ಇಂದಿನ ಸಂಚಿಕೆಯಲ್ಲಿ, Kudalu Kappagalu / ಬಿಳಿ ಕೂದಲನ್ನು ಕಪ್ಪಾಗಿಸುವುದಕ್ಕೆ ಯಾವ ಮನೆಮದ್ದನ್ನು ಬಳಸಬೇಕು? ಈ ಕುರಿತಾಗಿರುವಂತಹ ಮಾಹಿತಿಯನ್ನು ನೋಡೋಣ. ನಾವು ಹಿಂದಿನ ಸಂಚಿಕೆಯಲ್ಲಿ ಈ ವಿಚಾರವಾಗಿ ಒಂದು ಆರ್ಟಿಕಲ್ ಬರೆದಿದ್ದೇವೆ.
ಬಹಳಷ್ಟು ಜನರು ನಾವು ಹೇಳಿರುವ ಮನೆ ಮದ್ದಿನಿಂದ ಅವರ ಸಮಸ್ಯೆಯನ್ನು ಪರಿಹಾರ ಮಾಡಿಕೊಂಡಿದ್ದಾರೆ. ಹೇಳಿರುವಂತಹ ಆ ಮನೆ ಮದ್ದನ್ನು ಮಾಡಿಕೊಂಡು ಬಹಳಷ್ಟು ಜನರು ತಮ್ಮ ಕೂದಲುಗಳಿಗೆ ಯಾವುದೇ ಕಲರ್ ಮಾಡಿಕೊಳ್ಳದೆ ಅವರ ಕೂದಲುಗಳು ಎಷ್ಟು ಕಪ್ಪಾಗಿ ಇವೆ ಎಷ್ಟು Shining ಇದೆ ಎಂದರೆ, Beauty Parlour ಗೆ ಹೋದಾಗ ಅವರನ್ನು ನೋಡಿ ಜನರು ಇಷ್ಟೊಂದು Kudalu Kappagalu / ಕಪ್ಪಾಗುವುದಕ್ಕೆ ನೀವು ಯಾವ ಕಲರ್ ಹಾಕಿದ್ದೀರ ಎಂದು ಕೇಳುತ್ತಿದ್ದಾರಂತೆ.
ಅಷ್ಟೊಂದು Natural ಆಗಿ ಬಿಳಿ ಆಗದೆ ಇರುವ ಹಾಗೆ Kudalu Kappagalu / ಕೂದಲುಗಳು ಕಪ್ಪಗೆ ಮತ್ತು Shining ದಿಂದ ಇವೆ. ಅವರು ನಮ್ಮ ಆಶ್ರಮಕ್ಕೆ ಬಂದು ತಮ್ಮ ಅನುಭವವನ್ನು ನಮ್ಮ ಜೊತೆಗೆ ಹಂಚಿಕೊಂಡು ಹೋಗಿದ್ದಾರೆ. ಅದನ್ನು ನೋಡಿದ ಜನರು ಮತ್ತೆ ಆ ಮನೆ ಮದ್ದಿನ ಬಗ್ಗೆ ವಿಡಿಯೋ ಮಾಡಿ ಗುರುಗಳೇ, ಎಂದು ಕೇಳಿಕೊಳ್ಳುತ್ತಿದ್ದಾರೆ. ಆದ್ದರಿಂದ ನಾವು ಮತ್ತೆ ಆ ಮನೆಮದ್ದಿನ ಬಗ್ಗೆ ಹೇಳಬೇಕೆಂದು ಅಂದುಕೊಂಡಿದ್ದೇವೆ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ಹೈ ಬಿಪಿ ಲೋ ಬಿಪಿ ಪರಿಣಾಮಕಾರಿ ಮನೆಮದ್ದು..!
ಈ ಮನೆ ಮದ್ದನ್ನು 9 ದಿವಸದಲ್ಲಿ ತಯಾರಿಸಲು ಬರುತ್ತದೆ. ಇದನ್ನು ನೀವು ಬಳಸಿದರೆ Permanent ಆಗಿ ನಿಮ್ಮ ಕೂದಲು ಕಪ್ಪಾಗುತ್ತದೆ. ಅಷ್ಟು ಅದ್ಭುತವಾಗಿರುವಂತಹ ಮನೆಮದ್ದು ಇದು.
