ಇಂದಿನ ಸಂಚಿಕೆಯಲ್ಲಿ, ಸಣ್ಣ ಇರುವರು ದಪ್ಪ ಆಗಲು / Dappa Agalu Mane Maddu ಹಲವಾರು ಕಸರತ್ತುಗಳು ಮಾಡಿ ಪ್ರಯೋಜನವಾಗುವುದಿಲ್ಲ. ಆದರೆ ಈ ಮನೆಮದ್ದು & ದಿನಚರಿ ಒಮ್ಮೆ ಪ್ರಯತ್ನ ಮಾಡಿ ಖಂಡಿತಾ ನೀವು ದಪ್ಪ ಆಗುತ್ತೀರಾ..! ಈ ವಿಷಯದ ಬಗ್ಗೆ ಮಾಹಿತಿಯನ್ನು ನೋಡೋಣ.
ಬಹಳಷ್ಟು ಜನರು ದಪ್ಪ ಆಗಬೇಕು ಅಂತ ವಿಟಮಿನ್ ಕ್ಯಾಲ್ಸಿಯಂ, ಪ್ರೋಟೀನ್, ಅದಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ತಗೆದುಕೊಳ್ಳುತ್ತಿರುತ್ತಾರೆ. ದಿನನಿತ್ಯ ಮಾಂಸ, ಚಿಕನ್ , ದಿನನಿತ್ಯ ಇಪ್ಪತ್ತು ಮೊಟ್ಟೆ, ಏನೇನೂ ತಿನ್ನುತ್ತಾರೆ. ಏನು ತಿಂದರೂ ಖಂಡಿತವಾಗಿ ದಪ್ಪ ಆಗುವುದಿಲ್ಲ. ಇದೆನಾಯಿತಪ್ಪ ನಾವು ಜೀವಮಾನದಲ್ಲಿ Dappa Agalu Mane Maddu / ದಪ್ಪ ಆಗಲು ಸಾಧ್ಯವಿಲ್ಲ ಅಂತ ಹೇಳುತ್ತಾರಲ್ಲ ಹೇಗೆ ಮಾಡುವುದು ?
ದಪ್ಪ ಆಗದೆ ಇರಲು ಕಾರಣ..?
ಎಲ್ಲಿಯವರೆಗೆ ನೀವು ತೆಳ್ಳಗಿರುವವರು ದಪ್ಪ ಆಗದಿರಲು ಕಾರಣವೇನು ಅಂತ ಅರ್ಥ ಮಾಡಿಕೊಳ್ಳುವುದಿಲ್ಲವೊ ಅಲ್ಲಿಯವರೆಗೆ ನೀವು ದಪ್ಪ ಆಗಲು ಸಾಧ್ಯವಿಲ್ಲ. ನೀವು ಬೇಕಾದ್ದು ತಿನ್ನಿ , ಜೀಮ್ ಗೀಮ್ ಎಲ್ಲ ಮಾಡಿದರು ಕೂಡ ನೀವು ದಪ್ಪ ಆಗಲು ಸಾಧ್ಯವಿಲ್ಲ.
ಮೊದಲು ನೀವು ತೆಳ್ಳಗಿರುವುದಕ್ಕೆ ಕಾರಣವನ್ನು ತಿಳಿದುಕೊಂಡರೆ, ತೆಳ್ಳಗಿರುವವರನ್ನು ದಪ್ಪ ಮಾಡಲು ಅವಕಾಶ ಇದೆ. ತೆಳ್ಳಗಿರುವವರು ಯಾಕೆ Dappa Agalu Mane Maddu / ದಪ್ಪ ಇದಿರಿ ಅಂದರೆ ನಿಮ್ಮ ದೇಹದಲ್ಲಿ ವಾತ ಪ್ರಕೋಪ ಇದೆ.
ದಪ್ಪ ಆಗದೆ ಇರಲು ವಾತದ ಲಕ್ಷಣ ಏನು ?
ವಾತದ ಲಕ್ಷಣ ವೃಕ್ಷತೆ ಅಂದರೆ ಒಣಗಿಸುವುದು, ನೀವು ನೆರಳಿನಲ್ಲಿ ಒಂದು ಬಟ್ಟೆಯನ್ನು ಒಣಗಿಸಿರಿ, ಒಂದು ಗಂಟೆ, ಎರಡು ಗಂಟೆ ಆದ ಮೇಲೆ ಬಟ್ಟೆ ಒಣಗುತ್ತದೆ. ಹೇಗೆ ಒಣಗಿತು ? ಅದು ಅಲ್ಲಿರುವ ವಾತದಿಂದ ಗಾಳಿಯಿಂದ ಅದು ಒಣಗಿತು ಅಂತ ಹೇಳಬಹುದು.
