ನೈಸರ್ಗಿಕವಾಗಿ ತೂಕವನ್ನು ಹೆಚ್ಚಿಸಿಕೊಳ್ಳುವುದು ಹೇಗೆ?
ತೂಕವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಸಾಕಷ್ಟು ಜನರನ್ನು ಕಾಡುತ್ತದೆ. { Tuka Hechisalu in Kannada } ತೂಕ ಹೆಚ್ಚಾಗಲು ಪ್ರೋಟೀನ್ ಪೌಡರ್ ಮತ್ತು ಹೆಲ್ತ್ ಟಾನಿಕ್ಸ್ ಅನ್ನು ತೆಗೆದುಕೊಳ್ಳುತ್ತಾರೆ. ಆದರೆ, ಇವುಗಳಿಂದ ಹಲವಾರು ರೀತಿಯ ತೊಂದರೆಗಳು ಮತ್ತು ಅಡ್ಡಪರಿಣಾಮಗಳು ಉಂಟಾಗಬಹುದು. ಕೆಲವರಿಗೆ ಕಿಡ್ನಿ ಫೇಲ್ ಆಗಿದೆ, ಇನ್ನು ಕೆಲವರಿಗೆ ಲಿವರ್ ಸಮಸ್ಯೆ, ಹೃದಯಾಘಾತ ಮತ್ತು ಮೆದುಳಿಗೆ ತೊಂದರೆಯಾಗಿ ಮಾನಸಿಕ ಸಮಸ್ಯೆಗಳು ಹೆಚ್ಚಾಗಿವೆ. ಮೆಂಟಲಿ ತುಂಬಾ ಡಿಸ್ಟರ್ಬ್ ಆಗಿ ಮನೋರೋಗಿಗಳಾಗಿರತಕ್ಕಂಥದ್ದನ್ನೂ ನಾವು ಕಾಣಬಹುದು.
ಈ ಸಮಸ್ಯೆಗಳಿಗೆ ನೈಸರ್ಗಿಕವಾಗಿ ಪರಿಹಾರವನ್ನು ಕಂಡುಕೊಂಡರೆ, ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದೆ ನಮ್ಮ ದೇಹ ಬಲಿಷ್ಠವಾಗುತ್ತದೆ. ಆಯುರ್ವೇದ ಹೇಳುವಂತೆ, ಯಾವ ಆಹಾರದಲ್ಲಿ ಮಧುರ ರಸ ಇರುತ್ತದೆ, ಅಲ್ಲಿ ಸ್ನಿಗ್ಧತೆ ಹೆಚ್ಚಾಗಿರುತ್ತದೆ. ಅಂತಹ “ಮೇದ್ಯ” ಆಹಾರಗಳನ್ನು ಸೇವನೆ ಮಾಡುವುದರಿಂದ ನಮ್ಮಲ್ಲಿ ತೂಕ ವೃದ್ಧಿಯಾಗುತ್ತದೆ.

ಪಾಯಿಂಟ್ ಮೇಲೆ ಕ್ಲೀಕ್ ಮಾಡಿ ಓದಿ..!
ವಾತ ಮತ್ತು ಪಿತ್ತದ ಸಮತೋಲನಕ್ಕೆ ಆಯುರ್ವೇದ ವಿಧಾನಗಳು
ನಮ್ಮ ದೇಹ ತೆಳ್ಳಗೆ ಇರಲು ಕಾರಣಗಳು ಯಾವುವು? ವಿಪರೀತವಾಗಿ ಪಿತ್ತದ ಹೆಚ್ಚಳ ಮತ್ತು ವಾತ ಪ್ರಕೃತಿಯೇ ಇದಕ್ಕೆ ಮುಖ್ಯ ಕಾರಣ. ಕಫ ಪ್ರಕೃತಿಯವರು ದಪ್ಪ ಇರುತ್ತಾರೆ. ಹಾಗಾಗಿ, { Tuka Hechisalu in Kannada } ತೂಕ ಹೆಚ್ಚಿಸಲು ವಾತ ಮತ್ತು ಪಿತ್ತ ವಿಕಾರಗಳನ್ನು ಸರಿಪಡಿಸಿಕೊಳ್ಳಬೇಕು. ಈ ದೋಷಗಳು ಸಮತೋಲನಕ್ಕೆ ಬಂದಾಗ, ನಮ್ಮ ಸಮಸ್ಯೆಗಳು ಸಂಪೂರ್ಣವಾಗಿ ಗುಣ ಆಗುತ್ತವೆ. ದೋಷಗಳನ್ನು ಬ್ಯಾಲೆನ್ಸ್ ಮಾಡಲು ಆಹಾರ ಪದ್ಧತಿಯಲ್ಲಿ ಪರಿವರ್ತನೆ ಮಾಡಿಕೊಳ್ಳಬೇಕು.