Kudalu Kappagalu / ತಲೆ ಕೂದಲು ಕಪ್ಪಾಗುವುದಕ್ಕೆ ಮನೆ ಮದ್ದು
ಸೀಬೆ ಗಿಡದ ಎಲೆ. ನಮ್ಮ ಉತ್ತರ ಕರ್ನಾಟಕದ ಕಡೆ ಪೇರಲೆ ಗಿಡ ಎಂದು ಕರೆಯುತ್ತಾರೆ. ಈ ಪೇರಲೆ ಗಿಡದ ಎಲೆಯಿಂದ ಪೇಸ್ಟ್ ತಯಾರಿಸಿಕೊಳ್ಳಬೇಕು. ಆ ಪೇಸ್ಟ್ 50 ಗ್ರಾಂ ನಷ್ಟು ಇರಬೇಕು. ಅಷ್ಟೇ ಸಮ ಪ್ರಮಾಣದಲ್ಲಿ ಮೆಹಂದಿ ಪೌಡರ್ ತೆಗೆದುಕೊಳ್ಳಬೇಕು.
ಇದು ಕೂಡ ಅದರಲ್ಲಿ ಮಿಕ್ಸ್ ಮಾಡಿಕೊಳ್ಳಬೇಕು. ಮತ್ತು ಇದರಲ್ಲಿ 40 ರಿಂದ 50 ಎಂಎಲ್ ನಷ್ಟು ನಿಂಬೆಹಣ್ಣಿನ ರಸ ಸೇರಿಸಿಕೊಳ್ಳಬೇಕು. ಇವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಕಬ್ಬಿಣದ ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಬೇಕು. ಎರಡು ಮೂರು ದಿವಸ ಆದ ನಂತರ ಅದನ್ನು ತೆಗೆದು ನೋಡಬೇಕು.
ಕೆಲವು ಸಂದರ್ಭದಲ್ಲಿ ಅದು Boost ಬರುತ್ತಿರುತ್ತದೆ. ಹಾಗೆ ಬರುತ್ತಿದೆ ಎಂದರೆ ಒಂದು ಕಡ್ಡಿಯಿಂದ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಮತ್ತೆ ಮುಚ್ಚಿಡಬೇಕು. ಅದರಲ್ಲಿ ಹವೆ ಹೋಗದ ರೀತಿಯಲ್ಲಿ ಮುಚ್ಚಡಬೇಕು. ಮತ್ತೆ ಅದನ್ನು ತೆಗೆದು ನೋಡುತ್ತಾ ಇರಬೇಕು. ಅದರಲ್ಲಿ Boost ಬರುತ್ತಿದೆ ಎಂದರೆ, ಮತ್ತೆ ಅದನ್ನು ಒಂದು ಕಡ್ಡಿಯಿಂದ ಮಿಕ್ಸ್ ಮಾಡಿ ಮುಚ್ಚಿಡಬೇಕು.
ಹೀಗೆ ಎರಡು ದಿವಸಕ್ಕೊಮ್ಮೆ ಮೂರು ದಿವಸಕೊಮ್ಮೆ ಮಿಶ್ರಣ ಮಾಡಿ ಇಡುತ್ತಿರಬೇಕು. ಇದು 9 ದಿವಸದಲ್ಲಿ ಅಥವಾ 10 ದಿವಸದಲ್ಲಿ Kudalu Kappagalu / ಎಷ್ಟು ಕಪ್ಪಗೆ ಆಗುತ್ತದೆ ಎಂದರೆ? ಅಕಸ್ಮಾತಾಗಿ ಅದು ನಿಮ್ಮ ಬಟ್ಟೆ ಮೇಲೆ ಬಿದ್ದರೆ ಆ ಕಲೆ ಹೋಗುವುದೇ ಇಲ್ಲ. ಬಟ್ಟೆ ಹರಿದರು ಕೂಡ ಕಲೆ ಹೋಗುವುದಿಲ್ಲ. ಅಷ್ಟೊಂದು Permanent ಆಗಿ ಕಪ್ಪಾಗುವ ವ್ಯವಸ್ಥೆಗೆ ಬರುತ್ತದೆ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ಗಜಕರ್ಣ / ಕಜ್ಜಿ /ತುರಿಕೆಗೆ ಮನೆಮದ್ದು..!
