ನಾವು ಬಾಳೆ ದಿಂಡಿನ ( Banana Stem ) ಆರೋಗ್ಯದ ಲಾಭಗಳನ್ನ ಕುರಿತಾಗಿ ಮಾಹಿತಿಗಳನ್ನ ನೋಡೋಣ. ಬಾಳೆಹಣ್ಣು, ಬಾಳೆ ಎಲೆ ಮತ್ತು ಬಾಳೆ ದಿಂಡು (ಕಾಂಡ) ಇವೆಲ್ಲವೂ ಸಂಪೂರ್ಣವಾಗಿ ಉಪಯೋಗಿಸಲ್ಪಡುವ ಒಂದು ವ್ಯವಸ್ಥೆಯನ್ನು ಹೊಂದಿರುವುದರಿಂದ, ಈ ಸಸ್ಯವು ಸರ್ವಾಂಗೀಣವಾಗಿ ಉಪಯುಕ್ತವಾಗಿದೆ. ಇಂದು ನಾವು ಗಮನಹರಿಸುವುದು ಅದರ ಕಾಂಡ ಭಾಗದ ರಹಸ್ಯಗಳ ಮೇಲೆ.
ಪಾಯಿಂಟ್ ಮೇಲೆ ಕ್ಲೀಕ್ ಮಾಡಿ ಓದಿ..!
ಬಾಳೆ ದಿಂಡು ( ಕದಳಿ ಕಾಂಡ ) ( Banana Stem ) ಎಂದರೆ ಏನು?
ಬಾಳೆಗೆ ಸಂಸ್ಕೃತದಲ್ಲಿ ಕದಳಿ ಫಲ ಎಂದು ಹೆಸರು. ಬಾಳೆ ಮರವನ್ನು ಕದಳಿ ವೃಕ್ಷ ಎಂದು ಕರೆಯಲಾಗುತ್ತದೆ. ಈ ಒಂದು ಕದಳಿ ಕಾಂಡದ ಸ್ವರಸ (ಬಾಳೆ ದಿಂಡಿನ ರಸ) ಬಹಳ ಉಪಯೋಗಕಾರಿಯಾಗಿದ್ದು, ನಮಗೆ ಅನೇಕ ಆರೋಗ್ಯದ ಲಾಭಗಳನ್ನು ನೀಡುತ್ತದೆ ಎಂದು ಆಯುರ್ವೇದ ಶಾಸ್ತ್ರದ ಉಲ್ಲೇಖವನ್ನು ನಾವು ಕಾಣಬಹುದು.
ಬಾಳೆ ದಿಂಡಿನ ಇದರ ಗುಣಧರ್ಮಗಳು:
ಈ ಬಾಳೆ ದಿಂಡು ( Banana Stem ) ಬಹಳ ಮುಖ್ಯವಾಗಿ ಶೀತ ವೀರ್ಯ ಗುಣಧರ್ಮವನ್ನ ಹೊಂದಿರತಕ್ಕಂತದ್ದು. ಅಂದರೆ, ಇದು ದೇಹಕ್ಕೆ ತಂಪು ಕೊಡುವ ಸ್ವಭಾವ ಹೊಂದಿದೆ. ಇದರಲ್ಲಿ ವಿಟಮಿನ್ ಬಿ, ಆಂಟಿ-ಆಕ್ಸಿಡೆಂಟ್ಗಳು, ನೈಟ್ರಿಕ್ ಆಕ್ಸೈಡ್, ಪೊಟ್ಯಾಶಿಯಂ ಹಾಗೂ ಇತರ ಹಲವಾರು ವಿಟಮಿನ್ಸ್ಗಳು ಮತ್ತು ಮಿನರಲ್ಸ್ಗಳು ಇವೆ. ಈ ಎಲ್ಲಾ ಪೋಷಕ ಸತ್ವಗಳನ್ನು ಹೊಂದಿರುವ ಬಾಳೆ ಬಿಂಡು ಮುಖ್ಯವಾಗಿ ನಮ್ಮ ಶರೀರದಲ್ಲಿರುವ ಪಿತ್ತ ವಿಕಾರಗಳನ್ನ ಸರಿಪಡಿಸುವ ಹಾಗೂ ಶರೀರದಲ್ಲಿ ಉಂಟಾಗಿರುವ ಇನ್ಫ್ಲಮೇಷನ್ (ಉರಿಯುತವನ್ನ) ಸರಿಪಡಿಸುವ ಶಕ್ತಿಯನ್ನ ಹೊಂದಿರತಕ್ಕಂತದ್ದು.
