಚ್ಚುವ ಮೊದಲು ದಾಳಿಂಬೆಯ ಸಿಪ್ಪೆಯಿಂದ ತಲೆಯನ್ನು ಉಜ್ಜಿ ನಂತರ ಎಣ್ಣೆ ಹಚ್ಚಿ. ಇದರಿಂದ ಕೂದಲು ಮತ್ತೆ ಬೆಳೆಯಲು ಪ್ರಾರಂಭಿಸುತ್ತದೆ.

ಕೂದಲಿನ ಆರೈಕೆಗೆ ಈ ನಿಯಮ ಪಾಲಿಸಿ / Hair Loss Kannada

  • ತಲೆಗೆ ದಿನಾಲೂ ಮಸಾಜ್ ಮಾಡುವುದರಿಂದ ತಲೆಗೆ ರಕ್ತ ಸಂಚಾರ ಚಿನ್ನಾಗಿ ಆಗುತ್ತದೆ. ಇದರಿಂದ ಕೂದಲಿನ ಬುಡ ಗಟ್ಟಿಯಾಗಿ ಮತ್ತು ಅಲೋಪೇಷಿಯಾ / ಕ್ರಿಮಿಗಳ ಕಾಟ / ಹೇನು ಶೀರ್ ಕಡಿಮೆಯಾಗುತ್ತದೆ.
  • ಬಿಸಿನೀರಿನಿಂದ ಸ್ನಾನ ಮಾಡಿದರೆ ಕೂದಲಿನ ಆರೋಗ್ಯ ಹಾಳಾಗುತ್ತದೆ. ಹೀಗೆ ಮಾಡುವುದರಿಂದ ಕೂದಲು ಉದುರುವುಕೆ / ಕೂದಲು ಬೇಗ ಒಣಗಿದಂತೆ ಆಗುವುದು / ಕೂದಲು ಅಂಟು ಅಂಟು ಆಗುವುದು ಆಗುತ್ತದೆ.
  • ಸಾಧ್ಯವಾದಷ್ಟು ಸ್ನಾನ ಮಾಡುವುದಾದರೆ ಉಗುರು ಬೆಚ್ಚಗಿನ ನೀರಿನಿಂದ ಮಾಡಿ.

ರಾಸಾಯನಿಕ ಶಾಂಪುಗಳನ್ನು ಬಳಸಬೇಡಿ :

ಕೂದಲು ಉದುರುವುದನ್ನು ತಡೆಗಟ್ಟಲು ಕೆಮಿಕಲ್ ಶಾಂಪೂ ಬಳಸಬೇಡಿ. ಶಾಂಪುವಿನ ಬದಲಾಗಿ ಅಂಟವಾಳಕಾಯಿ , ಸೀಗೆಕಾಯಿ ಬಳಸಬಹುದು ಇಲ್ಲವಾದರೆ ಮುಲ್ತಾನಿ ಮಿಟ್ಟಿ ಬಳಸಿ ತಲೆ ತೊಳೆಯುವುದು ಕೂದಲಿಗೆ ತುಂಬಾ ಉಪಯೋಗಕಾರಿ.

Hair Loss Kannada


ಕೂದಲಿಗೆ ಬೇಕಾಗುವ ಪೋಷಕಾಂಶಗಳನ್ನು ಕೊಡಿ : Hair Loss Kannada

ಕೂದಲಿಗೆ ಬಹು ಮುಖ್ಯವಾಗಿ ಪೋಷಕಾಂಶ ತುಂಬಾ ಅಗತ್ಯ ಬೆಳಿಗ್ಗೆ ಎದ್ ತಕ್ಷಣ ಒಂದು ಗ್ಲಾಸ್ ನೆಲ್ಲಿಕಾಯಿ ಜ್ಯೂಸ್ ಅಥವಾ ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಅಥವಾ ಒಂದು ಗ್ಲಾಸ್ ಬೀಟ್ರೂಟ್ ಜ್ಯೂಸ್ ದಿನಾಲೂ ಕುಡಿಯುವುದರಿಂದ ಕೂದಲಿಗೆ ಬೇಕಾಗುವ ಎಲ್ಲಾ ಪೋಷಕಾಂಶಗಳು & ಕೂದಲಿಗೆ ಅಗತ್ಯವಾದ ವಿಟಮಿನ್ ಗಳು ಹಾಗೂ ಖನಿಜಾಂಶಗಳು ದೊರೆಯುತ್ತವೆ.