ಆದರೆ ಅದನ್ನು ಕಬ್ಬಿಣದ ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಬೇಕು. ಅದನ್ನು ನೀವು ತಲೆಗೆ ಹಚ್ಚಿಕೊಂಡರೆ, ಯಾವ ಅಪಾಯ ಇಲ್ಲ. ಅದ್ಭುತವಾಗಿ ನಿಮ್ಮ ತಲೆಯ ಕೂದಲುಗಳು ಕಪ್ಪಾಗುತ್ತವೆ.
Kudalu Kappagalu / ಸೀಬೆ ಎಲೆಯ ಪೇಸ್ಟ್
ಮೊದಲು ನೀವು ಉಪಯೋಗಿಸುವ Chemical Hair Dye ಇದೆಯಲ್ಲ, ಅದನ್ನು ಸ್ವಚ್ಛವಾಗಿ ತೊಳೆಯಬೇಕು. ಅದರ ಕಲರ್ ಸಂಪೂರ್ಣವಾಗಿ ಹೋಗಬೇಕು. ಅರ್ಧಂಬರ್ಧ ಹಾಗೆ ಇರಬಾರದು. ಸಂಪೂರ್ಣವಾಗಿ ಅದರ ಕಲರ್ ಹೋಗಿ ಅದು ಬೆಳ್ಳಗೆ ಆಗಬೇಕು. ಅದರ ಬಣ್ಣ ಹೋದ ನಂತರವೇ ಅದನ್ನು ಉಪಯೋಗ ಮಾಡಬೇಕು.
ಹೋಗದೆ ಇದ್ದಾಗ, ಅದರ ಬಣ್ಣದೊಂದಿಗೆ ಈ ಲೇಪನ ಮಿಶ್ರಣವಾಗಿ ತೊಂದರೆಯಾಗುತ್ತದೆ. ಬಹಳ ಬೇಗ ನಿಮ್ಮ ಕಲರ್ ಹೋಗುತ್ತದೆ. ಹಳೆಯ ಕಲರ್ ಹಚ್ಚಿಕೊಂಡಿರುವುದು ಸಂಪೂರ್ಣವಾಗಿ ಹೋಗಬೇಕು. ಆಗ ಈ ಲೇಪನದ ಮಿಶ್ರಣವನ್ನು ಹಚ್ಚಿಕೊಳ್ಳಬೇಕು. ಇದನ್ನು ಹಚ್ಚಿಕೊಳ್ಳುವುದರಿಂದ ತಲೆ ಕೂದಲುಗಳಲ್ಲಿ Chemical ಗಳ Reaction ಆಗಿರುತ್ತದೆ.
ಅದರ ಮೇಲೆಯೆ ಇದನ್ನು ಹಚ್ಚಿಕೊಳ್ಳುವುದರಿಂದ ಅದು ಅಷ್ಟು ಪ್ರಭಾವಕಾರಿಯಾಗಿ ಕುಳಿತುಕೊಳ್ಳುವುದಿಲ್ಲ. Hair colour ಹಚ್ಚಿಕೊಳ್ಳುವುದರಿಂದ Cancer ಬರುತ್ತದೆ. Scalp Cancer ಬರುತ್ತದೆ. ಅದರಿಂದ ಚರ್ಮದ ಅಲರ್ಜಿಗಳು ಬರುತ್ತವೆ. Blood Cancer ಕೂಡ ಇದರಿಂದ ಬರುತ್ತದೆ. ಮೆದುಳಿನಲ್ಲಿ ತೊಂದರೆಗಳು ಉಂಟಾಗುತ್ತವೆ.
