ಬಿಳಿ ಕೂದಲು ಕಪ್ಪಾಗಲು ಈ ಮನೆಮದ್ದು ಮಾಡಿ

ಇಂದಿನ ಸಂಚಿಕೆಯಲ್ಲಿ, White Hair / ಬಿಳಿ ಕೂದಲು ಕಪ್ಪಾಗಲು ಯಾವ ಮನೆ ಮದ್ದುಗಳನ್ನು ಮಾಡಬೇಕು? ಈ ವಿಷಯದ ಬಗ್ಗೆ ಮಾಹಿತಿಯನ್ನು ನೋಡೋಣ.

ಶರೀರದಲ್ಲಿ ಹಾರ್ಮೋನ್ ಗಳ ವ್ಯತ್ಯಾಸದಿಂದ ನೆರೆ ಕೂದಲಿನ ಸಮಸ್ಯೆ ಬರುತ್ತದೆ. ಶರೀರದಲ್ಲಿ ಮೇಲಾನಿನ್ ಎನ್ನುವಂತಹ ಹಾರ್ಮೋನ್ ಇರುತ್ತದೆ. ಅದು ಸರಿಯಾಗಿ ಸಕ್ರಿಯೇಶನ್ ಆಗದೆ ಇದ್ದರೆ, ಕೂದಲುಗಳಿಗೆ ಸರಿಯಾಗಿ ಪೇಂಟ್ ಆಗದೆ ಇರುವಂತಹ ವ್ಯವಸ್ಥೆ ತಲೆಯ ಮೇಲ್ಪದರಿನಲ್ಲಿ ಸೃಷ್ಟಿಯಾಗುತ್ತದೆ.

ಕೂದಲುಗಳು ಸರಿಯಾಗಿ ಬೆಳವಣಿಗೆ ಆಗುತ್ತಿರುತ್ತವೆ, ಆದರೆ ಆ ಕೂದಲುಗಳಿಗೆ ಕಪ್ಪು ಮಿಶ್ರಿತ ಆಗಿರುವಂತಹ ಹಾರ್ಮೋನ್ ಸೇರದೆ ಇದ್ದರೆ ಅದು ಹಾಗೆ ಬೆಳ್ಳಗೆ ಬೆಳೆದು ನಿಲ್ಲುತ್ತದೆ.

ಕೂದಲು ಆಗಿರಬಹುದು, ಉಗುರು ಆಗಿರಬಹುದು, ಶರೀರದಲ್ಲಿರುವ ಕ್ಯಾಲ್ಸಿಯಂ ವೇಸ್ಟ್ ನಿಂದ ಹೊರ ಹೋಗುವಂತಹ ಒಂದು ಪದಾರ್ಥ. ಈ ಸಮಸ್ಯೆಯನ್ನು ನಾವು ಸರಿಪಡಿಸಿಕೊಳ್ಳಬೇಕು ಎಂದರೆ ಮೊದಲು ನಾವು ಒಳಗಡೆಯಿಂದ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬೇಕು.

ಬಿಳಿ ಕೂದಲು ಕಪ್ಪಾಗದಿರಲು ಆಗಲು ಏನು ಕಾರಣಗಳು ?

ಅತಿಯಾಗಿ ಟೆನ್ಶನ್ ಮಾಡಿಕೊಳ್ಳುವುದು, ಮಾನಸಿಕ ಒತ್ತಡ, ಹಾಗೂ ಆಹಾರ ಪದ್ಧತಿಯಲ್ಲಿ ತಪ್ಪು ತಪ್ಪು ಆಗಿರುವಂತಹ ಆಹಾರವನ್ನು ಸೇವನೆ ಮಾಡುವುದು, ಫಾಸ್ಟ್ ಫುಡ್, ಜಂಕ್ ಫುಡ್, ಬಿಡಿ, ಸಿಗ್ರೇಟ್, ತಂಬಾಕು, ಧೂಮಪಾನ, ಮದ್ಯಪಾನ, ಈ ರೀತಿ ಆಗಿರುವಂತಹ ಕೆಟ್ಟ ಚಟಗಳು ಯಾರಲ್ಲಿ ಇರುತ್ತವೆಯೋ, ಅಂಥವರಲ್ಲಿ white hair ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