- ಅಭ್ಯಂಗ ಸ್ನಾನ (ತೈಲ ಮಸಾಜ್): ವಾತ ದೋಷವನ್ನು ಕಡಿಮೆ ಮಾಡಲು ವಾರಕ್ಕೆ ಒಂದು ಬಾರಿಯಾದರೂ ಅಭ್ಯಂಗ ಸ್ನಾನ ಮಾಡಬೇಕು. ನಾನು ಹೇಳಿಕೊಡ್ತಕ್ಕಂತ ಈ ಪದ್ಧತಿಯನ್ನು ಸರಿಯಾಗಿ ಅಳವಡಿಸಿಕೊಂಡರೆ, ಕೇವಲ ಒಂದೆರಡು ಮೂರು ತಿಂಗಳಲ್ಲಿ ದೇಹ ಬಲಿಷ್ಠವಾಗುತ್ತೆ, ಚರ್ಮ ಕಾಂತಿಯುತವಾಗುತ್ತೆ. ಜೊತೆಗೆ, ನಿಮ್ಮ ಶರೀರದಲ್ಲಿ ಆ ಒಂದು ಸಣಕುಲತನ, ಆ ಒಂದು ಡ್ರೈನೆಸ್ ದೂರವಾಗಿ, ನಿಮ್ಮ ಶರೀರ ನೋಡಲಿಕ್ಕೂ ಸುಂದರವಾಗಿ ಮತ್ತೆ ಬಲಿಷ್ಠವಾಗಿರುತ್ತದೆ. ಆಂತರಿಕವಾಗಿಯೂ ಕೂಡ ಕ್ರಿಯಾಶೀಲವಾಗಿರುತ್ತದೆ. ನಿಮ್ಮ ಮಾಂಸಖಂಡಗಳು ಬಹಳ ಬೇಗ ವೃದ್ಧಿಯಾಗಿ ತೆಳ್ಳಗೆ ಇರತಕ್ಕಂತ ಸಮಸ್ಯೆಯಿಂದ ನೀವು ಸಂಪೂರ್ಣವಾಗಿ ಮುಕ್ತರಾಗುತ್ತೀರಾ. { Tuka Hechisalu in Kannada }
ಇನ್ನೂ ಓದಿ..! ಉಪವಾಸ ಮಾಡುವ ಸರಿಯಾದ ವಿಧಾನ..!
- ಘೃತಪಾನ (ತುಪ್ಪದ ಸೇವನೆ): ಪಿತ್ತ ವಿಕಾರಗಳನ್ನು ಶಮನಗೊಳಿಸಲು “ಘೃತಪಾನ” ಮಾಡಬೇಕು. ಬಹಳ ಮುಖ್ಯವಾಗಿ ಎಮ್ಮೆ ತುಪ್ಪವನ್ನು ಸೇವನೆ ಮಾಡಿ, ಬಹಳ ಬೇಗ ದಪ್ಪ ಆಗ್ತೀರಾ. ಹಸುವಿನ ತುಪ್ಪ, ಕುರಿ ತುಪ್ಪವನ್ನೂ ಕೂಡ ಸೇವನೆ ಮಾಡಬಹುದು, ಆದರೆ ಎಮ್ಮೆ ತುಪ್ಪದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿರುತ್ತದೆ.ಹೇಗೆ ಸೇವಿಸಬೇಕು: ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಎಮ್ಮೆ ತುಪ್ಪವನ್ನು ಒಂದು ಬಾಳೆಹಣ್ಣು ಮತ್ತು 20-30 ಗ್ರಾಂ ಬೆಲ್ಲದ ಜೊತೆಗೆ ಸೇವನೆ ಮಾಡಬೇಕು.