ಮಾನಸಿಕ ರೋಗಗಳು ಬರುತ್ತವೆ. ಈ ಎಲ್ಲಾ ಸಮಸ್ಯೆಗಳು ಬರುವುದಕ್ಕೆ ಮೂಲ ಕಾರಣ chemical colour ಬಳಕೆ ಮಾಡುವುದು. ಆದ್ದರಿಂದ Chemical Colour ಇಂದಿನಿಂದಲೇ ಬಿಡಬೇಕು. ಬಿಟ್ಟು ಅದು ಸಂಪೂರ್ಣವಾಗಿ ಹೋದಮೇಲೆ ಈ ಲೇಪನವನ್ನು ಹೇಗೆ ಮಾಡಿಕೊಳ್ಳಬೇಕು?
Kudalu Kappagalu / ಸೀಬೆ ಎಲೆಯ ಪೇಸ್ಟ್ ಯಾವ ಸಮಯದಲ್ಲಿ ಮತ್ತು ಹೇಗೆ ಉಪಯೋಗ ಮಾಡಬೇಕು?
ಇದನ್ನು ರಾತ್ರಿ ಮಲಗುವಾಗ ಹಚ್ಚಿಕೊಂಡು ಮಲಗಬೇಕು. ಇದು ಕೂದಲುಗಳನ್ನು ಸೀಳಿ ಸೀಳಿ ಬುಡದಿಂದ ತುದಿಯವರೆಗೂ ತಲೆ ಬಾಚುವುದರ ಮೂಲಕ ಚೆನ್ನಾಗಿ ಹಚ್ಚಿಕೊಳ್ಳಬೇಕು. ಹೀಗೆ ಹಚ್ಚಿಕೊಂಡು ಬೆಳಗ್ಗೆ ಎದ್ದು, ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಉಗುರು ಬೆಚ್ಚಗಿನ ನೀರಿನಲ್ಲಿ ತಲೆಯನ್ನು ತೊಳೆದುಕೊಳ್ಳಬೇಕು. ಆಮೇಲೆ ಅದನ್ನು ಚೆನ್ನಾಗಿ ಒರೆಸಿಕೊಂಡು ಹಾಗೆ ಬಿಡಬೇಕು.
ಬಿಟ್ಟು ಮಧ್ಯಾಹ್ನದ ಹೊತ್ತಿಗೆ ಅಂಟ್ವಾಳದ ಕಾಯಿ ಹಾಕಿ ತಲೆಯನ್ನು ತೊಳೆದುಕೊಳ್ಳಬೇಕು. ಅಥವಾ ಮುಲ್ತಾನಿ ಮಿಟ್ಟಿಯನ್ನು ಹಾಕಿ ತಲೆ ತೊಳೆದುಕೊಳ್ಳಬೇಕು. ಇದಿಷ್ಟನ್ನು ಮಾಡಿ, ಮತ್ತೆ ಎರಡು ಮೂರು ದಿವಸ ಬಿಟ್ಟು, ಮತ್ತೆ ತಲೆಯನ್ನು ತೊಳೆದುಕೊಳ್ಳಬೇಕು. ಯಾವುದೇ Chemical Shampoo ಹಾಕಬಾರದು. ಹೀಗೆ ಮಾಡಿದರೆ ನಿಮ್ಮ ಜೀವನ ಇರುವವರೆಗೂ ತಲೆ ಕೂದಲು ಕಪ್ಪಾಗಿರುತ್ತವೆ. ನೀವು ಹಚ್ಚಿಕೊಂಡಿರುವ ಆ ಲೇಪನ ಹೋಗುವುದೇ ಇಲ್ಲ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ಬೆಳ್ಳಗೆ ಪಳ ಪಳ ಅಂತ ಹೊಳೆಯಬೇಕು..!
ಇದು Permanent Hair Colour. ಇದನ್ನು ಪದೇಪದೇ ಹಚ್ಚಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಕೂದಲುಗಳು ಎಷ್ಟು Shining ಆಗುತ್ತವೆ ಎಂದರೆ? ನಿಮ್ಮ ಕೂದಲುಗಳು ಮಿಂಚಿನಂತೆ ಪಳಪಳ ಹೊಳೆಯುತ್ತವೆ. ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆಯಿಂದ ತುಂಬಾ ಜನರಿಗೆ ಮದುವೆ ಆಗುತ್ತಿಲ್ಲ.