ಹಾಗೆ ಮಲಬದ್ಧತೆ ಮತ್ತು ಅಜೀರ್ಣ ನೆರೆ ಕೂದಲಿನ ಸಮಸ್ಯೆಗಳು ಬರುತ್ತವೆ. ಮಲಬದ್ಧತೆ ಮತ್ತು ಅಜೀರ್ಣ ನಿವಾರಣೆ ಮಾಡಿಕೊಳ್ಳುವುದಕ್ಕೆ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿ ಜ್ಯೂಸನ್ನು ಸೇವನೆ ಮಾಡಬೇಕು. ಹೀಗೆ ಮಾಡುವುದರಿಂದ ಅಜೀರ್ಣ ಮತ್ತು ಮಲಬದ್ಧತೆ ನಿವಾರಣೆಯಾಗುತ್ತದೆ. ಮತ್ತು ಕೂದಲುಗಳಿಗೆ ಶಕ್ತಿಯನ್ನು ತುಂಬುತ್ತದೆ.

ಬಿಳಿ ಕೂದಲು ಕಪ್ಪಾಗಲು ಏನು ಮಾಡಿಕೊಳ್ಳುವುದು ?

ಒಂದು ಹಿಡಿಯಷ್ಟು ಸೀಬೆ ಎಲೆ, ಒಂದು ಹಿಡಿಯಷ್ಟು ಮೆಹಂದಿ ಪುಡಿ, ಮತ್ತು ನಿಂಬೆಹಣ್ಣಿನ ರಸ, ಇವೆಲ್ಲವನ್ನೂ ಸಮ ಪ್ರಮಾಣದಲ್ಲಿ ಸೇರಿಸಿಕೊಂಡು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು.

ಆಮೇಲೆ ಅದನ್ನು ಒಂದು ಕಬ್ಬಿಣದ ಪಾತ್ರೆಯಲ್ಲಿ ಹಾಕಿ ಇಟ್ಟುಕೊಳ್ಳಬೇಕು. ಎರಡು ದಿವಸಕ್ಕೊಮ್ಮೆ ಅದನ್ನು ತಿರುಗಿಸುತ್ತಿರಬೇಕು. ತಿರುಗಿಸಿ ಅದರ ಮೇಲೆ ಮುಚ್ಚಳವನ್ನು ಮುಚ್ಚಿ ಇಡಬೇಕು.

ಹೀಗೆ ಒಂಬತ್ತು ದಿವಸಗಳ ಕಾಲ ಮುಚ್ಚಿ ಇಡಬೇಕಾಗುತ್ತದೆ. 9 ರಿಂದ 11 ದಿವಸದ ನಂತರ ಅದು ಸಂಪೂರ್ಣವಾಗಿ ಕಪ್ಪಾಗಿರುತ್ತದೆ. ಅದನ್ನು ಒಂದು ಬ್ಲೌಸ್ ತೆಗೆದುಕೊಂಡು ಕೈಗೆ ಹಾಕಿಕೊಂಡು ಆ ಮಿಶ್ರಣವನ್ನು ತಲೆಗೆ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಬೇಕು. ಬಾಚಣಿಕೆಯಿಂದ ತಲೆಯನ್ನು ಬಾಚೂತ ಬಾಚುತ್ತ ಚೆನ್ನಾಗಿ ಅಪ್ಲೈ ಮಾಡಬೇಕು.

ಆ ಪೇಸ್ಟ ವನ್ನು ತಲೆಗೆ ಹಚ್ಚಿ ಒಂದು ಗಂಟೆ ನಂತರ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಬಹಳ ಬೇಗ ಕೂದಲುಗಳು ಫಳ ಫಳ ಅಂತ ಹೊಳೆಯುತ್ತವೆ.