ಗಾಳಿಗೆ ಒಣಗಿಸುವ ಲಕ್ಷಣ ಇದೆ. ನಮ್ಮ ದೇಹದಲ್ಲಿ ನಮ್ಮ ದೇಹದಲ್ಲಿ ವಾತವೃದ್ದಿ ಇರುವುದರಿಂದ ನಮ್ಮ ದೇಹದಲ್ಲಿ ಇರುವ ಕೊಬ್ಬಿನ ಅಂಶಗಳನ್ನು, ಮಾಂಸವನ್ನು ಅದು ಒಣಗಿಸುತ್ತದೆ. ಅಂತಹ ಪ್ರಕೃತಿವುಳ್ಳವರು ಏನು ತಿಂದರೂ ಕೂಡ ಅವರು ಒಣಗುತ್ತ ಹೋಗುತ್ತಾರೆ. ಕಾರಣ ಅವನ ದೇಹದಲ್ಲಿ ಇರುವ ವಾಯು ಅವನನ್ನು ಒಣಗಿಸುತ್ತದೆ.
ಅದಕ್ಕಾಗಿ ಜಾಸ್ತಿಯಾಗಿರುವ ವಾತವನ್ನು ಕಡಿಮೆ ಮಾಡಬೇಕು. ವೃಕ್ಷತೆ ವಿರುದ್ಧ ಪದವೇನು ? ವೃಕ್ಷತೆ ಅಂದರೆ ಒಣಗಿರುವುದು, ಅದರ ವಿರುದ್ಧ ಪದ ಸ್ನಿಗ್ಧತೆ, ನಿಮ್ಮ ದೇಹದಲ್ಲಿ ವಾತ ಜಾಸ್ತಿಯಾಗಿ ವೃಕ್ಷತೆ ವೃದ್ದಿಯಾಗಿರುತ್ತದೆ. ಅದರ ವಿರುದ್ಧ ಗುಣವಾಗಿರುವ ಆಹಾರ , ವಿಚಾರ,ವಿಹಾರದ ಚಿಕಿತ್ಸೆಗಳನ್ನು ತಗೆದುಕೊಳ್ಳುವುದರಿಂದ ಆವಾಗ ಆಟೋಮೇಟಿಕ ಆಗಿ ನೀವು ದಪ್ಪ ಆಗುತ್ತಿರಿ.
ವೃಕ್ಷತೆ ವಿರುದ್ಧ ಪದ ಸ್ನಿಗ್ಧತೆ. ಯಾವ ಆಹಾರದಿಂದ ನಿಮ್ಮ ದೇಹಕ್ಕೆ ಸ್ನಿಗ್ಧತೆ ಸಿಗುತ್ತದೆ ? ಯಾವ ವಿಹಾರದಿಂದ ನಿಮ್ಮ ದೇಹಕ್ಕೆ ಸ್ನಿಗ್ಧತೆ ಸಿಗುತ್ತದೆ ? ಯಾವ ಚಿಕಿತ್ಸೆಗಳಿಂದ ನಿಮ್ಮ ದೇಹಕ್ಕೆ ಸ್ನಿಗ್ಧತೆ ಸಿಗುತ್ತದೆಯೊ, ಅದು ನಿಮ್ಮ ಚಿಕಿತ್ಸೆಯಾಗಿದೆ. ಅಂದರೆ ತೆಳ್ಳಗೆ ಇರುವವರಿಗೆ ದಪ್ಪ ಆಗಲು ಬೇಕಾಗಿರುವ ಚಿಕಿತ್ಸೆಗಳಾಗಿವೆ.
Dappa Agalu Mane Maddu / ದಪ್ಪ ಆಗಲು ಸ್ನಿಗ್ಧತೆ ಕೊಡುವ ಆಹಾರಗಳು ಯಾವುವು ?
ಹಾಲು, ತುಪ್ಪ, ಎಮ್ಮೆಯ ಹಾಲು ಮತ್ತು ತುಪ್ಪವನ್ನು ಉಪಯೋಗ ಮಾಡುವುದರಿಂದ ಇದು ಹಸುವಿನ ಹಾಲು ಮತ್ತು ತುಪ್ಪಕ್ಕಿಂತ ಹೆಚ್ಚು ಲಾಭವನ್ನು ಪಡೆಯಬಹುದು. ಮೊಸರನ್ನು ಸೇವನೆ ಮಾಡಬೇಕು. ಮೊಸರಿನಲ್ಲಿ ಹೆಚ್ಚು ಸ್ನಿಗ್ಧತೆ ಗುಣಗಳನ್ನು ಹೊಂದಿದೆ. ಆ ಮೋಸರಿಗೆ ಕಲ್ಲು ಸಕ್ಕರೆ ಬೇರೆಸಿ ಸೇವನೆ ಮಾಡಬೇಕು. ಅಥವಾ ಬೆಲ್ಲವನ್ನು ಮೊಸರಿಗೆ ಸೇರಿಸಿ ಸೇವನೆ ಮಾಡುವುದರಿಂದ ಅದರಲ್ಲಿ ಮಧುರ ರಸ ಇರುವುದರಿಂದ ಇದು ವಾತವನ್ನು ಹರ ಮಾಡುತ್ತದೆ.