ಬಾಳೆ ದಿಂಡಿನ ( Banana Stem ) ರಸದ ಪ್ರಮುಖ ಆರೋಗ್ಯ ಲಾಭಗಳು
1. ಮೂತ್ರಪಿಂಡದ ಕಲ್ಲು ( ಕಿಡ್ನಿ ಸ್ಟೋನ್ ) ಕರಗಿಸಲು
ಮೂತ್ರಪಿಂಡದಲ್ಲಿ ಕಲ್ಲುಗಳಾಗತಕ್ಕಂತದ್ದು ( ಕಿಡ್ನಿ ಸ್ಟೋನ್ ) ಅನ್ನ ಕರಗಿಸಲಿಕ್ಕೆ ಇದರ ಒಂದು ಸ್ವರಸ ಬಹಳ ಉಪಯೋಗಕಾರಿಯಾಗಿ ಕೆಲಸ ಮಾಡುತ್ತೆ. ಇದರ ಸ್ವರಸದಲ್ಲಿ ಒಂದು ನಾಲ್ಕರಿಂದ ಆರು ಚಮಚ ಮುಟ್ಟಿದರ ಮನಿ ಸೊಪ್ಪಿನ ರಸವನ್ನು ಹಾಕಿ, ನೀವು ಬೆಳಗ್ಗೆ ಪ್ರತಿದಿವಸ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡೋದ್ರಿಂದ ನಿಮ್ಮಲ್ಲಿ ಇರುವ ಕಿಡ್ನಿ ಸ್ಟೋನ್ ಬಹಳ ಬೇಗ ಕರಗುತ್ತದೆ. ಒಂದು ತಿಂಗಳಲ್ಲಿನೇ ನಿಮ್ಮ ಮೂತ್ರಪಿಂಡದ ಕಲ್ಲುಗಳನ್ನು ಕರಗಿಸುವ ಶಕ್ತಿ ಈ ಬಾಳೆ ದಿಂಡಿನ ( Banana Stem ) ರಸ ಮತ್ತು ಅದರಲ್ಲಿ ಮುಟ್ಟಿದರ ಮನಿ ಸೊಪ್ಪಿನ ರಸವನ್ನು ಹಾಕಿ ಸೇವನೆ ಮಾಡೋದ್ರಿಂದ ನಿಮಗೆ ಆ ಒಂದು ಲಾಭ ಕಾಣಬಹುದು.
2. ಯಕೃತ್ತು (ಲಿವರ್) ಮತ್ತು ಜೀರ್ಣಾಂಗ ಸಮಸ್ಯೆಗಳಿಗೆ
ಫ್ಯಾಟಿ ಲಿವರ್ನ ಸಮಸ್ಯೆ, ಲಿವರ್ನಲ್ಲಿ ಇನ್ಫ್ಲಮೇಷನ್ ಆದರೆ, ಮಲಬದ್ಧತೆಯ ಸಮಸ್ಯೆ ಹಾಗೂ ಹೈಪರ್ ಅಸಿಡಿಟಿಯ ಸಮಸ್ಯೆಯನ್ನು ಕೂಡ ನಿವಾರಣೆ ಮಾಡೋದರಲ್ಲಿ ಈ ಒಂದು ಬಾಳೆ ದಿಂಡಿನ ಜ್ಯೂಸ್ ಬಹಳ ಅದ್ಭುತವಾಗಿ ಕೆಲಸವನ್ನ ಮಾಡುತ್ತದೆ. ಇದರ ಸೇವನೆಯಿಂದ ಹೊಟ್ಟೆ ಕ್ಲೀನ್ ಆಗುತ್ತೆ ಮತ್ತು ಜೀರ್ಣಾಂಗ ಶಕ್ತಿ ಚೆನ್ನಾಗಿ ಕೆಲಸ ಮಾಡುತ್ತದೆ.