ತೂಕ ಹೆಚ್ಚಿಸಲು ಅದ್ಭುತ ಮನೆಮದ್ದು { Tuka Hechisalu in Kannada }
ಘೃತಪಾನದ ನಂತರ, ಒಂದು ಅದ್ಭುತವಾಗಿರತಕ್ಕಂತ ಪಾಯಸವನ್ನು ಸೇವಿಸಬೇಕು. ಇದು ಪಿತ್ತಹರವಾಗುತ್ತದೆ.
ಪಾಯಸ ಮಾಡುವ ವಿಧಾನ ಹೀಗಿದೆ: ಜವೆಗೋಧಿಯನ್ನು ನುಚ್ಚು ಮಾಡಿಕೊಂಡು, ಅದನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಆ ರವೆ ಕುದ್ದ ಮೇಲೆ ಅದರಲ್ಲಿ ಬೆಲ್ಲ ಹಾಕಿ ಮತ್ತೆ ಅದನ್ನು ಕುದಿಸಬೇಕು. ಅದು ಪಾಯಸ ಆಗುತ್ತೆ. ಅದಕ್ಕೆ ನೆನೆಸಿದ ಡ್ರೈ ಫ್ರೂಟ್ಸ್ ಸೇರಿಸಬೇಕು.

ಪಾಯಸಕ್ಕೆ ಬೇಕಾದ ಡ್ರೈ ಫ್ರೂಟ್ಸ್ಗಳು: Dry Fruits List
- ಗೋಡಂಬಿ
- ಬಾದಾಮಿ
- ಖರ್ಜೂರ
- ದ್ರಾಕ್ಷಿ
- ಅಂಜೂರ
ಸರಿಯಾದ ವಿಧಾನ: ಡ್ರೈ ಫ್ರೂಟ್ಸ್‌ಗಳನ್ನು ನೆನೆಸಿಬಿಟ್ಟು ಪಾಯಸ ಕುದ್ದ ಮೇಲೆ, ಉಗುರು ಬೆಚ್ಚಗೆ ಇರತಕ್ಕಂತ ಸಂದರ್ಭದಲ್ಲಿ ಸೇರಿಸಬೇಕು. ಕುದಿಯುವಾಗ ಹಾಕಬೇಡಿ. ಒಂದು ನಾಲ್ಕಾರು ಬಾದಾಮಿ, ಒಂದು ನಾಲ್ಕಾರು ಗೋಡಂಬಿ, ಒಂದು 10-15 ಒಣ ದ್ರಾಕ್ಷಿ, ಒಂದು ಅಂಜೂರ, ಒಂದೆರಡು ಖರ್ಜೂರ ಇವೆಲ್ಲವನ್ನು ಹಾಕಿ. ಅದಕ್ಕೆ ಒಂದು ಅಥವಾ ಎರಡು ಚಮಚ ಎಮ್ಮೆ ತುಪ್ಪವನ್ನು ಹಾಕಿ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಇದನ್ನ ಸೇವನೆ ಮಾಡಿದ್ರೆ, ಆತ್ಮೀಯರೇ, ಒಂದು ತಿಂಗಳಿಗೆ ಐದಾರು ಕೆಜಿ ತೂಕ ಜಾಸ್ತಿ ಆಗುತ್ತೆ. ಒಂದೆರಡು-ಮೂರು ತಿಂಗಳು ಸೇವನೆ ಮಾಡಿದರೆ ಸಾಕು, ನಿಮ್ಮ ತೂಕದಲ್ಲಿ ಕಂಪ್ಲೀಟ್ ಆಗಿ ಹೆಚ್ಚಳವಾಗುತ್ತದೆ. { Tuka Hechisalu in Kannada }
ಬಹಳ ಜನರಿಗೆ ಈ ಸಮಸ್ಯೆ ಹೆರಿಡಿಟರಿಯಿಂದನೂ ಬಂದಿರುತ್ತೆ, ಅಂತಹ ಸಮಸ್ಯೆಯನ್ನೂ ಕೂಡ ನಿವಾರಣೆ ಮಾಡತಕ್ಕಂತ ಶಕ್ತಿ ಈ ತುಪ್ಪಕ್ಕೆ ಇದೆ. ಇದನ್ನ ಸರಿಯಾಗಿ ಸಮರ್ಪಕವಾಗಿ ಸೇವನೆ ಮಾಡತಕ್ಕಂತದ್ದನ್ನ ಕಲಿಬೇಕು. ಇದು ನಮ್ಮ ಶರೀರದಲ್ಲಿ ಸ್ನಿಗ್ಧತೆಯನ್ನ ಹೆಚ್ಚಿಗೆ ಮಾಡುತ್ತೆ. ಬ್ರುಮಣ ತತ್ವವನ್ನ ಕ್ರಿಯಾಶೀಲಗೊಳಿಸುತ್ತೆ.