ಮಲಬದ್ಧತೆ ಹಾಗೂ ಅಜೀರ್ಣ ಸಮಸ್ಯೆಗೆ ಪರಿಹಾರ : Hair Loss Kannada

ಮಲಬದ್ಧತೆ ಹಾಗೂ ಅಜೀರ್ಣ ಸಮಸ್ಯೆ ಇದ್ದರೆ ಕೂದಲಿನ ಸಮಸ್ಯೆಗಳು ನಿವಾರಣೆ ಆಗುವುದಿಲ್ಲ. ಕೂದಲಿನ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಅಜೀರ್ಣ & ಮಲಬದ್ಧತೆ ಜೀವನ ಶೈಲಿ / ಆಹಾರ ಪದ್ಧತಿ ಅನುಸರಿಸಿ ಸರಿಪಡಿಸಿಕೊಂಡು ಕೂದಲಿನ ಆರೈಕೆ ಮಾಡಿಕೊಳ್ಳಿ.

ಕೊನೆಯ ಮಾತು..

ಸುಂದರವಾದ ಕೂದಲಿನ ಆರೈಕೆ ಮತ್ತು ಆರೋಗ್ಯದ ಸಲುವಾಗಿ ನೈಸರ್ಗಿಕ ಮತ್ತು ಸರಳ ಮನೆಮದ್ದುಗಳು ಬಹಳ ಉಪಯುಕ್ತವಾಗಿವೆ. ಮನೆಯಲ್ಲೇ ತಯಾರಿಸಿದ ಎಣ್ಣೆಗಳ ಮಸಾಜ್ , ಮತ್ತು ಆಹಾರಗಳಿಂದ ದೊರಕುವ ಪೋಷಕಾಂಶಗಳು ಕೂದಲಿನ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ನಿಯಮಿತವಾಗಿ ದಿನಾಲೂ ಕೂದಲಿನ ಆರೈಕೆ ಮಾಡುವುದರಿಂದ ಕೂದಲು ದಪ್ಪ / ಉದ್ದ ಹಾಗೂ ದಟ್ಟವಾಗುತ್ತದೆ, ಹೊಳಪು ಹೆಚ್ಚುತ್ತದೆ, ಮತ್ತು ಆರೋಗ್ಯಕರವಾಗಿರುತ್ತದೆ. ಆದ್ದರಿಂದ, ನಿಮ್ಮ ಕೂದಲಿನ ಆರೈಕೆಗೆ ಈ ಸರಳ ಮತ್ತು ಪರಿಣಾಮಕಾರಿ ಮನೆಮದ್ದುಗಳನ್ನು ಬಳಸಿಕೊಂಡು, ಕೂದಲಿನ ಸಮಸ್ಯೆಗಳಿಂದ ದೂರವಿರಿ.

https://youtu.be/F9_jh69ZB5g?si=jMUQz-WXfN7uP7vC

ಕೂದಲಿನ ಆರೈಕೆಗೆ ಹೆಚ್ಚಿನ ಸಲಹೆಗಳು ಮತ್ತು ಮನೆಮದ್ದುಗಳು / Hair Loss Kannada

  • ಕೂದಲಿನ ಆರೈಕೆಗೆ ಮನೆಯಲ್ಲಿ ತಯಾರಿಸಬಹುದಾದ ಎಣ್ಣೆಗಳು ಮತ್ತು ಮನೆಮದ್ದುಗಳ ಜೊತೆಗೆ, ಇನ್ನೂ ಹಲವಾರು ಸರಳ ಮತ್ತು ಪರಿಣಾಮಕಾರಿ ವಿಧಾನಗಳಿವೆ. ಕೂದಲು ನಮ್ಮ ದೇಹದ ಪ್ರಮುಖ ಭಾಗವಾಗಿರುವುದರಿಂದ, ಅದರ ಆರೈಕೆಗೆ ವಿಶೇಷ ಗಮನ ನೀಡುವುದು ಅತ್ಯಂತ ಅಗತ್ಯವಾಗಿದೆ. ಇಲ್ಲಿವೆ ಕೆಲವು ಹೆಚ್ಚುವರಿ ಸಲಹೆಗಳು ಮತ್ತು ಮನೆಮದ್ದುಗಳು.
ಹೆಣ್ಣುಮಕ್ಕಳಿಗೆ ಕೂದಲಿನ ಆರೈಕೆ: ಹಾಗೂ ಸೌಂದರ್ಯ ಕಾಪಾಡುವ ಟಿಪ್ಸ್
  • ಹೆಣ್ಣುಮಕ್ಕಳ ಕೂದಲು ಸಾಮಾನ್ಯವಾಗಿ ಉದ್ದವಾಗಿರುತ್ತದೆ ಮತ್ತು ಹೆಚ್ಚು ಆರೈಕೆಯ ಅಗತ್ಯವಿರುತ್ತದೆ. ಹೆಣ್ಣುಮಕ್ಕಳು ನಿಯಮಿತವಾಗಿ ತಲೆಗೆ ಎಣ್ಣೆ ಹಚ್ಚಿ , ಚನ್ನಾಗಿ ತಲೆಗೆ ಮಸಾಜ್ ಮಾಡುವದರಿಂದ ಕೂದಲು ಸೊಂಪಾಗಿ ಬೆಳೆಯಲು ಕಾರಣವಾಗುತ್ತದೆ. ಹಾಗೂ ಕೆಮಿಕಲ್ ಇಲ್ಲದ ಶಾಂಪೂ ಬಳಸುವುದು ತುಂಬಾ ಅಗತ್ಯ. ಹೆಣ್ಣುಮಕ್ಕಳು ತಲೆಗೆ ಹೆಚ್ಚು ಕೆಮಿಕಲ್ / ರಾಸಾಯನಿಕ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸಬೇಕು. ಅವುಗಳ ಬದಲಾಗಿ, ಅಂಟವಾಳಕಾಯಿ, ಸೀಗೆಕಾಯಿ, ಮತ್ತು ಮುಲ್ತಾನಿ ಮಿಟ್ಟಿಯಂತಹ ನೈಸರ್ಗಿಕ ಕೆಮಿಕಲ್ ಇಲ್ಲದ ಉತ್ಪನ್ನಗಳನ್ನು ಬಳಸಬಹುದು.
  • ಕವಲೊಡೆದ ಕೂದಲು ಮತ್ತು ಒಣಗಿದ ಕೂದಲಿಗೆ ಸುಲಭ ಪರಿಹಾರ: Hair Loss Kannada
    ಕವಲೊಡೆದ ಕೂದಲು ಆಗುವುದು ಮತ್ತು ಒಣಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರವಾಗಿ, ಮನೆಯಲ್ಲಿ ತಯಾರಿಸಬಹುದಾದ ಹೆಚ್ಚು ಪರಿಣಾಮಕಾರಿ ಮನೆಮದ್ದುಗಳಿವೆ. ಮೊಟ್ಟೆಯ ಹಳದಿ ಭಾಗವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಮೃದುವಾಗುತ್ತದೆ ಮತ್ತು ಕವಲೊಡೆದ ಕೂದಲಿನ ಸಮಸ್ಯೆ ದೂರವಾಗುತ್ತದೆ. ಅದೇ ರೀತಿ, ತುಳಸಿ ಎಲೆಗಳನ್ನು ನುಣ್ಣಗೆ ಅರೆದು ಕೂದಲಿಗೆ ಹಚ್ಚುವುದರಿಂದ ಕೂದಲು ಹೆಚ್ಚು ಹೊಳಪು ಮತ್ತು ಅಂದವಾಗಿ ಬರುತ್ತದೆ.