3. ಚರ್ಮ ರೋಗಗಳ ನಿವಾರಣೆಗೆ
ಪಿತ್ತಜನ್ಯವಾಗಿ ಬರುವಂತಹ ಚರ್ಮ ರೋಗಗಳು – ಮಡವೆ, ತುರಿಕೆ, ಕೆರೆತ – ಇವೆಲ್ಲವೂ ಪಿತ್ತ ಪ್ರಕೃತಿ ಇರುವವರಲ್ಲಿ. ಪಿತ್ತ ಪ್ರಕೃತಿ ಇರುವವರಿಗೆ ಈ ಬಾಳೆ ದಿಂಡಿನ ( Banana Stem ) ಸ್ವರಸವನ್ನು ಕೊಡಿಸುವುದರಿಂದ ಆ ಚರ್ಮದ ರೋಗಗಳನ್ನು ಕೂಡ ನಿವಾರಣೆ ಮಾಡಬಹುದು. ಇದು ಶರೀರದ ಒಳಗಿರುವ ಆ ಪಿತ್ತದ ಕಲ್ಮಶಗಳು, ಆಮಾಶಯದ ಪಿತ್ತದ ಕಲ್ಮಶಗಳು ಸಂಪೂರ್ಣವಾಗಿ ಶುದ್ಧವಾಗುತ್ತವೆ.
4. ಕಣ್ಣಿನ ಆರೋಗ್ಯ (ಚಕ್ಷುಶ್ಯ) ಸುಧಾರಣೆಗೆ
ಇದು ಚಕ್ಷುಶ್ಯ ಎಂದು ಕರೆಯಲ್ಪಡುತ್ತದೆ, ಅಂದರೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಮುಖ್ಯವಾಗಿ ಆಲೋಚಕ ಪಿತ್ತ ವಿಕಾರದಿಂದ ಕಣ್ಣಿನ ನರನಾಡಿಗಳಲ್ಲಿ ಬ್ಲೀಡಿಂಗ್ ಆಗ್ತಾ ಇರುತ್ತದೆ, ಕಣ್ಣಿನ ನರನಾಡಿಗಳಲ್ಲಿ ಇನ್ಫ್ಲಮೇಷನ್ (ಉರಿ) ಆಗ್ತಾ ಇರುತ್ತದೆ. ಕಣ್ಣಿನ ನರನಾಡಿಗಳಲ್ಲಿ ಒತ್ತಡ (ಐ ಪ್ರೆಷರ್) ಜಾಸ್ತಿ ಆಗ್ತಾ ಇರುತ್ತದೆ. ಈ ಆಲೋಚಕ ಪಿತ್ತ ವಿಕಾರದಿಂದ ಬರುವ ಪಿತ್ತಜನ್ಯವಾಗಿ ಬರುವ ಕಣ್ಣಿನ ರೋಗಗಳನ್ನ ನಿವಾರಣೆ ಮಾಡಲಿಕ್ಕೆ ಬಾಳೆ ದಿಂಡಿನ ( Banana Stem ) ಸ್ವರಸವನ್ನ ಸೇವನೆ ಮಾಡೋದು ಬಹಳ ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತದೆ.