ಆಯುರ್ವೇದದ ಪ್ರಕಾರ ಆಹಾರ ವಿಭಾಗಗಳು:
ಆಯುರ್ವೇದದಲ್ಲಿ ಬಲ್ಯ, ಬ್ರುಮಣ, ಲೇಖನ ಅಂತ ಒಂದಿಷ್ಟು ಆಹಾರ ಪದ್ಧತಿಯ ವಿಭಾಗಗಳನ್ನು ನಾವು ಕಾಣಬಹುದು.
- ಬ್ರುಮಣ ಅಂದ್ರೆ ವೃದ್ಧಿ.
- ಬಲ್ಯ ಅಂದ್ರೆ ಶಕ್ತಿ.
- ಲೇಖನ ಅಂದ್ರೆ ಶುದ್ಧೀಕರಣ.
ಲೇಖನವನ್ನ ಮಾಡತಕ್ಕಂತ ಆಹಾರಗಳೇ ಬೇರೆ ಇವೆ. ಬ್ರುಮಣವನ್ನ ಮಾಡತಕ್ಕಂತ ಆಹಾರಗಳೇ ಬೇರೆ ಇವೆ. ಹಾಗೆ ಬಲ್ಯವನ್ನು ಒದಗಿಸತಕ್ಕಂತ ಆಹಾರಗಳೇ ಬೇರೆ ಇವೆ. ನಾವು ಬಲವೃದ್ಧಿಯನ್ನ ಮಾಡತಕ್ಕಂತ ಹಾಗೂ ಬ್ರುಮಣವನ್ನ ನಮ್ಮ ಶರೀರದಲ್ಲಿ ವೃದ್ಧಿಗೊಳಿಸತಕ್ಕಂತ ಆಹಾರಗಳನ್ನು ತಿಂದಾಗ, ನಮ್ಮಲ್ಲಿ ತೂಕ ವೃದ್ಧಿಯಾಗುತ್ತೆ. ಅಂತಹ ಶರೀರದ ಬಲವನ್ನ ವೃದ್ಧಿಗೊಳಿಸಿ, ಶರೀರವನ್ನ ಬಲಿಷ್ಠಗೊಳಿಸಿ ಕ್ರಿಯಾಶೀಲಗೊಳಿಸತಕ್ಕಂತ ಒಂದು ಅದ್ಭುತವಾಗಿರತಕ್ಕಂತ ಆಹಾರ ಈ ಪಾಯಸ.
ಡ್ರೈ ಫ್ರೂಟ್ಸ್‌ಗಳನ್ನು ಫ್ರೈ ಮಾಡಿ ಹಾಕಬೇಡಿ. ಪಾಯಸಕ್ಕೆ ಏನಾದ್ರೂ ಡ್ರೈ ಫ್ರೂಟ್ಸ್‌ಗಳನ್ನು ಬಳಸಬೇಕಿದ್ದರೆ, ಚೆನ್ನಾಗಿ ನೆನೆಸಿ, ಹಾಲು ಮಾಡಿ ಆ ಪಾಯಸದ ಜೊತೆಗೆ ಆ ಹಾಲನ್ನು ಬಳಸಬಹುದು. ಅಥವಾ ನೆನೆಸಿರತಕ್ಕಂತದ್ದನ್ನ ಹಾಗೆ ಆ ಒಂದು ಪಾಯಸದಲ್ಲಿ ಹಾಕಿದರೆ, ಅದು ಅಗಿದು ಅಗಿದು ತಿಂದಾಗಲೂ ಕೂಡ ಅದ್ಭುತವಾಗಿರತಕ್ಕಂತ ಶಕ್ತಿಯನ್ನು ಶರೀರಕ್ಕೆ ಒದಗಿಸುತ್ತದೆ. ಹೀಗೆ ಈ ಪಾಯಸವನ್ನ ನಾವು ಈ ವಿಧಾನದಲ್ಲಿ ಮಾಡಿದಾಗ, ಖಂಡಿತವಾಗಿಯೂ ನಮ್ಮ ಶರೀರದಲ್ಲಿ { Tuka Hechisalu in Kannada } ಈ ತೂಕದ ವೃದ್ಧಿ ಸಂಪೂರ್ಣವಾಗಿ, ಸಮಗ್ರವಾಗಿ ಆಗುತ್ತದೆ.