ಅತ್ಯಂತ ದೀರ್ಘಕಾಲದವರೆಗೂ ಕೆಲವೊಬ್ಬರಿಗೆ 6 ತಿಂಗಳು ಒಂದು ವರ್ಷ, ಎರಡು ವರ್ಷದವರೆಗೂ ಕೂದಲು ಬಿಳಿ ಕೂದಲು ಕಪ್ಪಾಗಲು / ಬಿಳಿ ಆಗುವುದೇ ಇಲ್ಲ. ಅಷ್ಟೊಂದು ಗಟ್ಟಿಯಾಗಿ ಆ ಮಿಶ್ರಣ ಕೂದಲಿನ ಮೇಲೆ ಕುಳಿತುಕೊಂಡಿರುತ್ತದೆ.

ನೀವು ರಾಸಾಯನಿಕ ಶಾಂಪೂಗಳನ್ನು ಬಳಕೆ ಮಾಡುವುದರಿಂದ ತುಂಬಾ ಬೇಗ ಕೂದಲುಗಳು white hair / ಬಿಳಿಯಾಗುತ್ತವೆ. ಆದ್ದರಿಂದ ರಾಸಾಯನಿಕ ಶಾಂಪೂಗಳನ್ನು ಬಳಕೆ ಮಾಡದೆ ನ್ಯಾಚುರಲ್ ಆಗಿರುವಂತಹ ಇಂತಹ ಪೇಸ್ಟುಗಳ ಬಳಕೆ ಮಾಡುವುದರಿಂದ ನಿಮ್ಮ ಬಿಳಿ ಕೂದಲು ಕಪ್ಪಾಗಲು & ಕೂದಲುಗಳು ಚೆನ್ನಾಗಿ ಬೆಳೆಯುತ್ತವೆ. ಮತ್ತು ಶಕ್ತಿಯುತವಾಗಿರುತ್ತವೆ.

White Hair To Black Hair Shampoo ಶಾಂಪೂಗಳನ್ನು ಮನೆಯಲ್ಲಿ ಹೇಗೆ ಮಾಡಿಕೊಳ್ಳಬಹುದು ?

ಎರಡು ನೂರು ಅಂಟವಾಳಕಾಯಿ, 200 ನೆಲ್ಲಿಕಾಯಿ, 200 ಸೀಗೆಕಾಯಿ, ಇವೆಲ್ಲವನ್ನೂ ನೀರಿನಲ್ಲಿ ನೆನೆಸಬೇಕು. ನೆನೆಸಿ ಬೆಳಗ್ಗೆ ಎದ್ದು ಅದನ್ನು ಕುದೀಸಬೇಕು. ಕುದಿಸಿ ಅದನ್ನು ಹಿಂಡಿ ಸೋಸಿ ಇಟ್ಟುಕೊಳ್ಳಬೇಕು. ಆಗ ಅದು ನ್ಯಾಚುರಲ್ ಶಾಂಪು ಆಗುತ್ತದೆ. ಇದನ್ನು ನೀವು ಬಳಸಬಹುದು. ಹೀಗೆ ಮಾಡುವುದರಿಂದ ನಿಮ್ಮ ಬಿಳಿ ಕೂದಲು ಕಪ್ಪಾಗಲು / ಕೂದಲುಗಳು ನೂರು ವರ್ಷದವರೆಗೂ ಕಪ್ಪಾಗಿ ಸೊಂಪಾಗಿ ಇರುತ್ತವೆ. ನೆರೆ ಕೂದಲುಗಳಿಗೆ ಇದು ಶಾಶ್ವತ ಪರಿಹಾರ ಅಂತ ಹೇಳಬಹುದು.

ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – – 9980277973, 7337618850

ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ.

ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು. ಹೇಳದೆ ಕೇಳದೆ ಮಾಡಿದ್ದಲ್ಲಿ ಅನಾಹುತ ಆದರೆ ನಾವು ಜವಾಬ್ದಾರರಲ್ಲಾ.

Leave a Reply

Your email address will not be published. Required fields are marked *