5. ಪಿತ್ತಕೋಶದ ಕಲ್ಲು (ಗಾಲ್ ಬ್ಲಡರ್ ಸ್ಟೋನ್) ನಿವಾರಣೆಗೆ
ಗಾಲ್ ಬ್ಲಡರ್ ಸ್ಟೋನ್ನಲ್ಲೂ ಕೂಡ ಇದು ಒಳ್ಳೆಯ ಕಾರ್ಯವನ್ನ ಮಾಡುತ್ತದೆ. ( Banana Stem ) ಕದಳಿ ಕಾಂಡ ಸ್ವರಸದಲ್ಲಿ ಇಂಗಳಾರಕಾಯಿಯನ್ನ (ನೆಲಗಡಲೆ) ತಿರಳು ತೆಗೆದು ಉಂಡೆ ಮಾಡಬೇಕು. ಮೂರರಿಂದ ನಾಲ್ಕು ಉಂಡೆ, ಒಂದು ಗ್ಲಾಸ್ ಕದಳಿ ಕಾಂಡ ಸ್ವರಸದಲ್ಲಿ, ನಾಲ್ಕು ಚಮಚ ಮುಟ್ಟಿದರ ಮನಿ ಸೊಪ್ಪಿನ ರಸವನ್ನ ಹಾಕಿ ನೀವು ಸೇವನೆ ಮಾಡೋದ್ರಿಂದ, ಒಂದು ರಿಂದ ಎರಡು ತಿಂಗಳ ಒಳಗಡೆ ನಿಮ್ಮ ಪಿತ್ತಕೋಶದಲ್ಲಿ ಇರುವ ಕಲ್ಲು ( ಗಾಲ್ಬ್ಲಾಡರ್ ಸ್ಟೋನ್ ) ಕರಗುತ್ತದೆ. ಅದರ ಜೊತೆಗೆ ಒಂದೆರಡು ಕಾಡುಬಸಳೆ ಸೊಪ್ಪಿನ ಎಲೆಯನ್ನು ಕೂಡ ಸೇವನೆ ಮಾಡೋದ್ರಿಂದ ಹೆಚ್ಚು ಲಾಭದಾಯಕವಾಗಿ ಅದು ಕೆಲಸ ಮಾಡುತ್ತದೆ. ಗಾಲ್ಬ್ಲಾಡರ್ ಸ್ಟೋನ್ ಅನ್ನು ಈ ಒಂದು ಮನೆಮದ್ದಿನಿಂದ ಸುಮಾರು ಜನರಿಗೆ ಗುಣಪಡಿಸಿರುವ ಅನುಭವದ ಮೂಲಕ ಹೇಳ್ತಾ ಇದ್ದೇವೆ.
6. ಕೂದಲಿನ ಆರೋಗ್ಯ ಸುಧಾರಣೆಗೆ
ಈ ಒಂದು ಸ್ವರಸ ಸೇವನೆ ಮಾಡೋದು ನಮ್ಮ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಕೂದಲು ನೆರೆಯುವ ಸಮಸ್ಯೆ, ತಲೆಯಲ್ಲಿ ಹೊಟ್ಟು ( ಕ್ರಾಡ್ ) ಆಗತಕ್ಕ ಸಮಸ್ಯೆ, ಕೂದಲು ದೃಢವಾಗಿಲ್ಲದ ಸಮಸ್ಯೆ – ಇದು ಯಾಕೆ ಆಗುತ್ತೆ ಅಂದ್ರೆ, ಪಿತ್ತಜನ್ಯವಾಗಿ ಬರುವ ಒಂದು ರೀತಿಯ ಕ್ರಿಮಿ ರೋಗದಿಂದ ಈ ಸಮಸ್ಯೆಗಳು ಹೆಚ್ಚಾಗುತ್ತವೆ. ಮುಖ್ಯವಾಗಿ ತಲೆಯಲ್ಲಿ ಇರುವ ಆಲೋಚಕ ಪಿತ್ತ ವಿಕಾರದ ಸಮಸ್ಯೆಗಳೇ ಇದರ ಮೂಲ ಕಾರಣ. ತಲೆಯ ಯಾವುದೇ ಆರೋಗ್ಯ ಸಮಸ್ಯೆಗಳು ಬರಬೇಕಾದರೆ, ಆಲೋಚಕ ಪಿತ್ತ ವಿಕಾರ ಅಲ್ಲಿ ಕಾರಣ ಆಗಿರುತ್ತದೆ. ಈ ( Banana Stem ) ರಸವು ಪಿತ್ತಶಾಮಕವಾಗಿ ಕೆಲಸ ಮಾಡೋದರಿಂದ, ಆ ತಲೆಯಲ್ಲಿನ ಎಲ್ಲಾ ಆರೋಗ್ಯದ ಸಮಸ್ಯೆಗಳು, ಕೂದಲಿನ ಆರೋಗ್ಯದ ಸಮಸ್ಯೆಗಳನ್ನ ನಿವಾರಣೆ ಮಾಡುವ ಶಕ್ತಿ ಇದರಲ್ಲಿ ಕಾಣಬಹುದು.