ಜೀರ್ಣಾಂಗ ವ್ಯವಸ್ಥೆಯ ಸುಧಾರಣೆ / Improve Digestive System
ತೂಕ ಕಡಿಮೆ ಇರಲಿಕ್ಕೆ ಅಜೀರ್ಣ ಒಂದು ಪ್ರಧಾನವಾಗಿರತಕ್ಕಂತ ಕಾರಣ. ಏನೇ ತಿಂದರೂ ಜೀರ್ಣವಾಗದೆ ಶರೀರಕ್ಕೆ ಪೋಷಕ ತತ್ವವಾಗಿ ಲಭಿಸದಿದ್ದಾಗ, ಶರೀರದಲ್ಲಿ ಮೇದಸ್ಸಿನ ಕ್ರಿಯಾಶೀಲತೆ ಆಗದೆ, ಮೇದಸ್ಸು ಮತ್ತು ಮಾಂಸಖಂಡಗಳು ಚೆನ್ನಾಗಿ ಬೆಳವಣಿಗೆ ಆಗದೆ, ಶರೀರಕ್ಕೆ ಬೇಕಾಗಿರತಕ್ಕಂತ ಪೋಷಕ ತತ್ವಗಳು, ಧಾತುಗಳು ಸಮರ್ಪಕವಾಗಿ ಬೆಳವಣಿಗೆ ಆಗದಿದ್ದಾಗ, ನಮ್ಮ ಶರೀರ ಬಡಕಲು ಶರೀರವಾಗುತ್ತದೆ. ಒಣಕಲು ಶರೀರವಾಗುತ್ತದೆ. ಶರೀರದಲ್ಲಿ ವೃಕ್ಷತೆ ಹೆಚ್ಚಿಗೆ ಆಗುತ್ತೆ. ಅದಕ್ಕೆ ಆ ಒಂದು ವೃಕ್ಷತೆಯಿಂದ ದೇಹವನ್ನ ಸ್ನಿಗ್ಧತೆಗೆ ತರಬೇಕು ಅಂತ ಹೇಳಿದ್ರೆ, ಬಹಳ ಮುಖ್ಯವಾಗಿ ನಾವು ಜೀರ್ಣಾಂಗ ವ್ಯವಸ್ಥೆಯನ್ನ ಕ್ರಿಯಾಶೀಲಗೊಳಿಸಿಕೊಳ್ಳಬೇಕು.

- ಆಹಾರದ ಮೊದಲು ಹಣ್ಣು-ತರಕಾರಿಗಳ ಸೇವನೆ: 🍎 🥕 ಜೀರ್ಣಾಂಗ ವ್ಯವಸ್ಥೆಯನ್ನು ಕ್ರಿಯಾಶೀಲಗೊಳಿಸಲಿಕ್ಕೆ, ಆಹಾರದಲ್ಲಿ ಹೆಚ್ಚು ಸೊಪ್ಪು-ತರಕಾರಿಗಳನ್ನ ಬೇಯಿಸಿರತಕ್ಕಂತ ಸೊಪ್ಪು ತರಕಾರಿಗಳನ್ನ ಬಳಸಬೇಕು. ಜೊತೆಗೆ, ಆಹಾರದಕ್ಕಿಂತ ಮೊದಲು ಹೊಟ್ಟೆ ತುಂಬ ಹಣ್ಣು-ತರಕಾರಿಗಳನ್ನು ತಿನ್ನಬೇಕು. ಹೀಗೆ ತಿಂದಾಗ, ಜೀರ್ಣ ರಸಗಳು ಅಲ್ಲಿ ಕ್ರಿಯಾಶೀಲವಾಗುತ್ತವೆ. ಆಗ ಏನಾಗುತ್ತೆ, ಅರ್ಧ ಗಂಟೆ ಆದಮೇಲೆ ಆಹಾರ ಸೇವನೆ ಮಾಡಿದರೆ, ಜಠರಾಗ್ನಿ ಕ್ರಿಯಾಶೀಲವಾಗುತ್ತೆ. ತಿಂದಿರುವ ಆಹಾರ ಧಾತುಗಳಾಗುತ್ತವೆ. ಯಾವಾಗ ತಿಂದಿರುವ ಆಹಾರ ಧಾತುವಾಗಿ ಪರಿವರ್ತನೆಯಾಗುತ್ತದೆಯೋ, ಆವಾಗ ಶರೀರದಲ್ಲಿ ವೃದ್ಧಿ ಬೆಳವಣಿಗೆ ಕ್ರಿಯಾಶೀಲವಾಗಿರುತ್ತದೆ.ಇಲ್ಲಾಂದ್ರೆ ನಾವು ಏನೇ ತಿಂದರೂ ಕೂಡ ಆಹಾರ ಜೀರ್ಣನೇ ಆಗದೆ ಇದ್ದಾಗ, ಅಜೀರ್ಣವಾದಾಗ, ಶರೀರದಲ್ಲಿ ತೂಕ ಅತಿಯಾಗಿ ಹೆಚ್ಚಿಗೆನಾದರೂ ಆಗುತ್ತೆ ಅಥವಾ ತೂಕ ವೃದ್ಧಿಯಾಗದೆ ಶರೀರ ತೆಳ್ಳಗೆ ಇರುತ್ತದೆ. ಅದಕ್ಕೆ ತೆಳ್ಳಗೆ ಇರಲಿಕ್ಕೂ ಮತ್ತೆ ಜಾಸ್ತಿ ದಪ್ಪ ಆಗಲಿಕ್ಕೂ ಪ್ರಧಾನವಾಗಿರತಕ್ಕಂತ ಒಂದು ಕಾರಣ ಅಜೀರ್ಣ.ಹಸಿದಾಗ ಹಣ್ಣು ತಿನ್ನು, ಆಹಾರದ ನಂತರ ಮಾವು ಅಥವಾ ಹಲಸು ತಿನ್ನು ಅಂತ ಹೇಳ್ತಾರೆ. ಮಾವಿನ ಹಣ್ಣಿನಲ್ಲಿ ಜೀರ್ಣ ಶಕ್ತಿಯನ್ನು ವೃದ್ಧಿಗೊಳಿಸತಕ್ಕಂತ ಶಕ್ತಿ ಇರೋದ್ರಿಂದ, ಅದನ್ನು ತಿನ್ನಬಹುದು. { Tuka Hechisalu in Kannada } ತೂಕ ವೃದ್ಧಿ ಮಾಡಲಿಕ್ಕೆ ಮಾವಿನಹಣ್ಣು ಒಂದು ಅದ್ಭುತವಾಗಿರತಕ್ಕಂತ ಹಣ್ಣು. ಹಾಗೆ, ಪ್ರತಿ ಆಹಾರದ ನಂತರ ಒಂದು ಮಾವಿನ ಹಣ್ಣನ್ನು ತಿನ್ನೋದನ್ನ ರೂಡಿ ಮಾಡಿಕೊಳ್ಳಿ. ಬಾಳೆಹಣ್ಣು ಮತ್ತು ಸಪೋಟ ಹಣ್ಣನ್ನು ಕೂಡ ತಿನ್ನಬಹುದು. ಯಾವ ಹಣ್ಣಿನಲ್ಲಿ ಸಿಹಿತತ್ವ ಜಾಸ್ತಿ ಇರುತ್ತದೆ, ಅಂತಹ ಹಣ್ಣುಗಳನ್ನು ತಿನ್ನುವುದರಿಂದ ನಾವು ದಪ್ಪ ಆಗ್ತೇವೆ.
ಮತ್ತಷ್ಟು ಓದಿ – ಬೆಳಗ್ಗೆ 1 ಗ್ಲಾಸ್ ಜೀರಿಗೆ ನೀರು ಕುಡಿದರೆ ಏನಾಗುತ್ತೆ..!