ತುಂಬಾ ಜನರಿಗೆ ಕನ್ಯೆಯನ್ನು ಕೊಡುತ್ತಿಲ್ಲ. ಹಲವಾರು ಜನರಿಗೆ ಗಂಡು ಸಿಗುತ್ತಿಲ್ಲ. ಹಲವಾರು ಜನರು ಕೂದಲುಗಳು ಬೆಳ್ಳಗೆ ಆಗುತ್ತಿವೆ, ಎಂದು ಮಾನಸಿಕವಾಗಿ ನೊಂದು ಬೆಂದು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ. ಇಂತಹ ಚಿಕ್ಕ ಪುಟ್ಟ ಸಮಸ್ಯೆಗಳಿಂದ ಅಷ್ಟು ದೊಡ್ಡ ಅಪರಾಧವನ್ನು ಅವರು ಏಕೆ ಮಾಡುತ್ತಾರೆ ಎಂದು ನಮಗೆ ಗೊತ್ತಾಗುತ್ತಿಲ್ಲ.
ಆದ್ದರಿಂದ ನಿಮ್ಮೆಲ್ಲರಿಗೂ ಒಂದು ಸಮಾಧಾನದ ಚಿಕಿತ್ಸೆ ಎಂದರೆ ಈ ಲೇಪನ. ಕೂದಲುಗಳು Permanent ಆಗಿ ಕಪ್ಪಾಗುವುದಕ್ಕೆ ಈ ಲೇಪನ ಅದ್ಭುತವಾದ ಮನೆ ಮದ್ದು. ನಮ್ಮ ಅಂದಾಜಿನ ಪ್ರಕಾರ ಇದು 10 ರಿಂದ 12 ವರ್ಷದವರೆಗೂ ಈ ಬಣ್ಣ ಹೋಗುವುದೇ ಇಲ್ಲ. ಇದು Permanent ಆಗಿ ಹೋಗುವುದಿಲ್ಲ ಎಂದು ನಾವು ಹೇಳುತ್ತೇವೆ. ಆದರೂ ಸಹಿತ ಇದು ಒಂದು ಸಲ ಹಚ್ಚಿಕೊಂಡರೆ, 10 ರಿಂದ 12 ವರ್ಷದವರೆಗೂ ಇದರ ಬಣ್ಣ ಹೋಗುವುದಿಲ್ಲ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ ➤➤ ಡಯಾಬಿಟಿಸ್ ಎನ್ನುವಂತಹ ಸಮಸ್ಯೆ
ಇದು ಅಷ್ಟು ಅದ್ಭುತವಾಗಿರುವಂತಹ ಮನೆಮದ್ದು. ಇದನ್ನು ನೀವು ಸರಿಯಾಗಿ ಮಾಡಿಕೊಳ್ಳಬೇಕು. ಆಮೇಲೆ ರಾಸಾಯನಿಕ ಯುಕ್ತ ಶಾಂಪೂಗಳನ್ನು ಬಳಕೆ ಮಾಡಬಾರದು. ರಾಸಾಯನಿಕ ಶಾಂಪೂಗಳನ್ನು ಬಳಕೆ ಮಾಡುವುದರಿಂದ ಆ ಬಣ್ಣ ಮತ್ತೆ ಎರಡು ಮೂರು ವರ್ಷದಲ್ಲಿ ಹೋಗಿಬಿಡುತ್ತದೆ.
ಅದರ ಬದಲಾಗಿ Kudalu Kappagalu / Natural ಆಗಿರುವಂತಹ ಶೀಗೆಕಾಯಿ, ಚಿಗರೆ ಪೌಡರ್, ಕುದಿಸಿರುವ ಅಂಟ್ವಾಳ ಕಾಯಿಯ ರಸ, ಹೀಗೆ Natural ಆಗಿರುವಂತಹ Application ಕೂದಲುಗಳಿಗೆ ಮಾಡಿಕೊಳ್ಳಬಹುದು.
ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850
ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.
ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು.
Can it be used for beard as well?
Or only for head?