7. ಶರೀರದ ಶುದ್ಧೀಕರಣ ಮತ್ತು ಉಷ್ಣ ನಿವಾರಣೆ
ಕದಳಿ ಕಾಂಡ ( Banana Stem ) ಸ್ವರಸವನ್ನು ತಾವು ಬಳಸುವುದರಿಂದ, ಶರೀರದ ಒಳಗಿರುವ ಆ ಪಿತ್ತದ ಕಲ್ಮಶಗಳು, ಆಮಾಶಯದ ಪಿತ್ತದ ಕಲ್ಮಶಗಳು ಸಂಪೂರ್ಣವಾಗಿ ಶುದ್ಧವಾಗುತ್ತವೆ. ಈ ರಸವು ಆ ಪಿತ್ತದ ವಿಕಾರಗಳನ್ನ ಶುದ್ಧೀಕರಣ ಮಾಡಿ, ಶರೀರದ ಸರ್ವ ಸ್ರೋತಸ್ಸುಗಳನ್ನ (ನಾಳಗಳನ್ನ) ಶುದ್ಧೀಕರಣ ಮಾಡತಕ್ಕಂತ ಕೆಲಸವನ್ನ ಮಾಡುತ್ತದೆ.
ಇದು ಯೂರಿನರಿ ಟ್ರ್ಯಾಕ್ ಅನ್ನು ಕೂಡ ಶುದ್ಧೀಕರಣ ಮಾಡುತ್ತದೆ ಮತ್ತು ಮೂತ್ರಾನುಲೋಮಕವಾಗಿ ಕೆಲಸ ಮಾಡುತ್ತದೆ (ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ). ಹಾಗೂ ಶರೀರದ ವಾತ ದೋಷಗಳನ್ನ ನಿವಾರಣೆ ಮಾಡುವುದರ ಮೂಲಕ ಮಲವಿಸರ್ಜನೆಯನ್ನು ಕೂಡ ಸರಿಯಾಗಿ ಮಾಡುವುದರ ಮೂಲಕ ಅಪಾನ ವಾಯುವಿನ ಅನುಲೋಮವನ್ನು ಕೂಡ ಇದು ಕ್ರಿಯಾಶೀಲವಾಗಿಡುತ್ತದೆ.
ಮಲಬದ್ಧತೆಯ ಸಮಸ್ಯೆ, ಮೂತ್ರ ಸರಿಯಾಗಿ ಹೋಗದೆ ಇರತಕ್ಕ ಸಮಸ್ಯೆ, ಮೂತ್ರ ತಡೆದು ತಡೆದು ಬರೋದು, ಕಟ್ ಕಟ್ ಆಗೋದು, ಮೂತ್ರದಲ್ಲಿ ವಿಪರೀತ ಉರಿ, ಕೈ ಉರಿ, ಕಾಲು ಉರಿ, ಅಂಗಾಲು ಉರಿ, ಕಣ್ಣು ಉರಿ – ಇಂತವೆಲ್ಲ ಶರೀರದ ಉರಿ ಮತ್ತು ಉಷ್ಣ ವ್ಯಾಧಿಗಳನ್ನ ನಿವಾರಣೆ ಮಾಡಲಿಕ್ಕೆ ಕದಳಿ ಕಾಂಡ ಸ್ವರಸವನ್ನ ಉಪಯೋಗ ಮಾಡೋದು ಬಹಳ ಮುಖ್ಯ.
ಬಾಳೆ ದಿಂಡಿನ ರಸವನ್ನು ಹೇಗೆ ತಯಾರಿಸುವುದು ಮತ್ತು ಸೇವಿಸುವುದು?
ಇದರ ಜ್ಯೂಸ್ನ್ನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡೋದು ಒಂದು ಗ್ಲಾಸ್ನವರೆಗೂ ಇದರ ಜ್ಯೂಸ್ನ್ನ ಸೇವನೆ ಮಾಡಬಹುದು.