- ಶುಂಠಿ ಮತ್ತು ಸೈಂಧವ ಲವಣ: 🫚 🧂 ಅಜೀರ್ಣ ದೂರವಾಗದೆ ಇದ್ದರೆ, “ಭೋಜನಾಗ್ರಯಾರ್ಧಕ ಸೈನವ ಭೋಂಜಿ” ಎಂಬ ನಿಯಮವನ್ನು ಅನುಸರಿಸಿ. ಆಹಾರಕ್ಕಿಂತ ಒಂದು ಹತ್ತು ನಿಮಿಷ ಮೊದಲು, ಒಂದು ಇಂಚಿನಷ್ಟು ಹಸಿ ಶುಂಠಿಯನ್ನು ಸ್ವಲ್ಪ ಸೈಂಧವ ಲವಣದ ಜೊತೆಗೆ ಬೆರೆಸಿ, ಅಗಿದು ನಿಧಾನವಾಗಿ ಅದರ ರಸವನ್ನು ಕುಡಿದು, ಹತ್ತು ನಿಮಿಷಗಳ ನಂತರ ಆಹಾರ ಸೇವನೆ ಮಾಡಿದರೆ, ಜಠರಾಗ್ನಿ ಕ್ರಿಯಾಶೀಲವಾಗಿರುತ್ತದೆ. ತಿಂದಿರುವ ಆಹಾರ ಸಂಪೂರ್ಣವಾಗಿ ಜೀರ್ಣ ಆಗುತ್ತೆ. ಆಹಾರ ಜೀರ್ಣ ಆದರೆ ಮಾತ್ರ ಧಾತುಗಳಾಗುತ್ತವೆ.ಆಹಾರ ಜೀರ್ಣ ಆಗದೆ ಇದ್ದರೆ, ಅಜೀರ್ಣದಿಂದ ಶರೀರದಲ್ಲಿ ಆಮ ಸೃಷ್ಟಿಯಾಗುತ್ತೆ, ಅಗ್ನಿಮಾಂದ್ಯತೆ ಉಂಟಾಗಿ ಶರೀರ ತುಂಬಾ ತೊಂದರೆಗೊಳಗಾಗುತ್ತದೆ. ಅದಕ್ಕೆ ಆಹಾರವನ್ನ ಚೆನ್ನಾಗಿ ನಾವು ಅರಿತು ಸೇವನೆ ಮಾಡಬೇಕು.
- ಮಲಬದ್ಧತೆ ನಿವಾರಣೆ: ಮಲಬದ್ಧತೆ ಇದ್ದಾಗಲೂ ಕೂಡ ತೆಳ್ಳಗಿರುತ್ತಾರೆ. ಅಂತಹ ಮಲಬದ್ಧತೆಯನ್ನು ನಿವಾರಣೆ ಮಾಡಿಕೊಳ್ಳಲಿಕ್ಕೆ, ರಾತ್ರಿ ಆಹಾರದ ನಂತರ ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಒಂದು ಅಥವಾ ಎರಡು ಚಮಚ ಹಸುವಿನ ತುಪ್ಪ ಅಥವಾ ಎಮ್ಮೆ ತುಪ್ಪವನ್ನು ಸೇರಿಸಿ ಸೇವನೆ ಮಾಡಿದರೆ, ನಮ್ಮ ಶರೀರದಲ್ಲಿ ಆ ಮಲವಿಸರ್ಜನೆ ಸರಿಯಾಗಿ ಆಗುವುದರ ಮೂಲಕ ಕರುಳು ಶುದ್ಧಿಯಾದಾಗ, ನಮ್ಮ ಶರೀರದಲ್ಲಿ ಸ್ನಿಗ್ಧತೆ ಹೆಚ್ಚಿಗೆ ಆಗುತ್ತೆ. ಕರುಳಿನಲ್ಲಿ ಇರತಕ್ಕಂತ ಎಲ್ಲ ತ್ಯಾಜ್ಯ ಹೊರಗಡೆ ಹೋದಾಗ, ಕರುಳು ಪೋಷಕಾಂಶಗಳನ್ನ ಹೀರಕೊಳ್ಳತಕ್ಕಂತ ಶಕ್ತಿಯುತವಾಗಿರತಕ್ಕಂತ ಅಂಶವಾಗುತ್ತೆ. ಇಲ್ಲಾಂದ್ರೆ ಕರುಳಿನಲ್ಲಿ ಮಲ ಸ್ಟೋರೇಜ್ ಆದರೆ, ಯಾವುದೇ ರೀತಿ ಪೋಷಕಾಂಶಗಳನ್ನು ಕರುಳು ಹೀರಕೊಳ್ಳಲಿಕ್ಕೆ ಆಗದೆ, ಏನೇ ಒಳ್ಳೆಯ ಆಹಾರವನ್ನು ತಿಂದಾಗಲೂ ಕೂಡ ರಸ ತಿಂದರೂ ಕಸ ಆಗುತ್ತೆ. ಅದಕ್ಕೆ ಕರುಳು ಶುದ್ಧಿ ಇದ್ದರೆ ಮಾತ್ರ ನಾವು ರಸಯುಕ್ತವಾಗಿರುವ, ರಸಭರಿತ ಆಹಾರವನ್ನ ಸೇವನೆ ಮಾಡಿದ್ದಕ್ಕೂ ಉಪಯೋಗ ಆಗುತ್ತೆ. ಅದಕ್ಕೆ ಕರುಳು ಶುದ್ಧಿಗಾಗಿ ಬಿಸಿನೀರಿನ ಜೊತೆಗೆ ತುಪ್ಪವನ್ನ ಸೇವನೆ ಮಾಡಿ. { Tuka Hechisalu in Kannada }
ಕೊನೆಯ ಮಾತು
ಇದೆಲ್ಲಾ ಮಾಡಿದರೆ ಒಂದೆರಡು ತಿಂಗಳಲ್ಲಿ ನಿಮ್ಮ ತೂಕದಲ್ಲಿ ಹೇರಳವಾಗಿ ಹೆಚ್ಚಳವಾಗತಕಂತದ್ದನ್ನು ನೀವು ಕಾಣಬಹುದು. ಪಾಯಸ, ಆಹಾರದಕ್ಕಿಂತ ಮೊದಲು ಹಣ್ಣು ಸೇವನೆ ಮತ್ತು ಹೊಟ್ಟೆ ಶುದ್ಧಿ ಮಾಡಲು ಹಲವು ಮನೆಮದ್ದುಗಳನ್ನು ಹೇಳಿದ್ದೇನೆ. ಇವುಗಳನ್ನ ಸರಿಯಾಗಿ ಬಳಸುವುದರಿಂದ ನಿಮ್ಮ ತೂಕ ಸಂಪೂರ್ಣವಾಗಿ ಹೆಚ್ಚಳವಾಗುತ್ತೆ ಅಂತಕಂತ ಮಾಹಿತಿಯನ್ನು ಕೊಡುತ್ತಾ, ಈ ದಿನದ ಸಂಚಿಕೆಯನ್ನು ಮುಗಿಸುತ್ತಿದ್ದೇನೆ. ಆತ್ಮೀಯರೇ, ಗುಣವಾಗದ ಕಠಿಣ ಕಾಯಿಲೆಗಳಿಗೂ ಯೋಗ ಮತ್ತು ಆಯುರ್ವೇದದಲ್ಲಿ ಪರಿಹಾರ ಇದೆ. ಕಂಡುಕೊಳ್ಳುವ ಪ್ರಯತ್ನ ಮಾಡಿದರೆ 100 ವರ್ಷ ಆರೋಗ್ಯವಾಗಿ ಬದುಕಬಹುದು. ತಮ್ಮೆಲ್ಲರಿಗೂ ಭಕ್ತಿಯ ಶರಣಾರ್ಥಿಗಳು.

ಸಲಹೆ: ನಾವು ನುರಿತ ವೈದ್ಯರ ಹಾಗೂ ಯೋಗ ಗುರುಗಳ ಜ್ಞಾನ ಹಂಚುವ ಕಾಯಕ ಮಾಡುತ್ತಿದ್ದೇವೆ. ನಾವು ಹೇಳುವ ಮನೆಮದ್ದು ಹಾಗೂ ಔಷಧಿಗಳು ನಿಮ್ಮ ಹತ್ತಿರದ ವೈದ್ಯರ ಸಲಹೆ & ಸೂಚನೆ ಪಡೆದು ತೆಗೆದುಕೊಳ್ಳಿ.
ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ➤➤➤➤➤➤➤➤➤➤➤➤➤➤➤ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9980277973, 7337618850
Discover more from
Subscribe to get the latest posts sent to your email.
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