  • ಕೂದಲಿನ ಆರೋಗ್ಯಕ್ಕೆ & ಹೊಳಪುಯುಕ್ತ ಕಾಣಲು ಆಹಾರವೂ ಬಹಳ ಮುಖ್ಯ. ಪ್ರೋಟೀನ್, ವಿಟಮಿನ್ಸ್, ಮತ್ತು ಕೂದಲಿಗೆ ಬೇಕಾಗುವ ಖನಿಜಗಳು ಕೂದಲಿನ ಬೆಳವಣಿಗೆಗೆ ಅಗತ್ಯ. Almond / ಬಾದಾಮಿ, Rice / ಅಕ್ಕಿ, ಮತ್ತು ಹಣ್ಣುಗಳು & ತರಕಾರಿಗಳು ಕೂದಲಿನ ಆರೋಗ್ಯಕ್ಕೆ ಉತ್ತಮ. ಬೆಳಗ್ಗೆ ಎದ್ದು ನೆಲ್ಲಿಕಾಯಿ ಜ್ಯೂಸ್,/ Amla Juice / Carrot Juice / ಕ್ಯಾರೆಟ್ ಜ್ಯೂಸ್, ಅಥವಾ Beetroot Juice / ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಕೂದಲಿನ ಪೋಷಣೆಗೆ ಅಗತ್ಯವಾದ ಪ್ರೋಟೀನ್, ವಿಟಮಿನ್ಸ್ ಪೋಷಕಾಂಶಗಳು ದೊರಕುತ್ತವೆ.
  • ಕೂದಲಿನ ಸಮಸ್ಯೆಗಳಿಗೆ ಯೋಗ ಮತ್ತು ಧ್ಯಾನ ಮಾಡುವುದು ಮನೆಮದ್ದು :
    ಯೋಗ ಮತ್ತು ಧ್ಯಾನ ಮಾಡುವುದರಿಂದ ಕೂದಲಿನ ಯಾವುದೇ ಸಮಸ್ಯೆಗಳಿರಲಿ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಯೋಗಾಸನಗಳು ಮತ್ತು ಪ್ರಾಣಾಯಾಮಗಳು ರಕ್ತಸಂಚಾರವನ್ನು ಸರಾಗವಾಗಿ ಆಗುವಂತೆ ಮಾಡುತ್ತವೆ. ಇದರಿಂದ ಕೂದಲಿನ ತಳ/ ಬುಡ ಗಟ್ಟಿಯಾಗುತ್ತದೆ ಮತ್ತು ಕೂದಲು ಹೆಚ್ಚು ಹೊಳಪು / ಶೈನಿಂಗ್ ಆಗುತ್ತವೆ. ದಿನಾಲೂ ಯೋಗ ಮಾಡುವುದರಿಂದ ಕೂದಲಿನ ಸಮಸ್ಯೆಗಳು ಕಡಿಮೆಯಾಗುತ್ತವೆ.
  • ಕೂದಲಿನ ಆರೈಕೆಗೆ & ಸೌಂದರ್ಯ ಹೆಚ್ಚಿಸಲು ನಿಯಮಿತವಾಗಿ ಕೂದಲು ಕತ್ತರಿಸುವುದು ಉತ್ತಮ:
  • ಕೂದಲನ್ನು ನಿಯಮಿತವಾಗಿ ಕತ್ತರಿಸುವುದರಿಂದ ಕೂದಲು ಹೆಚ್ಚು ಹೊಳಪು / ದಟ್ಟವಾಗಿ ಬರುತ್ತವೆ. ಮತ್ತು ಶೈನಿಂಗ್ ಹಾಗೂ ಉದ್ದನೆಯ ಕೂದಲು & ಕವಲೊಡೆದ ಕೂದಲು ಬರಬಾರದು ಅಂದ್ರೆ ಸಮಯಕ್ಕೆ ಸರಿಯಾಗಿ ಕೂದಲು ಕತ್ತರಿಸುವುದು ತುಂಬಾ ಅಗತ್ಯ.