ತಯಾರಿ ವಿಧಾನ:
ಸಣ್ಣ ಪೀಸ್ ಮಾಡಿ, ಅದನ್ನ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿ. ಅದನ್ನ ಬಟ್ಟೆಗೆ ಹಾಕಿ ಹಿಂಡಿದಾಗ, ಅದರ ಸಂಪೂರ್ಣ ಸ್ವರಸ ಬರುತ್ತದೆ. 200 ರಿಂದ 300 ಗ್ರಾಂ ನಷ್ಟು ಆ ಒಂದು ಕಾಂಡವನ್ನ ಸಣ್ಣದಾಗಿ ಹೆಚ್ಚಿ, ಅದರಲ್ಲಿ ಸ್ವಲ್ಪ ನೀರು ಹಾಕಿ ರುಬ್ಬಿ, ಅದರ ಸ್ವರಸವನ್ನ ಸೇವನೆ ಮಾಡೋದು ಅತ್ಯಂತ ಪ್ರಯೋಜನಕಾರಿ.
ಸೇವನೆಯ ಸೂಚನೆಗಳು:
- ಪಿತ್ತ ಪ್ರಕೃತಿ ಇರುವವರಿಗೆ ಇದು ಒಳ್ಳೆಯ ಆಹಾರ. ಅವರು ಇದನ್ನು ಜ್ಯೂಸ್ ರೂಪದಲ್ಲಿ ಸೇವನೆ ಮಾಡಬಹುದು.
- ಕಫ ಪ್ರಕೃತಿ ಮತ್ತು ವಾತ ಪ್ರಕೃತಿ ಇರುವವರಿಗೆ ಇದು ಅಷ್ಟೊಂದು ಉಪಯುಕ್ತ ಅಲ್ಲ. ಅಂತವರು ಇದರ ಪಲ್ಯ (curry/stir-fry) ಸೇವನೆ ಮಾಡೋದು ಒಳ್ಳೆಯದು.
- ಕಿಡ್ನಿ ಸಮಸ್ಯೆಯಿಂದ ಈಗಾಗಲೇ ಬಳಲುತ್ತಿರುವವರು, ವೈದ್ಯರ ಸಲಹೆಗನುಸಾರವಾಗಿ ಇದರ ಉಪಯೋಗವನ್ನ ಮಾಡಿಕೊಳ್ಳಬಹುದು.
ತೀರ್ಮಾನ
ಕದಳಿ ಕಾಂಡ ( Banana Stem ) ಸ್ವರಸ ಒಳ್ಳೆಯ ಪಿತ್ತಶಾಮಕವಾಗಿ ಮತ್ತು ಶರೀರಕ್ಕೆ ತಂಪನ್ನ ನೀಡತಕ್ಕಂತ ಒಂದು ದಿವ್ಯ ಸಂಜೀವನಿಯ ಔಷಧಿಯ ರೂಪದಲ್ಲಿ ಕೆಲಸ ಮಾಡುತ್ತದೆ. ಇದನ್ನ ನಿಯಮಿತವಾಗಿ ಸೇವಿಸುವುದರಿಂದ, ಉಳಿದಂತೆ ಎಲ್ಲರೂ ಕೂಡ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಆತ್ಮೀಯರೇ, ಗುಣಭಾಗದ ಕಠಿಣ ರೋಗಗಳಿಗೆ ಯೋಗ ಮತ್ತು ಆಯುರ್ವೇದದಲ್ಲಿ ಪರಿಹಾರ ಇದೆ. ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನ ಮಾಡೋದರಿಂದ ನೂರಾರು ವರ್ಷ ಆರೋಗ್ಯವಾಗಿ, ನೆಮ್ಮದಿಯಿಂದ ಬದುಕಬಹುದು.
ಸಲಹೆ: ನಾವು ನುರಿತ ವೈದ್ಯರ ಹಾಗೂ ಯೋಗ ಗುರುಗಳ ಜ್ಞಾನ ಹಂಚುವ ಕಾಯಕ ಮಾಡುತ್ತಿದ್ದೇವೆ. ನಾವು ಹೇಳುವ ಮನೆಮದ್ದು ಹಾಗೂ ಔಷಧಿಗಳು ನಿಮ್ಮ ಹತ್ತಿರದ ವೈದ್ಯರ ಸಲಹೆ & ಸೂಚನೆ ಪಡೆದು ತೆಗೆದುಕೊಳ್ಳಿ.
ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ➤➤➤➤➤➤➤➤➤➤➤➤➤➤➤ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9980277973, 7337618850