ಯಾವಾಗ ಕಫ ಕಡಿಮೆ ಯಾಗುತ್ತದೆಯೊ ಆವಾಗ ದೇಹದಲ್ಲಿ ಕೊಬ್ಬಿನ ಅಂಶ ಜಾಸ್ತಿಯಾಗುತ್ತದೆ. ಕೊಬ್ಬಿನ ಅಂಶ ಜಾಸ್ತಿಯಾದರೆ ಮಾಂಸ ಧಾತುವಿಗೆ ಪೋಷಣೆ ಸಿಗುತ್ತದೆ. ಮಾಂಸ ಧಾತುಗಳಿಗೆ ಪೋಷಣೆ ಸಿಗುವುದರಿಂದ ನೀವು ದಷ್ಟಪುಷ್ಟವಾಗಿ ಬೆಳೆಯಲು ಸಾಧ್ಯವಾಗುತ್ತದೆ.
ಆವಾಗ ಕೆನ್ನೆಗಳು ತುಂಬಿಕೊಳ್ಳುತ್ತವೆ. ಕಣ್ಣುಗಳು ಚಂದ ಕಾಣಿಸುತ್ತವೆ. ಮುಖದಲ್ಲಿ ಹೋಳಪು ಬರುತ್ತದೆ. ಕೂದಲುಗಳಿಗೆ ಹೊಳಪು ಬರುತ್ತದೆ. ಇವೆಲ್ಲವೂ ಆಗುವುದು ಯಾವಾಗ ದೇಹದಲ್ಲಿ ಸ್ನಿಗ್ಧತೆ ಇದ್ದಾಗ ದೇಹ ಸುಂದರವಾಗಿ ಕಾಣುತ್ತದೆ. ಅದಕ್ಕಾಗಿ ಇಂತಹ ಆಹಾರ ಕ್ರಮಗಳನ್ನು ರೂಡಿಸಿಕೊಳ್ಳಬೇಕು.
ದಪ್ಪ ಆಗದೆ ಇರಲು ಸ್ನಿಗ್ದ ವಿಹಾರಗಳು..!
ಸ್ನಿಗ್ಧ ಆಹಾರಗಳಾದ ದಿವಾಸ್ವಪ್ನ ಅಂದರೆ ಮದ್ಯಾನ್ಹ ಸಮಯದಲ್ಲಿ ಮಲಗಬೇಕು. ಯಾವುದೇ ರೀತಿಯ ಯೋಚನೆ ಮಾಡದೆ ಆರಾಮಾಗಿ ಮಲಗಬೇಕು.
ಪ್ರಸನ್ನ ಆತ್ಮ ಇಂದ್ರಿಯ ಮನುಷ್ಚ್ಯ ಅಂತ ಕರೆಯುತ್ತಾರೆ. ಯಾವಾಗಲು ಮನಸನ್ನು ಪ್ರಸನ್ನವಾಗಿ ಇಟ್ಟುಕೊಳ್ಳಬೇಕು. ಇಂದ್ರಿಯಗಳನ್ನು ಸುಖವಾಗಿ ಇಡಬೇಕು. ಬೇಕ ಬೇಕಾದನ್ನೆಲ್ಲ ಸೇವನೆ ಮಾಡಬೇಕು. ಚಿಂತೆ ಇಲ್ಲದೆ ಆರಾಮಾಗಿ ಮಲಗಬೇಕು. ಚಿಂತೆಯಿಲ್ಲದವನಿಗೆ ಸಂತೆಯಲ್ಲಿ ನಿದ್ದೆ ಬಂದಂತೆ ಎಂಬ ಗಾದೆಯಂತೆ ನಾವು ಬದುಕಬೇಕು. ಇದು ಕಫವನ್ನು ವೃದ್ದಿಮಾಡಲು ಬೇಕಾಗಿರುವ ವಿಹಾರ. ಇದರಿಂದ ಅವರು ಖಂಡಿತವಾಗಿ Dappa Agalu Mane Maddu / ದಪ್ಪ ಆಗುತ್ತ ಬರುತ್ತಾರೆ.
ಅತಿಯಾದ ವ್ಯಾಯಾಮ ಮತ್ತು ಬಡದಾಟ ಮಾಡಬಾರದು. ಒಂದು ತರಹ ಹೇಳುತ್ತಾರಲ್ಲ ಎಮ್ಮೆ ತರಹ ತಿಂದು ಎಮ್ಮೆಯ ತರಹ ಮಲಗಬೇಕು.
ಎಮ್ಮೆಯ ಹಾಲು ಅದಕ್ಕೆ ಬೆಲ್ಲ, ಅಥವಾ ತುಪ್ಪವನ್ನು ಬೇರೆಸಿ ಅದರ ಸೇವನೆ ಮಾಡಿ ಮಧ್ಯಾನ್ಹ ರಾತ್ರಿ ಮಲಗಬೇಕು. ಇಂತಹ ಪ್ರಕ್ರಿಯೆ ಮಾಡುವುದರಿಂದ ಯಾವ ಚಿಕಿತ್ಸೆ, ಅಥವಾ ಯಾವ ಔಷಧಿ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ.
ಇನ್ನೂ ವಿಚಾರದ ವಿಷಯವಾಗಿ ಯಾವುದೇ ರೀತಿಯ ವಿಚಾರ ಮಾಡಬಾರದು, ಕಾಮ, ಕ್ರೋಧ, ಮದ, ಮತ್ಸರ, ಲೋಭ, ತಾತ್ಸಾರ ಯಾವ ಕಾರಣಕ್ಕೂ ಮಾಡಬಾರದು.
Dappa Agalu Mane Maddu / ಮನೆಮದ್ದು : ಉದ್ದು ಇದನ್ನು ಸಂಸ್ಕೃತದಲ್ಲಿ ಮಾಶಾ ಅಂದರೆ ಮಾಂಸ ಅಂತ ಹೇಳಬಹುದು. ಇದು ಮಾಂಸದ ಪರ್ಯಾಯನಾಮ ಇದಕ್ಕೆ ಮಾಂಸದ ಪರ್ಯಾಯನಾಮಕ್ಕೆ ಈ ಉದ್ದಿನ ಬೇಳೆ ಬಳಸುವುದರಿಂದ ಮಾಂಸ ವೃದ್ದಿಯಾಗುತ್ತದೆ. ಒಂದು ಮುಷ್ಟಿ ಉದ್ದಿನ ಬೇಳೆಗೆ ಸ್ವಲ್ಪ ಬೆಲ್ಲವನ್ನು ಮಿಶ್ರಣ ಮಾಡಿ ಅದನ್ನು ಅಗೆದು ಅಗೆದು ಸೇವನೆ ಮಾಡಬೇಕು. ಇದನ್ನು ಸತತವಾಗಿ ಮೂರು ತಿಂಗಳ ಮಾಡಿದ್ದೆ ಆದಲ್ಲಿ ನಿಮ್ಮ ದೇಹದಲ್ಲಿ ಮಾಂಸದ ಗುಣವಿರುವ ಮಾಶಾ ಸೇವನೆಯಿಂದ ಮಾಂಸ ಧಾತು ವೃದ್ದಿಯಾಗುತ್ತದೆ.
ನಮ್ಮ ಆರ್ಟಿಕಲ್ ಇಷ್ಟ ಆದರೆ ನಿಮ್ಮ ಬಂದು ಮಿತ್ರರಲ್ಲಿ ಶೇರ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು. – 9980277973, 7337618850
ನಾವು ಆಯುರ್ವೇದದ ಮಾಹಿತಿ ಎಲ್ಲರಿಗೂ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಹಾಗಾಗಿ ನಾವು ಹೇಳುವ ಮನೆಮದ್ದು ಹಾಗೂ ಯೋಗಾಸನಗಳು ಸತ್ಯಾಂಶಗಳಿಂದ ಕೂಡಿದ್ದಾಗಿದೆ. ನಾವು ಹೇಳುವ ಮನೆಮದ್ದು & ಯೋಗಾಸನ ಮಾಡುವ & ತೆಗೆದುಕೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರ ಸಲಹೆ, ಸೂಚನೆ ಪಡೆದು ಮಾಡತಕ್ಕದ್ದು. ಹೇಳದೆ ಕೇಳದೆ ಮಾಡಿದ್ದಲ್ಲಿ ಅನಾಹುತ ಆದರೆ ನಾವು ಜವಾಬ್ದಾರರಲ್ಲಾ.
nithinpachinadka1233@gmail.com